2 ಅರಸುಗಳು 8 : 1 (IRVKN)
{ಶೂನೇಮ್ಯಳಾದ ಸ್ತ್ರೀಯು ಸ್ವತ್ತನ್ನು ತಿರುಗಿ ಪಡೆದುಕೊಂಡದ್ದು} [PS] ಎಲೀಷನು ತಾನು ಬದುಕಿಸಿದ ಹುಡುಗನ ತಾಯಿಗೆ, “ಯೆಹೋವನು ಈ ದೇಶಕ್ಕೆ ಏಳು ವರ್ಷಗಳ ಕಾಲ ಕ್ಷಾಮವನ್ನು ಬರಮಾಡುವುದಕ್ಕಿದ್ದಾನೆ. ಆದುದರಿಂದ ನೀನು ನಿನ್ನ ಮನೆಯವರೊಡನೆ ಯಾವುದಾದರೊಂದು ಪರದೇಶಕ್ಕೆ ಹೋಗಿ ಅಲ್ಲಿ ವಾಸಿಸು” ಎಂದು ಹೇಳಿದನು.
2 ಅರಸುಗಳು 8 : 2 (IRVKN)
ಆಕೆಯು ದೇವರ ಮನುಷ್ಯನ ಅಪ್ಪಣೆಯಂತೆ ತನ್ನ ಮನೆಯವರೊಡನೆ ಸ್ವದೇಶವನ್ನು ಬಿಟ್ಟು ಹೋಗಿ ಫಿಲಿಷ್ಟಿಯರ ದೇಶದಲ್ಲಿ ಏಳು ವರ್ಷ ವಾಸವಾಗಿದ್ದಳು.
2 ಅರಸುಗಳು 8 : 3 (IRVKN)
ಏಳು ವರ್ಷಗಳಾದ ನಂತರ ಆಕೆಯು ಫಿಲಿಷ್ಟಿಯರ ದೇಶದಿಂದ ಸ್ವದೇಶಕ್ಕೆ ಬಂದು, ಪರಾಧೀನವಾಗಿದ್ದ ತನ್ನ ಹೊಲಮನೆಗಳಿಗಾಗಿ ಮೊರೆಯಿಡುವುದಕ್ಕೋಸ್ಕರ ಅರಸನ ಬಳಿಗೆ ಹೋದಳು.
2 ಅರಸುಗಳು 8 : 4 (IRVKN)
ಆ ಸಮಯದಲ್ಲಿ ಅರಸನು ದೇವರ ಮನುಷ್ಯನ ಸೇವಕನಾದ ಗೇಹಜಿಯೊಂದಿಗೆ ಮಾತನಾಡುತ್ತಾ, “ಎಲೀಷನು ಮಾಡಿದ ಎಲ್ಲಾ ಮಹತ್ಕಾರ್ಯಗಳನ್ನು ನನಗೆ ವಿವರಿಸು” ಎಂದು ಆಜ್ಞಾಪಿಸಿದ್ದನು. [PE][PS]
2 ಅರಸುಗಳು 8 : 5 (IRVKN)
ಎಲೀಷನು ಸತ್ತ ಹುಡುಗನಿಗೆ ಜೀವದಾನಮಾಡಿದ ಸಂಗತಿಯನ್ನು ಗೇಹಜಿಯು ಅರಸನಿಗೆ ವಿವರಿಸುತ್ತಿರುವಾಗಲೇ ಜೀವದಾನಹೊಂದಿದ ಹುಡುಗನ ತಾಯಿಯು ತನ್ನ ಹೊಲಮನೆಗಳಿಗಾಗಿ ಮೊರೆಯಿಡುವುದಕ್ಕೋಸ್ಕರ ಅರಸನ ಬಳಿಗೆ ಬಂದಳು. ಕೂಡಲೇ ಗೇಹಜಿಯು, “ನನ್ನ ಒಡೆಯನೇ, ಎಲೀಷನು ಬದುಕಿಸಿದ ಹುಡುಗನು ಇವನೇ; ಈಕೆಯು ಇವನ ತಾಯಿ” ಎಂದು ಹೇಳಿದನು.
2 ಅರಸುಗಳು 8 : 6 (IRVKN)
ಅರಸನು ಈ ವಿಷಯವಾಗಿ ಆ ಸ್ತ್ರೀಯನ್ನು ವಿಚಾರಿಸಲು ಆಕೆಯು ಅದರಂತೆಯೇ ಎಲೀಷನಿಂದಾದ ದೇವರ ಮಹಿಮೆಯ ವಿಷಯವನ್ನು ವಿವರವಾಗಿ ತಿಳಿಸಿದಳು. ಆಗ ಅರಸನು ಒಬ್ಬ ಕಂಚುಕಿಯನ್ನು ಕರೆದು ಅವನಿಗೆ, “ಈಕೆಯ ಹೊಲಮನೆಗಳನ್ನೂ, ಈಕೆಯು ದೇಶವನ್ನು ಬಿಟ್ಟ ದಿನದಿಂದ ಇಂದಿನವರೆಗೂ ಈಕೆಗೆ ಸಲ್ಲತಕ್ಕ ಹೊಲದ ಆದಾಯವನ್ನೂ ಅವಳಿಗೆ ಕೊಡಿಸು” ಎಂದು ಆಜ್ಞಾಪಿಸಿ, ಅವನನ್ನು ಆಕೆಯ ಜೊತೆಯಲ್ಲಿ ಕಳುಹಿಸಿದನು. [PS]
2 ಅರಸುಗಳು 8 : 7 (IRVKN)
{ಎಲೀಷನೂ ಹಜಾಯೇಲನೂ} [PS] ಒಮ್ಮೆ ಎಲೀಷನು ದಮಸ್ಕಕ್ಕೆ ಹೋದನು. ಆಗ ಅರಾಮ್ಯರ ಅರಸನಾದ ಬೆನ್ಹದದನು ಅಸ್ವಸ್ಥನಾಗಿದ್ದನು. “ದೇವರ ಮನುಷ್ಯನು ಬಂದಿದ್ದಾನೆ” ಎಂಬ ವರ್ತಮಾನವನ್ನು ಅರಸನು ಕೇಳಿ,
2 ಅರಸುಗಳು 8 : 8 (IRVKN)
ಅರಸನು [* ಅರಸನ ಅಧಿಕಾರಿಗಳಲ್ಲಿ ಒಬ್ಬನು.] ಹಜಾಯೇಲನಿಗೆ, “ನೀನು ಕಾಣಿಕೆಯನ್ನು ತೆಗೆದುಕೊಂಡು ದೇವರ ಮನುಷ್ಯನ ಬಳಿಗೆ ಹೋಗಿ ನನಗೆ ವಾಸಿಯಾಗುವುದೋ? ಇಲ್ಲವೋ ಎಂಬುದನ್ನು ಅವನ ಮುಖಾಂತರವಾಗಿ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸು” ಎಂದು ಆಜ್ಞಾಪಿಸಿದನು.
2 ಅರಸುಗಳು 8 : 9 (IRVKN)
ಹಜಾಯೇಲನು ದಮಸ್ಕದ ಶ್ರೇಷ್ಠ ವಸ್ತುಗಳಲ್ಲಿ ನಲವತ್ತು ಒಂಟೆಗಳು ಹೊರುವಷ್ಟು ಕಾಣಿಕೆಗಳನ್ನು ತೆಗೆದುಕೊಂಡು ಎಲೀಷನ ಬಳಿಗೆ ಹೋಗಿ ಅವನ ಮುಂದೆ ನಿಂತು, “ನಿನ್ನ ಮಗನೂ ಅರಾಮ್ಯರ ಅರಸನೂ ಆದ ಬೆನ್ಹದದನು ತನಗೆ ಸ್ವಸ್ಥವಾಗುವದೋ, ಇಲ್ಲವೋ ಎಂಬುದನ್ನು ವಿಚಾರಿಸುವುದಕ್ಕಾಗಿ ನನ್ನನ್ನು ನಿನ್ನ ಬಳಿ ಕಳುಹಿಸಿದ್ದಾನೆ” ಎಂದು ಹೇಳಿದನು. [PE][PS]
2 ಅರಸುಗಳು 8 : 10 (IRVKN)
ಆಗ ದೇವರ ಮನುಷ್ಯನಾದ ಎಲೀಷನು ಅವನಿಗೆ, “ಹೇಗೂ ನಿನಗೆ ವಾಸಿಯಾಗುವುದು” ಎಂಬುದಾಗಿ ಬೆನ್ಹದದನಿಗೆ ಹೇಳು; ಆದರೂ, ಅವನು ಸತ್ತೇ ಹೋಗುವನೆಂದು ಯೆಹೋವನು ನನಗೆ ತಿಳಿಸಿದ್ದಾನೆ ಎಂದು ಹೇಳಿದನು.
2 ಅರಸುಗಳು 8 : 11 (IRVKN)
ಸ್ಥಿರ ದೃಷ್ಟಿಯಿಂದ ಹಜಾಯೇಲನನ್ನು ದಿಟ್ಟಿಸಿ ನೋಡಿ ಅಳತೊಡಗಿದನು.
2 ಅರಸುಗಳು 8 : 12 (IRVKN)
ಹಜಾಯೇಲನು ಅವನನ್ನು, “ನನ್ನ ಒಡೆಯಾ, ಯಾಕೆ ಅಳುತ್ತಿ?” ಎಂದು ಕೇಳಿದನು. ಅದಕ್ಕೆ ಅವನು, “ನೀನು ಇಸ್ರಾಯೇಲರಿಗೆ ಎಷ್ಟು ಕೇಡು ಮಾಡುವಿ ಎಂಬುದು ನನಗೆ ಪ್ರಕಟವಾಯಿತು. ನೀನು ಅವರ ಕೋಟೆಗಳಿಗೆ ಬೆಂಕಿ ಹೊತ್ತಿಸುವಿ. ಯೌವನಸ್ಥರನ್ನು ಕತ್ತಿಯಿಂದ ಸಂಹರಿಸುವಿ. ಮಕ್ಕಳನ್ನು ಬಂಡೆಗೆ ಅಪ್ಪಳಿಸುವಿ. ಗರ್ಭಿಣಿಯರ ಹೊಟ್ಟೆಯನ್ನು ಸೀಳುವಿ” ಎಂದು ಉತ್ತರಕೊಟ್ಟನು. [PE][PS]
2 ಅರಸುಗಳು 8 : 13 (IRVKN)
ಹಜಾಯೇಲನು ಎಲೀಷನಿಗೆ, “ನಿನ್ನ ಸೇವಕನಾದ ನಾನು ನಾಯಿಯಂತಿರುತ್ತೇನಷ್ಟೇ; ನನ್ನಿಂದ ಇಂಥಾ ಕ್ರೂರ ಕಾರ್ಯವಾಗುವುದು ಹೇಗೆ?” ಎಂದು ಕೇಳಲು ಅವನು, “ನೀನು ಅರಾಮ್ಯರ ಅರಸನಾಗುವಿಯೆಂದು ಯೆಹೋವನು ನನಗೆ ತಿಳಿಸಿದ್ದಾನೆ” ಎಂದನು.
2 ಅರಸುಗಳು 8 : 14 (IRVKN)
ಹಜಾಯೇಲನು ಎಲೀಷನನ್ನು ಬಿಟ್ಟು ತನ್ನ ಯಜಮಾನನ ಬಳಿಗೆ ಹೋದಾಗ ಅವನು ಇವನನ್ನು, “ಎಲೀಷನು ಏನು ಹೇಳಿದನು?” ಎಂದು ಕೇಳಿದನು. ಅದಕ್ಕೆ ಇವನು, “ನಿನಗೆ ಹೇಗೂ ಸ್ವಸ್ಥವಾಗುವುದು ಎಂದು ಹೇಳಿದನು” ಎಂಬುದಾಗಿ ಉತ್ತರಕೊಟ್ಟನು.
2 ಅರಸುಗಳು 8 : 15 (IRVKN)
ಮರುದಿನ ಬೆಳಿಗ್ಗೆ ಇವನು ಕಂಬಳಿಯನ್ನು ತೆಗೆದುಕೊಂಡು ನೀರಿನಲ್ಲಿ ತೋಯಿಸಿ, ಅರಸನ ಮುಖದ ಮೇಲೆ ಹಾಕಿದ್ದರಿಂದ ಅವನು ಸತ್ತನು. ಹಜಾಯೇಲನು ಅವನಿಗೆ ಬದಲಾಗಿ ಅರಸನಾದನು. [PS]
2 ಅರಸುಗಳು 8 : 16 (IRVKN)
{ಯೆಹೂದ್ಯರ ಅರಸನಾದ ಯೆಹೋರಾಮ್ ಅಹಜ್ಯ} [PS] ಅಹಾಬನ ಮಗನೂ ಇಸ್ರಾಯೇಲರ ಅರಸನೂ ಆದ ಯೋರಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ ಯೆಹೂದ ರಾಜನಾದ ಯೆಹೋಷಾಫಾಟನ ಮಗ ಯೆಹೋರಾಮನು ಆಳತೊಡಗಿದನು.
2 ಅರಸುಗಳು 8 : 17 (IRVKN)
ಇವನು ಪಟ್ಟಕ್ಕೆ ಬಂದಾಗ ಮೂವತ್ತೆರಡು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಎಂಟು ವರ್ಷ ಆಳಿದನು.
2 ಅರಸುಗಳು 8 : 18 (IRVKN)
ಇವನು ಅಹಾಬನ ಮಗಳನ್ನು ಮದುವೆಮಾಡಿಕೊಂಡದ್ದರಿಂದ ಅಹಾಬನ ಕುಟುಂಬದವರಾದ ಇಸ್ರಾಯೇಲ್ ರಾಜರ ಮಾರ್ಗವನ್ನು ಅನುಸರಿಸಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
2 ಅರಸುಗಳು 8 : 19 (IRVKN)
ಆದರೂ, ಯೆಹೋವನು ಯೆಹೂದ ರಾಜ್ಯವನ್ನು ನಾಶಮಾಡಲಿಲ್ಲ. ನಿನ್ನ ಮತ್ತು ನಿನ್ನ ಸಂತಾನದವರ ದೀಪವನ್ನು ಎಂದೂ ನಂದಿಸುವುದಿಲ್ಲ ಎಂಬುದಾಗಿ ತನ್ನ ಸೇವಕನಾದ ದಾವೀದನಿಗೆ ಮಾಡಿದ ವಾಗ್ದಾನವನ್ನು ಸ್ಮರಿಸಿ ಅದನ್ನು ಉಳಿಸಿದನು. [PE][PS]
2 ಅರಸುಗಳು 8 : 20 (IRVKN)
ಇವನ ಕಾಲದಲ್ಲಿ ಎದೋಮ್ಯರು ಯೆಹೂದ್ಯರಿಗೆ ವಿರುದ್ಧವಾಗಿ ತಿರುಗಿಬಿದ್ದು ಸ್ವತಂತ್ರರಾಗಿ ತಮಗೆ ಒಬ್ಬ ಅರಸನನ್ನು ನೇಮಿಸಿಕೊಂಡರು.
2 ಅರಸುಗಳು 8 : 21 (IRVKN)
ಆಗ ಯೆಹೋರಾಮನು ತನ್ನ ಎಲ್ಲಾ ರಥಬಲಸಹಿತವಾಗಿ ಯೊರ್ದನ್ ನದಿಯನ್ನು ದಾಟಿ ಚಾಯೀರಿಮಿಗೆ ಹೋದನು. ಎದೋಮ್ಯರು ಬಂದು ಅವನನ್ನು ಸುತ್ತಿಕೊಳ್ಳಲು ಅವನು ರಾತ್ರಿಯಲ್ಲಿ ಎದ್ದು ಅವರನ್ನು ಅವರ ರಥಬಲದ ಅಧಿಪತಿಗಳನ್ನು ಸೋಲಿಸಿ ಪಾರಾದನು. ಅವನ ಸೈನ್ಯದವರು ತಮ್ಮ ತಮ್ಮ ನಿವಾಸಗಳಿಗೆ ಓಡಿಹೋದರು. [PE][PS]
2 ಅರಸುಗಳು 8 : 22 (IRVKN)
ಹೀಗೆ ಎದೋಮ್ಯರು ಯೆಹೂದ್ಯರಿಗೆ ವಿರೋಧವಾಗಿ ತಿರುಗಿ ಬಿದ್ದರು. ಅವರು ಅಂದಿನಿಂದ ಇಂದಿನವರೆಗೂ ಸ್ವತಂತ್ರರಾಗಿರುತ್ತಾರೆ. ಅದೇ ಕಾಲದಲ್ಲಿ ಲಿಬ್ನದವರು ಸ್ವತಂತ್ರರಾದರು.
2 ಅರಸುಗಳು 8 : 23 (IRVKN)
ಯೆಹೋರಾಮನ ಉಳಿದ ಚರಿತ್ರೆಯೂ, ಅವನ ಕೃತ್ಯಗಳೂ, ಯೆಹೂದ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತದೆ.
2 ಅರಸುಗಳು 8 : 24 (IRVKN)
ಯೆಹೋರಾಮನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ದಾವೀದ ನಗರದೊಳಗೆ ಕುಟುಂಬ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಅಹಜ್ಯನು ಅರಸನಾದನು. [PS]
2 ಅರಸುಗಳು 8 : 25 (IRVKN)
{ಯೆಹೂದ್ಯರ ಅರಸನಾದ ಅಹಜ್ಯ} [PS] ಅಹಾಬನ ಮಗನೂ, ಇಸ್ರಾಯೇಲರ ಅರಸನೂ ಆದ ಯೋರಾಮನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಯೆಹೂದದ ಅರಸನಾದ ಯೆಹೋರಾಮನ ಮಗ ಅಹಜ್ಯನು ಅರಸನಾದನು.
2 ಅರಸುಗಳು 8 : 26 (IRVKN)
ಅಹಜ್ಯನು ಪಟ್ಟಕ್ಕೆ ಬಂದಾಗ ಇಪ್ಪತ್ತೆರಡು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಒಂದು ವರ್ಷ ಆಳಿದನು. ಇಸ್ರಾಯೇಲರ ಅರಸನಾದ ಒಮ್ರಿಯ ಮೊಮ್ಮಗಳಾದ ಅತಲ್ಯ ಎಂಬಾಕೆಯು ಇವನ ತಾಯಿ.
2 ಅರಸುಗಳು 8 : 27 (IRVKN)
ಅಹಜ್ಯನಿಗೆ ಅಹಾಬನ ಕುಟುಂಬದವರೊಂದಿಗೆ ಸಂಬಂಧವಿದ್ದುದ್ದರಿಂದ ಅವನು ಅವರ ಮಾರ್ಗದಲ್ಲೆ ನಡೆದು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು. [PE][PS]
2 ಅರಸುಗಳು 8 : 28 (IRVKN)
ಇದಲ್ಲದೆ ಅಹಜ್ಯನು ಅರಾಮ್ಯರ ಅರಸನಾದ ಹಜಾಯೇಲನೊಡನೆ ಯುದ್ಧಮಾಡುವುದಕ್ಕಾಗಿ ಅಹಾಬನ ಮಗನಾದ ಯೋರಾಮನ ಜೊತೆಯಲ್ಲಿ ರಾಮೋತ್ ಗಿಲ್ಯಾದಿಗೆ ಹೋದನು.
2 ಅರಸುಗಳು 8 : 29 (IRVKN)
ಅರಾಮ್ಯರು ಯೋರಾಮನನ್ನು ಯುದ್ಧದಲ್ಲಿ ಗಾಯಪಡಿಸಲು ಅವನಿಗೆ ರಾಮದಲ್ಲಿ ಆದ ಗಾಯಗಳನ್ನು ಗುಣಪಡಿಸಿಕೊಳ್ಳುವುದಕ್ಕಾಗಿ ಇಜ್ರೇಲಿಗೆ ಬಂದನು. ಹಜಾಯೇಲನು ಅಸ್ವಸ್ಥನಾಗಿದ್ದುದರಿಂದ ಯೆಹೂದ್ಯರ ಅರಸನಾದ ಯೆಹೋರಾಮನ ಮಗ ಅಹಜ್ಯನು ಅಹಾಬನ ಮಗನಾದ ಯೋರಾಮನನ್ನು ನೋಡುವುದಕ್ಕಾಗಿ ಅಲ್ಲಿಗೆ ಹೋದನು. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29

BG:

Opacity:

Color:


Size:


Font: