1 ಕೊರಿಂಥದವರಿಗೆ 3 : 1 (IRVKN)
ಆದರೆ ಸಹೋದರರೇ ನಾನಂತೂ [* 1 ಕೊರಿ 2:15:] ಆತ್ಮೀಕರೊಂದಿಗೆ ಮಾತನಾಡುವಂತೆ ನಿಮ್ಮ ಸಂಗಡ ಮಾತನಾಡದೆ [† 1 ಕೊರಿ 2:14:] ಪ್ರಾಪಂಚಿಕರೂ [‡ ಇಬ್ರಿ. 5:13.] ಕ್ರಿಸ್ತನ ವಿಷಯದಲ್ಲಿ ಎಳೆಗೂಸುಗಳೂ ಆಗಿರುವವರ ಹಾಗೆ ನಿಮ್ಮ ಸಂಗಡ ಮಾತನಾಡಬೇಕಾಯಿತು.
1 ಕೊರಿಂಥದವರಿಗೆ 3 : 2 (IRVKN)
[§ ಇಬ್ರಿ. 5:1. ಯೋಹಾ 16:12:] ನಿಮಗೆ ಹಾಲು ಕುಡಿಸಿದೆನು ಆಹಾರ ಕೊಡಲಿಲ್ಲ. ಆಹಾರವನ್ನು ತಿನ್ನುವುದಕ್ಕೆ ನೀವು ಇನ್ನೂ ಸಮರ್ಥರಾಗಿರಲಿಲ್ಲ. ಈಗಲೂ ನೀವು ಸಮರ್ಥರಾಗಿಲ್ಲ.
1 ಕೊರಿಂಥದವರಿಗೆ 3 : 3 (IRVKN)
ಯಾಕೆಂದರೆ ನೀವು ಇನ್ನೂ ಪ್ರಾಪಂಚಿಕರಾಗಿದ್ದೀರಿ. [* 1 ಕೊರಿ 1:11; 11:18; ಗಲಾ. 5:19, 20.] ನಿಮ್ಮಲ್ಲಿ ಹೊಟ್ಟೆಕಿಚ್ಚು ಜಗಳಗಳು ಇರುವಲ್ಲಿ, ನೀವು ಪ್ರಾಪಂಚಿಕರಾಗಿದ್ದು ಕೇವಲ ಬೇರೆ ಮನುಷ್ಯರಂತೆ ನಡೆಯುತ್ತೀರಲ್ಲವೆ?
1 ಕೊರಿಂಥದವರಿಗೆ 3 : 4 (IRVKN)
[† 1 ಕೊರಿ 1:12.] ಒಬ್ಬನು, “ನಾನು ಪೌಲನವನು” ಎಂದು, ಮತ್ತೊಬ್ಬನು, “ನಾನು ಅಪೊಲ್ಲೋಸನವನು” ಎಂದು ಹೇಳುತ್ತಿರುವಾಗ ನೀವು ಇನ್ನೂ ಕೇವಲ ಸಾಮಾನ್ಯ ಮನುಷ್ಯರೇ ಆಗಿದ್ದೀರಲ್ಲವೇ? ಸುವಾರ್ತೆಯನ್ನು ಸಾರುವವರು ದೇವರ ಕೈಯಲ್ಲಿ ಬರೀ ಸಾಧನಗಳಷ್ಟೆ, ಕಾರ್ಯಕರ್ತನು ದೇವರೇ [PE][PS]
1 ಕೊರಿಂಥದವರಿಗೆ 3 : 5 (IRVKN)
ಹಾಗಾದರೆ ಅಪೊಲ್ಲೋಸನು ಯಾರು? ಪೌಲನು ಯಾರು? ಅವರ [‡ 2 ಕೊರಿ 6:4; ಎಫೆ 3:7; ಕೊಲೊ 5:21:] ಸೇವೆಯ ಮುಖಾಂತರ ನೀವು ಕ್ರಿಸ್ತನನ್ನು ನಂಬುವವರಾದಿರಿ [§ ರೋಮಾ 12:6:] ಕರ್ತನು ಪ್ರತಿಯೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆಮಾಡುವವರಾಗಿದ್ದಾರೆ.
1 ಕೊರಿಂಥದವರಿಗೆ 3 : 6 (IRVKN)
[* 1 ಕೊರಿ 4:15; 9:1; 15:1; ಅ. ಕೃ. 18:4-11; 2 ಕೊರಿ 10:14, 15:] ನಾನು ಸಸಿಯನ್ನು ನೆಟ್ಟೆನು. [† ಅ. ಕೃ. 18:27:] ಅಪೊಲ್ಲೋಸನು ನೀರನ್ನು ಹೊಯ್ಯಿದನು. [‡ 1 ಕೊರಿ 15:10.] ಆದರೆ ಅದನ್ನು ಬೆಳೆಸಿದವನು ದೇವರೇ.
1 ಕೊರಿಂಥದವರಿಗೆ 3 : 7 (IRVKN)
ಹೀಗಿರಲಾಗಿ ನೆಡುವವನಾಗಲಿ, ನೀರುಹೊಯ್ಯುವವನಾಗಲಿ ಮುಖ್ಯವಾದವನಲ್ಲ. ಬೆಳೆಸುವ ದೇವರೇ ಪ್ರಾಮುಖ್ಯವಾದಾತನು.
1 ಕೊರಿಂಥದವರಿಗೆ 3 : 8 (IRVKN)
ನೆಡುವವನೂ, ನೀರು ಹೊಯ್ಯುವವನೂ ಸರಿಸಮಾನರೇ ಆಗಿದ್ದಾರೆ. [§ ವ. 14; 1 ಕೊರಿ 15:15,58.] ಆದರೆ ಪ್ರತಿಯೊಬ್ಬನಿಗೆ ಅವನವನ ಶಮ್ರಕ್ಕೆ ತಕ್ಕಂತೆ ಕೂಲಿಯು ದೊರೆಯುವುದು.
1 ಕೊರಿಂಥದವರಿಗೆ 3 : 9 (IRVKN)
[* ಮಾರ್ಕ 16:20; 2 ಕೊರಿ 6:1.] ನಾವು ದೇವರ ಜೊತೆಕೆಲಸದವರು. ನೀವು [† ಅಥವಾ, ದೇವರ ಸಾಗುವಳಿಯೂ. ] ದೇವರ ಹೊಲವೂ. [‡ ಎಫೆ 2:20-22; ಕೊಲೆ. 2:7; 1 ಪೇತ್ರ 2:5. ವ. 16:] ದೇವರ ಮಂದಿರವೂ ಆಗಿದ್ದೀರಿ. [PE][PS]
1 ಕೊರಿಂಥದವರಿಗೆ 3 : 10 (IRVKN)
[§ ಅಥವಾ. ದೇವರು ನನಗೆ ಅನುಗ್ರಹಿಸಿದ ಕೃಪೆಯನ್ನವಲಂಬಿಸಿ. ] ದೇವರು ನನಗೆ ಕೊಟ್ಟ ಕೃಪೆಯ ಪ್ರಕಾರ ನಾನು ಜಾಣ್ಮೆಯುಳ್ಳ ಪ್ರವೀಣನಾದ ಶಿಲ್ಪಿಯಂತೆ [* ವ. 11, 12; ರೋಮಾ. 15:20:] ಅಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ. ಆದರೆ ತಾನು ಅದರ ಮೇಲೆ ಹೇಗೆ ಕಟ್ಟುತ್ತಿದ್ದೇನೆಂದು ಪ್ರತಿಯೊಬ್ಬನು ಎಚ್ಚರಿಕೆಯಿಂದಿರಬೇಕು.
1 ಕೊರಿಂಥದವರಿಗೆ 3 : 11 (IRVKN)
[† ಎಫೆ 2:20.] ಯೇಸು ಕ್ರಿಸ್ತನೆಂಬ [‡ 2 ಕೊರಿ 11:4; ಗಲಾ. 1:6, 7. ಯೆಶಾ 28:16.] ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ.
1 ಕೊರಿಂಥದವರಿಗೆ 3 : 12 (IRVKN)
ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನಗಳು, ಕಟ್ಟಿಗೆ, ಹುಲ್ಲು, ಆಪು ಮುಂತಾದವುಗಳಲ್ಲಿ ಯಾವುದರಿಂದ ಕಟ್ಟಿದರೂ,
1 ಕೊರಿಂಥದವರಿಗೆ 3 : 13 (IRVKN)
[§ 1 ಕೊರಿ 4:5.] ಅವನವನ ಕೆಲಸವು ಪ್ರಕಟವಾಗುವುದು. ಕ್ರಿಸ್ತನು ಬರುವ ದಿನವು [* 2 ಥೆಸ. 1:17.] ಬೆಂಕಿಯೊಡನೆ ಉದಯವಾಗಿ ಆ ಕೆಲಸವನ್ನು ಸ್ಪಷ್ಟವಾಗಿ ತೋರಿಸುವುದು. ಅವನವನ ಕೆಲಸವೆಂಥದೆಂಬುದನ್ನು ಆ ಬೆಂಕಿ ಶೋಧಿಸುವುದು.
1 ಕೊರಿಂಥದವರಿಗೆ 3 : 14 (IRVKN)
ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಉಳಿದರೆ [† 1 ಕೊರಿ 15:58.] ಅವನಿಗೆ ಪ್ರತಿಫಲ ಸಿಕ್ಕುವುದು.
1 ಕೊರಿಂಥದವರಿಗೆ 3 : 15 (IRVKN)
ಒಬ್ಬನು ಕಟ್ಟಿದ್ದು ಸುಟ್ಟು ಹೋದರೆ ಅವನಿಗೆ ನಷ್ಟವಾಗುವುದು. ತಾನಾದರೋ ರಕ್ಷಣೆ ಹೊಂದುವನು. ಆದರೆ [‡ ಯೂದ. 23.] ಬೆಂಕಿಯೊಳಗಿಂದ ತಪ್ಪಿಸಿಕೊಂಡವನ ಹಾಗಿರುವನು. [PE][PS]
1 ಕೊರಿಂಥದವರಿಗೆ 3 : 16 (IRVKN)
[§ 1 ಕೊರಿ 6:19; 2 ಕೊರಿ 6:16; ಎಫೆ 2:21:] ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ?
1 ಕೊರಿಂಥದವರಿಗೆ 3 : 17 (IRVKN)
ಯಾವನಾದರೂ ದೇವರ ಆಲಯವನ್ನು ನಾಶಪಡಿಸಿದರೆ ದೇವರು ಅವನನ್ನು ನಾಶಪಡಿಸುವನು. ಯಾಕೆಂದರೆ ದೇವರ ಆಲಯವು ಪವಿತ್ರವಾದದ್ದು ಆ ಆಲಯವು ನೀವೇ ಆಗಿದ್ದೀರಿ. [PE][PS]
1 ಕೊರಿಂಥದವರಿಗೆ 3 : 18 (IRVKN)
ಯಾವನೂ ತನ್ನನ್ನು ತಾನೇ ಮೋಸಗೊಳಿಸಿಕೊಳ್ಳದಿರಲಿ [* 1 ಕೊರಿ 8:2:] ನಿಮ್ಮಲ್ಲಿ ಯಾವನಾದರೂ ಲೋಕಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿಕೊಳ್ಳುವುದಾದರೆ ಅವನು ಜ್ಞಾನಿಯಾಗುವುದಕ್ಕಾಗಿ “ಮೂರ್ಖನಾಗಲಿ”
1 ಕೊರಿಂಥದವರಿಗೆ 3 : 19 (IRVKN)
ಯಾಕೆಂದರೆ [† 1 ಕೊರಿ 1:20:] ಇಹಲೋಕದ ಜ್ಞಾನವು ದೇವರ ಮುಂದೆ ಮೂರ್ಖತನವಾಗಿದೆ. [‡ ಯೋಬ. 5:13:] “ಆತನು ಜ್ಞಾನಿಗಳನ್ನು ಅವರ ತಂತ್ರಗಳಲ್ಲಿಯೆ ಹಿಡಿದುಕೊಳ್ಳುತ್ತಾನೆಂತಲೂ,”
1 ಕೊರಿಂಥದವರಿಗೆ 3 : 20 (IRVKN)
[§ ಕೀರ್ತ 94:11:] “ಜ್ಞಾನಿಗಳ ಯೋಚನೆಗಳು ನಿಷ್ಫಲವಾದವುಗಳೆಂದು ಕರ್ತನು ತಿಳಿದುಕೊಳ್ಳುತ್ತಾನೆಂತಲೂ” ಬರೆದದೆಯಲ್ಲಾ
1 ಕೊರಿಂಥದವರಿಗೆ 3 : 21 (IRVKN)
ಆದಕಾರಣ [* 1 ಕೊರಿ 3:4-6; 1:12; 4:6.] ಮನುಷ್ಯಮಾತ್ರದವರ ವಿಷಯದಲ್ಲಿ ಯಾರೂ ಹೊಗಳಿಕೊಳ್ಳದಿರಲಿ. ಯಾಕೆಂದರೆ [† ರೋಮಾ. 8:28.] ಸಮಸ್ತವೂ ನಿಮಗಾಗಿಯೇ ಇದೆ.
1 ಕೊರಿಂಥದವರಿಗೆ 3 : 22 (IRVKN)
ಪೌಲನಾಗಲಿ, ಅಪೊಲ್ಲೋಸನಾಗಲಿ, ಕೇಫನಾಗಲಿ ಲೋಕವಾಗಲಿ, ಜೀವವಾಗಲಿ ಮರಣವಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಸಮಸ್ತವೂ ನಿಮ್ಮದೇ.
1 ಕೊರಿಂಥದವರಿಗೆ 3 : 23 (IRVKN)
[‡ 2 ಕೊರಿ 10:7. ಗಲಾ. 3:29.] ನೀವಂತೂ ಕ್ರಿಸ್ತನವರು, [§ 1 ಕೊರಿ 11:3.] ಕ್ರಿಸ್ತನು ದೇವರಿನವನು. [PE]

1 2 3 4 5 6 7 8 9 10 11 12 13 14 15 16 17 18 19 20 21 22 23

BG:

Opacity:

Color:


Size:


Font: