1 ಪೇತ್ರನು 3 : 1 (IRVKN)
ಸತಿಪತಿಯರು (1-2)ಅದೇ ರೀತಿಯಾಗಿ ಪತ್ನಿಯರೇ, * ಆದಿ 3:16: ನಿಮ್ಮ ಪತಿಯರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ, ಗೌರವದಿಂದಲೂ ನಡೆದುಕೊಳ್ಳುವುದನ್ನು ಅವರು ನೋಡಿ † 1 ಕೊರಿ 7:16: ವಾಕ್ಯೋಪದೇಶವಿಲ್ಲದೆ ತಮ್ಮ ಪತ್ನಿಯರಾದ ನಿಮ್ಮ ಒಳ್ಳೆಯ ನಡತೆಗಳಿಂದಲೇ ಸನ್ಮಾರ್ಗಕ್ಕೆ ಬಂದಾರು.
1 ಪೇತ್ರನು 3 : 2 (IRVKN)
1 ಪೇತ್ರನು 3 : 3 (IRVKN)
1 ತಿಮೊ. 2:9; ಯೆಶಾ 3:18-23: ಜಡೆ ಹೆಣೆದುಕೊಳ್ಳುವುದೂ, ಚಿನ್ನದ ಒಡವೆಗಳನ್ನು ಹಾಕಿಕೊಳ್ಳುವುದೂ, ಬೆಲೆಬಾಳುವ ವಸ್ತ್ರಗಳನ್ನು ಧರಿಸಿಕೊಳ್ಳುವುದೂ ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು.
1 ಪೇತ್ರನು 3 : 4 (IRVKN)
ಆದರೆ ದೇವರ ದೃಷ್ಟಿಯಲ್ಲಿ ಅಮೂಲ್ಯವಾದದ್ದೂ ಮತ್ತು ಶಾಶ್ವತವಾದದ್ದೂ ಆಗಿರುವ § ರೋಮಾ. 2:29: ಸಾತ್ವಿಕತೆ ಮತ್ತು ಶಾಂತಮನಸ್ಸು ಎಂಬ ಆಂತರ್ಯದ ಭೂಷಣವೇ ನಿಮ್ಮ ಅಲಂಕಾರವಾಗಿರಲಿ.
1 ಪೇತ್ರನು 3 : 5 (IRVKN)
ಪೂರ್ವ ಕಾಲದಲ್ಲಿ ದೇವರ ಮೇಲೆ ನಿರೀಕ್ಷೆಯನ್ನಿಟ್ಟಿದ್ದ ಭಕ್ತೆಯರಾದ ಸ್ತ್ರೀಯರೂ ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡಿದ್ದರು. ಅವರು ತಮ್ಮ ತಮ್ಮ ಗಂಡಂದಿರಿಗೆ * ಅಥವಾ, ಅಧೀನರಾಗಿದ್ದರು. ಸಾರಳು ಹಾಗೆಯೇ ಕರೆದಳು. ನೀವು ಒಳ್ಳೆಯದನ್ನು ಮಾಡುವವರಾಗಿ ಯಾವ ಭೀತಿಗೂ ಗಾಬರಿಪಡದೆ ಇದ್ದರೆ ನೀವು ಸಾರಳ ಕುಮಾರ್ತೆಯರೇ. ಅಧೀನರಾಗಿದ್ದರು.
1 ಪೇತ್ರನು 3 : 6 (IRVKN)
ಸಾರಳು ಹಾಗೆಯೇ ಅಬ್ರಹಾಮನಿಗೆ ವಿಧೇಯಳಾಗಿದ್ದು ಆದಿ 18:12: ಅವನನ್ನು ಯಜಮಾನ ಎಂದು ಕರೆದಳು. ನೀವು ಒಳ್ಳೆಯದನ್ನು ಮಾಡುತ್ತಾ ‡ ಜ್ಞಾ. 3:25: ಯಾವ ಭೀತಿಗೂ ಭಯಪಡುವುದಿಲ್ಲವಾದರೆ ನೀವು ಆಕೆಯ ಕುವರಿಯರೇ ಆಗುವಿರಿ.
1 ಪೇತ್ರನು 3 : 7 (IRVKN)
1 ಪೇತ್ರನು 3 : 8 (IRVKN)
§ ಎಫೆ 5:25; ಕೊಲೊ 3:19: ಅದೇ ರೀತಿಯಾಗಿ ಪತಿಯರೇ, ಸ್ತ್ರೀಯು ನಿಮ್ಮಗಿಂತ ಬಲಹೀನಳೆಂಬುದನ್ನು ತಿಳಿದುಕೊಂಡು, ನಿಮ್ಮ ಪತ್ನಿಯರ ಸಂಗಡ ವಿವೇಕದಿಂದ ನಡೆದುಕೊಳ್ಳಿರಿ, ಅವರು ನಿತ್ಯಜೀವ ವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಗೌರವವನ್ನು ಸಲ್ಲಿಸಿರಿ. ಹೀಗೆ ಮಾಡಿದರೆ ನಿಮ್ಮ ಪ್ರಾರ್ಥನೆಗಳಿಗೆ ಅಡಚಣೆ ಉಂಟಾಗುವುದಿಲ್ಲ. ನೀತಿಗಾಗಿ ಬಾಧೆಯನ್ನನುಭವಿಸುವುದು ಕಡೆಗೆ * ರೋಮಾ. 12:16: ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ, ಪರಸ್ಪರ ಅನುಕಂಪವುಳ್ಳವರಾಗಿರಿ, † ಇಬ್ರಿ. 13:1: ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ, ‡ ಎಫೆ 4:32: ಕರುಣೆಯೂ, § ಎಫೆ 4:2: ದೀನಭಾವವೂ ಉಳ್ಳವರಾಗಿರಿ.
1 ಪೇತ್ರನು 3 : 9 (IRVKN)
* 1 ಪೇತ್ರ. 2:23; ರೋಮಾ. 12:17: ಅಪಕಾರಕ್ಕೆ ಅಪಕಾರವನ್ನು, ನಿಂದೆಗೆ ನಿಂದೆಯನ್ನು ಮಾಡದೇ † ಲೂಕ 6:28; ರೋಮಾ. 12:14; 1 ಕೊರಿ 4:12: ಆಶೀರ್ವದಿಸಿರಿ. ‡ 1 ಪೇತ್ರ. 2:21: ಇದಕ್ಕಾಗಿ ದೇವರು ನಿಮ್ಮನ್ನು ಕರೆದಿದ್ದಾನಲ್ಲಾ. ಹೀಗೆ ಮಾಡುವುದಾದರೆ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರಿ.
1 ಪೇತ್ರನು 3 : 10 (IRVKN)
ಏಕೆಂದರೆ ಪವಿತ್ರಗ್ರಂಥದಲ್ಲಿ ಬರೆದಿರುವಂತೆ, § ಕೀರ್ತ 34:12-16: “ಜೀವವನ್ನು ಬಯಸುತ್ತಾ ಸುದಿನಗಳನ್ನು ನೋಡುವುದಕ್ಕೆ ಕಾದಿರುವಾತನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಿಗೆಯನ್ನು ವಂಚನೆಯ ಮಾತುಗಳನ್ನಾಡದಂತೆ ತುಟಿಗಳನ್ನು ಬಿಗಿಹಿಡಿದುಕೊಳ್ಳಲಿ.
1 ಪೇತ್ರನು 3 : 11 (IRVKN)
ಅವನು ಕೆಟ್ಟದ್ದನ್ನು ಬಿಟ್ಟು ಒಳ್ಳೆದನ್ನು ಮಾಡಲಿ. ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನಪಡಲಿ.
1 ಪೇತ್ರನು 3 : 12 (IRVKN)
ಏಕೆಂದರೆ ಕರ್ತನು ನೀತಿವಂತರನ್ನು ಕಟಾಕ್ಷಿಸುತ್ತಾನೆ ಮತ್ತು ಆತನು ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ. ಆದರೆ ಕೆಡುಕರಿಗೋ ಕರ್ತನು ವಿಮುಖನಾಗಿರುತ್ತಾನೆ.”
1 ಪೇತ್ರನು 3 : 13 (IRVKN)
ನೀವು ಒಳ್ಳೆಯದನ್ನೇ ಮಾಡುವುದರಲ್ಲಿ ಆಸಕ್ತರಾಗಿದ್ದರೆ ನಿಮಗೆ ಕೇಡು ಮಾಡುವವರು ಯಾರಿದ್ದಾರೆ?
1 ಪೇತ್ರನು 3 : 14 (IRVKN)
ಒಂದು ವೇಳೆ ನೀವು * 1 ಪೇತ್ರ. 2:19, 20; 4:14, 16; ಮತ್ತಾ 5:10: ನೀತಿಯ ನಿಮಿತ್ತವೇ ಬಾಧೆಪಟ್ಟರೆ ನೀವು ಧನ್ಯರೇ. † ಅಥವಾ, ಅವರು ಯಾವುದಕ್ಕೆ ಹೆದರುತ್ತಾರೋ ಅದಕ್ಕೆ ನೀವು ಹೆದರದೆ; ವ. 6; ಯೆಶಾ 8:12, 13; ಮತ್ತಾ 10:28: ಅವರ ಬೆದರಿಕೆಗೆ ಹೆದರಬೇಡಿರಿ, ‡ ಯೋಹಾ 14:1, 27: ಕಳವಳಪಡಬೇಡಿರಿ.
1 ಪೇತ್ರನು 3 : 15 (IRVKN)
ಆದರೆ § ಯೆಶಾ 8:13; 29:23: ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೆನೆಂದು ಕೇಳುವವರೆಲ್ಲರಿಗೂ * ಕೊಲೊ 4:6: ಉತ್ತರ ಹೇಳುವುದಕ್ಕೆ ಯಾವಾಗಲೂ ಸಿದ್ಧರಾಗಿರಿ. ಆದರೆ ಅದನ್ನು ಸಾತ್ವಿಕತ್ವದಿಂದಲೂ ಮತ್ತು ಗೌರವದಿಂದಲೂ ಹೇಳಿರಿ.
1 ಪೇತ್ರನು 3 : 16 (IRVKN)
ಇಬ್ರಿ. 13:18: ಒಳ್ಳೆಯ ಮನಸ್ಸಾಕ್ಷಿಯುಳ್ಳವರಾಗಿರಿ ‡ 1 ಪೇತ್ರ. 2:12: ಆಗ ಕ್ರಿಸ್ತನಲ್ಲಿರುವ ನಿಮ್ಮ § 1 ಪೇತ್ರ. 2:20; 1 ಪೇತ್ರ. 4:15, 16: ಒಳ್ಳೆಯ ನಡತೆಯನ್ನು ಕುರಿತು ಕೆಟ್ಟಮಾತುಗಳನ್ನಾಡುವವರು ನಿಮ್ಮನ್ನು ನಿಂದಿಸುವುದಕ್ಕೆ ನಾಚಿಕೆಪಡುವರು.
1 ಪೇತ್ರನು 3 : 17 (IRVKN)
ಕೆಟ್ಟ ನಡತೆಯುಳ್ಳವರಾಗಿ ಬಾಧೆಪಡುವುದಕ್ಕಿಂತಲೂ ಒಳ್ಳೆ ನಡತೆಯುಳ್ಳವರಾಗಿಯೇ ದೇವರ ಚಿತ್ತದ ಪ್ರಕಾರ ಬಾಧೆಪಡುವುದು ಉತ್ತಮ.
1 ಪೇತ್ರನು 3 : 18 (IRVKN)
ಕ್ರಿಸ್ತನು ಸಹ ನೀತಿವಂತನಾಗಿದ್ದು ಅನೀತಿವಂತರಿಗೋಸ್ಕರ ಪ್ರಾಣ ಕೊಟ್ಟು * ರೋಮಾ. 5:2: ನಮ್ಮನ್ನು ದೇವರ ಬಳಿಗೆ ಸೇರಿಸುವುದಕ್ಕಾಗಿ † ಇಬ್ರಿ. 9:26, 28: ಒಂದೇ ಸಾರಿ ಪಾಪನಿವಾರಣೆಗೋಸ್ಕರ ‡ 1 ಪೇತ್ರ. 2:21; 4:1; ರೋಮಾ. 4:25: ಬಾಧೆಪಟ್ಟು ಸತ್ತನು. § 1 ಪೇತ್ರ. 4:1; ಕೊಲೊ 1:22: ಆತನು ಶರೀರಸಂಬಂಧವಾಗಿ ಕೊಲ್ಲಲ್ಪಟ್ಟು, ಆತ್ಮ ಸಂಬಂಧವಾಗಿ ತಿರುಗಿ ಬದುಕುವವನಾದನು.
1 ಪೇತ್ರನು 3 : 19 (IRVKN)
* ಅಥವಾ, ಇದಲ್ಲದೆ ಸೆರೆಯಲ್ಲಿರುವ ಆತ್ಮಗಳು ಪೂರ್ವದಲ್ಲಿ ನಂಬದೆ ಇದ್ದಾಗ, ಅಂದರೆ ನೋಹನು ಕಾದಿದ್ದಾಗ ಆತನು ಆತ್ಮ ಸ್ವರೂಪವಾಗಿಯೇ ಅವುಗಳ ಬಳಿಗೆ ಹೋಗಿ. ಇದಲ್ಲದೆ ಆತನು ಆತ್ಮರೂಪನಾಗಿ ಸೆರೆಯಲ್ಲಿದ್ದ ಆತ್ಮಗಳ ಬಳಿಗೆ ಹೋಗಿ ಸುವಾರ್ತೆಯನ್ನು ಸಾರಿದನು.
1 ಪೇತ್ರನು 3 : 20 (IRVKN)
ಅಂದರೆ ಪೂರ್ವಕಾಲದಲ್ಲಿ ಇಬ್ರಿ. 11:7: ನೋಹನು ನಾವೆಯನ್ನು ಕಟ್ಟುತ್ತಿರಲು ‡ ಆದಿ 6:3, 5, 13, 14: ದೇವರು ದೀರ್ಘಶಾಂತಿಯಿಂದ ಕಾದಿದ್ದಾಗ ಅವರು ಆತನಿಗೆ ಅವಿಧೇಯರಾಗಿದ್ದರು. ಆ ನಾವೆಯೊಳಗೆ ಸೇರಿದ [§ ಆದಿ 7:1,7,23; 8: 18 ]ಎಂಟು ಜನರು ಮಾತ್ರ ನೀರಿನೊಳಗಿನಿಂದ ರಕ್ಷಿಸಲ್ಪಟ್ಟರು.
1 ಪೇತ್ರನು 3 : 21 (IRVKN)
ಆ ನೀರಿಗೆ ಅನುರೂಪವಾದ ದೀಕ್ಷಾಸ್ನಾನವು [* 1 ಪೇತ್ರ. 1: 3 ]ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಮಾರ್ಕ 16:16; ಅ. ಕೃ. 16:33; ರೋಮಾ. 6:3-6; ತೀತ. 3: 5. ಈಗ ನಮ್ಮನ್ನು ರಕ್ಷಿಸುತ್ತದೆ. ಅದು ದೇಹದ ಮೇಲಿನ ಕೊಳೆಯನ್ನು ಹೊಗಲಾಡಿಸುವಂಥದ್ದಲ್ಲ. ಆದರೆ ‡ ಅಥವಾ. ಒಳ್ಳೆಯ ಮನಸ್ಸಾಕ್ಷಿಯಿಂದ. ಒಳ್ಳೆಯ ಮನಸ್ಸಾಕ್ಷಿ ಬೇಕೆಂದು ದೇವರಿಗೆ ವಿಜ್ಞಾಪಿಸಿಕೊಳ್ಳುವಂಥದಾಗಿದೆ.
1 ಪೇತ್ರನು 3 : 22 (IRVKN)
§ ಅ. ಕೃ. 2:33, 34; ರೋಮಾ. 8:34; ಎಫೆ 1:20; ಕೊಲೊ; 3:1; ಇಬ್ರಿ. 1:3: ಆತನು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾನೆ, * ರೋಮಾ. 8:38; 1 ಕೊರಿ 15:24; ಎಫೆ 1:21: ದೇವದೂತರು, ಅಧಿಕಾರಿಗಳು ಮತ್ತು ಶಕ್ತಿಗಳೂ ಆತನ ಸ್ವಾಧೀನವಾಗಿವೆ.

1 2 3 4 5 6 7 8 9 10 11 12 13 14 15 16 17 18 19 20 21 22