1 ಕೊರಿಂಥದವರಿಗೆ 4 : 1 (IRVKN)
{ಅಪೊಸ್ತಲರ ಸೇವೆ} [PS] ಜನರು ನಮ್ಮನ್ನು ಕ್ರಿಸ್ತನ ಸೇವಕರೆಂತಲೂ ದೇವರ ಗುಪ್ತವಾಗಿದ್ದ ಸತ್ಯಾರ್ಥಗಳ ವಿಷಯದಲ್ಲಿ ದೇವರ [* 1 ಕೊರಿ 9:17; 1 ಪೇತ್ರ 4:10:] ಮನೆವಾರ್ತೆಯವರೆಂತಲೂ ಪರಿಗಣಿಸಲಿ.
1 ಕೊರಿಂಥದವರಿಗೆ 4 : 2 (IRVKN)
ಹೀಗಿರಲು ನಿರ್ವಾಹಕರು ನಂಬಿಗಸ್ತರಾಗಿ ಕಂಡುಬರುವದು ಅಗತ್ಯವಲ್ಲವೇ.
1 ಕೊರಿಂಥದವರಿಗೆ 4 : 3 (IRVKN)
ನನಗಾದರೂ ನಿಮ್ಮಿಂದಾಗಲಿ ಅಥವಾ ಮನುಷ್ಯರು ಮಾಡುವ ವಿಚಾರಣೆಯಾಗಲಿ ತೀರಾ ಲಘುವೆನಿಸಿದೆ. ನಾನೂ ನನ್ನನ್ನು ನ್ಯಾಯತೀರ್ಪು ಮಾಡಿಕೊಳ್ಳುವುದಿಲ್ಲ.
1 ಕೊರಿಂಥದವರಿಗೆ 4 : 4 (IRVKN)
[† ಅ. ಕೃ. 23:1:] ನನ್ನಲ್ಲಿ ದೋಷವಿದೆಯೆಂದು ನನ್ನ ಮನಸ್ಸಿಗೆ ತೋರುವುದಿಲ್ಲವಾದರೂ ನಾನು [‡ ಕೀರ್ತ 130:3; 143:2; 1 ಯೋಹಾ 3:21:] ನಿರ್ದೋಷಿಯೆಂದು ನಿರ್ಣಯಿಸುವಂತಿಲ್ಲ. ನನ್ನನ್ನು ನ್ಯಾಯವಿಚಾರಣೆ ಮಾಡುವವನು ಕರ್ತನೇ.
1 ಕೊರಿಂಥದವರಿಗೆ 4 : 5 (IRVKN)
ಆದ್ದರಿಂದ ಕರ್ತನು ಬರುವ [§ ಮತ್ತಾ 7:1; ರೋಮಾ. 2:1; ಮತ್ತಾ 13:29:] ಕಾಲಕ್ಕಿಂತ ಮುಂಚೆ ಯಾವುದನ್ನು ಕುರಿತು ನ್ಯಾಯತೀರ್ಪುಮಾಡಬೇಡಿರಿ. ಆತನು [* 1 ಕೊರಿ 3:13:] ಕತ್ತಲೆಯಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು. ಹೃದಯದ ಆಲೋಚನೆಗಳನ್ನು ಪ್ರಕಟಪಡಿಸುವನು. [† 2 ಕೊರಿ 10:18:] ಆ ಕಾಲದಲ್ಲಿ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ದೊರಕುವುದು. [PS]
1 ಕೊರಿಂಥದವರಿಗೆ 4 : 6 (IRVKN)
{ಪೌಲನು ಕೊರಿಂಥ ಸಭೆಯವರನ್ನು ತಂದೆಯೋಪಾದಿಯಲ್ಲಿ ಗದರಿಸಿದ್ದು} [PS] ಪ್ರಿಯರೇ, ನಾನು ನಿಮಗೋಸ್ಕರವಾಗಿ ನನ್ನಗೂ ಅಪೊಲ್ಲೋಸನಿಗೂ ಈ ನಿಯಮಗಳನ್ನೆಲ್ಲಾ ಅನ್ವಯಿಸಿಕೊಂಡು ಹೇಳಿದ್ದೇನೆ. ಆದ್ದರಿಂದ ನೀವು “ಧರ್ಮಶಾಸ್ತ್ರದಲ್ಲಿ ಬರೆದಿರುವುದನ್ನು ಮೀರಿಹೋಗಬಾರದು,” ಎಂಬ ಈ ವಾಕ್ಯದ ಅರ್ಥವನ್ನು ನಮ್ಮಿಂದ ಕಲಿತುಕೊಂಡು, ನಿಮ್ಮಲ್ಲಿ ಯಾವನಾದರೂ ಒಬ್ಬನನ್ನು ವಿರೋಧಿಸಿ ಮತ್ತೊಬ್ಬನ ಪಕ್ಷವನ್ನು ಹಿಡಿದು [‡ 1 ಕೊರಿ 4:18, 19; 5:2; 13:4:] ಉಬ್ಬಿಕೊಳ್ಳಬಾರದು ಎಂಬುದಕ್ಕಾಗಿದೆ.
1 ಕೊರಿಂಥದವರಿಗೆ 4 : 7 (IRVKN)
ನಿನ್ನನ್ನು ಇತರರಿಗಿಂತಲೂ ಶ್ರೇಷ್ಠನನ್ನಾಗಿ ಮಾಡಿದವರು ಯಾರು? [§ ಯೋಹಾ 3:27:] ದೇವರಿಂದ ಹೊಂದದೆ ಇರುವಂಥದು ನಿನ್ನಲ್ಲಿ ಒಂದಾದರೂ ಉಂಟೋ? ಹೊಂದಿದ ಮೇಲೆ ಹೊಂದಿದ್ದಲ್ಲವೆಂಬಂತೆ ಯಾಕೆ ಕೊಚ್ಚಿಕೊಳ್ಳುತ್ತೀ?
1 ಕೊರಿಂಥದವರಿಗೆ 4 : 8 (IRVKN)
ಇಷ್ಟು ಬೇಗನೆ ನೀವು ತೃಪ್ತರಾದಿರಿ. ಇಷ್ಟುಬೇಗನೆ ಐಶ್ವರ್ಯವಂತರಾದಿರಿ. ನಮ್ಮ ಸಹಾಯವಿಲ್ಲದೆ ಅರಸರಂತೆ ಆದಿರಿ. ನೀವು ನಿಜವಾಗಿ ಆಳುವವರಾಗಿದ್ದರೇ ನನಗೆ ಆನಂದವಾಗುತ್ತಿತ್ತು. ಆಗ ನಾವು ಸಹ ನಿಮ್ಮೊಂದಿಗೆ ಆಳುತ್ತಿದ್ದೇವು.
1 ಕೊರಿಂಥದವರಿಗೆ 4 : 9 (IRVKN)
ಹಾಗಾಗದೆ ದೇವರು ಅಪೊಸ್ತಲರಾದ ನಮ್ಮನ್ನು [* ರೋಮಾ. 8:36:] ಮರಣದ ತೀರ್ಪು ಹೊಂದಿದವರಂತೆ [† ಅಥವಾ ಕಡೆ ವಿನೋದವಾಗಿ. ] ಕಡೆಯವರಾಗಿ ತೋರಿಸಿದ್ದಾನೆಂದು ನನಗೆ ತೋಚುತ್ತದೆ. ನಾವು ಲೋಕದಲ್ಲಿ ದೇವದೂತರಿಗೂ, ಮನುಷ್ಯರಿಗೂ ಅಂತೂ ಜಗತ್ತಿಗೆಲ್ಲಾ ಹಾಸ್ಯಾಸ್ಪದವಾದ ನೋಟವಾದೆವು.
1 ಕೊರಿಂಥದವರಿಗೆ 4 : 10 (IRVKN)
[‡ ಅ. ಕೃ. 17:18; 26:24; 1 ಕೊರಿ 1:18:] ನಾವಂತೂ ಕ್ರಿಸ್ತನ ನಿಮಿತ್ತ ಮೂರ್ಖರಾಗಿದ್ದೇವೆ. [§ 2 ಕೊರಿ 11:19:] ನೀವೋ ಕ್ರಿಸ್ತನಲ್ಲಿ ಬುದ್ಧಿವಂತರಾಗಿದ್ದೀರಿ. [* 1 ಕೊರಿ 2:3; 2 ಕೊರಿ 13:9:] ನಾವು ಬಲಹೀನರು, ನೀವು ಬಲಿಷ್ಠರು, ನೀವು ಗೌರವವುಳ್ಳವರು, ನಾವು ನಿಂದಿಸಲ್ಪಟ್ಟವರು.
1 ಕೊರಿಂಥದವರಿಗೆ 4 : 11 (IRVKN)
ಈ ಗಳಿಗೆಯವರೆಗೂ [† ರೋಮಾ. 8:35; 2 ಕೊರಿ 11:27; ಫಿಲಿ. 4:12:] ನಾವು ಹಸಿದವರೂ, ಬಾಯಾರಿಕೆಯುಳ್ಳವರೂ, ವಸ್ತ್ರವಿಲ್ಲದವರೂ, [‡ 2 ಕೊರಿ 11:20, 23:] ಪೆಟ್ಟು ತಿನ್ನುವವರೂ [§ ಮತ್ತಾ 8:20:] ಮನೆಯಿಲ್ಲದವರೂ,
1 ಕೊರಿಂಥದವರಿಗೆ 4 : 12 (IRVKN)
[* ಅ. ಕೃ. 18:3:] ಸ್ವಂತ ಕೈಗಳಿಂದ ಕೆಲಸಮಾಡಿ ದುಡಿಯುವವರೂ ಆಗಿದ್ದೇವೆ. [† 1 ಪೇತ್ರ 3:9:] ಶಪಿಸುವವರನ್ನು ಆಶೀರ್ವದಿಸುತ್ತೇವೆ. ಜನರು ಹಿಂಸಿಸುವಾಗ ಸಹಿಸಿಕೊಳ್ಳುತ್ತೇವೆ.
1 ಕೊರಿಂಥದವರಿಗೆ 4 : 13 (IRVKN)
ಅಪವಾದ ಹೊರಿಸುವವರನ್ನು ಕನಿಕರದಿಂದ ಮಾತನಾಡಿಸುತ್ತೇವೆ. ನಾವು ಈಗಿನವರೆಗೂ [‡ ಪ್ರಲಾ 3:45:] ಲೋಕದ ಕಸವೋ ಎಲ್ಲಾದಕ್ಕಿಂತಲೂ ಹೀನವೋ ಎಂಬಂತೆ ಆಗಿದ್ದೇವೆ. [PE][PS]
1 ಕೊರಿಂಥದವರಿಗೆ 4 : 14 (IRVKN)
ನಿಮ್ಮನ್ನು ನಾಚಿಕೆಪಡಿಸುವುದಕ್ಕಾಗಿ ಬರೆಯದೆ [§ 2 ಕೊರಿ 6:13; 1 ಥೆಸ. 2:11:] ನನ್ನ ಪ್ರಿಯ ಮಕ್ಕಳೆಂದು ಭಾವಿಸಿ ನಿಮಗೆ ಬುದ್ಧಿ ಹೇಳುವುದಕ್ಕಾಗಿಯೇ ಈ ಮಾತುಗಳನ್ನು ಬರೆದಿದ್ದೇನೆ.
1 ಕೊರಿಂಥದವರಿಗೆ 4 : 15 (IRVKN)
[* 1 ಕೊರಿ 3:10:] ನಿಮಗೆ ಕ್ರಿಸ್ತನಲ್ಲಿ ಬೋಧಕರು ಸಾವಿರಾರು ಮಂದಿ ಇದ್ದರೂ ತಂದೆಗಳು ಬಹು ಮಂದಿ ಇಲ್ಲ [† ಫಿಲೆ. 10. ಗಲಾ. 4:19:] ನಾನೇ ನಿಮ್ಮನ್ನು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ಪಡೆದ ತಂದೆಯಾಗಿದ್ದೇನೆ.
1 ಕೊರಿಂಥದವರಿಗೆ 4 : 16 (IRVKN)
ಆದ್ದರಿಂದ [‡ 1 ಕೊರಿ 11:1; ಫಿಲಿ. 3:17; 4:9; 1 ಥೆಸ. 1:6:] ನನ್ನನ್ನು ಅನುಸರಿಸುವವರಾಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
1 ಕೊರಿಂಥದವರಿಗೆ 4 : 17 (IRVKN)
ಈ ಕಾರಣದಿಂದ [§ 1 ತಿಮೊ. 1:2; 2 ತಿಮೊ. 1:2:] ಕರ್ತನಲ್ಲಿ ನನ್ನ ಪ್ರಿಯ ಮತ್ತು ನಂಬಿಗಸ್ತ ಮಗನಾದ ತಿಮೊಥೆಯನನ್ನು [* 1 ಕೊರಿ 16:10:] ನಿಮ್ಮ ಬಳಿಗೆ ಕಳುಹಿಸಿಕೊಟ್ಟಿದ್ದೇನೆ. [† 1 ಕೊರಿ 7:17:] ನಾನು ಪ್ರತಿಯೊಂದು ಸಭೆಗಳಲ್ಲಿಯೂ, ಎಲ್ಲೆಲ್ಲಿಯೂ ಬೋಧಿಸುವ ಹಾಗೆ ಕ್ರಿಸ್ತನಲ್ಲಿರುವ ನನ್ನ ನಡವಳಿಕೆಗಳನ್ನು ಅವನು ನಿಮ್ಮ ನೆನಪಿಗೆ ತರುವನು.
1 ಕೊರಿಂಥದವರಿಗೆ 4 : 18 (IRVKN)
ನಿಮ್ಮಲ್ಲಿ ಕೆಲವರು ಪೌಲನು ನಮ್ಮ ಬಳಿಗೆ ಬರುವುದಿಲ್ಲವೆಂದು ತಿಳಿದು [‡ 1 ಕೊರಿ 4:6:] ಉಬ್ಬಿಕೊಂಡಿದ್ದಾರೆ.
1 ಕೊರಿಂಥದವರಿಗೆ 4 : 19 (IRVKN)
ಆದರೆ ಕರ್ತನ ಚಿತ್ತವಾದರೆ [§ 1 ಕೊರಿ 11:34; 16:5, 6; ಅ. ಕೃ. 19:21; 20:2; 2 ಕೊರಿ 1:15, 16:] ನಾನು ಬೇಗನೆ ನಿಮ್ಮ ಬಳಿಗೆ ಬಂದು ಉಬ್ಬಿಕೊಂಡಿರುವವರ ಮಾತನ್ನು ಮಾತ್ರವಲ್ಲ ಅವರ ಬಲವನ್ನು ಕಂಡುಹಿಡಿಯುತ್ತೇನೆ.
1 ಕೊರಿಂಥದವರಿಗೆ 4 : 20 (IRVKN)
[* 1 ಕೊರಿ 2:4:] ದೇವರ ರಾಜ್ಯವು ಮಾತಿನಲ್ಲಿ ಅಲ್ಲ, ಶಕ್ತಿಯಲ್ಲಿ ಅಡಗಿದೆ.
1 ಕೊರಿಂಥದವರಿಗೆ 4 : 21 (IRVKN)
ನಿಮ್ಮ ಇಷ್ಟವೇನು? [† 2 ಕೊರಿ 13:2, 10 ಇತ್ಯಾದಿ. ] ಬೆತ್ತ ತೆಗೆದುಕೊಂಡು ನಿಮ್ಮ ಬಳಿಗೆ ಬರಲೋ? ಪ್ರೀತಿಯಿಂದಲೂ ಸೌಮ್ಯದ ಆತ್ಮದಿಂದಲೂ ಕೂಡಿದವನಾಗಿ ಬರಲೋ? [PE]

1 2 3 4 5 6 7 8 9 10 11 12 13 14 15 16 17 18 19 20 21

BG:

Opacity:

Color:


Size:


Font: