2 ಕೊರಿಂಥದವರಿಗೆ 4 : 1 (IRVKN)
ಮಣ್ಣಿನ ಪಾತ್ರೆಯಲ್ಲಿ ಇರುವ ನಿಕ್ಷೇಪ ಆದ್ದರಿಂದ ದೇವರ ಕರುಣೆಯಿಂದ * 2 ಕೊರಿ 3:6 ಈ ಸೇವೆಯನ್ನು ಹೊಂದಿದವರಾದ ನಾವು ಧೈರ್ಯಗೆಟ್ಟು ಹಿಂಜರಿಯುವುದಿಲ್ಲ.
2 ಕೊರಿಂಥದವರಿಗೆ 4 : 2 (IRVKN)
ರೋಮಾ. 6:21 ನಾಚಿಕೆಪಡುವಂತಹ ಗುಪ್ತಕಾರ್ಯಗಳನ್ನು ಬಿಟ್ಟು ಕುತಂತ್ರದಲ್ಲಿ ನಡೆಯದೆ ‡ 2 ಕೊರಿ 2:17 ದೇವರ ವಾಕ್ಯವನ್ನು ಬೆರಕೆ ಮಾಡದೆ, ಸತ್ಯವನ್ನು ಪ್ರಾಮಾಣಿಕವಾಗಿ ಬೋಧಿಸುತ್ತಾ § 2 ಕೊರಿ 5:11-12 ನಾವು ನೀತಿವಂತರೆಂದು ಪ್ರತಿ ಮನುಷ್ಯನ ಮನಸ್ಸಾಕ್ಷಿಯು ದೇವರ ಮುಂದೆ ಒಪ್ಪಬೇಕಾದ ರೀತಿಯಲ್ಲಿ ನಡೆಯುತ್ತೇವೆ.
2 ಕೊರಿಂಥದವರಿಗೆ 4 : 3 (IRVKN)
* 2 ಕೊರಿ 3:14 ನಾವು ಸಾರುವ ಸುವಾರ್ತೆಯು ಕೆಲವರಿಗೆ ಮರೆಯಾಗಿರುವುದಾದರೆ † 1 ಕೊರಿ 1:18, 2 ಕೊರಿ 2:15 ನಾಶಮಾರ್ಗದಲ್ಲಿರುವವರಿಗೇ ಅದು ‡ ಮತ್ತಾ 13:15 ಮರೆಯಾಗಿರುವುದು.
2 ಕೊರಿಂಥದವರಿಗೆ 4 : 4 (IRVKN)
ಇವರಲ್ಲಿ § ಕೊಲೊ 1:15, ಫಿಲಿ. 2:, ಯೋಹಾ 14:9 ದೇವರ ಪ್ರತಿರೂಪವಾಗಿರುವ ಕ್ರಿಸ್ತನ ತೇಜಸ್ಸನ್ನು ತೋರಿಸುವ * ಅ. ಕೃ. 26:18 ಸುವಾರ್ತೆಯ ಬೆಳಕನ್ನು ನೋಡಬಾರದೆಂದು † ಯೋಹಾ 12:31 ಈ ಲೋಕದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಕುರುಡು ಮಾಡಿದ್ದಾನೆ.
2 ಕೊರಿಂಥದವರಿಗೆ 4 : 5 (IRVKN)
ನಮ್ಮನ್ನೇ ನಾವು ಪ್ರಚಾರಮಾಡಿಕೊಳ್ಳದೆ ನಮ್ಮನ್ನು ಯೇಸುವಿನ ನಿಮಿತ್ತ 1 ಕೊರಿ 9:19, 2 ಕೊರಿ 1:24 ನಿಮ್ಮ ದಾಸರೆಂತಲೂ ಕ್ರಿಸ್ತೇಸುವನ್ನೇ ಕರ್ತನೆಂತಲೂ ಘೋಷಿಸುತ್ತೇವೆ.
2 ಕೊರಿಂಥದವರಿಗೆ 4 : 6 (IRVKN)
ಯಾಕೆಂದರೆ § ಆದಿ 1:3 “ಕತ್ತಲೆಯೊಳಗಿನಿಂದ ಬೆಳಕು ಪ್ರಕಾಶಿಸಲಿ” ಎಂದು ಹೇಳಿದ ದೇವರು ತಾನೇ * ವ 4 ನೋಡಿರಿ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಮಹಿಮೆಯ ಜ್ಞಾನವೆಂಬ ಪ್ರಕಾಶವು ಅನೇಕರಿಗೆ ಉಂಟಾಗುವುದಕ್ಕಾಗಿ † 2 ಪೇತ್ರ. 1:19 ನಮ್ಮ ಹೃದಯಗಳಲ್ಲಿ ಪ್ರಕಾಶಿಸಿದನು.
2 ಕೊರಿಂಥದವರಿಗೆ 4 : 7 (IRVKN)
2 ತಿಮೊ. 2:20, 2 ಕೊರಿ 5:1 ಮಣ್ಣಿನ ಮಡಿಕೆಯಂತಿರುವ ನಮ್ಮಲ್ಲಿ ಈ ನಿಕ್ಷೇಪವನ್ನು ಇಡಲ್ಪಟ್ಟಿರುವುದರಿಂದ ಇಂತಹ § 1 ಕೊರಿ 2:5 ಮಹಾಶಕ್ತಿಯು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂಬುದು ಸ್ಪಷ್ಟವಾಗಿದೆ.
2 ಕೊರಿಂಥದವರಿಗೆ 4 : 8 (IRVKN)
* 2 ಕೊರಿ 7:5 ಎಲ್ಲಾದರಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಸಂಕಟಪಡುವವರಲ್ಲ. ನಾವು ಗೊಂದಲಕ್ಕೀಡಾಗಿದ್ದರೂ ಹತಾಶರಾಗುವವರಲ್ಲ.
2 ಕೊರಿಂಥದವರಿಗೆ 4 : 9 (IRVKN)
ಹಿಂಸೆಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ. ಕೆಡವಲ್ಪಟ್ಟವರಾಗಿದ್ದರೂ ನಶಿಸಿಹೊಗುವವರಲ್ಲ.
2 ಕೊರಿಂಥದವರಿಗೆ 4 : 10 (IRVKN)
2 ತಿಮೊ. 2:11 ಯೇಸುವಿನ ಜೀವವು ನಮ್ಮ ದೇಹದಲ್ಲಿ ಉಂಟೆಂದು ಪ್ರಕಟಪಡಿಸುವುದಕ್ಕಾಗಿ ‡ 2 ಕೊರಿ 6:9, 1 ಕೊರಿ 4:9; 15:31 ಯೇಸುವಿನ ಮರಣಾವಸ್ಥೆಯನ್ನು ನಾವು ಯಾವಾಗಲೂ ದೇಹದಲ್ಲಿ ಅನುಭವಿಸುವವರಾಗಿದ್ದೇವೆ.
2 ಕೊರಿಂಥದವರಿಗೆ 4 : 11 (IRVKN)
ಯೇಸುವಿನ ಜೀವವು ನಮ್ಮ ಮರ್ತ್ಯ ಶರೀರದಲ್ಲಿ ಉಂಟೆಂದು ತೋರಿಬರುವುದಕ್ಕಾಗಿ ಬದುಕಿರುವ ನಾವು ಯೇಸುವಿನ ನಿಮಿತ್ತ ಯಾವಾಗಲೂ ಮರಣಕ್ಕೆ ಒಪ್ಪಿಸಲ್ಪಡುತ್ತಾ ಇದ್ದೇವೆ.
2 ಕೊರಿಂಥದವರಿಗೆ 4 : 12 (IRVKN)
ಹೀಗೆ ನಮ್ಮಲ್ಲಿ ಮರಣವು ನಿಮ್ಮಲ್ಲಿ ಜೀವವು ವ್ಯಾಪಿಸುತ್ತಿದೆ.
2 ಕೊರಿಂಥದವರಿಗೆ 4 : 13 (IRVKN)
“ನಾನು § ಕೀರ್ತ 116:10 ನಂಬಿದೆನು. ಆದ್ದರಿಂದ ಮಾತನಾಡಿದೆನು.” ಎಂಬ ಶಾಸ್ತ್ರೋಕ್ತಿಯಲ್ಲಿ ಕಾಣುವಹಾಗೆ ನಂಬಿಕೆಯ ಅದೇ ಆತ್ಮನು ನಮ್ಮಲ್ಲಿರುವುದರಿಂದ ನಾವು ನಂಬಿದವರಾಗಿ ಮಾತನಾಡುತ್ತೇವೆ.
2 ಕೊರಿಂಥದವರಿಗೆ 4 : 14 (IRVKN)
* 1 ಥೆಸ. 4:14, 1 ಕೊರಿ 1:9, ಅ. ಕೃ. 2:24 ಕರ್ತನಾದ ಯೇಸುವನ್ನು ಎಬ್ಬಿಸಿದಾತನು ನಮ್ಮನ್ನು ಸಹ ಯೇಸುವಿನೊಂದಿಗೆ ಎಬ್ಬಿಸಿ ನಿಮ್ಮ ಜೊತೆಯಲ್ಲಿ ತನ್ನ ಮುಂದೆ ನಿಲ್ಲಿಸುವನೆಂದು ತಿಳಿದವರಾಗಿದ್ದೇವೆ.
2 ಕೊರಿಂಥದವರಿಗೆ 4 : 15 (IRVKN)
ಆ ಬಾಧೆಗಳೆಲ್ಲಾ ನಿಮ್ಮ ಹಿತಕ್ಕಾಗಿಯೇ ನಮಗೆ ಸಂಭವಿಸುತ್ತವೆ. 2 ಕೊರಿ 1:19, 9:11-12 ಅವುಗಳಲ್ಲಿ ಅಧಿಕವಾಗಿ ದೊರಕುವ ದೈವಕೃಪೆಯು ಬಹು ಜನರೊಳಗೆ ಕೃತಜ್ಞತೆಯನ್ನು ಹುಟ್ಟಿಸುವುದರಿಂದ ದೇವರ ಮಹಿಮೆಗೆ ಅಧಿಕವಾದ ಸ್ತುತಿ ಸ್ತೋತ್ರಗಳು ಉಂಟಾಗುವುದು.
2 ಕೊರಿಂಥದವರಿಗೆ 4 : 16 (IRVKN)
ಪರಲೋಕ ಭಾಗ್ಯವನ್ನು ಆಲೋಚಿಸುವಾಗ ಕ್ರಿಸ್ತನಲ್ಲಿರುವವರಿಗೆ ಧೈರ್ಯವಾಗುತ್ತದೆ ಎಂಬುದು ಆದ್ದರಿಂದ ನಾವು ಧೈರ್ಯಗೆಡುವುದಿಲ್ಲ. ನಮ್ಮ ದೇಹವು ನಾಶವಾಗುತ್ತಾ ಇದ್ದರೂ ರೋಮಾ. 12:2, ಯೆಶಾ 40:30-31 ನಮ್ಮ ಅಂತರಂಗವು ದಿನೇ ದಿನೇ ಹೊಸದಾಗುತ್ತಾ ಬರುತ್ತದೆ.
2 ಕೊರಿಂಥದವರಿಗೆ 4 : 17 (IRVKN)
ಹೇಗೆಂದರೆ ಕ್ಷಣಮಾತ್ರವಿರುವ ನಮ್ಮ ಈ ಸ್ವಲ್ಪ ಸಂಕಟವು ಅತ್ಯಂತಾಧಿಕವಾಗಿ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾಗಿರುವ ಅತಿಶ್ರೇಷ್ಟ ತೇಜಸ್ಸನ್ನು ದೊರಕಿಸುತ್ತದೆ.
2 ಕೊರಿಂಥದವರಿಗೆ 4 : 18 (IRVKN)
ನಾವು § 2 ಕೊರಿ 5:7, ರೋಮಾ. 8:24 ಕಾಣುವಂಥದ್ದನ್ನು ಲಕ್ಷಿಸದೇ ಕಾಣದಿರುವಂಥದ್ದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದ್ದು ಸ್ವಲ್ಪ ಕಾಲ ಮಾತ್ರ ಇರುವುದು ಕಾಣದಿರುವಂಥದ್ದು ಸದಾಕಾಲವೂ ಇರುವುದು.

1 2 3 4 5 6 7 8 9 10 11 12 13 14 15 16 17 18