1 ಅರಸುಗಳು 4 : 1 (IRVKN)
ಸೊಲೊಮೋನನ ಅಧಿಕಾರಿಗಳು ಸೊಲೊಮೋನ ರಾಜನು ಎಲ್ಲಾ ಇಸ್ರಾಯೇಲಿನ ಮೇಲೆ ಅರಸನಾಗಿದ್ದನು.
1 ಅರಸುಗಳು 4 : 2 (IRVKN)
ಅವನ ಮುಖ್ಯ ಉದ್ಯೋಗಸ್ಥರು ಯಾರಾರೆಂದರೆ: ಚಾದೋಕನ ಮಗನಾದ ಅಜರ್ಯನು ಯಾಜಕನು.
1 ಅರಸುಗಳು 4 : 3 (IRVKN)
ಶೀಷನ ಮಕ್ಕಳಾದ ಎಲೀಹೋರೇಫ್ ಮತ್ತು ಅಹೀಯಾಹು ಎಂಬುವರು ಲೇಖಕರು. ಅಹೀಲೂದನ ಮಗನಾದ ಯೆಹೋಷಾಫಾಟನು ಅವನ ಮಂತ್ರಿಯು.
1 ಅರಸುಗಳು 4 : 4 (IRVKN)
ಯೆಹೋಯಾದಾವನ ಮಗನಾದ ಬೆನಾಯನು ಸೈನ್ಯಾಧಿಪತಿ. ಚಾದೋಕನೂ ಮತ್ತು ಎಬ್ಯಾತಾರನೂ ಯಾಜಕರು.
1 ಅರಸುಗಳು 4 : 5 (IRVKN)
ನಾತಾನನ ಮಗನಾದ ಅಜರ್ಯನು ದೇಶಾಧಿಪತಿಗಳ ಮುಖ್ಯಸ್ಥನು. ನಾತಾನನ ಮಗನಾದ ಜಾಬೂದನು ಯಾಜಕನೂ ಹಾಗು ಅರಸನ ಮಿತ್ರನೂ ಆಗಿದ್ದನು.
1 ಅರಸುಗಳು 4 : 6 (IRVKN)
ಅಹೀಷಾರನು ರಾಜಗೃಹಾಧಿಪತಿಯು. ಅಬ್ದನ ಮಗನಾದ ಅದೋನೀರಾಮನು ಬಿಟ್ಟೀಕೆಲಸ ಮಾಡಿಸುವವರ ಮುಖ್ಯಸ್ಥನು.
1 ಅರಸುಗಳು 4 : 7 (IRVKN)
ಸೊಲೊಮೋನನು ಎಲ್ಲಾ ಇಸ್ರಾಯೇಲರ ಮೇಲ್ವಿಚಾರಣೆಗಾಗಿ ಹನ್ನೆರಡು ಕಾರ್ಯನಿರ್ವಾಹಕರನ್ನು ನೇಮಿಸಿದನು. ಅವರಲ್ಲಿ ಪ್ರತಿಯೊಬ್ಬನು ಒಂದೊಂದು ತಿಂಗಳು ಅರಸನಿಗೂ ಮತ್ತು ಅವನ ಮನೆಯವರಿಗೂ ಬೇಕಾದ ಆಹಾರ ಪದಾರ್ಥಗಳನ್ನು ಪ್ರತಿವರ್ಷವೂ ಒದಗಿಸಿಕೊಡಬೇಕಾಗಿತ್ತು.
1 ಅರಸುಗಳು 4 : 8 (IRVKN)
ಅವರು ಯಾರಾರೆಂದರೆ ಎಫ್ರಾಯೀಮ್ ಪರ್ವತ ಪ್ರದೇಶದಲ್ಲಿದ್ದ ಹೂರನ ಮಗ,
1 ಅರಸುಗಳು 4 : 9 (IRVKN)
ಮಾಕಾಚ್, ಶಾಲ್ಬೀಮ್, ಬೇತ್ಷೆಮೆಷ್, ಏಲೋನ್ ಬೇತ್ ಹಾನಾನ್ ಎಂಬ ಊರುಗಳ ಒಡೆಯನಾದ ದೆಕೆರನ ಮಗನು.
1 ಅರಸುಗಳು 4 : 10 (IRVKN)
ಅರುಬ್ಬೋತಿನಲ್ಲಿ ವಾಸವಾಗಿದ್ದ ಹೆಸೆದನ ಮಗ, ಅವನು ಸೋಕೋ ಮತ್ತು ಹೇಫೆರ್ ಎಂಬ ಪ್ರದೇಶಗಳಿಗೆ ಅಧಿಪತಿಯಾಗಿದ್ದನು.
1 ಅರಸುಗಳು 4 : 11 (IRVKN)
ದೋರ್ ಗುಡ್ಡದ ಪ್ರದೇಶದಲ್ಲಿದ್ದ ಅಬೀನಾದಾಬನ ಮಗ, ಸೊಲೊಮೋನನ ಮಗಳಾದ ಟಾಫತಳು ಅವನ ಹೆಂಡತಿಯಾಗಿದ್ದಳು.
1 ಅರಸುಗಳು 4 : 12 (IRVKN)
ತಾಣಕ್ ಮತ್ತು ಮೆಗಿದ್ದೋ, ಚಾರೆತಾನಿನ ಬಳಿಯಲ್ಲಿಯೂ ಇಜ್ರೇಲಿನ ಕೆಳಗಣಭಾಗಗಳೂ, ಬೇತ್ ಷೆಯಾನಿನಿಂದ ಆಬೇಲ್ ಮೆಹೋಲದವರೆಗೂ ಇರುವಂಥ ಯೊಕ್ಮೆಯಾನಿನ ಆಚೆಗೆ ವಿಸ್ತರಿಸಿಕೊಂಡಿರುವಂಥ ಬೇತ್ ಷೆಯಾನಿನ ಎಲ್ಲಾ ಪ್ರದೇಶ ಇವುಗಳಿಗೆ ಅಹೀಲೂದನ ಮಗನಾದ ಬಾಣಾ ಅಧಿಪತಿಯಾಗಿದ್ದನು.
1 ಅರಸುಗಳು 4 : 13 (IRVKN)
ರಾಮೋತ್ ಗಿಲ್ಯಾದಿನಲ್ಲಿದ್ದ ಗೆಬೇರನ ಮಗ, ಅವನು ಗಿಲ್ಯಾದಿನಲ್ಲಿ ಮನಸ್ಸೆಯ ಮಗನಾದ ಯಾಯೀರನ ಗ್ರಾಮಗಳಿಗೂ, ಬಾಷಾನಿನಲ್ಲಿ ಪೌಳಿಗೋಡೆಗಳಿಂದಲೂ, ಕಬ್ಬಿಣದ ಅಗುಳಿಗಳಿಂದಲೂ ಭದ್ರಮಾಡಲ್ಪಟ್ಟ ಅರವತ್ತು ಪಟ್ಟಣಗಳಲ್ಲಿದ್ದ ಅರ್ಗೋಬ್ ಪ್ರದೇಶಕ್ಕೂ ಅಧಿಪತಿಯಾಗಿದ್ದನು.
1 ಅರಸುಗಳು 4 : 14 (IRVKN)
ಮಹನಯಿಮಿನಲ್ಲಿದ್ದ ಇದ್ದೋವಿನ ಮಗನಾದ ಅಹೀನಾದಾಬನು.
1 ಅರಸುಗಳು 4 : 15 (IRVKN)
ನಫ್ತಾಲಿ ಪ್ರದೇಶದಲ್ಲಿದ್ದ ಅಹೀಮಾಚನು, ಅವನು ಸೊಲೊಮೋನನ ಮಗಳಾದ ಬಾಸೆಮತಳನ್ನು ಮದುವೆಮಾಡಿಕೊಂಡಿದ್ದನು.
1 ಅರಸುಗಳು 4 : 16 (IRVKN)
ಅಶೇರಿಗೂ ಮತ್ತು ಆಲೋತಿಗೂ ಒಡೆಯನಾದ ಹೂಷೈಯ ಮಗನಾದ ಬಾಣನು,
1 ಅರಸುಗಳು 4 : 17 (IRVKN)
ಇಸ್ಸಾಕಾರ್ ಪ್ರಾಂತ್ಯದಲ್ಲಿದ್ದ ಫಾರೂಹನ ಮಗನಾದ ಯೆಹೋಷಾಫಾಟನು,
1 ಅರಸುಗಳು 4 : 18 (IRVKN)
ಬೆನ್ಯಾಮೀನಿನಲ್ಲಿದ್ದ ಏಲನ ಮಗನಾದ ಶಿಮ್ಮೀ,
1 ಅರಸುಗಳು 4 : 19 (IRVKN)
ಅಮೋರಿಯರ ಅರಸನಾದ ಸೀಹೋನ್, ಬಾಷಾನಿನ ಅರಸನಾದ ಓಗ್ ಇವರ ರಾಜ್ಯವಾಗಿದ್ದ ಗಿಲ್ಯಾದ್ ಪ್ರದೇಶಕ್ಕೆಲ್ಲಾ ಒಬ್ಬನೇ ಅಧಿಪತಿಯಾಗಿದ್ದನು ಅವನು ಊರಿಯನ ಮಗನಾದ ಗೆಬೆರ್ ಎಂಬುವವನು.
1 ಅರಸುಗಳು 4 : 20 (IRVKN)
ಸೊಲೊಮೋನನ ವೈಭವವೂ ಜ್ಞಾನವೂ ಇಸ್ರಾಯೇಲರು ಮತ್ತು ಯೆಹೂದ್ಯರು ಸಮುದ್ರ ತೀರದ ಮರಳಿನಷ್ಟು ಅಸಂಖ್ಯರಾಗಿ ಅಭಿವೃದ್ಧಿಯಾದರು. ಅವರು ಅನ್ನಪಾನಗಳನ್ನು ಮಾಡುತ್ತಾ ತೃಪ್ತರಾಗಿ ಸಂತೋಷದಿಂದಿದ್ದರು.
1 ಅರಸುಗಳು 4 : 21 (IRVKN)
ಸೊಲೊಮೋನನು ಯೂಫ್ರೆಟಿಸ್ ನದಿ ಮೊದಲುಗೊಂಡು ಫಿಲಿಷ್ಟಿಯರ ಮತ್ತು ಐಗುಪ್ತ್ಯರ ದೇಶಗಳವರೆಗೂ ಇರುವ ಎಲ್ಲಾ ರಾಜ್ಯಗಳವರನ್ನು ಆಳುತ್ತಿದ್ದನು. ಅವರು ಅವನ ಜೀವಮಾನದಲ್ಲೆಲ್ಲಾ ಅವನಿಗೆ ಅಧೀನರಾಗಿ ಕಪ್ಪಕಾಣಿಕೆಗಳನ್ನು ಸಲ್ಲಿಸುತ್ತಿದ್ದರು.
1 ಅರಸುಗಳು 4 : 22 (IRVKN)
ಸೊಲೊಮೋನನ ಅರಮನೆಗೆ ಪ್ರತಿದಿನ ಬೇಕಾಗುವ ಆಹಾರಪದಾರ್ಥಗಳು, ಮೂವತ್ತು ಕೋರ್ ಗೋದಿಯ ಹಿಟ್ಟು, ಅರುವತ್ತು ಕೋರ್ ಜವೆಗೋದಿಯ ಹಿಟ್ಟು,
1 ಅರಸುಗಳು 4 : 23 (IRVKN)
ಹತ್ತು ಕೊಬ್ಬಿದ ಎತ್ತುಗಳು, ಇಪ್ಪತ್ತು ಹುಲ್ಲುಗಾವಲಿನಲ್ಲಿರುವ ಎತ್ತುಗಳು, ನೂರು ಕುರಿಗಳು ಇವುಗಳಲ್ಲದೆ ಕಡವೆ, ಜಿಂಕೆ, ಸಾರಂಗ, ಕೊಬ್ಬಿದ ಕೋಳಿಗಳು ಇವುಗಳೇ.
1 ಅರಸುಗಳು 4 : 24 (IRVKN)
ಅವನು ಯೂಫ್ರೆಟಿಸ್ ನದಿಯ ಈಚೆಯಲ್ಲಿ ತಿಪ್ಸಹು ಮೊದಲುಗೊಂಡು ಗಾಜದವರೆಗಿರುವ ಈಚೆಯ ಎಲ್ಲಾ ಅರಸರಿಗೂ ದೊರೆಯಾಗಿದ್ದನು. ಅವನು ಸುತ್ತಣ ರಾಜರೊಡನೆ ಸಮಾಧಾನದಿಂದಿದ್ದನು.
1 ಅರಸುಗಳು 4 : 25 (IRVKN)
ಸೊಲೊಮೋನನ ಆಳ್ವಿಕೆಯಲ್ಲೆಲ್ಲಾ ದಾನ್ ಪಟ್ಟಣ ಮೊದಲುಗೊಂಡು ಬೇರ್ಷೆಬದವರೆಗಿರುವ ಸಮಸ್ತ ಇಸ್ರಾಯೇಲರೂ ಮತ್ತು ಯೆಹೂದ್ಯರೂ ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರದ ಗಿಡ ಇವುಗಳ ನೆರಳಿನಲ್ಲಿ ವಾಸಮಾಡುತ್ತಾ ಸುರಕ್ಷಿತರಾಗಿದ್ದರು.
1 ಅರಸುಗಳು 4 : 26 (IRVKN)
ಸೊಲೊಮೋನನ ಲಾಯಗಳಲ್ಲಿ ನಲ್ವತ್ತು ಸಾವಿರ ರಥಾಶ್ವಗಳಿಗೆ ಸ್ಥಳವಿತ್ತು. ಅವನಿಗೆ ಹನ್ನೆರಡು ಸಾವಿರ ಕುದುರೆಸವಾರರಿದ್ದರು.
1 ಅರಸುಗಳು 4 : 27 (IRVKN)
ಮೇಲೆ ಕಾಣಿಸಿರುವ ಕಾರ್ಯನಿರ್ವಾಹಕರು ತಮಗೆ ನೇಮಕವಾದ ತಿಂಗಳಲ್ಲಿ ಅರಸನಾದ ಸೊಲೊಮೋನನಿಗೂ, ಅವನ ಪಂಕ್ತಿಯಲ್ಲಿ ಊಟಕ್ಕೆ ಕುಳಿತುಕೊಳ್ಳುವವರೆಲ್ಲರಿಗೂ ಬೇಕಾಗುವ ಆಹಾರ ಪದಾರ್ಥಗಳನ್ನು ಯಾವ ಕೊರತೆಯೂ ಇಲ್ಲದೆ ಒದಗಿಸಿಕೊಡುತ್ತಿದ್ದರು.
1 ಅರಸುಗಳು 4 : 28 (IRVKN)
ಇದಲ್ಲದೆ ಅವರು ರಥಾಶ್ವಗಳಿಗಾಗಿಯೂ ಮತ್ತು ಸವಾರಿಕುದುರೆಗಳಿಗಾಗಿಯೂ ನೇಮಕವಾದಷ್ಟು ಜವೆಗೋದಿಯನ್ನು, ಹುಲ್ಲನ್ನೂ ಕುದುರೆಗಳಿದ್ದ ಸ್ಥಳಕ್ಕೇ ತಂದೊಪ್ಪಿಸುತ್ತಿದ್ದರು.
1 ಅರಸುಗಳು 4 : 29 (IRVKN)
ದೇವರು ಸೊಲೊಮೋನನಿಗೆ ವಿಶೇಷವಾದ ಜ್ಞಾನ, ವಿವೇಕಗಳನ್ನೂ, ಸಮುದ್ರ ತೀರದ ಮರಳಿನಷ್ಟು ಅಪರಿಮಿತವಾದ ಮನೋವಿಶಾಲತೆಯನ್ನೂ ಅನುಗ್ರಹಿಸಿದನು.
1 ಅರಸುಗಳು 4 : 30 (IRVKN)
ಅವನ ಜ್ಞಾನವು ಮೂಡಣದೇಶದವರೆಲ್ಲರ ಜ್ಞಾನಕ್ಕಿಂತಲೂ ಐಗುಪ್ತ್ಯರ ಜ್ಞಾನಕ್ಕಿಂತಲೂ ಮಿಗಿಲಾದುದಾಗಿತ್ತು.
1 ಅರಸುಗಳು 4 : 31 (IRVKN)
ಅವನು ಜೆರಹನ ಮಗನಾದ ಏತಾನ್, ಮಾಹೋಲನ ಮಕ್ಕಳಾದ ಹೇಮಾನ್, ಕಲ್ಕೋಲ್, ದರ್ದ ಮೊದಲಾದ ಎಲ್ಲರಿಗಿಂತಲೂ ಜ್ಞಾನಿಯಾಗಿದ್ದನು. ಸುತ್ತಣ ಎಲ್ಲಾ ಜನಾಂಗಗಳಲ್ಲಿ ಅವನ ಹೆಸರು ಸುಪ್ರಸಿದ್ಧವಾಯಿತು.
1 ಅರಸುಗಳು 4 : 32 (IRVKN)
ಅವನ ಜ್ಞಾನೋಕ್ತಿಗಳು ಮೂರು ಸಾವಿರ ಮತ್ತು ಗೀತೆಗಳು ಸಾವಿರದ ಐದು.
1 ಅರಸುಗಳು 4 : 33 (IRVKN)
ಅವನು ಲೆಬನೋನಿನ ದೇವದಾರು ವೃಕ್ಷ ಮೊದಲುಗೊಂಡು ಗೋಡೆಯಲ್ಲಿ ಬೆಳೆಯುವ ಹಿಸ್ಸೋಪ್ ಗಿಡದವರೆಗಿರುವ ಎಲ್ಲಾ ವನಸ್ಪತಿಗಳನ್ನೂ, ಎಲ್ಲಾ ಪಶುಪಕ್ಷಿ, ಜಲಚರಗಳು, ಕ್ರಿಮಿಕೀಟಗಳನ್ನೂ ಕುರಿತು ಪ್ರಸ್ತಾಪಿಸ ಬಲ್ಲವನಾಗಿದ್ದನು.
1 ಅರಸುಗಳು 4 : 34 (IRVKN)
ಎಲ್ಲಾ ಜನಾಂಗಗಳಲ್ಲಿಯೂ ಸೊಲೊಮೋನನ ಜ್ಞಾನದ ವಿಶೇಷತೆಯನ್ನು ಕುರಿತು ಕೇಳಿದ ಅನೇಕ ರಾಜರೂ ಮತ್ತು ವಿದ್ವಾಂಸರು ಅವನ ಜ್ಞಾನವಾಕ್ಯಗಳನ್ನು ಕೇಳುವುದಕ್ಕೋಸ್ಕರ ಬರುತ್ತಿದ್ದರು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34