1 ಸಮುವೇಲನು 10 : 1 (IRVKN)
ಸೌಲನಿಗೆ ರಾಜ್ಯಾಭಿಷೇಕವಾದದ್ದು ಆ ಆಳು ಮುಂದೆ ಹೋದಾಗ [* ಕೀರ್ತನೆ. 89: 20 ]ಸಮುವೇಲನು ತೈಲದ ಕೊಂಬಿನಿಂದ ಅವನ ತಲೆಯ ಮೇಲೆ ತೈಲವನ್ನು ಹೊಯ್ದು ಅವನನ್ನು ಮುದ್ದಿಟ್ಟು ಅವನಿಗೆ, “ಯೆಹೋವನು ಧರ್ಮೋ 32: 9. ತನ್ನ ಜನರ ಮೇಲೆ. ತನ್ನ ಸ್ವತ್ತನ್ನು ಅಳುವುದಕ್ಕೋಸ್ಕರ ನಿಜವಾಗಿ ನಿನ್ನನ್ನು ಅಭಿಷೇಕಿಸಿದ್ದಾನೆ.
1 ಸಮುವೇಲನು 10 : 2 (IRVKN)
ಈ ಹೊತ್ತು ನೀನು ನನ್ನನ್ನು ಬಿಟ್ಟುಹೋದ ನಂತರ ಬೆನ್ಯಾಮೀನ್ಯರ ಮೇರೆಯೊಳಗಿರುವ [‡ ಆದಿ 35:19- 20 ]ರಾಹೇಲಳ ಸಮಾಧಿಯ ಬಳಿಯಲ್ಲಿರುವಂಥ ಚೆಲ್ಚಹಿನಲ್ಲಿ ಇಬ್ಬರು ಮನುಷ್ಯರನ್ನು ಕಾಣುವಿ. ಅವರು ನಿನಗೆ, ‘ನೀನು ಹುಡುಕುತ್ತಿರುವ ಕತ್ತೆಗಳು ಸಿಕ್ಕಿದವು; ನಿನ್ನ ತಂದೆಯು ಕತ್ತೆಗಳ ಚಿಂತೆಬಿಟ್ಟು ನನ್ನ ಮಗನು ಎಲ್ಲಿ ಹೋದನು ಎಂಬುದಾಗಿ ನಿನಗೋಸ್ಕರ ಹಂಬಲಿಸುತ್ತಿರುತ್ತಾನೆ’ ಎಂದು ಹೇಳುವರು.
1 ಸಮುವೇಲನು 10 : 3 (IRVKN)
ನೀನು ಅಲ್ಲಿಂದ ಮುಂದೆ ನಡೆದು [§ ಆದಿ 13: 18 ]ತಾಬೋರಿನ ಹತ್ತಿರವಿರುವ ಏಲೋನ್‌ ವೃಕ್ಷದ ಬಳಿಗೆ ಬಂದಾಗ * ಆದಿ 28: 22. ದೇವದರ್ಶನಕ್ಕಾಗಿ ಬೇತೇಲಿಗೆ ಹೋಗುವ ಮೂವರು ಜನರು ನಿನ್ನನ್ನು ಎದುರುಗೊಳ್ಳುವರು. ಅವರಲ್ಲೊಬ್ಬನು ಮೂರು ಹೋತಮರಿಗಳನ್ನೂ, ಮತ್ತೊಬ್ಬನು ಮೂರು ರೊಟ್ಟಿಗಳನ್ನೂ, ಇನ್ನೊಬ್ಬನು ದ್ರಾಕ್ಷಾರಸದ ಒಂದು ಬುದ್ದಲಿಯನ್ನೂ ಹೊತ್ತುಕೊಂಡಿರುವರು.
1 ಸಮುವೇಲನು 10 : 4 (IRVKN)
ಅವರು ನಿನ್ನ ಕ್ಷೇಮಸಮಾಚಾರವನ್ನು ವಿಚಾರಿಸಿ ಎರಡು ರೊಟ್ಟಿಗಳನ್ನು ನಿನಗೆ ಕೊಡುವರು; ನೀನು ಅವುಗಳನ್ನು ತೆಗೆದುಕೊಳ್ಳಬೇಕು.
1 ಸಮುವೇಲನು 10 : 5 (IRVKN)
ಅಲ್ಲಿಂದ ಫಿಲಿಷ್ಟಿಯರ [† 1 ಸಮು 13:3, 4 ]ದಂಡು ಇರುವ ದೇವಗಿರಿಯನ್ನು ಮುಟ್ಟಿದಾಗ ಮುಂಭಾಗದಲ್ಲಿ ಸ್ವರಮಂಡಲ, ದಮ್ಮಡಿ, ಕೊಳಲು, ಕಿನ್ನರಿ ಈ ವಾದ್ಯಗಾರರೊಡನೆ ಗುಡ್ಡದಿಂದ ಇಳಿದು ಬರುತ್ತಿರುವ ಪ್ರವಾದಿಗಳ ಸಮೂಹವನ್ನು ಕಾಣುವಿ. ಅವರು ಪರವಶರಾಗಿ ಪ್ರವಾದಿಸುವರು.
1 ಸಮುವೇಲನು 10 : 6 (IRVKN)
ಆಗ [‡ ನ್ಯಾಯ 3: 10 ]ಯೆಹೋವನ ಆತ್ಮವು ನಿನ್ನ ಮೇಲೆಯೂ ಬರುವುದರಿಂದ ನೀನೂ ಅವರೊಂದಿಗೆ ಪ್ರವಾದಿಸುವಿ. ನೀನು ಮಾರ್ಪಟ್ಟ ಮನುಷ್ಯನಾಗುವಿ.
1 ಸಮುವೇಲನು 10 : 7 (IRVKN)
ಈ ಗುರುತುಗಳೆಲ್ಲಾ ಸಂಭವಿಸಿದಾಗ ನಿನಗೆ ಅನುಕೂಲವಿದ್ದ ಹಾಗೆ ಮಾಡು; ದೇವರು ನಿನ್ನ ಸಂಗಡ ಇದ್ದಾನೆ.
1 ಸಮುವೇಲನು 10 : 8 (IRVKN)
ನೀನು ಮುಂದಾಗಿ ಗಿಲ್ಗಾಲಿಗೆ ಹೋಗು; ಏಳು ದಿನಗಳಾದ ನಂತರ ನಾನು ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸುವುದಕ್ಕೋಸ್ಕರ ಅಲ್ಲಿಗೆ ಬಂದು ನೀನು ಮಾಡಬೇಕಾದದ್ದನ್ನು ನಿನಗೆ ತಿಳಿಸುವೆನು; ಅಲ್ಲಿಯ ವರೆಗೆ ಕಾದುಕೊಂಡಿರು” ಎಂದು ಹೇಳಿದನು.
1 ಸಮುವೇಲನು 10 : 9 (IRVKN)
ಸೌಲನು ಸಮುವೇಲನನ್ನು ಬಿಟ್ಟು ಹೊರಟ ಕೂಡಲೆ ದೇವರು ಅವನಿಗೆ ನೂತನ ಹೃದಯವನ್ನು ಕೊಟ್ಟನು. ಅದೇ ದಿನದಲ್ಲಿ ಆ ಎಲ್ಲಾ ಗುರುತುಗಳು ಸಂಭವಿಸಿದವು.
1 ಸಮುವೇಲನು 10 : 10 (IRVKN)
ಅವನು ದೇವಗಿರಿಗೆ ಬಂದ ಕೂಡಲೆ ಪರವಶವಾದ ಪ್ರವಾದಿಸಮೂಹವು ತನ್ನೆದುರಿಗೆ ಬರುವುದನ್ನು ಕಂಡನು. ದೇವರ ಆತ್ಮವು ಸೌಲನ ಮೇಲೆ ಬಂದ್ದದರಿಂದ ಅವನೂ ಪರವಶನಾಗಿ ಅವರೊಂದಿಗೆ ಸೇರಿ ಪ್ರವಾದಿಸಿದನು.
1 ಸಮುವೇಲನು 10 : 11 (IRVKN)
ಅವನು ಪರವಶನಾಗಿ ಮಾತನಾಡುವುದನ್ನು ಅವನ ಪರಿಚಿತರು ಕಂಡು ತಮ್ಮ ತಮ್ಮೊಳಗೆ, “ಕೀಷನ ಮಗನಿಗೆ ಏನಾಯಿತು? ಸೌಲನೂ ಪ್ರವಾದಿಗಳಲ್ಲಿ ಒಬ್ಬನೋ?” ಎಂದು ಮಾತನಾಡಿಕೊಳ್ಳುತ್ತಿದ್ದರು.
1 ಸಮುವೇಲನು 10 : 12 (IRVKN)
ಆಗ ಆ ಸ್ಥಳದವನೊಬ್ಬನು, “ಹಾಗಾದರೆ ಇವರ ತಂದೆ ಯಾರು?” ಎಂದು ಕೇಳಿದನು. ಈ ಸಂಗತಿಯಿಂದ [§ ಮತ್ತಾ 13:54- 55 ]“ಸೌಲನು ಪ್ರವಾದಿಗಳಲ್ಲಿದ್ದಾನೆ” ಎಂಬ ವಿಷಯ ಹುಟ್ಟಿತು.
1 ಸಮುವೇಲನು 10 : 13 (IRVKN)
ಅವನು ಪ್ರವಾದಿಸಿದ ನಂತರ ಬೆಟ್ಟದ ಮೇಲಿದ್ದ ಯಜ್ಞವೇದಿಯ ಬಳಿಗೆ ಬಂದನು.
1 ಸಮುವೇಲನು 10 : 14 (IRVKN)
ಸೌಲನ ಚಿಕ್ಕಪ್ಪನು ಅವನನ್ನೂ ಅವನ ಸೇವಕನನ್ನೂ, “ನೀವು ಎಲ್ಲಿಗೆ ಹೋಗಿದ್ದಿರಿ?” ಎಂದು ಕೇಳಲು ಅವನು, “ಕತ್ತೆಗಳನ್ನು ಹುಡುಕುವುದಕ್ಕೆ ಹೋಗಿದ್ದೆವು. ಅವು ಸಿಕ್ಕಲಿಲ್ಲವಾದ್ದರಿಂದ ಸಮುವೇಲನ ಬಳಿಗೆ ಹೋದೆವು” ಅಂದನು.
1 ಸಮುವೇಲನು 10 : 15 (IRVKN)
“ಸಮುವೇಲನು ಏನು ಹೇಳಿದನು?” ಎಂದು ಚಿಕ್ಕಪ್ಪನು ಕೇಳಲು
1 ಸಮುವೇಲನು 10 : 16 (IRVKN)
ಸೌಲನು, “ಕತ್ತೆಗಳು ಸಿಕ್ಕಿವೇ ಎಂದು ತಿಳಿಸಿದನು” ಎಂಬುದಾಗಿ ಹೇಳಿದನೇ ಹೊರತು ಸಮುವೇಲನು ಹೇಳಿದ ರಾಜ್ಯಭಾರದ ಮಾತನ್ನು ತಿಳಿಸಲಿಲ್ಲ.
1 ಸಮುವೇಲನು 10 : 17 (IRVKN)
ಚೀಟುಹಾಕಿ ಸೌಲನನ್ನು ಅರಸನನ್ನಾಗಿ ಆರಿಸಿಕೊಂಡದ್ದು ಸಮುವೇಲನು ಇಸ್ರಾಯೇಲ್ಯರನ್ನು ಮಿಚ್ಪೆಗೆ ಕರೆಯಿಸಿ ಯೆಹೋವನ ಸನ್ನಿಧಿಯಲ್ಲಿ ಸೇರಿಸಿಕೊಂಡನು.
1 ಸಮುವೇಲನು 10 : 18 (IRVKN)
ಆತನು ಅವರಿಗೆ, ಇಸ್ರಾಯೇಲ್‌ ದೇವರಾದ ಯೆಹೋವನು ಹೇಳುವುದನ್ನು ಕೇಳಿರಿ, “ನೀವು ಐಗುಪ್ತರ ಕೈಗೆ ತಪ್ಪಿಸಿಕೊಳ್ಳುವಂತೆ ನಿಮ್ಮನ್ನು ಅವರ ದೇಶದಿಂದ ಬಿಡಿಸಿದವನೂ, ಬಾಧಿಸುತ್ತಿದ್ದ ಬೇರೆ ಎಲ್ಲಾ ಜನಾಂಗಗಳಿಂದ ನಿಮ್ಮನ್ನು ರಕ್ಷಿಸಿದವನೂ ನಾನೇ.
1 ಸಮುವೇಲನು 10 : 19 (IRVKN)
ನೀವಾದರೋ ನಿಮ್ಮನ್ನು ಕಷ್ಟಸಂಕಟಗಳಿಂದ ಬಿಡಿಸಿದ ನಿಮ್ಮ ದೇವರಾದ ನನ್ನನ್ನು ಈಗ ತಿರಸ್ಕರಿಸಿ, ನಮಗೊಬ್ಬ ಅರಸನನ್ನು ನೇಮಿಸೆಂದು ಹೇಳುತ್ತೀರಿ ಅನ್ನುತ್ತಾನೆ. ಆದುದರಿಂದ ನೀವು ಕುಲ ಕುಲವಾಗಿಯೂ ಗೋತ್ರಗೋತ್ರವಾಗಿಯೂ ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಿರಿ” ಎಂದು ಅಪ್ಪಣೆ ಮಾಡಿದನು.
1 ಸಮುವೇಲನು 10 : 20 (IRVKN)
[* ಯೆಹೋ. 7:16- 18 ]ಸಮುವೇಲನು ಇಸ್ರಾಯೇಲ್ಯರ ಎಲ್ಲಾ ಕುಲಗಳನ್ನು ಸಮೀಪಕ್ಕೆ ಕರೆದಾಗ ಬೆನ್ಯಾಮೀನ್ ಕುಲಕ್ಕೆ ಚೀಟುಬಿದ್ದಿತು.
1 ಸಮುವೇಲನು 10 : 21 (IRVKN)
ಆ ಕುಲದ ಗೋತ್ರಗಳನ್ನು ಬರಮಾಡಿದಾಗ ಮಟ್ರಿಯ ಗೋತ್ರದಲ್ಲಿ ಕೀಷನ ಮಗನಾದ ಸೌಲನಿಗೆ ಚೀಟುಬಿದ್ದಿತು. ಆದರೆ ಅವನನ್ನು ಹುಡುಕಲು ಅವನು ಸಿಕ್ಕಲಿಲ್ಲ.
1 ಸಮುವೇಲನು 10 : 22 (IRVKN)
ಅವರು, “ಆ ಮನುಷ್ಯನು ಇಲ್ಲಿಗೆ ಬರುವನೋ” ಎಂದು ಯೆಹೋವನನ್ನು ವಿಚಾರಿಸಿದಾಗ ಆತನು, “ಬಂದಿದ್ದಾನೆ; ಇಗೋ, ಸಾಮಾನುಗಳ ಮಧ್ಯದಲ್ಲಿ ಅಡಗಿಕೊಂಡಿದ್ದಾನೆ” ಎಂದು ಉತ್ತರಕೊಟ್ಟನು.
1 ಸಮುವೇಲನು 10 : 23 (IRVKN)
ಅವರು ತಟ್ಟನೆ ಹೋಗಿ ಅವನನ್ನು ಹಿಡಿದುಕೊಂಡು ಬಂದು ಜನರ ಮಧ್ಯದಲ್ಲಿ ನಿಲ್ಲಿಸಿದರು. ಗುಂಪಿನಲ್ಲಿದ್ದ ಎಲ್ಲಾ ಜನರಿಗಿಂತ ಅವನ ಹೆಗಲೂ ತಲೆಯೂ ಕಾಣುವಷ್ಟು ಎತ್ತರವಾದ ಪುರುಷನಾಗಿದ್ದನು.
1 ಸಮುವೇಲನು 10 : 24 (IRVKN)
ಆಗ ಸಮುವೇಲನು ಎಲ್ಲಾ ಜನರಿಗೆ, “ನೋಡಿದಿರಾ, ಯೆಹೋವನಿಂದ ಆರಿಸಲ್ಪಟ್ಟವನು ಇವನೇ; ಸರ್ವಜನರಲ್ಲಿ ಇವನಿಗೆ ಸಮಾನರು ಇಲ್ಲವೇ ಇಲ್ಲ” ಎನ್ನಲು ಜನರೆಲ್ಲರೂ, “ಅರಸನು ಚಿರಂಜೀವಿಯಾಗಿರಲಿ” ಎಂದು ಘೋಷಣೆಗಳನ್ನು ಕೂಗಿದರು.
1 ಸಮುವೇಲನು 10 : 25 (IRVKN)
ತರುವಾಯ ಸಮುವೇಲನು ಜನರಿಗೆ [† ಧರ್ಮೋ 17:14- 20 ]ರಾಜನೀತಿಯನ್ನು ಬೋಧಿಸಿ, ಅದನ್ನು ಒಂದು ಪುಸ್ತಕದಲ್ಲಿ ಬರೆದು, ಯೆಹೋವನ ಸನ್ನಿಧಿಯಲ್ಲಿಟ್ಟನು. ಆ ಮೇಲೆ ಜನರನ್ನು ಅವರವರ ಮನೆಗಳಿಗೆ ಕಳುಹಿಸಿಬಿಟ್ಟನು.
1 ಸಮುವೇಲನು 10 : 26 (IRVKN)
ಸೌಲನೂ ಗಿಬೆಯದಲ್ಲಿರುವ ತನ್ನ ಮನೆಗೆ ಹೋದನು; ಕೆಲವು ಮಂದಿ ಶೂರರು ದೇವರಿಂದ ಪ್ರೇರಿತರಾಗಿ ಅವನ ಜೊತೆಯಲ್ಲಿ ಹೋದರು.
1 ಸಮುವೇಲನು 10 : 27 (IRVKN)
ಕೆಲವು ಮಂದಿ ಅಯೋಗ್ಯರು, “ಇವನು ನಮ್ಮನ್ನು ರಕ್ಷಿಸುವನೋ?” ಎಂದು ತಿರಸ್ಕರಿಸಿ ಕಾಣಿಕೆಗಳನ್ನು ತರಲಿಲ್ಲ. ಆದರೂ ಸೌಲನು ಸುಮ್ಮನಿದ್ದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27