2 ಕೊರಿಂಥದವರಿಗೆ 8 : 1 (IRVKN)
ಯೆರೂಸಲೇಮಿನ ಬಡ ಕ್ರೈಸ್ತರಿಗಾಗಿ ಹಣದ ಸಹಾಯ ಮಾಡುವುದರ ವಿಷಯ ಸಹೋದರರೇ, ಮಕೆದೋನ್ಯದ ಸಭೆಗಳಿಗೆ ಅನುಗ್ರಹಿಸಲ್ಪಟ್ಟ ದೇವರ ಕೃಪೆಯ ಕುರಿತು ನಿಮಗೆ ತಿಳಿಯಬೇಕೆಂದು ಬಯಸುತ್ತೇವೆ,
2 ಕೊರಿಂಥದವರಿಗೆ 8 : 2 (IRVKN)
ಆ ಸಭೆಗಳವರಿಗೆ ಬಹಳ ಸಂಕಷ್ಟಗಳು ಬಂದರೂ ತಮ್ಮ * ಮಾರ್ಕ 12:44; 2 ಕೊರಿ 9:13 ವಿಪರೀತವಾದ ಬಡತನದಲ್ಲಿದ್ದರೂ ಬಹು ಆನಂದದಿಂದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು.
2 ಕೊರಿಂಥದವರಿಗೆ 8 : 3 (IRVKN)
ಅವರು ತಮ್ಮ ಶಕ್ತಿಯನುಸಾರವಾಗಿ ಮಾತ್ರ ಕೊಡದೆ ಶಕ್ತಿಯನ್ನು ಮೀರಿ ತಮ್ಮಿಷ್ಟಕ್ಕೆ ತಾವೇ ಉದಾರವಾಗಿ ದಾನಮಾಡಿದರು.
2 ಕೊರಿಂಥದವರಿಗೆ 8 : 4 (IRVKN)
ಇದಕ್ಕೆ ನಾನೇ ಸಾಕ್ಷಿ. ರೋಮಾ. 15:25,26,31 ದೇವಜನರಿಗೆ ಸಹಾಯ ಮಾಡುವ ಕೆಲಸದಲ್ಲಿ ತಾವು ಪಾಲುಗಾರರಾಗಲು ಅಪ್ಪಣೆಯಾಗುವಂತೆ ನಮ್ಮನ್ನು ಬಹಳವಾಗಿ ಬೇಡಿಕೊಂಡರು.
2 ಕೊರಿಂಥದವರಿಗೆ 8 : 5 (IRVKN)
ನಾವು ಇದನ್ನು ನಿರೀಕ್ಷಿಸದ ರೀತಿಯಲ್ಲಿ ಅವರು ಕೊಡದೆ, ಮೊದಲು ತಮ್ಮನ್ನೇ ಕರ್ತನಿಗೆ ಒಪ್ಪಿಸಿಕೊಟ್ಟರು; ಅನಂತರ ದೇವರ ಚಿತ್ತಾನುಸಾರವಾಗಿ ನಮಗೂ ತಮ್ಮನ್ನು ಒಪ್ಪಿಸಿದರು.
2 ಕೊರಿಂಥದವರಿಗೆ 8 : 6 (IRVKN)
ತೀತನು ಪ್ರಾರಂಭಿಸಿದ ಹಾಗೆಯೇ ಧರ್ಮಕಾರ್ಯವನ್ನು ಪೂರೈಸಬೇಕೆಂದು ನಾವು ಅವನನ್ನು ಕೇಳಿಕೊಂಡಿದ್ದೇವೆ.
2 ಕೊರಿಂಥದವರಿಗೆ 8 : 7 (IRVKN)
ನೀವು ದೇವರ ಮೇಲಣ ನಂಬಿಕೆಯಲ್ಲಿ, ವಾಕ್ಚಾತುರ್ಯದಲ್ಲಿ, ಜ್ಞಾನದಲ್ಲಿ, ಸಕಲ ವಿಧವಾದ ಆಸಕ್ತಿಯಲ್ಲಿ ಮತ್ತು ನಮ್ಮ ಪ್ರೇರಣೆಯಿಂದ ನಿಮ್ಮಲ್ಲಿ ಹುಟ್ಟಿದ ಪ್ರೀತಿಯಲ್ಲಿ 1 ಕೊರಿ 1:5,6 ಹೇಗೆ ಸಮೃದ್ಧರಾಗಿದ್ದೀರೋ ಹಾಗೆಯೇ § 2 ಕೊರಿ 9:8 ಈ ಧರ್ಮಕಾರ್ಯದಲ್ಲಿಯೂ ಸಮೃದ್ಧರಾಗಿ ಮುಂದುವರೆಯಿರಿ.
2 ಕೊರಿಂಥದವರಿಗೆ 8 : 8 (IRVKN)
ಇದನ್ನು * 1 ಕೊರಿ 7:6 ಆಜ್ಞಾರೂಪವಾಗಿ ಹೇಳುತ್ತಿಲ್ಲ ಆದರೆ ಇತರರ ಆಸಕ್ತಿಗೆ ಹೋಲಿಸಿ ನಿಮ್ಮ ಪ್ರೀತಿಯು ಎಷ್ಟು ಯಥಾರ್ಥವಾದದ್ದೆಂಬುದನ್ನು ಸಾಬೀತು ಮಾಡಬೇಕೆಂದು ಹೇಳುತ್ತೇನೆ.
2 ಕೊರಿಂಥದವರಿಗೆ 8 : 9 (IRVKN)
ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮಗೆ ಗೊತ್ತಾಗಿದೆಯಲ್ಲಾ; ಫಿಲಿ. 2:6,7 ಆತನು ಐಶ್ವರ್ಯವಂತನಾಗಿದ್ದರೂ ತನ್ನ ಬಡತನದ ಮುಖಾಂತರ ನೀವು ಐಶ್ವರ್ಯವಂತರಾಗಬೇಕೆಂದು ನಿಮಗೋಸ್ಕರ ಆತನು ಬಡವನಾದನು.
2 ಕೊರಿಂಥದವರಿಗೆ 8 : 10 (IRVKN)
ಈ ಧರ್ಮಕಾರ್ಯವನ್ನು ಕುರಿತ ನನ್ನ ಸಲಹೆಯನ್ನು ತಿಳಿಸುತ್ತೇನೆ, ಇದು ನಿಮ್ಮ ಸಹಾಯಕ್ಕೆ; ಈ ಕಾರ್ಯವನ್ನು 2 ಕೊರಿ 9:2 ಒಂದು ವರ್ಷದ ಹಿಂದೆ ನಡೆಸುವುದಕ್ಕೆ ಪ್ರಾರಂಭಿಸಿದ ನೀವು, ಮುಂದುವರಿಯಲು ಮನಸ್ಸು ಮಾಡಿದ ಹಾಗೆಯೇ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿರಿ.
2 ಕೊರಿಂಥದವರಿಗೆ 8 : 11 (IRVKN)
§ ಧರ್ಮೋ 15:7,8; ಜ್ಞಾ. 19:17; 28:27; 1 ತಿಮೊ. 6:18,19; ಇಬ್ರಿ. 13:16 ಈ ಕಾರ್ಯವನ್ನು ಪ್ರಾರಂಭಿಸುವುದಕ್ಕೆ ನಿಮ್ಮಲ್ಲಿ ಸಿದ್ಧ ಮನಸ್ಸು ಇರುವ, ಹಾಗೆಯೇ ನಿಮ್ಮ ನಿಮ್ಮ ಶಕ್ತ್ಯನುಸಾರವಾಗಿ ಅದನ್ನು ನೆರವೇರಿಸಿರಿ.
2 ಕೊರಿಂಥದವರಿಗೆ 8 : 12 (IRVKN)
ಒಬ್ಬನು ಕೊಡುವಂತ ಮನಸ್ಸುಳ್ಳವನಾಗಿರುವಲ್ಲಿ * 2 ಕೊರಿ 9:7; ಲೂಕ 21:3 ಅವನು ತನ್ನ ಯೋಗ್ಯತೆಗೆ ಅನುಸಾರವಾಗಿ ಕೊಟ್ಟರೆ ಅದು ಸಮರ್ಪಕವಾಗಿರುವುದು; ಅವನಿಗೆ ದೇವರಿಂದ ಮೆಚ್ಚಿಕೆ ದೊರೆಯುವುದು.
2 ಕೊರಿಂಥದವರಿಗೆ 8 : 13 (IRVKN)
ಇತರರಿಗೆ ಕಷ್ಟಪರಿಹಾರವೂ, ನಿಮಗೆ ಕಷ್ಟವೂ ಉಂಟಾಗಬೇಕೆಂದು ನನ್ನ ತಾತ್ಪರ್ಯವಲ್ಲ;
2 ಕೊರಿಂಥದವರಿಗೆ 8 : 14 (IRVKN)
ಸಮಾನತ್ವ ಇರಬೇಕೆಂಬುದೇ ನನ್ನ ತಾತ್ಪರ್ಯ. 2 ಕೊರಿ 9:12; ಅ. ಕೃ. 4:34 ಸದ್ಯಕ್ಕೆ ನಿಮ್ಮ ಸಮೃದ್ಧಿಯು ಅವರ ಕೊರತೆಯನ್ನು ನೀಗಿಸುತ್ತದೆ. ಮುಂದೆ ಅವರ ಸಮೃದ್ಧಿಯು ನಿಮ್ಮ ಕೊರತೆಯನ್ನು ನೀಗಿಸುವುದಕ್ಕೆ ಅನುಕೂಲವಾಗುವುದು. ಹೀಗೆ ಸಮಾನತ್ವವುಂಟಾಗುವುದು.
2 ಕೊರಿಂಥದವರಿಗೆ 8 : 15 (IRVKN)
ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ವಿಮೋ 16:18 “ಅತಿಯಾಗಿ ಶೇಖರಿಸಿದವನಿಗೆ ಅಧಿಕವಾಗಲಿಲ್ಲ ಮಿತಿಯಾಗಿ ಶೇಖರಿಸಿದವನಿಗೆ ಕೊರತೆಯಾಗಲಿಲ್ಲ.”
2 ಕೊರಿಂಥದವರಿಗೆ 8 : 16 (IRVKN)
ಧರ್ಮ ದ್ರವ್ಯವನ್ನು ಕೂಡಿಸುವುದಕ್ಕೆ ಪೌಲನು ಯೋಗ್ಯವಾದ ಕೆಲವು ಪುರುಷರನ್ನು ಕೊರಿಂಥಕ್ಕೆ ಕಳುಹಿಸಿದ್ದು ನಿಮ್ಮ ವಿಷಯವಾಗಿ ನನಗಿರುವ ಹಿತ ಚಿಂತನೆಯನ್ನು ದೇವರು ತೀತನ ಹೃದಯದಲ್ಲಿಯೂ ಹುಟ್ಟಿಸಿದ್ದಕ್ಕಾಗಿ ಆತನಿಗೆ ಸ್ತೋತ್ರಮಾಡುತ್ತೇನೆ.
2 ಕೊರಿಂಥದವರಿಗೆ 8 : 17 (IRVKN)
ಅವನು ನಿಮ್ಮ ಬಳಿಗೆ ಹೋಗಬೇಕೆಂದು § 2 ಕೊರಿ 8:6 ನಾವು ಕೇಳಿಕೊಂಡಾಗ ಅವನು ಒಪ್ಪಿದ್ದನಲ್ಲದೆ ಅತ್ಯಾಸಕ್ತನಾಗಿದ್ದು, ತನ್ನ ಸ್ವಚಿತ್ತದಿಂದ ನಿಮ್ಮ ಬಳಿಗೆ ಬಂದನು.
2 ಕೊರಿಂಥದವರಿಗೆ 8 : 18 (IRVKN)
ಅವನ ಜೊತೆಯಲ್ಲಿ * 2 ಕೊರಿ 12:18 ಮತ್ತೊಬ್ಬ ಸಹೋದರನನ್ನು ಕಳುಹಿಸಿದ್ದೇವೆ. ಈ ಸಹೋದರನು ಸುವಾರ್ತಾ ಸೇವೆಯಲ್ಲಿ ಎಲ್ಲಾ ಸಭೆಗಳೊಳಗೆ ಕೀರ್ತಿ ಪಡೆದುಕೊಂಡವನಾಗಿದ್ದಾನೆ.
2 ಕೊರಿಂಥದವರಿಗೆ 8 : 19 (IRVKN)
ಇದು ಮಾತ್ರವಲ್ಲದೆ, ಕರ್ತನ ಮಹಿಮೆಗಾಗಿ ಮತ್ತು ನಮ್ಮ ಸಿದ್ಧ ಮನಸ್ಸನ್ನು ತೋರಿಸುವುದಕ್ಕಾಗಿ ನಾವು ನಡಿಸುವ ಧರ್ಮಕಾರ್ಯದ ಸಂಬಂಧವಾಗಿ ನಮ್ಮ ಸಂಗಡ ಪ್ರಯಾಣಮಾಡುವಂತೆ 1 ಕೊರಿ 16:3,4 ಸಭೆಗಳಿಂದ ಇವನು ಆರಿಸಲ್ಪಟ್ಟಿದ್ದಾನೆ.
2 ಕೊರಿಂಥದವರಿಗೆ 8 : 20 (IRVKN)
ನಾವು ಸಂಗ್ರಹಿಸುತ್ತಿರುವಂತಹ ಈ ಉದಾರ ಕೊಡುಗೆಯ ವಿಷಯದಲ್ಲಿ ಒಬ್ಬರೂ ನಮ್ಮ ಮೇಲೆ ತಪ್ಪುಹೊರಿಸುವುದಕ್ಕೆ ಆಸ್ಪದಕೊಡಬಾರದು.
2 ಕೊರಿಂಥದವರಿಗೆ 8 : 21 (IRVKN)
ಯಾಕೆಂದರೆ ರೋಮಾ. 12:17; ಫಿಲಿ. 4:8; ಜ್ಞಾ. 3:3-4 ಕರ್ತನ ದೃಷ್ಟಿಯಲ್ಲಿ ಮಾತ್ರವಲ್ಲದೆ ಮನುಷ್ಯರ ದೃಷ್ಟಿಯಲ್ಲಿಯೂ ಯೋಗ್ಯವಾದದ್ದನ್ನು ಮಾಡುವುದು ನಮ್ಮ ಉದ್ದೇಶ.
2 ಕೊರಿಂಥದವರಿಗೆ 8 : 22 (IRVKN)
ಇವರಿಬ್ಬರ ಸಂಗಡ ನಮ್ಮ ಸಹೋದರರಲ್ಲಿ ಮತ್ತೊಬ್ಬನನ್ನು ಕಳುಹಿಸಿದ್ದೇವೆ; ನಾವು ಅನೇಕ ಸಮಯದಲ್ಲಿಯೂ, ಅನೇಕ ಕಾರ್ಯಗಳಲ್ಲಿಯೂ ಅವನನ್ನು ಪರೀಕ್ಷಿಸಿ ಆಸಕ್ತನೆಂದು ತಿಳಿದುಕೊಂಡಿದ್ದೇವೆ; ಈಗ ಅವನು ನಿಮ್ಮಲ್ಲಿಟ್ಟಿರುವ ವಿಶೇಷ ಭರವಸದಿಂದ ಇನ್ನೂ ಬಹು ಹೆಚ್ಚಾಗಿ ಆಸಕ್ತಿಯುಳ್ಳವನಾಗಿದ್ದಾನೆ.
2 ಕೊರಿಂಥದವರಿಗೆ 8 : 23 (IRVKN)
ತೀತನನ್ನು ಕುರಿತಾಗಿ ಹೇಳುವುದಾದರೆ, ಅವನು ನನ್ನ ಪಾಲುಗಾರನೂ ನಿಮ್ಮ ಪ್ರಯೋಜನಕ್ಕಾಗಿ ನನಗೆ ಸಹಕಾರಿಯೂ ಆಗಿದ್ದಾನೆ; ಆ ಸಹೋದರರನ್ನು ಕುರಿತಾಗಿ ಹೇಳುವುದಾದರೆ, ಅವರು ಸಭೆಗಳಿಂದ ಕಳುಹಿಸಲ್ಪಟ್ಟವರೂ ಮತ್ತು ಕ್ರಿಸ್ತನ ಮಹಿಮೆಯನ್ನು ಪ್ರಕಾಶಪಡಿಸುವವರೂ ಆಗಿದ್ದಾರೆ.
2 ಕೊರಿಂಥದವರಿಗೆ 8 : 24 (IRVKN)
ಆದಕಾರಣ ಇವರನ್ನು ಪ್ರೀತಿಯಿಂದ ನೋಡಿಕೊಳ್ಳಿ. ನಾವು ನಿಮ್ಮನ್ನು ಹೊಗಳಿದ್ದಕ್ಕೆ ತಕ್ಕಂತೆ ನಡೆದುಕೊಂಡು ಸಭೆಗಳಿಗೆ ನಿಮ್ಮ ಯೋಗ್ಯತೆಯನ್ನು ಮನದಟ್ಟು ಮಾಡಿಕೊಡಿರಿ.

1 2 3 4 5 6 7 8 9 10 11 12 13 14 15 16 17 18 19 20 21 22 23 24