2 ಸಮುವೇಲನು 1 : 1 (IRVKN)
ಸೌಲನ ಯೋನಾತನರ ಮರಣದ ಸುದ್ದಿಯು ದಾವೀದನಿಗೆ ಮುಟ್ಟಿದ್ದು ಸೌಲನು ಸತ್ತನಂತರ, ದಾವೀದನು ಅಮಾಲೇಕ್ಯರನ್ನು ಸಂಹರಿಸಿ ಚಿಕ್ಲಗ್ ಪಟ್ಟಣದಲ್ಲಿ ಎರಡು ದಿನ ಇದ್ದನು.
2 ಸಮುವೇಲನು 1 : 2 (IRVKN)
ಮೂರನೆಯ ದಿನದಲ್ಲಿ ಸೌಲನ ಠಾಣ್ಯದಿಂದ ಒಬ್ಬ ಮನುಷ್ಯನು ದಾವೀದನ ಬಳಿಗೆ ಬಂದು ನೆಲದ ಮಟ್ಟಿಗೆ ಬಾಗಿ ನಮಸ್ಕರಿಸಿದನು. ಅವನು ವಸ್ತ್ರಗಳನ್ನು ಹರಿದುಕೊಂಡು ತಲೆಯ ಮೇಲೆ ಮಣ್ಣು ಹಾಕಿಕೊಂಡಿದ್ದನು.
2 ಸಮುವೇಲನು 1 : 3 (IRVKN)
ದಾವೀದನು ಅವನನ್ನು, “ನೀನು ಎಲ್ಲಿಂದ ಬಂದಿ” ಎಂದು ಕೇಳಲು ಅವನು, “ನಾನು ಇಸ್ರಾಯೇಲರ ಠಾಣ್ಯದಿಂದ ತಪ್ಪಿಸಿಕೊಂಡು ಬಂದೆನು” ಎಂದು ಉತ್ತರಕೊಟ್ಟನು.
2 ಸಮುವೇಲನು 1 : 4 (IRVKN)
ಆಗ ದಾವೀದನು, “ದಯವಿಟ್ಟು ಕಾರ್ಯವೇನಾಯಿತೆಂದು ತಿಳಿಸು” ಅನ್ನಲು ಆ ಮನುಷ್ಯನು, “ಇಸ್ರಾಯೇಲರು ರಣರಂಗದಿಂದ ಓಡಿಹೋದರು. ಅನೇಕರು ಗಾಯಗೊಂಡು ಸತ್ತುಹೋದರು. ಸೌಲನೂ ಅವನ ಮಗನಾದ ಯೋನಾತಾನನೂ ಮರಣಹೊಂದಿದರು” ಎಂದು ತಿಳಿಸಿದನು.
2 ಸಮುವೇಲನು 1 : 5 (IRVKN)
ದಾವೀದನು ಈ ವರ್ತಮಾನ ತಂದ ಆ ಪ್ರಾಯಸ್ಥನಿಗೆ “ಸೌಲನೂ ಅವನ ಮಗನಾದ ಯೋನಾತಾನನೂ ಸತ್ತಿರುವುದು ನಿನಗೆ ಹೇಗೆ ಗೊತ್ತಾಯಿತು” ಎಂದು ಪ್ರಶ್ನಿಸಲು ಅವನು,
2 ಸಮುವೇಲನು 1 : 6 (IRVKN)
“ನಾನು ಆಕಸ್ಮಿಕವಾಗಿ ಗಿಲ್ಬೋವ ಪರ್ವತಪ್ರದೇಶಕ್ಕೆ ಬಂದಾಗ ಸೌಲನು ತನ್ನ ಬರ್ಜಿಯನ್ನೂರಿಕೊಂಡು ನಿಂತಿರುವುದನ್ನೂ ರಥಗಳು ಮತ್ತು ರಾಹುತರು ಅವನನ್ನು ಹಿಂದಟ್ಟಿ ಬರುತ್ತಿರುವುದನ್ನೂ ಕಂಡೆನು.
2 ಸಮುವೇಲನು 1 : 7 (IRVKN)
ಅವನು ತಿರುಗಿಕೊಂಡು ನನ್ನನ್ನು ನೋಡಿ ಕರೆದನು.
2 ಸಮುವೇಲನು 1 : 8 (IRVKN)
ನಾನು, ‘ಇಗೋ ಬಂದೆನು’ ಎಂದು ಹೇಳಿ ಹೋದಾಗ ಅವನು ‘ನೀನಾರು?’ ಎಂದು ಕೇಳಿದ್ದಕ್ಕೆ, ‘ನಾನು ಅಮಾಲೇಕ್ಯನು’ ಎಂದು ಉತ್ತರಕೊಟ್ಟೆನು.
2 ಸಮುವೇಲನು 1 : 9 (IRVKN)
ಆಗ ಅವನು ನನಗೆ, ‘ನೀನು ದಯೆಮಾಡಿ ಹತ್ತಿರ ಬಂದು ನನ್ನನ್ನು ಕೊಂದು ಹಾಕು. ಯಾಕೆಂದರೆ ನನ್ನಲ್ಲಿ ಜೀವವು ಇನ್ನೂ ಪೂರ್ಣವಾಗಿರುವುದರಿಂದ ನನಗೆ ಸಂಕಟ ಹಿಡಿದದೆ’ ಎಂದು ಹೇಳಿದನು.
2 ಸಮುವೇಲನು 1 : 10 (IRVKN)
ನಾನು ಹತ್ತಿರ ಹೋಗಿ ಅವನು ಬಿದ್ದನಂತರ ಬದುಕಲಾರನೆಂದು ನೆನಸಿ, ಅವನನ್ನು ಕೊಂದು ಹಾಕಿ, ಅವನ ತಲೆಯ ಮೇಲಣ ಕಿರೀಟವನ್ನೂ ತೋಳಿನಲ್ಲಿದ್ದ ಬಳೆಯನ್ನೂ ತೆಗೆದುಕೊಂಡು ಅವುಗಳನ್ನು ನನ್ನ ಒಡೆಯನಾದ ನಿನಗೆ ತಂದಿದ್ದೇನೆ” ಅಂದನು.
2 ಸಮುವೇಲನು 1 : 11 (IRVKN)
ಸೌಲನೂ ಅವನ ಮಗನಾದ ಯೋನಾತಾನನೂ, ಯೆಹೋವನ ಪ್ರಜೆಗಳಾದ ಇಸ್ರಾಯೇಲರೂ ಕತ್ತಿಯಿಂದ ಸಂಹೃತರಾದದ್ದಕ್ಕಾಗಿ ದಾವೀದನೂ ಅವನ ಜನರೂ
2 ಸಮುವೇಲನು 1 : 12 (IRVKN)
ತಮ್ಮ ಬಟ್ಟೆಗಳನ್ನು ಹರಿದುಕೊಂಡು, ಗೋಳಾಡಿ, ಅತ್ತು ಸಾಯಂಕಾಲದವರೆಗೆ ಉಪವಾಸ ಮಾಡಿದರು.
2 ಸಮುವೇಲನು 1 : 13 (IRVKN)
ದಾವೀದನು ವರ್ತಮಾನ ತಂದ ಯುವಕನನ್ನು, “ನೀನು ಎಲ್ಲಿಯವನು?” ಎಂದು ಕೇಳಿದನು. ಅವನು, “ನಾನು ಇಸ್ರಾಯೇಲರಲ್ಲಿ ಪ್ರವಾಸಿಯಾಗಿರುವ ಅಮಾಲೇಕ್ಯನು” ಎಂದು ಉತ್ತರಕೊಟ್ಟನು.
2 ಸಮುವೇಲನು 1 : 14 (IRVKN)
ದಾವೀದನು ಅವನಿಗೆ, “ನೀನು ಕೈಯೆತ್ತಿ ಯೆಹೋವನ ಅಭಿಷಿಕ್ತನನ್ನು ಕೊಲ್ಲುವುದಕ್ಕೆ ಏಕೆ ಭಯಪಡಲಿಲ್ಲ?” ಎಂದು ಹೇಳಿ
2 ಸಮುವೇಲನು 1 : 15 (IRVKN)
ತನ್ನ ಆಳುಗಳಲ್ಲಿ ಒಬ್ಬನನ್ನು ಕರೆದು, “ಹೋಗಿ ಇವನನ್ನು ಕೊಂದುಹಾಕು” ಎಂದು ಆಜ್ಞಾಪಿಸಲು ಅವನು ಅಮಾಲೇಕ್ಯನನ್ನು ಹೊಡೆದು ಕೊಂದನು.
2 ಸಮುವೇಲನು 1 : 16 (IRVKN)
ದಾವೀದನು, “ಈ ರಕ್ತಾಪರಾಧವು ನಿನ್ನ ತಲೆಯ ಮೇಲೆಯೇ ಇರಲಿ. ಯೆಹೋವನ ಅಭಿಷಿಕ್ತನನ್ನು ಕೊಂದುಹಾಕಿದೆನೆಂದು ನಿನ್ನ ಬಾಯೇ ನಿನಗೆ ವಿರೋಧವಾಗಿ ಸಾಕ್ಷಿ ಹೇಳಿತು” ಅಂದನು.
2 ಸಮುವೇಲನು 1 : 17 (IRVKN)
ದಾವೀದನು ಸೌಲಯೋನಾತಾನರನ್ನು ಕುರಿತು ರಚಿಸಿದ ಶೋಕಗೀತೆ ದಾವೀದನು ಸೌಲ ಯೋನಾತನರ ಕುರಿತು ಒಂದು ಶೋಕಗೀತೆಯನ್ನು ರಚಿಸಿ,
2 ಸಮುವೇಲನು 1 : 18 (IRVKN)
ಬಿಲ್ಲೆ ಎಂಬ ಈ ಗೀತೆಯನ್ನು ಯೆಹೂದ್ಯರಿಗೆ ಕಲಿಸಬೇಕೆಂದು ಆಜ್ಞಾಪಿಸಿದನು. ಆ ಗೀತವು ಯಾಷಾರ್ ಗ್ರಂಥದಲ್ಲಿ* ಯಾಷಾರ್ ಗ್ರಂಥ ಬಹುಶಃ ಈ ಪುಸ್ತಕವು ಬಹಳ ಪ್ರಾಚೀನ ಯುದ್ಧ ಗೀತೆಗಳ ಸಂಗ್ರಹವಾಗಿದೆ. ಇದನ್ನು ಯೆಹೋಶುವ 10:13 ರಲ್ಲಿ ಉಲ್ಲೇಖಿಸಲಾಗಿದೆ. ಹೀಬ್ರೂ ಪದ ಯಾಷಾರಿಗೆ “ಪ್ರಾಮಾಣಿಕ” ಅಥವಾ “ನೀತಿವಂತ” ಎಂಬರ್ಥವಿದೆ. ಬರೆದಿರುತ್ತದೆ.
2 ಸಮುವೇಲನು 1 : 19 (IRVKN)
“ಇಸ್ರಾಯೇಲರೇ, ನಿಮ್ಮ † ಅಥವಾ ನಾಯಕರು. ವೈಭವವು ನಿಮ್ಮ ಗುಡ್ಡಗಳಲ್ಲಿ ಮಣ್ಣು ಪಾಲಾಗಿ ಹೋಯಿತು. ಅಯ್ಯೋ ಪರಾಕ್ರಮಶಾಲಿಗಳೇ, ನೀವು ಹೇಗೆ ಹತರಾದಿರಿ.
2 ಸಮುವೇಲನು 1 : 20 (IRVKN)
ಈ ಸಂಗತಿಯನ್ನು ಗತ್ ಊರಿನಲ್ಲಿ ತಿಳಿಸಬೇಡಿರಿ. ಅಷ್ಕೆಲೋನಿನ ಬೀದಿಗಳಲ್ಲಿ ಸಾರಬೇಡಿರಿ. ಫಿಲಿಷ್ಟಿಯರ ಹೆಂಗಸರು ಸಂತೋಷಿಸಾರು. ಸುನ್ನತಿಯಿಲ್ಲದವರ ಸ್ತ್ರೀಯರು ಉಲ್ಲಾಸಪಟ್ಟಾರು.
2 ಸಮುವೇಲನು 1 : 21 (IRVKN)
ಗಿಲ್ಬೋವ ಗುಡ್ಡಗಳೇ, ನಿಮ್ಮ ಮೇಲೆ ಮಂಜು, ಮಳೆಯು, ನೈವೇದ್ಯಕ್ಕಾಗಿ ಫಲಿಸುವ ಹೊಲಗಳೂ ಇಲ್ಲದೆ ಹೋಗಲಿ. ಅಲ್ಲಿ ಪರಾಕ್ರಮಶಾಲಿಗಳ ಗುರಾಣಿಗಳು ಬಿದ್ದಿರುತ್ತವೆ. ಸೌಲನ ಗುರಾಣಿಯೂ ಅಭಿಷಿಕ್ತನಲ್ಲದವನ ಗುರಾಣಿಯಂತೆ ಬಿದ್ದಿದೆ.
2 ಸಮುವೇಲನು 1 : 22 (IRVKN)
ಯೋನಾತಾನನ ಬಿಲ್ಲು ಹತರಾದವರ ರಕ್ತವನ್ನು ಹೀರದೆಯೂ ಪರಾಕ್ರಮಶಾಲಿಗಳ ಕೊಬ್ಬನ್ನು ರುಚಿಸದೆಯೂ ಬರುತ್ತಿರಲಿಲ್ಲ. ಸೌಲನ ಕತ್ತಿಯು ವ್ಯರ್ಥವಾಗಿ ಹಿಂದಿರುಗುತ್ತಿರಲಿಲ್ಲ.
2 ಸಮುವೇಲನು 1 : 23 (IRVKN)
ಸೌಲಯೋನಾತಾನರು ಪ್ರಿಯರೂ ಮನೋಹರರೂ ಆಗಿದ್ದರು. ಅವರು ಜೀವಿಸುವಾಗಲೂ ಸಾಯುವಾಗಲೂ ಅಗಲಿದವರಲ್ಲ. ಅವರು ಹದ್ದುಗಳಿಗಿಂತಲೂ ವೇಗವುಳ್ಳವರು, ಸಿಂಹಗಳಿಗಿಂತಲೂ ಬಲವುಳ್ಳವರು.
2 ಸಮುವೇಲನು 1 : 24 (IRVKN)
ಇಸ್ರಾಯೇಲ್ ಸ್ತ್ರೀಯರೇ, ಸೌಲನಿಗಾಗಿ ಗೋಳಾಡಿರಿ, ನಿಮಗೆ ಉಲ್ಲಾಸಕರವಾದ ರಕ್ತಾಂಬರಗಳನ್ನು ಉಡಿಸಿ, ಅವುಗಳ ಮೇಲೆ ಸುವರ್ಣಾಭರಣಗಳನ್ನು ತೊಡಿಸಿದವನು ಆತನೇ ಅಲ್ಲವೋ?
2 ಸಮುವೇಲನು 1 : 25 (IRVKN)
ಅಯ್ಯೋ ಪರಾಕ್ರಮಶಾಲಿಗಳೇ, ಯುದ್ಧದಲ್ಲಿ ಹೇಗೆ ಮರಣ ಹೊಂದಿದಿರಿ. ಯೋನಾತಾನನು ನಿಮ್ಮ ಬೆಟ್ಟದಲ್ಲಿ ಹತನಾಗಿ ಬಿದ್ದನಲ್ಲಾ
2 ಸಮುವೇಲನು 1 : 26 (IRVKN)
ಯೋನಾತಾನನೇ, ನನ್ನ ಸಹೋದರನೇ ನಿನಗೋಸ್ಕರ ನನ್ನಲ್ಲಿ ಬಹು ಸಂಕಟವುಂಟಾಗಿದೆ. ನೀನು ನನಗೆ ಮನೋಹರನಾಗಿದ್ದಿ. ನನ್ನ ಮೇಲಿನ ನಿನ್ನ ಪ್ರೀತಿಯು ಆಶ್ಚರ್ಯಕರವಾದದ್ದು. ಅದು ಸತಿ ಪ್ರೇಮಕ್ಕಿಂತ ಶ್ರೇಷ್ಠವಾದದ್ದು.
2 ಸಮುವೇಲನು 1 : 27 (IRVKN)
ಅಯ್ಯೋ ಪರಾಕ್ರಮಶಾಲಿಗಳು ಹೇಗೆ ಹತರಾದರು, ಯುದ್ಧದ ಆಯುಧಗಳು ಹೇಗೆ ಹಾಳಾದವು.”
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27