1 ಕೊರಿಂಥದವರಿಗೆ 15 : 1 (IRVKN)
{ಕ್ರಿಸ್ತನು ಎದ್ದು ಬಂದನೆಂಬುದಕ್ಕೆ ಸಾಕ್ಷಿಗಳು} [PS] ಸಹೋದರರೇ, ನಾನು ನಿಮಗೆ ತಿಳಿಸಿದ ಸುವಾರ್ತೆಯನ್ನು ನಿಮ್ಮ ನೆನಪಿಗೆ ತರುತ್ತೇನೆ; ನೀವು ಅದನ್ನು ಸ್ವೀಕರಿಸಿ, [* ರೋಮಾ. 5:2] ಅದರಲ್ಲಿ ನಿಂತಿದ್ದೀರಿ.
1 ಕೊರಿಂಥದವರಿಗೆ 15 : 2 (IRVKN)
ನಾನು ನಿಮಗೆ ಸಾರಿದ [† 1 ಕೊರಿ 1:18] ಸುವಾರ್ತೆಯನ್ನು ನೀವು ದೃಢವಾಗಿ ಹಿಡಿದುಕೊಂಡರೆ ನಿಮಗೆ ರಕ್ಷಣೆಯಾಗುತ್ತದೆ. ಇಲ್ಲದಿದ್ದರೆ ನಿಮ್ಮ ನಂಬಿಕೆಯು ನಿರರ್ಥಕವಾಗುತ್ತದೆ.
1 ಕೊರಿಂಥದವರಿಗೆ 15 : 3 (IRVKN)
[‡ 1 ಕೊರಿ 11:23; ಗಲಾ. 1:12] ನಾನು ಸಹ ಕಲಿತುಕೊಂಡ ಮೊದಲನೆಯ ಸಂಗತಿಗಳೊಳಗೆ ಪ್ರಮುಖವಾದ ಸಂಗತಿಯನ್ನೇ ನಿಮಗೆ ತಿಳಿಸಿದ್ದೇನೆ ಅದೇನೆಂದರೆ ಧರ್ಮಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳ ನಿವಾರಣೆಗಾಗಿ ಸತ್ತನು; ಹೂಣಲ್ಪಟ್ಟನು;
1 ಕೊರಿಂಥದವರಿಗೆ 15 : 4 (IRVKN)
[§ ಯೆಶಾ 53:8,9; ಜೆಕ. 13:7] ಶಾಸ್ತ್ರದ ಪ್ರಕಾರವೇ ಮೂರನೆಯ ದಿನದಲ್ಲಿ ಎಬ್ಬಿಸಲ್ಪಟ್ಟನು.
1 ಕೊರಿಂಥದವರಿಗೆ 15 : 5 (IRVKN)
ಅನಂತರ [* ಲೂಕ 24:34] ಕೇಫನಿಗೂ [† ಮಾರ್ಕ 16:14; ಲೂಕ 24:36; ಯೋಹಾ 20:19,26] ತರುವಾಯ ಆತನು ಹನ್ನೆರಡು ಜನ ಅಪೊಸ್ತಲರಿಗೂ ಕಾಣಿಸಿಕೊಂಡನು.
1 ಕೊರಿಂಥದವರಿಗೆ 15 : 6 (IRVKN)
[‡ ಮತ್ತಾ 28:17] ತರುವಾಯ ಒಂದೇ ಸಮಯದಲ್ಲಿ ಐನೂರಕ್ಕಿಂತ ಹೆಚ್ಚು ಸಹೋದರರಿಗೆ ಕಾಣಿಸಿಕೊಂಡನು. ಇವರಲ್ಲಿ ಹೆಚ್ಚು ಜನರು ಇಂದಿನವರೆಗೂ ಜೀವಿಸುತ್ತಿದ್ದಾರೆ, ಆದರೆ ಕೆಲವರು ನಿದ್ರೆ [§ ಸತ್ತು ಹೋಗಿದ್ದಾರೆ] ಹೋಗಿದ್ದಾರೆ.
1 ಕೊರಿಂಥದವರಿಗೆ 15 : 7 (IRVKN)
ತರುವಾಯ ಆತನು ಯಾಕೋಬನಿಗೂ ಅನಂತರ ಎಲ್ಲಾ [* ಲೂಕ 24:50; ಅ. ಕೃ. 1:3-4] ಅಪೊಸ್ತಲರಿಗೂ ಕಾಣಿಸಿಕೊಂಡನು.
1 ಕೊರಿಂಥದವರಿಗೆ 15 : 8 (IRVKN)
[† 1 ಕೊರಿ 9:1] ಕಟ್ಟಕಡೆಗೆ, ದಿನತುಂಬದೆ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡನು.
1 ಕೊರಿಂಥದವರಿಗೆ 15 : 9 (IRVKN)
[‡ ಎಫೆ 3:7,8; 2 ಕೊರಿ 12:11; 1 ತಿಮೊ. 1:13-16] ನಾನಂತೂ ಅಪೊಸ್ತಲರಲ್ಲಿ ಕನಿಷ್ಠನು; [§ ಅ. ಕೃ. 8:3] ನಾನು ದೇವರ ಸಭೆಯನ್ನು ಹಿಂಸೆಪಡಿಸಿದ್ದರಿಂದ ಅಪೊಸ್ತಲೆನಿಸಿಕೊಳ್ಳುವುದಕ್ಕೆ ಯೋಗ್ಯನಲ್ಲ.
1 ಕೊರಿಂಥದವರಿಗೆ 15 : 10 (IRVKN)
ಆದರೆ ನಾನು ಈಗ ಎಂಥವನಾಗಿದ್ದೇನೊ ಅದು ದೇವರ ಕೃಪೆಯಿಂದಲೇ ಮತ್ತು ಆತನ ಕೃಪೆಯು ನನ್ನಲ್ಲಿ ನಿಷ್ಫಲವಾಗಲಿಲ್ಲ. [* 1 ಕೊರಿ 11:23; 12:11; ಕೊಲೊ 1:29] ನಾನು ಅವರೆಲ್ಲರಿಗಿಂತಲೂ ಹೆಚ್ಚಾಗಿ ಪ್ರಯಾಸಪಟ್ಟೆನು. [† 1 ಕೊರಿ 3:6; 2 ಕೊರಿ 3:5] ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿರುವ ದೇವರ ಕೃಪೆಯೇ.
1 ಕೊರಿಂಥದವರಿಗೆ 15 : 11 (IRVKN)
ಆದ್ದರಿಂದ ನಾನಾದರೇನು ಅಥವಾ ಅವರಾದರೇನು, ಈ ರೀತಿಯಾಗಿ ನಾವೆಲ್ಲರೂ ಸುರ್ವಾತೆಯನ್ನು ಸಾರಿದ್ದೇವೆ; ಅದನ್ನು ನೀವು ನಂಬಿದಿರಿ. [PS]
1 ಕೊರಿಂಥದವರಿಗೆ 15 : 12 (IRVKN)
{ಕ್ರಿಸ್ತನನ್ನು ನಂಬಿದವರು ಎದ್ದು ಬರುವರು} [PS] ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೆಂದು ಸಾರುತ್ತಿರುವಲ್ಲಿ, ನಿಮ್ಮೊಳಗೆ [‡ ಅ. ಕೃ. 23:8; 2 ತಿಮೊ. 2:18] ಕೆಲವರು ಸತ್ತವರಿಗೆ ಪುನರುತ್ಥಾನವೇ ಇಲ್ಲವೆಂದು ಹೇಳುವುದಾದರೂ ಹೇಗೆ?
1 ಕೊರಿಂಥದವರಿಗೆ 15 : 13 (IRVKN)
ಸತ್ತವರಿಗೆ ಪುನರುತ್ಥಾನವಿಲ್ಲವೆಂಬುದು ನಿಜವಾಗಿದ್ದರೆ ಕ್ರಿಸ್ತನು ಸಹ ಎದ್ದುಬರಲಿಲ್ಲ.
1 ಕೊರಿಂಥದವರಿಗೆ 15 : 14 (IRVKN)
ಕ್ರಿಸ್ತನೂ ಎದ್ದುಬರಲಿಲ್ಲವಾದರೆ ನಮ್ಮ ಬೋಧನೆಯು ವ್ಯರ್ಥ ಮತ್ತು ನಿಮ್ಮ ನಂಬಿಕೆಯು ಸಹ ವ್ಯರ್ಥವಾದದ್ದು.
1 ಕೊರಿಂಥದವರಿಗೆ 15 : 15 (IRVKN)
ಇದಲ್ಲದೆ ಸತ್ತವರು ಎದ್ದುಬರುವುದಿಲ್ಲವೆಂಬುದು ನಿಜವಾಗಿದ್ದ ಪಕ್ಷದಲ್ಲಿ ದೇವರು ಕ್ರಿಸ್ತನನ್ನು ಎಬ್ಬಿಸಲೇ ಇಲ್ಲ; [§ ಅ. ಕೃ. 2:24] ಎಬ್ಬಿಸಿದನೆಂದು ಸಾಕ್ಷಿಕೊಟ್ಟ ನಾವು ದೇವರ ವಿಷಯವಾಗಿ ಸುಳ್ಳುಸಾಕ್ಷಿ ಹೇಳಿದವರಾಗಿ ಕಂಡುಬಂದೆವು.
1 ಕೊರಿಂಥದವರಿಗೆ 15 : 16 (IRVKN)
ಸತ್ತವರು ಎದ್ದು ಬರುವುದಿಲ್ಲವಾದರೆ ಕ್ರಿಸ್ತನೂ ಎದ್ದು ಬರಲಿಲ್ಲ.
1 ಕೊರಿಂಥದವರಿಗೆ 15 : 17 (IRVKN)
ಕ್ರಿಸ್ತನು ಎದ್ದುಬರಲಿಲ್ಲವಾದರೆ ನಿಮ್ಮ ನಂಬಿಕೆಯು ನಿರರ್ಥಕವಾಗಿದೆ, ಹಾಗೂ [* ರೋಮಾ. 4:25] ನೀವು ಇನ್ನೂ ನಿಮ್ಮ ಪಾಪಗಳಲ್ಲಿಯೇ ಇದ್ದೀರಿ.
1 ಕೊರಿಂಥದವರಿಗೆ 15 : 18 (IRVKN)
ಇದು ಮಾತ್ರವಲ್ಲದೆ ಕ್ರಿಸ್ತನಲ್ಲಿ ನಿದ್ರೆಹೋದವರು ನಾಶವಾದರು ಎಂದರ್ಥ.
1 ಕೊರಿಂಥದವರಿಗೆ 15 : 19 (IRVKN)
ಕ್ರಿಸ್ತನಲ್ಲಿ ನಮಗಿರುವ ನಿರೀಕ್ಷೆಯು ಕೇವಲ ಈ ಬದುಕಿಗೆ ಮಾತ್ರ ಸೀಮಿತವಾಗಿದ್ದರೆ ನಾವು ಎಲ್ಲಾ ಮನುಷ್ಯರಿಗಿಂತಲೂ ಹೀನರಾಗುತ್ತೇವೆ. [PE][PS]
1 ಕೊರಿಂಥದವರಿಗೆ 15 : 20 (IRVKN)
[† 2 ತಿಮೊ. 2:8; 1 ಪೇತ್ರ 1:3] ಆದರೆ ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದನು. ಸತ್ತುಹೋದವರಲ್ಲಿ [‡ ವ. 23; ಅ. ಕೃ. 26:23] ಪ್ರಥಮಫಲವಾದನು.
1 ಕೊರಿಂಥದವರಿಗೆ 15 : 21 (IRVKN)
[§ ರೋಮಾ. 5:12] ಮನುಷ್ಯನ ಮೂಲಕ ಮರಣ ಉಂಟಾದ ಕಾರಣ, ಮನುಷ್ಯನ ಮೂಲಕವೇ ಸತ್ತವರಿಗೆ ಪುನರುತ್ಥಾನವುಂಟಾಗಿದೆ.
1 ಕೊರಿಂಥದವರಿಗೆ 15 : 22 (IRVKN)
ಆದಾಮನಿಂದ ಹೇಗೆ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಯೇಸು ಕ್ರಿಸ್ತನಿಂದ ಎಲ್ಲರೂ ಬದುಕುವವರಾದರು.
1 ಕೊರಿಂಥದವರಿಗೆ 15 : 23 (IRVKN)
ಆದರೆ ಪ್ರತಿಯೊಬ್ಬನು ತನ್ನ ಕ್ರಮದಲ್ಲಿ ಎದ್ದುಬರುವನು. ಕ್ರಿಸ್ತನು ಪ್ರಥಮಫಲವಾದನು; ತರುವಾಯ ಕ್ರಿಸ್ತನಿಗೆ ಸೇರಿದವರು ಆತನ ಬರೋಣದಲ್ಲಿ ಜೀವವುಳ್ಳವರಾಗಿ ಎದ್ದು ಬರುವರು.
1 ಕೊರಿಂಥದವರಿಗೆ 15 : 24 (IRVKN)
ಅನಂತರ ಆತನು ಎಲ್ಲಾ ದೊರೆತನವನ್ನೂ, ಎಲ್ಲಾ ಅಧಿಕಾರವನ್ನೂ ಮತ್ತು ಬಲವನ್ನೂ ನಿರ್ಮೂಲಗೊಳಿಸಿ ತಂದೆ ದೇವರಿಗೆ ರಾಜ್ಯವನ್ನು ಒಪ್ಪಿಸಿಕೊಡುವಾಗ ಸಮಾಪ್ತಿಯಾಗುವುದು.
1 ಕೊರಿಂಥದವರಿಗೆ 15 : 25 (IRVKN)
ಯಾಕೆಂದರೆ [* ಕೀರ್ತ 110:1; 8:6] ತಾನು ಎಲ್ಲಾ ವಿರೋಧಿಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ರಾಜ್ಯವನ್ನಾಳುವುದು ಅವಶ್ಯ.
1 ಕೊರಿಂಥದವರಿಗೆ 15 : 26 (IRVKN)
[† 2 ತಿಮೊ. 1:10] ನಿರ್ಮೂಲವಾಗುವ ಕಡೆ ಶತ್ರುವು ಮರಣವಾಗಿದೆ.
1 ಕೊರಿಂಥದವರಿಗೆ 15 : 27 (IRVKN)
“ದೇವರು ಸಮಸ್ತವನ್ನೂ ಆತನ ಪಾದಗಳ ಕೆಳಗೆ ಹಾಕಿ ಆತನಿಗೆ ಅಧೀನಮಾಡಿದ್ದಾನೆ.” ಆದರೆ “ಸಮಸ್ತವೂ ಆತನಿಗೆ ಅಧೀನಮಾಡಲ್ಪಟ್ಟಿದೆ” ಎಂದು ಹೇಳುವಾಗ ಸಮಸ್ತವನ್ನು ಅಧೀನಮಾಡಿಕೊಟ್ಟಾತನು ಅದರಲ್ಲಿ ಸೇರಲಿಲ್ಲವೆಂಬುದು ಸ್ಪಷ್ಟವಾಗಿದೆ.
1 ಕೊರಿಂಥದವರಿಗೆ 15 : 28 (IRVKN)
ಸಮಸ್ತವೂ ಆತನಿಗೆ ಅಧೀನವಾದ ಮೇಲೆ ಮಗನು ಸಮಸ್ತವನ್ನೂ ತನಗೆ ಅಧೀನಮಾಡಿ ಕೊಟ್ಟಾತನಿಗೆ ತಾನೇ ಅಧೀನನಾಗುವನು; ಹೀಗೆ [‡ 1 ಕೊರಿ 3:23; 11:3] ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗುವನು. [PE][PS]
1 ಕೊರಿಂಥದವರಿಗೆ 15 : 29 (IRVKN)
ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು ಏನು ಮಾಡುವರು? ಸತ್ತವರು ಎದ್ದು ಬರುವುದೇ ಇಲ್ಲ ಎನ್ನುವುದು ನಿಜವಾಗಿದ್ದರೆ ಯಾಕೆ ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರೆ.
1 ಕೊರಿಂಥದವರಿಗೆ 15 : 30 (IRVKN)
[§ 2 ಕೊರಿ 11:26] ನಾವು ಸಹ ಯಾಕೆ ಪ್ರತಿ ಗಳಿಗೆಯಲ್ಲಿಯೂ ಭಯದಲ್ಲಿದ್ದೇವೆ?
1 ಕೊರಿಂಥದವರಿಗೆ 15 : 31 (IRVKN)
ಪ್ರಿಯರೇ, ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ [* 1 ಥೆಸ. 2:19] ನಿಮ್ಮನ್ನು ಕುರಿತಾಗಿ ನನಗಿರುವ ಹೆಮ್ಮೆಯ ನಿಮಿತ್ತ [† ಲೂಕ 9:23; ರೋಮಾ. 8:36] ನಾನು ದಿನಾಲು ಸಾಯುತ್ತಲಿದ್ದೇನೆ ಎಂದು ಹೇಳುತ್ತೇನೆ.
1 ಕೊರಿಂಥದವರಿಗೆ 15 : 32 (IRVKN)
ನಾನು ಎಫೆಸದಲ್ಲಿ ಮೃಗ ಯುದ್ಧ ಮಾಡಿದ್ದು ಕೇವಲ ಮಾನುಷಾಭಿಪ್ರಾಯದಿಂದಾದರೆ ನನಗೇನು ಪ್ರಯೋಜನ? ಸತ್ತವರು ಎದ್ದು ಬರುವುದಿಲ್ಲವಾದರೆ, ನಾವು [‡ ಯೆಶಾ 22:13] ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ.
1 ಕೊರಿಂಥದವರಿಗೆ 15 : 33 (IRVKN)
ಮೋಸಹೋಗಬೇಡಿರಿ; [§ 1 ಕೊರಿ 5:6] “ಕೆಟ್ಟ ಸಹವಾಸವು ಸದಾಚಾರವನ್ನು ಕೆಡಿಸುತ್ತವೆ.”
1 ಕೊರಿಂಥದವರಿಗೆ 15 : 34 (IRVKN)
ಗಂಭೀರವಾಗಿ ಯೋಚಿಸಿರಿ! ನೀತಿವಂತರಾಗಿ ಎಚ್ಚರದಿಂದಿರಿ. ಪಾಪಮಾಡಬೇಡಿರಿ. ಕೆಲವರಿಗೆ ದೇವರ ಕುರಿತಾಗಿ ಜ್ಞಾನವೇ ಇಲ್ಲ; [* 1 ಕೊರಿ 6:5] ನಿಮಗೆ ನಾಚಿಕೆ ಆಗಲೆಂದೇ ಇದನ್ನು ಹೇಳುತ್ತಿದ್ದೇನೆ. [PS]
1 ಕೊರಿಂಥದವರಿಗೆ 15 : 35 (IRVKN)
{ಸತ್ತವರು ಯಾವ ಸ್ಥಿತಿಯಲ್ಲಿ ಎದ್ದು ಬರುವರೆಂಬುದನ್ನು ಕುರಿತದ್ದು} [PS] “ಸತ್ತವರನ್ನು ಮರಳಿ ಜೀವಂತರಾಗಿಸುವುದು ಹೇಗೆ ಸಾಧ್ಯ? ಎಂಥ ದೇಹದಿಂದ ಎದ್ದುಬರುತ್ತಾರೆ?” ಎಂದು ಯಾರಾದರೂ ಪ್ರಶ್ನಿಸಬಹುದು.
1 ಕೊರಿಂಥದವರಿಗೆ 15 : 36 (IRVKN)
ಮೂರ್ಖನೇ; [† ಯೋಹಾ 12:24] ನೀನು ಬಿತ್ತುವ ಬೀಜವು ಸಾಯದಿದ್ದರೆ, ಅದು ಜೀವ ತಾಳುವುದುಂಟೆ? ಇಲ್ಲ.
1 ಕೊರಿಂಥದವರಿಗೆ 15 : 37 (IRVKN)
ನೋಡು; ಒಂದು ವೇಳೆ ಗೋದಿಯಕಾಳನ್ನಾಗಲಿ ಬೇರೆ ಯಾವುದೇ ಬೀಜವನ್ನಾಗಲಿ ಬಿತ್ತುವಾಗ ಬರೀ ಕಾಳನ್ನೇ ಹೊರತು ಮುಂದೆ ಬೆಳೆಯಬೇಕಾದ ಗಿಡವನ್ನು ಬಿತ್ತುವುದಿಲ್ಲ.
1 ಕೊರಿಂಥದವರಿಗೆ 15 : 38 (IRVKN)
ಆದರೆ ದೇವರು ತನ್ನ ಇಷ್ಟದಂತೆ ಅದಕ್ಕೆ ದೇಹವನ್ನು ಕೊಡುತ್ತಾನೆ. ಒಂದೊಂದು ಬೀಜಕ್ಕೂ ಅದಕ್ಕೆ ತಕ್ಕ ದೇಹವನ್ನು ಕೊಡುತ್ತಾನೆ.
1 ಕೊರಿಂಥದವರಿಗೆ 15 : 39 (IRVKN)
ಎಲ್ಲಾ ಶರೀರಗಳು ಒಂದೇ ವಿಧವಾದವುಗಳಲ್ಲ; ಮನುಷ್ಯನ ಶರೀರ ಬೇರೆ, ಪಶುಗಳ ಶರೀರ ಬೇರೆ, ಪಕ್ಷಿಗಳ ಶರೀರ ಬೇರೆ, ಮೀನುಗಳದು ಬೇರೆ.
1 ಕೊರಿಂಥದವರಿಗೆ 15 : 40 (IRVKN)
ಇದಲ್ಲದೆ ಸ್ವರ್ಗೀಯ ಶರೀರಗಳುಂಟು, ಭೂಲೋಕದ ಶರೀರಗಳುಂಟು, ಆದರೆ ಪರಲೋಕದ ಶರೀರಗಳ ಮಹಿಮೆ ಬೇರೆ, ಭೂಲೋಕದ ಶರೀರಗಳ ಮಹಿಮೆ ಬೇರೆ.
1 ಕೊರಿಂಥದವರಿಗೆ 15 : 41 (IRVKN)
ಸೂರ್ಯನ ತೇಜಸ್ಸು ಒಂದು ವಿಧವಾದರೆ, ಚಂದ್ರನ ಪ್ರಕಾಶವೇ ಮತ್ತೊಂದು ವಿಧ, ಹಾಗೆಯೇ ನಕ್ಷತ್ರ ನಕ್ಷತ್ರಗಳ ಪ್ರಕಾಶವು ಸಹ ವೈವಿಧ್ಯವಾದುದು. [PE][PS]
1 ಕೊರಿಂಥದವರಿಗೆ 15 : 42 (IRVKN)
ಸತ್ತವರಿಗಾಗುವ ಪುನರುತ್ಥಾನವು ಅದೇ ಪ್ರಕಾರವಾಗಿರುವುದು. ಬಿತ್ತುವಂಥದ್ದು ಅಳಿದುಹೊಗುವಂಥದ್ದು. ಪುನರುತ್ಥಾನವಾಗುವಂಥದ್ದು ಅಮರವಾದದ್ದು.
1 ಕೊರಿಂಥದವರಿಗೆ 15 : 43 (IRVKN)
ಹೀನಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, [‡ ಫಿಲಿ. 3:21; ಕೊಲೊ 3:4] ಮಹಿಮೆಯಲ್ಲಿ ಪುನರುತ್ಥಾನಹೊಂದುವುದು; ನಿರ್ಬಲಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಬಲಹೊಂದಿ ಪುನರುತ್ಥಾನಹೊಂದುವುದು;
1 ಕೊರಿಂಥದವರಿಗೆ 15 : 44 (IRVKN)
ಬಿತ್ತಿದ್ದು ಪ್ರಾಕೃತ ದೇಹವಾಗಿ ಬಿತ್ತಲ್ಪಡುತ್ತದೆ, ಪುನರುತ್ಥಾನಹೊಂದುವಂಥದ್ದು ಆತ್ಮೀಕ ದೇಹ. ಪ್ರಾಕೃತದೇಹ ಇರುವುದಾದರೆ ಆತ್ಮೀಕ ದೇಹವೂ ಇರುವುದು ಸತ್ಯ.
1 ಕೊರಿಂಥದವರಿಗೆ 15 : 45 (IRVKN)
[§ ಆದಿ 2:7] “ಮೊದಲನೆಯ ಮನುಷ್ಯನಾದ ಆದಾಮನು ಜೀವ ಪಡೆದ ವ್ಯಕ್ತಿ” ಎಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದದೆಯಲ್ಲಾ. [* ರೋಮಾ. 5:14] ಕಡೆ ಆದಾಮನಾದರೋ [† ] ಜೀವ ಕೊಡುವ ಆತ್ಮನಾದನು.
1 ಕೊರಿಂಥದವರಿಗೆ 15 : 46 (IRVKN)
ಆತ್ಮೀಕವಾದದ್ದು ಮೊದಲು ಬಂದದ್ದಲ್ಲಾ, ಪ್ರಾಕೃತವಾದದ್ದು ಮೊದಲನೆಯದು; ಅನಂತರ ಆತ್ಮೀಕವಾದದ್ದು.
1 ಕೊರಿಂಥದವರಿಗೆ 15 : 47 (IRVKN)
ಮೊದಲನೆಯ ಮನುಷ್ಯನು [‡ ಆದಿ 2:7; 3:19] ಮಣ್ಣಿನಿಂದ ಮಾಡಲ್ಪಟ್ಟವನು; ಭೂಮಿಗೆ ಸೇರಿದವನು, ಎರಡನೆಯ ಮನುಷ್ಯನು ಪರಲೋಕದಿಂದ ಬಂದವನು.
1 ಕೊರಿಂಥದವರಿಗೆ 15 : 48 (IRVKN)
ಮಣ್ಣಿನಿಂದ ಹುಟ್ಟಿದವನು ಎಂಥವನೋ ಮಣ್ಣಿಗೆ ಸಂಬಂಧಪಟ್ಟವರೂ ಅಂಥವರೇ ಆಗಿರುತ್ತಾರೆ; ಪರಲೋಕದಿಂದ ಬಂದಾತನು ಎಂಥವನೋ [§ ಫಿಲಿ. 3:20] ಪರಲೋಕಕ್ಕೆ ಸಂಬಂಧಪಟ್ಟವರೂ ಅಂಥವರೇ.
1 ಕೊರಿಂಥದವರಿಗೆ 15 : 49 (IRVKN)
ನಾವು ಮಣ್ಣಿನಿಂದ ಹುಟ್ಟಿದವನ ಸಾರೂಪ್ಯವನ್ನು ಧರಿಸಿಕೊಂಡಿರುವ ಪ್ರಕಾರ [* ರೋಮಾ. 8:29] ಪರಲೋಕದಿಂದ ಬಂದಾತನ ಸಾರೂಪ್ಯವನ್ನೂ ಧರಿಸಿಕೊಳ್ಳಬೇಕು. [PE][PS]
1 ಕೊರಿಂಥದವರಿಗೆ 15 : 50 (IRVKN)
ಸಹೋದರರೇ, ನಾನು ಹೇಳುವುದೇನಂದರೆ, [† ಯೋಹಾ 3:3-5] ರಕ್ತ ಮಾಂಸಗಳು ದೇವರ ರಾಜ್ಯವನ್ನು ವಶಪಡಿಸಿಕೊಳ್ಳಲಾರದು; ಅಂತೆಯೇ, ಅಳಿದುಹೋಗುವಂಥದ್ದು ಅಮರತ್ವಕ್ಕೆ ಬಾಧ್ಯವಾಗಲು ಸಾಧ್ಯವಿಲ್ಲ.
1 ಕೊರಿಂಥದವರಿಗೆ 15 : 51 (IRVKN)
ನೋಡಿರಿ! ಇದುವರೆಗೆ ಗುಪ್ತವಾಗಿದ್ದ ಸಂಗತಿಯನ್ನು ನಾನು ನಿಮಗೆ ತಿಳಿಸುತ್ತೇನೆ, [‡ 1 ಥೆಸ. 4:15-17] ನಾವೆಲ್ಲರೂ ಸಾಯುವುದಿಲ್ಲ, ಮಾರ್ಪಡುವೆವು.
1 ಕೊರಿಂಥದವರಿಗೆ 15 : 52 (IRVKN)
ಕಡೆ ತುತ್ತೂರಿಯ ಧ್ವನಿಯು ಮೊಳಗುವಲ್ಲಿ, ಕ್ಷಣಮಾತ್ರದಲ್ಲಿ, ರೆಪ್ಪೆಬಡಿಯುವಷ್ಟರೊಳಗಾಗಿ ನಾವೆಲ್ಲರೂ [§ ಫಿಲಿ. 3:21] ಮಾರ್ಪಡುವೆವು. ಹೌದು, [* ಮತ್ತಾ 24:31; 1 ಥೆಸ. 4:16] ತುತ್ತೂರಿಯು ಮೊಳಗಿ [† ಯೋಹಾ 5:25, 28] ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು, ನಾವು ರೂಪಾಂತರ ಹೊಂದುವೆವು.
1 ಕೊರಿಂಥದವರಿಗೆ 15 : 53 (IRVKN)
ನಶಿಸುವಂಥ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಳ್ಳುವುದೂ, [‡ 2 ಕೊರಿ 5:2-4] ಮರಣಕ್ಕೆ ಅಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದೂ ಅಗತ್ಯವಾಗಿದೆ.
1 ಕೊರಿಂಥದವರಿಗೆ 15 : 54 (IRVKN)
ನಶಿಸಿಹೋಗುವ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಂಡಾಗ ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಂಡಾಗ ಬರೆದಿರುವ ಮಾತು ನೆರವೇರುವುದು.
1 ಕೊರಿಂಥದವರಿಗೆ 15 : 55 (IRVKN)
[§ ಹೋಶೇ. 13:14] “ಹೇ! ಮರಣವೇ ನಿನ್ನ ಜಯವೆಲ್ಲಿ? ಹೇ! ಮರಣವೇ ನಿನ್ನ ವಿಷದ ಕೊಂಡಿ ಎಲ್ಲಿ?”
1 ಕೊರಿಂಥದವರಿಗೆ 15 : 56 (IRVKN)
ಸಾವಿನ ವಿಷಕೊಂಡಿ ಪಾಪವೇ; ಪಾಪದ ಶಕ್ತಿಯ ಆಧಾರವು ಧರ್ಮಶಾಸ್ತ್ರವಿಧಿಗಳೇ.
1 ಕೊರಿಂಥದವರಿಗೆ 15 : 57 (IRVKN)
[* ರೋಮಾ. 8:37; 1 ಯೋಹಾ 5:4] ಆದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಡುವ ದೇವರಿಗೆ ಸದಾಕಾಲ ಮಹಿಮೆಯುಂಟಾಗಲಿ.
1 ಕೊರಿಂಥದವರಿಗೆ 15 : 58 (IRVKN)
ಆದ್ದರಿಂದ, ನನ್ನ ಸಹೋದರರೇ, ಸ್ಥಿರಚಿತ್ತರಾಗಿಯೂ, ನಿಶ್ಚಲರಾಗಿರಿ. ಯಾಕೆಂದರೆ [† ಗಲಾ. 6:9; 1 ಕೊರಿ 3:8] ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವುದಿಲ್ಲ. ಅದನ್ನು ತಿಳಿದು ಕರ್ತನ ಕೆಲಸವನ್ನು ಸದಾ ಅತ್ಯಾಸಕ್ತಿಯಿಂದಲೂ ಮತ್ತು ನಿರಂತರ ಶ್ರದ್ಧೆಯುಳ್ಳವರಾಗಿಯೂ ಮಾಡುವವರಾಗಿರಿ. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58

BG:

Opacity:

Color:


Size:


Font: