1 ಕೊರಿಂಥದವರಿಗೆ 3 : 1 (IRVKN)
ಆದರೆ ಸಹೋದರರೇ ನಾನಂತೂ * 1 ಕೊರಿ 2:15: ಆತ್ಮೀಕರೊಂದಿಗೆ ಮಾತನಾಡುವಂತೆ ನಿಮ್ಮ ಸಂಗಡ ಮಾತನಾಡದೆ † 1 ಕೊರಿ 2:14: ಪ್ರಾಪಂಚಿಕರೂ [‡ ಇಬ್ರಿ. 5: 13 ]ಕ್ರಿಸ್ತನ ವಿಷಯದಲ್ಲಿ ಎಳೆಗೂಸುಗಳೂ ಆಗಿರುವವರ ಹಾಗೆ ನಿಮ್ಮ ಸಂಗಡ ಮಾತನಾಡಬೇಕಾಯಿತು.
1 ಕೊರಿಂಥದವರಿಗೆ 3 : 2 (IRVKN)
[§ ಇಬ್ರಿ. 5: 1 ಯೋಹಾ 16:12: ]ನಿಮಗೆ ಹಾಲು ಕುಡಿಸಿದೆನು ಆಹಾರ ಕೊಡಲಿಲ್ಲ. ಆಹಾರವನ್ನು ತಿನ್ನುವುದಕ್ಕೆ ನೀವು ಇನ್ನೂ ಸಮರ್ಥರಾಗಿರಲಿಲ್ಲ. ಈಗಲೂ ನೀವು ಸಮರ್ಥರಾಗಿಲ್ಲ.
1 ಕೊರಿಂಥದವರಿಗೆ 3 : 3 (IRVKN)
ಯಾಕೆಂದರೆ ನೀವು ಇನ್ನೂ ಪ್ರಾಪಂಚಿಕರಾಗಿದ್ದೀರಿ. [* 1 ಕೊರಿ 1:11; 11:18; ಗಲಾ. 5:19, 20 ]ನಿಮ್ಮಲ್ಲಿ ಹೊಟ್ಟೆಕಿಚ್ಚು ಜಗಳಗಳು ಇರುವಲ್ಲಿ, ನೀವು ಪ್ರಾಪಂಚಿಕರಾಗಿದ್ದು ಕೇವಲ ಬೇರೆ ಮನುಷ್ಯರಂತೆ ನಡೆಯುತ್ತೀರಲ್ಲವೆ?
1 ಕೊರಿಂಥದವರಿಗೆ 3 : 4 (IRVKN)
[† 1 ಕೊರಿ 1: 12 ]ಒಬ್ಬನು, “ನಾನು ಪೌಲನವನು” ಎಂದು, ಮತ್ತೊಬ್ಬನು, “ನಾನು ಅಪೊಲ್ಲೋಸನವನು” ಎಂದು ಹೇಳುತ್ತಿರುವಾಗ ನೀವು ಇನ್ನೂ ಕೇವಲ ಸಾಮಾನ್ಯ ಮನುಷ್ಯರೇ ಆಗಿದ್ದೀರಲ್ಲವೇ?
1 ಕೊರಿಂಥದವರಿಗೆ 3 : 5 (IRVKN)
ಸುವಾರ್ತೆಯನ್ನು ಸಾರುವವರು ದೇವರ ಕೈಯಲ್ಲಿ ಬರೀ ಸಾಧನಗಳಷ್ಟೆ, ಕಾರ್ಯಕರ್ತನು ದೇವರೇ ಹಾಗಾದರೆ ಅಪೊಲ್ಲೋಸನು ಯಾರು? ಪೌಲನು ಯಾರು? ಅವರ ‡ 2 ಕೊರಿ 6:4; ಎಫೆ 3:7; ಕೊಲೊ 5:21: ಸೇವೆಯ ಮುಖಾಂತರ ನೀವು ಕ್ರಿಸ್ತನನ್ನು ನಂಬುವವರಾದಿರಿ § ರೋಮಾ 12:6: ಕರ್ತನು ಪ್ರತಿಯೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆಮಾಡುವವರಾಗಿದ್ದಾರೆ.
1 ಕೊರಿಂಥದವರಿಗೆ 3 : 6 (IRVKN)
* 1 ಕೊರಿ 4:15; 9:1; 15:1; ಅ. ಕೃ. 18:4-11; 2 ಕೊರಿ 10:14, 15: ನಾನು ಸಸಿಯನ್ನು ನೆಟ್ಟೆನು. † ಅ. ಕೃ. 18:27: ಅಪೊಲ್ಲೋಸನು ನೀರನ್ನು ಹೊಯ್ಯಿದನು. [‡ 1 ಕೊರಿ 15: 10 ]ಆದರೆ ಅದನ್ನು ಬೆಳೆಸಿದವನು ದೇವರೇ.
1 ಕೊರಿಂಥದವರಿಗೆ 3 : 7 (IRVKN)
ಹೀಗಿರಲಾಗಿ ನೆಡುವವನಾಗಲಿ, ನೀರುಹೊಯ್ಯುವವನಾಗಲಿ ಮುಖ್ಯವಾದವನಲ್ಲ. ಬೆಳೆಸುವ ದೇವರೇ ಪ್ರಾಮುಖ್ಯವಾದಾತನು.
1 ಕೊರಿಂಥದವರಿಗೆ 3 : 8 (IRVKN)
ನೆಡುವವನೂ, ನೀರು ಹೊಯ್ಯುವವನೂ ಸರಿಸಮಾನರೇ ಆಗಿದ್ದಾರೆ. [§ ವ. 14; 1 ಕೊರಿ 15:15, 58 ]ಆದರೆ ಪ್ರತಿಯೊಬ್ಬನಿಗೆ ಅವನವನ ಶಮ್ರಕ್ಕೆ ತಕ್ಕಂತೆ ಕೂಲಿಯು ದೊರೆಯುವುದು.
1 ಕೊರಿಂಥದವರಿಗೆ 3 : 9 (IRVKN)
[* ಮಾರ್ಕ 16:20; 2 ಕೊರಿ 6: 1 ]ನಾವು ದೇವರ ಜೊತೆಕೆಲಸದವರು. ನೀವು † ಅಥವಾ, ದೇವರ ಸಾಗುವಳಿಯೂ. ದೇವರ ಹೊಲವೂ. ‡ ಎಫೆ 2:20-22; ಕೊಲೆ. 2:7; 1 ಪೇತ್ರ 2: 5. ವ. 16: ದೇವರ ಮಂದಿರವೂ ಆಗಿದ್ದೀರಿ.
1 ಕೊರಿಂಥದವರಿಗೆ 3 : 10 (IRVKN)
§ ಅಥವಾ. ದೇವರು ನನಗೆ ಅನುಗ್ರಹಿಸಿದ ಕೃಪೆಯನ್ನವಲಂಬಿಸಿ. ದೇವರು ನನಗೆ ಕೊಟ್ಟ ಕೃಪೆಯ ಪ್ರಕಾರ ನಾನು ಜಾಣ್ಮೆಯುಳ್ಳ ಪ್ರವೀಣನಾದ ಶಿಲ್ಪಿಯಂತೆ * ವ. 11, 12; ರೋಮಾ. 15:20: ಅಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ. ಆದರೆ ತಾನು ಅದರ ಮೇಲೆ ಹೇಗೆ ಕಟ್ಟುತ್ತಿದ್ದೇನೆಂದು ಪ್ರತಿಯೊಬ್ಬನು ಎಚ್ಚರಿಕೆಯಿಂದಿರಬೇಕು.
1 ಕೊರಿಂಥದವರಿಗೆ 3 : 11 (IRVKN)
[† ಎಫೆ 2: 20 ] ಯೇಸು ಕ್ರಿಸ್ತನೆಂಬ ‡ 2 ಕೊರಿ 11:4; ಗಲಾ. 1:6, 7. ಯೆಶಾ 28: 16. ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ.
1 ಕೊರಿಂಥದವರಿಗೆ 3 : 12 (IRVKN)
ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನಗಳು, ಕಟ್ಟಿಗೆ, ಹುಲ್ಲು, ಆಪು ಮುಂತಾದವುಗಳಲ್ಲಿ ಯಾವುದರಿಂದ ಕಟ್ಟಿದರೂ,
1 ಕೊರಿಂಥದವರಿಗೆ 3 : 13 (IRVKN)
[§ 1 ಕೊರಿ 4: 5 ]ಅವನವನ ಕೆಲಸವು ಪ್ರಕಟವಾಗುವುದು. ಕ್ರಿಸ್ತನು ಬರುವ ದಿನವು * 2 ಥೆಸ. 1: 17. ಬೆಂಕಿಯೊಡನೆ ಉದಯವಾಗಿ ಆ ಕೆಲಸವನ್ನು ಸ್ಪಷ್ಟವಾಗಿ ತೋರಿಸುವುದು. ಅವನವನ ಕೆಲಸವೆಂಥದೆಂಬುದನ್ನು ಆ ಬೆಂಕಿ ಶೋಧಿಸುವುದು.
1 ಕೊರಿಂಥದವರಿಗೆ 3 : 14 (IRVKN)
ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಉಳಿದರೆ [† 1 ಕೊರಿ 15: 58 ]ಅವನಿಗೆ ಪ್ರತಿಫಲ ಸಿಕ್ಕುವುದು.
1 ಕೊರಿಂಥದವರಿಗೆ 3 : 15 (IRVKN)
ಒಬ್ಬನು ಕಟ್ಟಿದ್ದು ಸುಟ್ಟು ಹೋದರೆ ಅವನಿಗೆ ನಷ್ಟವಾಗುವುದು. ತಾನಾದರೋ ರಕ್ಷಣೆ ಹೊಂದುವನು. ಆದರೆ [‡ ಯೂದ. 23 ]ಬೆಂಕಿಯೊಳಗಿಂದ ತಪ್ಪಿಸಿಕೊಂಡವನ ಹಾಗಿರುವನು.
1 ಕೊರಿಂಥದವರಿಗೆ 3 : 16 (IRVKN)
§ 1 ಕೊರಿ 6:19; 2 ಕೊರಿ 6:16; ಎಫೆ 2:21: ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ?
1 ಕೊರಿಂಥದವರಿಗೆ 3 : 17 (IRVKN)
ಯಾವನಾದರೂ ದೇವರ ಆಲಯವನ್ನು ನಾಶಪಡಿಸಿದರೆ ದೇವರು ಅವನನ್ನು ನಾಶಪಡಿಸುವನು. ಯಾಕೆಂದರೆ ದೇವರ ಆಲಯವು ಪವಿತ್ರವಾದದ್ದು ಆ ಆಲಯವು ನೀವೇ ಆಗಿದ್ದೀರಿ.
1 ಕೊರಿಂಥದವರಿಗೆ 3 : 18 (IRVKN)
ಯಾವನೂ ತನ್ನನ್ನು ತಾನೇ ಮೋಸಗೊಳಿಸಿಕೊಳ್ಳದಿರಲಿ * 1 ಕೊರಿ 8:2: ನಿಮ್ಮಲ್ಲಿ ಯಾವನಾದರೂ ಲೋಕಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿಕೊಳ್ಳುವುದಾದರೆ ಅವನು ಜ್ಞಾನಿಯಾಗುವುದಕ್ಕಾಗಿ “ಮೂರ್ಖನಾಗಲಿ”
1 ಕೊರಿಂಥದವರಿಗೆ 3 : 19 (IRVKN)
ಯಾಕೆಂದರೆ † 1 ಕೊರಿ 1:20: ಇಹಲೋಕದ ಜ್ಞಾನವು ದೇವರ ಮುಂದೆ ಮೂರ್ಖತನವಾಗಿದೆ. ‡ ಯೋಬ. 5:13: “ಆತನು ಜ್ಞಾನಿಗಳನ್ನು ಅವರ ತಂತ್ರಗಳಲ್ಲಿಯೆ ಹಿಡಿದುಕೊಳ್ಳುತ್ತಾನೆಂತಲೂ,”
1 ಕೊರಿಂಥದವರಿಗೆ 3 : 20 (IRVKN)
§ ಕೀರ್ತ 94:11: “ಜ್ಞಾನಿಗಳ ಯೋಚನೆಗಳು ನಿಷ್ಫಲವಾದವುಗಳೆಂದು ಕರ್ತನು ತಿಳಿದುಕೊಳ್ಳುತ್ತಾನೆಂತಲೂ” ಬರೆದದೆಯಲ್ಲಾ
1 ಕೊರಿಂಥದವರಿಗೆ 3 : 21 (IRVKN)
ಆದಕಾರಣ [* 1 ಕೊರಿ 3:4-6; 1:12; 4: 6 ]ಮನುಷ್ಯಮಾತ್ರದವರ ವಿಷಯದಲ್ಲಿ ಯಾರೂ ಹೊಗಳಿಕೊಳ್ಳದಿರಲಿ. ಯಾಕೆಂದರೆ † ರೋಮಾ. 8: 28. ಸಮಸ್ತವೂ ನಿಮಗಾಗಿಯೇ ಇದೆ.
1 ಕೊರಿಂಥದವರಿಗೆ 3 : 22 (IRVKN)
ಪೌಲನಾಗಲಿ, ಅಪೊಲ್ಲೋಸನಾಗಲಿ, ಕೇಫನಾಗಲಿ ಲೋಕವಾಗಲಿ, ಜೀವವಾಗಲಿ ಮರಣವಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಸಮಸ್ತವೂ ನಿಮ್ಮದೇ.
1 ಕೊರಿಂಥದವರಿಗೆ 3 : 23 (IRVKN)
[‡ 2 ಕೊರಿ 10: 7 ಗಲಾ. 3: 29. ]ನೀವಂತೂ ಕ್ರಿಸ್ತನವರು, § 1 ಕೊರಿ 11: 3. ಕ್ರಿಸ್ತನು ದೇವರಿನವನು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23