1 ತಿಮೊಥೆಯನಿಗೆ 6 : 1 (IRVKN)
* 1 ಪೇತ್ರ 2:18 ದಾಸತ್ವ ನೊಗದ ಅಧೀನದಲ್ಲಿರುವವರು ತಮ್ಮ ಯಜಮಾನರನ್ನು ಪೂರ್ಣ ಗೌರವಕ್ಕೂ ಯೋಗ್ಯರೆಂದೆಣಿಸಲಿ, † ಯೆಶಾ 52:5; ರೋಮಾ. 2:24; ತೀತ 2:5 ಇಲ್ಲದಿದ್ದರೆ ದೇವರ ನಾಮಕ್ಕೂ ನಾವು ಹೊಂದಿರುವ ಉಪದೇಶಕ್ಕೂ ನಿಂದನೆ ಉಂಟಾಗುತ್ತದೆ.
1 ತಿಮೊಥೆಯನಿಗೆ 6 : 2 (IRVKN)
ಯಾರಿಗಾದರೂ ಕ್ರಿಸ್ತನನ್ನು ನಂಬುವವರಾದ ಯಜಮಾನರಿದ್ದರೆ, ಅವರು ಆ ಯಜಮಾನರನ್ನು ಫಿಲಿ. 16 ಸಹೋದರರೆಂದು ಉದಾಸೀನಮಾಡದೆ, ತಮ್ಮ ಸೇವೆಯ ಫಲವನ್ನು ಹೊಂದುವವರು, ನಂಬಿಗಸ್ತರು, ಪ್ರಿಯರೂ ಆಗಿದ್ದಾರೆಂದು ತಿಳಿದು ಅವರಿಗೆ ಇನ್ನು ಹೆಚ್ಚಾದ ಸಂತೋಷದಿಂದಲೇ ಸೇವೆಮಾಡಬೇಕು. § 1 ತಿಮೊ 4:11,13; 5:7 ಈ ಉಪದೇಶವನ್ನು ಮಾಡಿ ಅವರನ್ನು ಎಚ್ಚರಿಸು.
1 ತಿಮೊಥೆಯನಿಗೆ 6 : 3 (IRVKN)
ತಪ್ಪಾದ ಬೋಧನೆಯೂ ನಿಜವಾದ ಐಶ್ವರ್ಯವೂ ಯಾವನಾದರೂ * 1 ತಿಮೊ. 1:3 ಭಿನ್ನವಾದ ಉಪದೇಶವನ್ನು ಮಾಡಿ ನಮ್ಮ ಕರ್ತನಾದ ಯೇಸು ಕ್ರಿಸ್ತನ † 1 ತಿಮೊ. 1:10 ಸ್ವಸ್ಥವಾದ ಮಾತುಗಳಿಗೂ, ಭಕ್ತಾನುಸಾರವಾದ ಉಪದೇಶಗಳಿಗೂ ಸಮ್ಮತಿಸದೆ ಹೋದರೆ,
1 ತಿಮೊಥೆಯನಿಗೆ 6 : 4 (IRVKN)
ಅವನು ಅಹಂಭಾವಿಯೂ ಅಜ್ಞಾನಿಯೂ ಆಗಿದ್ದು, 1 ತಿಮೊ. 1:4; 2 ತಿಮೊ. 2:33; ತೀತ 3:9; ನಿಂದನೆ § 2 ತಿಮೊ. 2:14 ವಾಗ್ವಾದಗಳನ್ನುಂಟು ಮಾಡುವ ಭ್ರಾಂತಿಯಲ್ಲಿದ್ದಾನೆ. ಇವುಗಳಿಂದ ಹೊಟ್ಟೆಕಿಚ್ಚು, ಜಗಳ, ದೂಷಣೆ, ದುಸ್ಸಂಶಯ ಮುಂತಾದವುಗಳು ಉಂಟಾಗುತ್ತವೆ.
1 ತಿಮೊಥೆಯನಿಗೆ 6 : 5 (IRVKN)
ಇದಲ್ಲದೆ ಬುದ್ಧಿಗೆಟ್ಟು ಸತ್ಯವಿಹೀನರಾಗಿದ್ದು * ತೀತ 1:11; 2 ಪೇತ್ರ 2:3 ದೇವಭಕ್ತಿಯನ್ನು ಲಾಭಸಾಧನವೆಂದೆಣಿಸುವ ಈ ಮನುಷ್ಯರಲ್ಲಿ ನಿತ್ಯವಾದ ಕಚ್ಚಾಟಗಳು ಉಂಟಾಗುತ್ತವೆ.
1 ತಿಮೊಥೆಯನಿಗೆ 6 : 6 (IRVKN)
1 ತಿಮೊ. 4:8; ಕೀರ್ತ 37:16; ಜ್ಞಾ. 15:16; 16:8; ಫಿಲಿ. 4:11; ಇಬ್ರಿ. 13:5 ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ.
1 ತಿಮೊಥೆಯನಿಗೆ 6 : 7 (IRVKN)
ಯೋಬ 1:21; ಕೀರ್ತ 49:17; ಪ್ರಸಂಗಿ 5:15,16 ನಾವು ಲೋಕದೊಳಕ್ಕೆ ಏನೂ ತೆಗೆದುಕೊಂಡು ಬರಲಿಲ್ಲವಾದ್ದರಿಂದ, ಅದರೊಳಗಿಂದ ಏನೂ ತೆಗೆದುಕೊಂಡು ಹೋಗಲಾರೆವು.
1 ತಿಮೊಥೆಯನಿಗೆ 6 : 8 (IRVKN)
§ ಜ್ಞಾ. 30:8 ನಮಗೆ ಅನ್ನ ವಸ್ತ್ರಗಳಿದ್ದರೆ ಸಾಕು, ನಾವು ಸಂತುಷ್ಟರಾಗುತ್ತವೆ.
1 ತಿಮೊಥೆಯನಿಗೆ 6 : 9 (IRVKN)
* ಜ್ಞಾ. 15:27; 23:4; 28:20; ಮತ್ತಾ 13:22; ಲೂಕ 12:15 ಐಶ್ವರ್ಯವಂತರಾಗಬೇಕೆಂದು ಮನಸ್ಸುಮಾಡುವವರು ದುಷ್ಟ್ರೇರಣೆಯೆಂಬ ಬಲೆಯಲ್ಲಿ ಸಿಕ್ಕಿಕೊಂಡು, ಬುದ್ಧಿಗೆ ವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಸೆಗಳಲ್ಲಿ ಬೀಳುತ್ತಾರೆ. ಇಂಥ ಆಸೆಗಳು ಮನುಷ್ಯರನ್ನು ಸಂಹಾರ ವಿನಾಶಗಳಲ್ಲಿ ಸಿಕ್ಕಿಸುತ್ತವೆ.
1 ತಿಮೊಥೆಯನಿಗೆ 6 : 10 (IRVKN)
ವಿಮೋ 23:8; ಧರ್ಮೋ 16:19 ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು, ಅದರಿಂದ ಕ್ರಿಸ್ತ ನಂಬಿಕೆಯನ್ನು ಬಿಟ್ಟು, ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.
1 ತಿಮೊಥೆಯನಿಗೆ 6 : 11 (IRVKN)
ವೈಯುಕ್ತಿಕ ಸಲಹೆಗಳು ಎಲೈ, 2 ತಿಮೊ. 3:17 ದೇವರ ಮನುಷ್ಯನೇ, ನೀನಾದರೋ § 2 ತಿಮೊ. 2:22 ಇವುಗಳಿಗೆ ದೂರವಾಗಿರು. ನೀತಿ, ಭಕ್ತಿ, ನಂಬಿಕೆ, ಪ್ರೀತಿ, ಸ್ಥಿರಚಿತ್ತ ಹಾಗೂ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು.
1 ತಿಮೊಥೆಯನಿಗೆ 6 : 12 (IRVKN)
* ನಂಬಿಕೆಯ ಕ್ರಿಸ್ತ ನಂಬಿಕೆಯ † 1 ತಿಮೊ. 1:18 ಶ್ರೇಷ್ಠ ಹೋರಾಟವನ್ನು ಮಾಡು, ‡ ಫಿಲಿ. 3:12 ನಿತ್ಯಜೀವವನ್ನು ಹಿಡಿದುಕೋ. § 1 ಪೇತ್ರ 5:10 ಅದಕ್ಕಾಗಿ ನೀನು ದೇವರಿಂದ ಕರೆಯಲ್ಪಟ್ಟಿದಿ ಮತ್ತು ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೆಯ ಪ್ರತಿಜ್ಞೆಯನ್ನು ಮಾಡಿದಿಯಲ್ಲಾ.
1 ತಿಮೊಥೆಯನಿಗೆ 6 : 13 (IRVKN)
ಸರ್ವ ಸೃಷ್ಟಿಗೆ ಜೀವಾಧಾರಕನಾದ ದೇವರ ಮುಂದೆಯೂ, ಪೊಂತ್ಯ ಪಿಲಾತನ * ಎದುರಿನಲ್ಲಿ ಕಾಲದಲ್ಲಿ † ಮತ್ತಾ 27:11; ಯೋಹಾ 18:37; ಪ್ರಕ 1:5; 3:14 ಶ್ರೇಷ್ಠ ಪ್ರತಿಜ್ಞೆಯನ್ನು ತಾನೇ ಸಾಕ್ಷಿಯಾಗಿದ್ದು ಸ್ಥಾಪಿಸಿದ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಆಜ್ಞಾಪಿಸುವುದೇನಂದರೆ,
1 ತಿಮೊಥೆಯನಿಗೆ 6 : 14 (IRVKN)
ನಮ್ಮ ಕರ್ತನಾದ ಯೇಸು ಕ್ರಿಸ್ತನ 2 ಥೆಸ. 2:8 ಪ್ರತ್ಯಕ್ಷತೆಯ ತನಕ ನೀನು ಈ ಆಜ್ಞೆಯನ್ನು ನಿಷ್ಕಳಂಕವಾಗಿಯೂ ನಿಂದಾರಹಿತವಾಗಿಯೂ ಕಾಪಾಡಿಕೊಂಡಿರಬೇಕು.
1 ತಿಮೊಥೆಯನಿಗೆ 6 : 15 (IRVKN)
§ 1 ತಿಮೊ. 1:11 ಭಾಗ್ಯವಂತನಾದ ಏಕಾಧಿಪತಿಯು ತಾನು ನಿಗದಿಪಡಿಸಿರುವ ಸೂಕ್ತ ಸಮಯದಲ್ಲೇ ಆತನನ್ನು ಪ್ರತ್ಯಕ್ಷಪಡಿಸುವನು. ಆ ಏಕಾಧಿಪತಿಯು, * ಪ್ರಕ 17:14 ರಾಜಾಧಿರಾಜನೂ, ಕರ್ತಾಧಿಕರ್ತನೂ,
1 ತಿಮೊಥೆಯನಿಗೆ 6 : 16 (IRVKN)
1 ತಿಮೊ. 1:17 ತಾನೊಬ್ಬನೇ ಅಮರತ್ವವುಳ್ಳವನೂ ಅಗಮ್ಯವಾದ ಬೆಳಕಿನಲ್ಲಿ ವಾಸಮಾಡುವವನೂ ಆಗಿದ್ದಾನೆ. ‡ ವಿಮೋ 33:20; ಯೋಹಾ 1:18; 5:37; 6:46; ಕೊಲೊ 1:15; 1 ಯೋಹಾ 4:12, 20 ಮನುಷ್ಯರಲ್ಲಿ ಯಾರೂ ಆತನನ್ನು ಕಾಣಲಿಲ್ಲ, ಯಾರೂ ಕಾಣಲಾರರು. ಆತನಿಗೆ ಮಾನವೂ ನಿತ್ಯಾಧಿಪತ್ಯವೂ ಎಂದೆಂದಿಗೂ ಇರಲಿ. ಆಮೆನ್.
1 ತಿಮೊಥೆಯನಿಗೆ 6 : 17 (IRVKN)
§ 2 ತಿಮೊ. 4:10; ತೀತ 2:12 ಇಹಲೋಕ ವಿಷಯದಲ್ಲಿ ಐಶ್ವರ್ಯವುಳ್ಳವರು * ರೋಮಾ. 11:20; 12:3, 16 ಅಹಂಕಾರಿಗಳಾಗಿರದೆ, † ಜ್ಞಾ. 23:5 ಅಸ್ಥಿರವಾದ ಐಶ್ವರ್ಯದ ಮೇಲೆ ‡ ಮಾರ್ಕ 10:24 ನಿರೀಕ್ಷೆಯನ್ನಿಡದೆ, ನಮ್ಮ ಅನುಭೋಗಕ್ಕೋಸ್ಕರ ನಮಗೆ ಅ. ಕೃ. 14:17 ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕು.
1 ತಿಮೊಥೆಯನಿಗೆ 6 : 18 (IRVKN)
(18-19)ವಾಸ್ತವವಾದ ಜೀವವನ್ನು ಹೊಂದುವುದಕ್ಕೋಸ್ಕರ ಅವರು ಒಳ್ಳೆಯದನ್ನು ಮಾಡುವವರೂ, * ಲೂಕ 12:21 ಸತ್ಕಾರ್ಯಗಳನ್ನು ಮಾಡುವುದರಲ್ಲಿ ಐಶ್ವರ್ಯವಂತರೂ, ಉದಾರಶೀಲರೂ, † ರೋಮಾ. 12:13 ಪರೋಪಕಾರಮಾಡುವವರೂ ಆಗಿದ್ದು, ‡ ಮತ್ತಾ 6:19, 20 ಮುಂದಿನ ಕಾಲಕ್ಕೆ ಒಳ್ಳೆ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕೆಂದು ಅವರಿಗೆ ಆಜ್ಞಾಪಿಸು.
1 ತಿಮೊಥೆಯನಿಗೆ 6 : 19 (IRVKN)
1 ತಿಮೊಥೆಯನಿಗೆ 6 : 20 (IRVKN)
ಎಲೈ ತಿಮೊಥೆಯನೇ, ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆಗೆ ಸಂಬಂಧಪಟ್ಟ, § 2 ತಿಮೊ 2:16 ಪ್ರಾಪಂಚಿಕವಾದ ಆ ಹರಟೆ ಮಾತುಗಳಿಗೂ, ವಿವಾದಗಳಿಗೂ ನೀನು ದೂರವಾಗಿದ್ದು * 2 ತಿಮೊ. 1:12,14 ನಿನ್ನ ವಶಕ್ಕೆ ಕೊಟ್ಟಿರುವುದನ್ನು ಕಾಪಾಡಿಕೋ.
1 ತಿಮೊಥೆಯನಿಗೆ 6 : 21 (IRVKN)
ಕೆಲವರು ಆ ಸುಳ್ಳಾದ ಜ್ಞಾನವನ್ನು ಒಪ್ಪಿಕೊಂಡು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗಿ ಹೋದರು. ಕೊಲೊ 4:18 ಕೃಪೆಯು ನಿಮ್ಮೊಂದಿಗಿರಲಿ.

1 2 3 4 5 6 7 8 9 10 11 12 13 14 15 16 17 18 19 20 21