2 ಪೇತ್ರನು 1 : 1 (IRVKN)
ಪೀಠಿಕೆ ಯೇಸು ಕ್ರಿಸ್ತನ ದಾಸನೂ ಅಪೊಸ್ತಲನೂ ಆಗಿರುವ ಸಿಮೆಯೋನ ಪೇತ್ರನು * ರೋಮಾ. 3:21-26: ನಮ್ಮ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನ ನೀತಿಯಿಂದ † ರೋಮಾ. 1:12; ತೀತ. 1:4: ನಮ್ಮಂತೆಯೇ ಅಮೂಲ್ಯವಾದ ನಂಬಿಕೆಯನ್ನು ಹೊಂದಿದವರಿಗೆ ಬರೆಯುವುದೇನಂದರೆ,
2 ಪೇತ್ರನು 1 : 2 (IRVKN)
ದೇವರನ್ನು ಕುರಿತಾಗಿಯೂ, ನಮ್ಮ ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿಯೂ ಇರುವ [‡ 2 ಪೇತ್ರ. 1:3,8; 2:20; 3: 18 ಯೋಹಾ 173; ಫಿಲಿ. 3:8: ]ಪರಿಜ್ಞಾನದಲ್ಲಿ ನಿಮಗೆ § 1 ಪೇತ್ರ. 1:2; ಯೂದ. 2: ಕೃಪೆಯೂ, ಶಾಂತಿಯೂ ಹೆಚ್ಚುಹೆಚ್ಚಾಗಿ ದೊರೆಯಲಿ.
2 ಪೇತ್ರನು 1 : 3 (IRVKN)
ಭಕ್ತಿವೃದ್ಧಿಗೆ ಅನುಕೂಲವಾದ ಪ್ರೇರಣೆಗಳು ನಮ್ಮನ್ನು ತನ್ನ ಮಹಿಮೆಯಿಂದಲೂ, ಗುಣಾತಿಶಯದಿಂದಲೂ * 1 ಥೆಸ. 2:12; 2 ಥೆಸ. 2:14; 2 ತಿಮೊ. 1:9; 1 ಪೇತ್ರ. 5:10: ಕರೆದ ದೇವರ ವಿಷಯವಾಗಿ ಯೇಸುವಿನ ದಿವ್ಯಶಕ್ತಿಯು ನಮಗೆ ದೈವಿಕ ಪರಿಜ್ಞಾನವನ್ನು ಕೊಟ್ಟಿರುವುದರ ಮೂಲಕ ಜೀವಕ್ಕೂ, ಭಕ್ತಿಗೂ ಬೇಕಾದದ್ದೆಲ್ಲವನ್ನೂ ದಾನಮಾಡಲಾಗಿದೆಯೆಂದು ನಾವು ಬಲ್ಲೆವು.
2 ಪೇತ್ರನು 1 : 4 (IRVKN)
ನೀವು ಲೋಕದಲ್ಲಿ † 2 ಪೇತ್ರ. 2:18,20: ದುರಾಶೆಯಿಂದುಂಟಾಗುವ ಕೆಟ್ಟತನದಿಂದ ದೂರವಾಗಿ ‡ ಎಫೆ 4:24; ಇಬ್ರಿ. 12:10; 1 ಯೋಹಾ 3:2: ದೈವಸ್ವಭಾವದಲ್ಲಿ ಪಾಲನ್ನು ಹೊಂದುವವರಾಗಬೇಕೆಂಬ ಉದ್ದೇಶದಿಂದ ದೇವರು ತನ್ನ ಅತ್ಯಂತ ಮಹತ್ವವುಳ್ಳ ಮತ್ತು ಅಮೂಲ್ಯವಾದ ವಾಗ್ದಾನಗಳನ್ನು ನಮಗೆ ದಯಪಾಲಿಸಿದ್ದಾನೆ.
2 ಪೇತ್ರನು 1 : 5 (IRVKN)
ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ § ಫಿಲಿ. 4:8: ಸದ್ಗುಣವನ್ನೂ, ಸದ್ಗುಣಕ್ಕೆ ಜ್ಞಾನವನ್ನೂ,
2 ಪೇತ್ರನು 1 : 6 (IRVKN)
ಜ್ಞಾನಕ್ಕೆ * ಅ. ಕೃ. 24:25; ಗಲಾ. 5:22-23: ದಮೆಯನ್ನೂ, ದಮೆಗೆ † ಇಬ್ರಿ. 10:36; ಯಾಕೋಬ. 1:3; ತಾಳ್ಮೆಯನ್ನೂ,
2 ಪೇತ್ರನು 1 : 7 (IRVKN)
ತಾಳ್ಮೆಗೆ ಭಕ್ತಿಯನ್ನೂ, ಭಕ್ತಿಗೆ ‡ ಇಬ್ರಿ. 13:1: ಸಹೋದರ ಸ್ನೇಹವನ್ನೂ, ಸಹೋದರ ಸ್ನೇಹಕ್ಕೆ § 1 ಕೊರಿ 13; 1 ಯೋಹಾ 4:16: ಪ್ರೀತಿಯನ್ನೂ ಕೂಡಿಸಿರಿ.
2 ಪೇತ್ರನು 1 : 8 (IRVKN)
ಇವು ನಿಮ್ಮಲ್ಲಿದ್ದು ಬೆಳೆದು ಬಂದರೆ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಕುರಿತಾದ ಪರಿಜ್ಞಾನದಲ್ಲಿ ನೀವು ನಿರುತ್ಸಾಹಿಗಳೂ, * ಯೋಹಾ 15:2; ತೀತ. 3:14: ನಿಷ್ಪ್ರಯೋಜಕರೂ ಆಗದಂತೆ ಮಾಡುತ್ತವೆ.
2 ಪೇತ್ರನು 1 : 9 (IRVKN)
ಇವುಗಳಿಲ್ಲದವನು † ಯೋಬ. 5:14; 12:25; ಚೆಫ. 1:17; ಕುರುಡನಾಗಿದ್ದಾನೆ. ಅವನು ದೂರ ದೃಷ್ಟಿಯಿಲ್ಲದವನಾಗಿದ್ದು ತನ್ನ ಹಿಂದಣ ಪಾಪಗಳು ಪರಿಹಾರವಾಗಿ ‡ ಎಫೆ 5:26; ತೀತ. 2:14; 1 ಯೋಹಾ 1:7; ಪ್ರಕ 7:14: ತಾನು ಶುದ್ಧನಾದದ್ದನ್ನು ಮರೆತುಬಿಟ್ಟಿದ್ದಾನೆ.
2 ಪೇತ್ರನು 1 : 10 (IRVKN)
ಆದ್ದರಿಂದ ಸಹೋದರರೇ, ದೇವರಲ್ಲಿ ನಿಮ್ಮ ಕರೆಯುವಿಕೆಯನ್ನೂ, § 1 ಥೆಸ. 1:4: ಆಯ್ಕೆಯನ್ನೂ ದೃಢಪಡಿಸಿಕೊಳ್ಳುವುದಕ್ಕೆ * ಫಿಲಿ. 2:12; ಇಬ್ರಿ. 3:14: ಮತ್ತಷ್ಟು ಪ್ರಯಾಸಪಡಿರಿ. ಏಕೆಂದರೆ ನೀವು ಹೀಗೆ ಮಾಡುವುದಾದರೆ ಎಂದಿಗೂ ಎಡುವುದಿಲ್ಲ.
2 ಪೇತ್ರನು 1 : 11 (IRVKN)
ಹೀಗಿರುವುದರಿಂದ ನಮ್ಮ ಕರ್ತನೂ, ರಕ್ಷಕನೂ ಆಗಿರುವ † ಕೊಲೊ 1:13; ಅ. ಕೃ. 14:22: ಯೇಸುಕ್ರಿಸ್ತನ ನಿತ್ಯ ರಾಜ್ಯದಲ್ಲಿ ನಿಮಗೆ ಧಾರಾಳವಾಗಿ ಪ್ರವೇಶವು ದೊರೆಯುವುದು.
2 ಪೇತ್ರನು 1 : 12 (IRVKN)
ಕರ್ತನಾದ ಯೇಸುಕ್ರಿಸ್ತನ ಪ್ರತ್ಯಕ್ಷತೆಯನ್ನು ಎದುರುನೋಡುವುದಕ್ಕೆ ದೃಢವಾದ ಆಧಾರ ಉಂಟು ಆದ್ದರಿಂದ ನೀವು ಈ ಸಂಗತಿಗಳನ್ನು ತಿಳಿದವರಾಗಿ ‡ 2 ಯೋಹಾ 2: ನಿಮಗೆ ದೊರೆತಿರುವ ಸತ್ಯದಲ್ಲಿ ಸ್ಥಿರವಾಗಿದ್ದರೂ ಅವುಗಳನ್ನು ನಿಮಗೆ [§ ಯೂದ. 5 ಫಿಲಿ. 3:1: ]ನೆನಪಿಸಿಕೊಡುವುದಕ್ಕೆ ನಾನು ಯಾವಾಗಲೂ ಸಿದ್ಧವಾಗಿರುವೆನು.
2 ಪೇತ್ರನು 1 : 13 (IRVKN)
ನಾನು * 2 ಕೊರಿ 5:1,4: ನನ್ನ ದೇಹವೆಂಬ ಗುಡಾರದಲ್ಲಿರುವ ತನಕ † 2 ಪೇತ್ರ. 3:1: ನಿಮ್ಮನ್ನು ನೆನಪುಮಾಡಿಸಿ ಪ್ರೇರೇಪಿಸುವುದು ಯುಕ್ತವೆಂದೆಣಿಸಿದ್ದೇನೆ.
2 ಪೇತ್ರನು 1 : 14 (IRVKN)
ಏಕೆಂದರೆ ‡ ಯೋಹಾ 21:18,19: ನಮ್ಮ ಕರ್ತನಾದ ಯೇಸು ಕ್ರಿಸ್ತನು ನನಗೆ ತಿಳಿಸಿದ ಪ್ರಕಾರ ನಾನು § 2 ತಿಮೊ. 4:6: ಈ ಗುಡಾರವನ್ನು ಬಿಟ್ಟುಹೋಗುವ ಕಾಲವು ಸಮೀಪವಾಗಿದೆಯೆಂದು ಬಲ್ಲೆನು.
2 ಪೇತ್ರನು 1 : 15 (IRVKN)
ನೀವು ನನ್ನ ಮರಣಾನಂತರ ಇವುಗಳನ್ನು ಯಾವಾಗಲೂ ಜ್ಞಾಪಕ ಮಾಡಿಕೊಳ್ಳುವುದಕ್ಕಾಗಿ ನಾನು ಆಸಕ್ತಿವಹಿಸುವೆನು.
2 ಪೇತ್ರನು 1 : 16 (IRVKN)
ನಮ್ಮ ಕರ್ತನಾದ ಯೇಸುಕ್ರಿಸ್ತನ ಶಕ್ತಿಯನ್ನೂ, * 1 ಥೆಸ. 2:19: ಪ್ರತ್ಯಕ್ಷತೆಯನ್ನೂ ನಿಮಗೆ ತಿಳಿಯಪಡಿಸಿದ್ದರಲ್ಲಿ † 1 ಕೊರಿ 1:17: ಚಮತ್ಕಾರದಿಂದ ಕಲ್ಪಿಸಿದ ‡ 1 ತಿಮೊ. 1:4: ಕಟ್ಟುಕಥೆಗಳನ್ನು ನಾವು ಅನುಸರಿಸಲಿಲ್ಲ. § ಮತ್ತಾ 17:1,2,6; ಮಾರ್ಕ 9:2; ಯೋಹಾ 1:14: ಆತನ ಮಹತ್ತನ್ನು ಕಣ್ಣಾರೆ ಕಂಡವರಾಗಿಯೇ ಅದನ್ನು ತಿಳಿಯಪಡಿಸಿದೆವು.
2 ಪೇತ್ರನು 1 : 17 (IRVKN)
ಏಕೆಂದರೆ, * ಮತ್ತಾ 17:5; 3:17; ಲೂಕ 9:35: “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ” ಎಂಬ ವಾಣಿಯು ಮಹೋನ್ನತವಾದ ಮಹಿಮೆಯಿಂದ ಆತನಿಗೆ ಉಂಟಾದದ್ದರಲ್ಲಿ ಆತನು ತಂದೆಯಾದ ದೇವರಿಂದ ಗೌರವವನ್ನೂ, ಮಹಿಮೆಯನ್ನೂ ಹೊಂದಿದನಲ್ಲವೇ.
2 ಪೇತ್ರನು 1 : 18 (IRVKN)
ನಾವು † ವಿಮೋ 3:5; ಯೆಹೋ. 5:15: ಪರಿಶುದ್ಧ ಪರ್ವತದ ಮೇಲೆ ಆತನ ಸಂಗಡ ಇದ್ದಾಗ ಪರಲೋಕದಿಂದ ಬಂದ ಆ ವಾಣಿಯನ್ನು ನಾವು ಕೇಳಿಸಿಕೊಂಡೆವು.
2 ಪೇತ್ರನು 1 : 19 (IRVKN)
ಇದಲ್ಲದೆ ‡ 1 ಪೇತ್ರ. 1:10: ಪ್ರವಾದನವಾಕ್ಯವು ನಮಗೆ ಬಹುದೃಢವಾಗಿ ದೊರೆತಿದೆ. ಆ ದಿನವು ಅರುಣೋದಯವಾಗುವರೆಗೆ ಮತ್ತು § ಅಥವಾ, ಸೂರ್ಯನು, ದಿವಾಕರನು; ಮಲಾ. 4:2; ಪ್ರಕ 2:28; 22:16: ಉದಯ ನಕ್ಷತ್ರವು ನಿಮ್ಮ ಹೃದಯಗಳಲ್ಲಿ ಮೂಡುವತನಕ * ಕೀರ್ತ 119:105; ಯೋಹಾ 5:35: ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷ್ಯಕೊಟ್ಟರೆ ಒಳ್ಳೆಯದು.
2 ಪೇತ್ರನು 1 : 20 (IRVKN)
ಯಾವ ಪ್ರವಾದನಾ ವಾಕ್ಯವೂ ಕೇವಲ ಮನುಷ್ಯನ ಸ್ವಬುದ್ಧಿಯಿಂದ ವಿವರಿಸತಕ್ಕಂಥದ್ದಲ್ಲವೆಂಬುದನ್ನು ಮುಖ್ಯವಾಗಿ ಮೊದಲು ತಿಳಿದುಕೊಳ್ಳಿರಿ.
2 ಪೇತ್ರನು 1 : 21 (IRVKN)
ಏಕೆಂದರೆ † 2 ತಿಮೊ. 3:16: ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ. ಆದರೆ ಮನುಷ್ಯರು ‡ 1 ಪೇತ್ರ. 1:11; 2 ಸಮು 23:2; ಅ. ಕೃ. 1:16; ಯಾಕೋಬ. 5:10: ಪವಿತ್ರಾತ್ಮಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತನಾಡಿರುವುದು.
❮
❯
1
2
3
4
5
6
7
8
9
10
11
12
13
14
15
16
17
18
19
20
21