1 ತಿಮೊಥೆಯನಿಗೆ 3 : 1 (IRVKN)
ಸಭಾಧ್ಯಕ್ಷರೂ ಸಭಾಸೇವಕರೂ ಯೋಗ್ಯರಾಗಿರಬೇಕು * ಅ. ಕೃ 20:28 ಸಭಾಧ್ಯಕ್ಷನ ಉದ್ಯೋಗವನ್ನು ಪಡೆದುಕೊಳ್ಳಬೇಕೆಂದಿರುವವನು ಒಳ್ಳೆಯ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ನಂಬತಕ್ಕದ್ದಾಗಿದೆ.
1 ತಿಮೊಥೆಯನಿಗೆ 3 : 2 (IRVKN)
† ತೀತ 1:6-9 ಸಭಾಧ್ಯಕ್ಷನು ದೋಷಾರೋಪಣೆಯಿಲ್ಲದವನೂ, ಏಕಪತ್ನಿಯುಳ್ಳವನೂ, ‡ ವ. 11 ಶಾಂತನೂ, ಜಿತೇಂದ್ರಿಯನೂ, ಮಾನಸ್ಥನೂ, § 1 ಪೇತ್ರ 4:9 ಅತಿಥಿಸತ್ಕಾರಮಾಡುವವನೂ, * 2 ತಿಮೊ 2:24 ಬೋಧಿಸಲು ಶಕ್ತನಾಗಿರಬೇಕು.
1 ತಿಮೊಥೆಯನಿಗೆ 3 : 3 (IRVKN)
ಅವನು ಕುಡಕನು, ಜಗಳವಾಡುವವನೂ ಆಗಿರದೆ, † ತೀತ 3:2 ಸಾತ್ವಿಕನೂ, ಹೊಡೆದಾಡದವನೂ ‡ 1 ತಿಮೊ 6:10; ಇಬ್ರಿ. 13:5 ದ್ರವ್ಯಾಶೆಯಿಲ್ಲದವನೂ ಆಗಿರಬೇಕು.
1 ತಿಮೊಥೆಯನಿಗೆ 3 : 4 (IRVKN)
ಪೂರ್ಣಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು, ಸ್ವಂತ ಮನೆಯವರನ್ನು ಚೆನ್ನಾಗಿ ನಡೆಸುವವನಾಗಿರಬೇಕು.
1 ತಿಮೊಥೆಯನಿಗೆ 3 : 5 (IRVKN)
§ ವ 12 ಸ್ವಂತ ಮನೆಯವರನ್ನು ನಡೆಸುವುದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಂಬರಿಸುವನು?
1 ತಿಮೊಥೆಯನಿಗೆ 3 : 6 (IRVKN)
ಅವನು ಹೊಸದಾಗಿ ಸಭೆಯಲ್ಲಿ ಸೇರಿದವನಾಗಿರಬಾರದು, ಅಂಥವನಾದರೆ ಉಬ್ಬಿಕೊಂಡು ಸೈತಾನನಿಗೆ ಪ್ರಾಪ್ತವಾದ ಶಿಕ್ಷಾವಿಧಿಗೆ ಒಳಗಾದಾನು.
1 ತಿಮೊಥೆಯನಿಗೆ 3 : 7 (IRVKN)
ಇದಲ್ಲದೆ ಅವನು * ಮಾರ್ಕ 4:11; ಕೊಲೊ 4:5 ಹೊರಗಣವರಿಂದ ಒಳ್ಳೆಯವನೆನ್ನಿಸಿಕೊಂಡಿರಬೇಕು, ಇಲ್ಲದಿದ್ದರೆ ನಿಂದೆಗೆ ಗುರಿಯಾಗುವನು ಮತ್ತು † 2 ತಿಮೊ 2:26; 1 ತಿಮೊ 6:9 ಸೈತಾನನ ತಂತ್ರಗಳೊಳಗೆ ಸಿಕ್ಕಿಬಿದ್ದಾನು.
1 ತಿಮೊಥೆಯನಿಗೆ 3 : 8 (IRVKN)
ಅದೇ ರೀತಿಯಾಗಿ ‡ 1 ತಿಮೊ 6:9 ಸಭಾಸೇವಕರು ಗೌರವವುಳ್ಳವರಾಗಿರಬೇಕು. ಅವರು ಎರಡು ಮಾತಿನವರೂ, § ತೀತ 2:3; 1 ತಿಮೊ 5:23 ಮದ್ಯಾಸಕ್ತರೂ, * ತೀತ 1:7; 1 ಪೇತ್ರ 5:2 ನೀಚಲಾಭವನ್ನು ಅಪೇಕ್ಷಿಸುವವರೂ ಆಗಿರದೆ,
1 ತಿಮೊಥೆಯನಿಗೆ 3 : 9 (IRVKN)
ನಂಬಿಕೆಯಿಂದ ಪ್ರಕಟವಾಗಿರುವ † 1 ತಿಮೊ 1:19 ಸತ್ಯಾರ್ಥವನ್ನು ಶುದ್ಧ ಮನಸ್ಸಾಕ್ಷಿಯಿಂದ ಕೈಕೊಳ್ಳುವವರಾಗಿರಬೇಕು.
1 ತಿಮೊಥೆಯನಿಗೆ 3 : 10 (IRVKN)
ಇದಲ್ಲದೆ ‡ 1 ತಿಮೊ 5:22 ಅವರು ಮೊದಲು ಪರೀಕ್ಷಿಸಲ್ಪಡಬೇಕು, ತರುವಾಯ ಅವರ ಮೇಲೆ ಯಾರೂ ತಪ್ಪುಹೊರಿಸದಿದ್ದರೆ ಸಭಾಸೇವಕರ ಉದ್ಯೋಗವನ್ನು ನೆರವೇರಿಸಲಿ.
1 ತಿಮೊಥೆಯನಿಗೆ 3 : 11 (IRVKN)
ಹಾಗೆಯೇ § ಅವರ ಹೆಂಡತಿಯರಾದ ಸಭಾಸೇವಕಿಯರಾದ ಸ್ತ್ರೀಯರೂ * ತೀತ 2:3 ಗೌರವವುಳ್ಳವರಾಗಿರಬೇಕು, ಚಾಡಿಹೇಳುವವರಾಗಿರದೆ, ಸ್ವಸ್ಥಬುದ್ಧಿಯುಳ್ಳವರೂ, ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರಾಗಿಯೂ ಇರಬೇಕು.
1 ತಿಮೊಥೆಯನಿಗೆ 3 : 12 (IRVKN)
ಸಭಾಸೇವಕರು ಏಕಪತ್ನಿಯುಳ್ಳವರೂ, † 1 ತಿಮೊ 3:2,4 ತಮ್ಮ ಮಕ್ಕಳನ್ನೂ ಮನೆಯವರನ್ನೂ ಚೆನ್ನಾಗಿ ನಡಿಸುವವರೂ ಆಗಿರಬೇಕು.
1 ತಿಮೊಥೆಯನಿಗೆ 3 : 13 (IRVKN)
‡ ಮತ್ತಾ 25:21 ಸಭಾಸೇವಕರಾಗಿ ಚೆನ್ನಾಗಿ ಕೆಲಸ ಮಾಡಿರುವವರು ತಮಗೆ ಒಳ್ಳೆಯ ಪದವಿಯನ್ನೂ, ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಸಂಬಂಧವಾಗಿ ಬಹುಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ.
1 ತಿಮೊಥೆಯನಿಗೆ 3 : 14 (IRVKN)
ಮಹಾ ರಹಸ್ಯ ಬೇಗನೆ ನಿನ್ನ ಬಳಿಗೆ ಬರುವೆನೆಂಬ ನಿರೀಕ್ಷೆಯಿಂದಲೇ ನಿನಗೆ ಈ ವಿಷಯಗಳನ್ನು ಬರೆದಿದ್ದೇನೆ.
1 ತಿಮೊಥೆಯನಿಗೆ 3 : 15 (IRVKN)
ಆದರೆ ಒಂದು ವೇಳೆ ನಾನು ತಡಮಾಡಿದರೂ, § ಎಫೆ 2:21; 2 ತಿಮೊ 2:20; ಇಬ್ರಿ 3:6 ದೇವರ ಮನೆಯಲ್ಲಿ ಅಂದರೆ ಜೀವಸ್ವರೂಪನಾದ ದೇವರ ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯು ನಿನಗೆ ತಿಳಿದಿರಬೇಕೆಂದು ಈ ಸಂಗತಿಗಳನ್ನು ಬರೆದಿದ್ದೇನೆ. ಯಾಕೆಂದರೆ ಸಭೆಯು ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿದೆ.
1 ತಿಮೊಥೆಯನಿಗೆ 3 : 16 (IRVKN)
ದೇವಭಕ್ತಿಗೆ ಆಧಾರವಾಗಿರುವ ಸತ್ಯಾರ್ಥದ ರಹಸ್ಯವು ಗಂಭೀರವಾದದ್ದೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ, ಅದೇನಂದರೆ, * ಯೋಹ 1:14; 1 ಪೇತ್ರ 1:20; 1 ಯೋಹಾ 1:2,3,4,5,8 ಕ್ರಿಸ್ತನು ಶರೀರಧಾರಿಯಾಗಿ ಪ್ರತ್ಯಕ್ಷನಾದನು, ಆತ್ಮಸಂಬಂಧವಾಗಿ ಕ್ರಿಸ್ತನೇ ನೀತಿವಂತನೆಂದು ಪರಿಗಣಿಸಲ್ಪಟ್ಟನು, ದೇವದೂತರಿಗೆ ಕಾಣಿಸಿಕೊಂಡನು, † ಗಲಾ 2:2 ಅನ್ಯಜನರ ಮಧ್ಯದಲ್ಲಿ ಸಾರಲ್ಪಟ್ಟನು, ‡ 2 ಥೆಸ 1:10 ಲೋಕದಲ್ಲಿ ನಂಬಲ್ಪಟ್ಟನು, § ಅ. ಕೃ 1:2 ಮಹಿಮೆಯೊಂದಿಗೆ ಪರಲೋಕಕ್ಕೆ ಎತ್ತಲ್ಪಟ್ಟನು.
❮
❯
1
2
3
4
5
6
7
8
9
10
11
12
13
14
15
16