1 ಪೇತ್ರನು 1 : 1 (IRVKN)
ಪೀಠಿಕೆ ಯೇಸು ಕ್ರಿಸ್ತನ ಅಪೊಸ್ತಲನಾದ ಪೇತ್ರನು ಪೊಂತ, ಗಲಾತ್ಯ, ಕಪ್ಪದೋಕ್ಯ, ಆಸ್ಯ, ಬಿಥೂನ್ಯ ಎಂಬ ಸೀಮೆಗಳಲ್ಲಿ [* ಯಾಕೋಬ. 1: 1 ]ಚದುರಿಹೋಗಿರುವಂಥ ಪರದೇಶಸ್ಥರಾದ ದೇವಜನರಿಗೆ ಅಂದರೆ,
1 ಪೇತ್ರನು 1 : 2 (IRVKN)
1 ಥೆಸ. 4:3 ಪವಿತ್ರಾತ್ಮನಿಂದ ಪ್ರತಿಷ್ಠಿಸಲ್ಪಟ್ಟವರಾಗಿ, ವಿಧೇಯರಾಗುವುದಕ್ಕಾಗಿ, ‡ ಇಬ್ರಿ. 10:22; 12:24: ಯೇಸು ಕ್ರಿಸ್ತನ ರಕ್ತದಿಂದ ಪ್ರೋಕ್ಷಿತರಾಗಿ, [§ ಅ. ಕೃ. 2:23; ರೋಮಾ. 8:29; 11: 2 ]ತಂದೆಯಾದ ದೇವರ ಭವಿಷ್ಯದ ಜ್ಞಾನಾನುಸಾರವಾಗಿ ಆರಿಸಿಕೊಳಲ್ಪಟ್ಟವರಿಗೆ ಬರೆಯುವುದೇನೆಂದರೆ [* 2 ಪೇತ್ರ. 1: 2 ]ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ಉಂಟಾಗಲಿ.
1 ಪೇತ್ರನು 1 : 3 (IRVKN)
ಕ್ರೈಸ್ತರಿಗೆ ಇರುವ ಉತ್ಕೃಷ್ಟವಾದ ನಿರೀಕ್ಷೆ [† 2 ಕೊರಿ 1:3; ಎಫೆ 1: 3 ]ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. 1 ಕೊರಿ 15:20; 1 ಪೇತ್ರ. 3: 21. ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ, § ತೀತ 3: 5. ತನ್ನ ಮಹಾ ಕರುಣಾನುಸಾರವಾಗಿ * ಅಥವಾ, ನಮಗೆ ಪುನರ್ಜನ್ಮವನ್ನು ಅನುಗ್ರಹಿಸಿ; ವ. 23 ನಮ್ಮನ್ನು ತಿರುಗಿ ಜೀವಿಸುವಂತೆ ಮಾಡಿ ಜೀವಕರವಾದ ನಿರೀಕ್ಷೆಯನ್ನು ನಮ್ಮಲ್ಲಿ ಹುಟ್ಟಿಸಿ,
1 ಪೇತ್ರನು 1 : 4 (IRVKN)
ನಮ್ಮನ್ನು ಲಯ, ಕಳಂಕ, 1 ಪೇತ್ರ. 5:4: ನಾಶಗಳಿಲ್ಲದ ‡ ರೋಮಾ. 8:17: ಬಾಧ್ಯತೆಯನ್ನು ಎದುರು ನೋಡುವವರನ್ನಾಗಿ ಮಾಡಿದನು. ಆ ಬಾಧ್ಯತೆಯು ನಿಮಗೋಸ್ಕರ § ಕೊಲೊ 1:5; 2 ತಿಮೊ. 4:8: ಪರಲೋಕದಲ್ಲಿ ಇಡಲ್ಪಟ್ಟಿದೆ.
1 ಪೇತ್ರನು 1 : 5 (IRVKN)
ಅಂತ್ಯ ಕಾಲದಲ್ಲಿ ಪ್ರಕಟವಾಗುವುದಕ್ಕೆ [* ಅಥವಾ, ಸಿದ್ಧವಾಗಿದ್ದ. ವ. 20 2 ಕೊರಿ 6: 2. ರೋಮಾ. 8:18: ]ಸಿದ್ಧವಾಗಿರುವ ರಕ್ಷಣೆಯು ನಂಬುವವರಾದ ನಿಮಗೆ ದೊರೆಯಬೇಕೆಂದು ದೇವರು ನಿಮ್ಮನ್ನು ತನ್ನ ಶಕ್ತಿಯಿಂದ ಕಾಪಾಡುತ್ತಾನೆ.
1 ಪೇತ್ರನು 1 : 6 (IRVKN)
ಆದ್ದರಿಂದ ನೀವು ಸದ್ಯಕ್ಕೆ ಸ್ವಲ್ಪಕಾಲ ಅಗತ್ಯವಿದ್ದಲ್ಲಿ ಯಾಕೋಬ. 1:2; 1 ಪೇತ್ರ. 4:12: ನಾನಾ ವಿಧ ಕಷ್ಟಗಳಲ್ಲಿ ದುಃಖಿಸುವವರಾಗಿದ್ದರೂ, ಹರ್ಷಿಸುವವರಾಗಿದ್ದೀರಿ.
1 ಪೇತ್ರನು 1 : 7 (IRVKN)
ನಾಶವಾಗುವಂತಹದ್ದೂ, ಜ್ಞಾ. 17:3; 1 ಕೊರಿ 3:13: ಬೆಂಕಿಯಿಂದ ಶೋಧಿಸುವಂತಹದ್ದೂ ಆಗಿರುವ ಬಂಗಾರಕ್ಕಿಂತಲೂ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ § ಯಾಕೋಬ. 1:3: ಶೋಧಿತವಾಗಿ * ರೋಮಾ. 2:7,10; 1 ಕೊರಿ 4:5: ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ, ಮಾನ, ಮಹಿಮೆಗಳನ್ನು ಉಂಟುಮಾಡುವಂತಹದ್ದಾಗಿದೆ.
1 ಪೇತ್ರನು 1 : 8 (IRVKN)
(8-9) 1 ಯೋಹಾ 4:20: ನೀವು ಆತನನ್ನು ಕಣ್ಣಾರೆ ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ. ‡ ಇಬ್ರಿ. 11:27; ಯೋಹಾ 20:29: ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು, ನಿಮ್ಮ ನಂಬಿಕೆಯ § ರೋಮಾ. 6:22: ಅಂತ್ಯಫಲವಾಗಿರುವ ಆತ್ಮಗಳ ರಕ್ಷಣೆಯನ್ನು ಹೊಂದುವವರಾಗಿ ಹೇಳಲಸಾಧ್ಯವಾದಂತಹ ಮಹಿಮೆಯುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.
1 ಪೇತ್ರನು 1 : 9 (IRVKN)
1 ಪೇತ್ರನು 1 : 10 (IRVKN)
ದೇವರು ನಿಮಗೆ ತೋರಿಸಿದ ಕೃಪೆಯನ್ನು ಕುರಿತು ಮುಂತಿಳಿಸಿದ * 2 ಪೇತ್ರ. 1:19; ಮತ್ತಾ 13:17; ಲೂಕ 10:24: ಪ್ರವಾದಿಗಳು ಈ ರಕ್ಷಣೆಯ ವಿಷಯದಲ್ಲಿ ಸೂಕ್ಷ್ಮವಾಗಿ ವಿಚಾರಿಸಿ ಪರಿಶೋಧನೆ ಮಾಡಿದರು.
1 ಪೇತ್ರನು 1 : 11 (IRVKN)
ರೋಮಾ. 8:9; ಅ. ಕೃ. 16:7: ತಮ್ಮಲ್ಲಿದ್ದ ಕ್ರಿಸ್ತನ ಆತ್ಮನು ಕ್ರಿಸ್ತನಿಗೆ ಬರಬೇಕಾದ ಬಾಧೆಗಳನ್ನೂ ಅವುಗಳ ತರುವಾಯ ಉಂಟಾಗುವ ‡ ಯೆಶಾ 52:13-53; 1 ಕೊರಿ 15:3; ಮತ್ತಾ 13:17: ಮಹಿಮೆಯನ್ನೂ ಮುಂದಾಗಿ ತಿಳಿಸಿದಾಗ ಆತನು ಯಾವ ಕಾಲವನ್ನು ಇಲ್ಲವೆ ಎಂಥ ಕಾಲವನ್ನು ಸೂಚಿಸುವನೆಂಬುದನ್ನು ಅವರು ಪರಿಶೋಧನೆ ಮಾಡಿದರು.
1 ಪೇತ್ರನು 1 : 12 (IRVKN)
ಆದರೆ ಈ ಸಂಗತಿಗಳನ್ನು ಮುಂತಿಳಿಸುವುದರಲ್ಲಿ [§ ಇಬ್ರಿ. 11:39, 40 ]ತಮಗೋಸ್ಕರವಲ್ಲ ನಿಮಗೋಸ್ಕರವೇ ಸೇವೆ ಮಾಡುವವರಾಗಿದ್ದಾರೆಂಬುದು ಅವರಿಗೆ ಪ್ರಕಟವಾಯಿತು. ಅವರು ಮುಂದಾಗಿ ಹೇಳಿದ ಸಂಗತಿಗಳೇ ಈಗ ಸಂಭವಿಸಲ್ಪಡುತ್ತಿವೆ ಎಂಬ ವರ್ತಮಾನವು * ಅ. ಕೃ. 2:2-4: ಪರಲೋಕದಿಂದ ಕಳುಹಿಸಲ್ಪಟ್ಟ ಪವಿತ್ರಾತ್ಮನ ಬಲದಿಂದ ನಿಮಗೆ ಸುವಾರ್ತೆಯನ್ನು ಸಾರಿದವರ ಮೂಲಕ ನಿಮಗೆ ಪ್ರಸಿದ್ಧಿಮಾಡಲ್ಪಟ್ಟಿದೆ. ದೇವದೂತರೂ ಈ ಸಂಗತಿಗಳನ್ನು ಲಕ್ಷ್ಯವಿಟ್ಟು ನೋಡಬೇಕೆಂದು ಬಯಸುತ್ತಿದ್ದಾರೆ.
1 ಪೇತ್ರನು 1 : 13 (IRVKN)
ಪರಿಶುದ್ಧ ಜೀವಿತಕ್ಕೆ ಆಹ್ವಾನ ಆದ್ದರಿಂದ ಲೂಕ 12:35; ಎಫೆ 6:14: ನೀವು ನಿಮ್ಮ ಮನಸ್ಸನ್ನು ದೃಢಪಡಿಸಿಕೊಂಡು, ‡ 1 ಪೇತ್ರ. 4:7; 1 ಥೆಸ. 5:6,8; 2 ತಿಮೊ. 4:5: ಸ್ವಸ್ಥಚಿತ್ತರಾಗಿದ್ದು ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ದೊರಕುವ ಕೃಪೆಯ ಮೇಲೆ ನಿಮ್ಮ ನಿರೀಕ್ಷೆಯನ್ನು ಸಂಪೂರ್ಣವಾಗಿ ಇಡಿರಿ.
1 ಪೇತ್ರನು 1 : 14 (IRVKN)
ವಿಧೇಯತ್ವವುಳ್ಳ ಮಕ್ಕಳಂತೆ ನಡೆಯಿರಿ, [§ ಅ. ಕೃ. 17: 30 ]ನೀವು ಮೊದಲು ಅಜ್ಞಾನಿಗಳಾಗಿದ್ದಾಗ * ರೋಮಾ. 12:2; ತೀತ. 3:3: ನಿಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆದಂತೆ ಇನ್ನು ನಡೆಯುವವರಾಗಿರದೆ,
1 ಪೇತ್ರನು 1 : 15 (IRVKN)
1 ಯೋಹಾ 3:3; 1 ಥೆಸ. 4:7; ಇಬ್ರಿ. 12:14: ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಾಗಿದ್ದು ಆತನಿಗೆ ನಿಮ್ಮ ಎಲ್ಲಾ ನಡವಳಿಕೆಗಳಲ್ಲಿ ಪರಿಶುದ್ಧರಾಗಿರಿ.
1 ಪೇತ್ರನು 1 : 16 (IRVKN)
ಏಕೆಂದರೆ, ಯಾಜ 11:44; 19:2: “ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು” ಎಂದು ಬರೆದಿದೆಯಲ್ಲಾ.
1 ಪೇತ್ರನು 1 : 17 (IRVKN)
§ ಕೀರ್ತ 62:12: ಪ್ರತಿಯೊಬ್ಬನ ನಡತೆಯನ್ನು ನೋಡಿ * ಯಾಕೋಬ. 2:1: ಪಕ್ಷಪಾತವಿಲ್ಲದೆ ತೀರ್ಪುಮಾಡುವಾತನನ್ನು ನೀವು ತಂದೆಯೆಂದು ಕರೆಯುವವರಾಗಿರುವುದರಿಂದ ಈ ಲೋಕದಲ್ಲಿನ ನಿಮ್ಮ ಪ್ರವಾಸಕಾಲವನ್ನು ಭಯಭಕ್ತಿಯಿಂದ ಕಳೆಯಿರಿ.
1 ಪೇತ್ರನು 1 : 18 (IRVKN)
ನಿಮ್ಮ ಪೂರ್ವಿಕರಿಂದ ಬಂದಿರುವ ವ್ಯರ್ಥವಾದ ಸಂಪ್ರದಾಯಗಳ ಎಫೆ 4:17: ನಡವಳಿಕೆಗಳಿಂದ [‡ ಕೀರ್ತ 49:8; 130 8; 1 ಕೊರಿ 6:20; ತೀತ. 2:14: ]ನಿಮಗೆ ಬಿಡುಗಡೆಯನ್ನುಂಟುಮಾಡಿದ್ದು ಬೆಳ್ಳಿ, ಬಂಗಾರ ಮೊದಲಾದ ನಶಿಸಿಹೋಗುವ ವಸ್ತುಗಳಿಂದಲ್ಲ.
1 ಪೇತ್ರನು 1 : 19 (IRVKN)
ಯೇಸು ಕ್ರಿಸ್ತನೆಂಬ § ವಿಮೋ 12:5; ಯಾಜ 22:20; ಇಬ್ರಿ. 9:14: ನಿಷ್ಕಳಂಕವೂ, ನಿರ್ಮಲವೂ ಆದ * ಯೋಹಾ 1:29: ಕುರಿಮರಿಯ † ಅ. ಕೃ. 20:28; ಎಫೆ 1:7; 1 ಯೋಹಾ 1:7: ಅಮೂಲ್ಯವಾದ ರಕ್ತದಿಂದಲೇ ಎಂದು ನೀವು ಬಲ್ಲಿರಲ್ಲವೇ.
1 ಪೇತ್ರನು 1 : 20 (IRVKN)
ಎಫೆ 3:11; ಪ್ರಕ 13:8; ಆತನು ಜಗದುತ್ಪತ್ತಿಗೆ ಮೊದಲೇ ನೇಮಿಸಲ್ಪಟ್ಟವನಾಗಿದ್ದು ಈ § ಇಬ್ರಿ. 1:2: ಅಂತ್ಯಕಾಲಗಳಲ್ಲಿ ನಿಮಗಾಗಿ * ರೋಮಾ. 16:26: ಪ್ರತ್ಯಕ್ಷನಾದನು.
1 ಪೇತ್ರನು 1 : 21 (IRVKN)
ಅ. ಕೃ. 2:24; ರೋಮಾ. 10:9: ಆತನನ್ನು ಸತ್ತವರೊಳಗಿಂದ ಎಬ್ಬಿಸಿ ‡ ಅ. ಕೃ. 3:13; ಇಬ್ರಿ. 2:9: ಆತನಿಗೆ ಮಹಿಮೆಯನ್ನು ಕೊಟ್ಟ ದೇವರಲ್ಲಿ ನೀವು ಆತನ ಮೂಲಕ ನಂಬಿಕೆಯಿಟ್ಟವರಾಗಿದ್ದೀರಷ್ಟೆ. ಹೀಗಿರಲಾಗಿ ನಿಮ್ಮ ನಂಬಿಕೆಯೂ ನಿರೀಕ್ಷೆಯೂ ದೇವರಲ್ಲಿಯೇ ನೆಲೆಗೊಂಡಿವೆ.
1 ಪೇತ್ರನು 1 : 22 (IRVKN)
ನೀವು ಸತ್ಯೋಪದೇಶಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಿಮಾಡಿಕೊಂಡದ್ದರಿಂದ § ರೋಮಾ. 12:9; ಇಬ್ರಿ. 13:1: ನಿಷ್ಕಪಟವಾದ ಸಹೋದರ ಪ್ರೀತಿಯುಳ್ಳವರಾಗಿರತಕ್ಕದ್ದು. ಹೀಗಿರಲಾಗಿ ಒಬ್ಬರನೊಬ್ಬರು ಶುದ್ಧಹೃದಯದಿಂದಲೂ, ಯಥಾರ್ಥವಾಗಿಯೂ ಪ್ರೀತಿಸಿರಿ.
1 ಪೇತ್ರನು 1 : 23 (IRVKN)
ಏಕೆಂದರೆ * ಯೋಹಾ 3:3; ಯಾಕೋಬ. 1:18: ನೀವು ಹೊಸದಾಗಿ ಹುಟ್ಟಿರುವಂಥದ್ದು † ಯೋಹಾ 1:13: ನಾಶವಾಗುವ ‡ ಕೆಲವು ಪ್ರತಿಗಳಲ್ಲಿ ಬೀಜ ಎಂದು ಬರೆದದೆ. ವಾಕ್ಯದಿಂದದ್ದಲ್ಲ. ಆದರೆ ನಾಶವಾಗದಂಥ § ಕೆಲವು ಪ್ರತಿಗಳಲ್ಲಿ ಬೀಜ ಎಂದು ಬರೆದದೆ. ವಾಕ್ಯದಿಂದಲೇ. ಅದು ಇಬ್ರಿ. 4:12: ಸದಾ ಜೀವವುಳ್ಳ ದೇವರವಾಕ್ಯದ ಮೂಲಕ ಉಂಟಾಯಿತು.
1 ಪೇತ್ರನು 1 : 24 (IRVKN)
ಏಕೆಂದರೆ ಪವಿತ್ರಗ್ರಂಥದಲ್ಲಿ ಬರೆದಿರುವಂತೆ: [† ಯೆಶಾ 40 6-8 ]“ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಅದರ ಮಹಿಮೆಯೆಲ್ಲಾ ಹುಲ್ಲಿನ ಹೂವಿನಂತಿದೆ. ಹುಲ್ಲು ಒಣಗಿ ಹೋಗುವುದು. ಅದರ ಹೂವು ಉದುರಿ ಹೋಗುವುದು.
1 ಪೇತ್ರನು 1 : 25 (IRVKN)
ಆದರೆ ಮತ್ತಾ 24:35: ಕರ್ತನ ಮಾತೋ ಸದಾಕಾಲವೂ ಇರುವುದು.” ಆ ಮಾತು ಯಾವುದೆಂದರೆ ನಿಮಗೆ ಸಾರಲ್ಪಟ್ಟ [§ ಯೆಶಾ 40 9: ]ಸುವಾರ್ತಾವಾಕ್ಯವೇ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25