1 ಕೊರಿಂಥದವರಿಗೆ 12 : 1 (IRVKN)
{ಪವಿತ್ರಾತ್ಮನಿಂದುಂಟಾಗುವ ವರಗಳನ್ನು ಕುರಿತದ್ದು} [PS] ಸಹೋದರರೇ [* 1 ಕೊರಿ 14:1] ಪವಿತ್ರಾತ್ಮನಿಂದುಂಟಾಗುವ ವರಗಳನ್ನು ಕುರಿತು ನಿಮಗೆ ತಿಳಿವಳಿಕೆಯಿರಬೇಕೆಂದು ನಾನು ಅಪೇಕ್ಷಿಸುತ್ತೇನೆ.
1 ಕೊರಿಂಥದವರಿಗೆ 12 : 2 (IRVKN)
[† ಎಫೆ 2:11-12, 1 ಪೇತ್ರ. 4:3] ನೀವು ಅನ್ಯಜನರಾಗಿದ್ದಾಗ [‡ ಹಬ 2:18-19, ಕೀರ್ತ 115:5] ಮೂಕ ವಿಗ್ರಹಗಳು ನಿಮ್ಮನ್ನು ನಡೆಸಿದ ಹಾಗೆ ನೀವು ಅವುಗಳ ಬಳಿಗೆ ಹೋಗುತ್ತಿದ್ದಿರೆಂದು ಬಲ್ಲಿರಿ.
1 ಕೊರಿಂಥದವರಿಗೆ 12 : 3 (IRVKN)
ಹೀಗಿರುವುದರಿಂದ ನಾನು ನಿಮಗೆ ತಿಳಿಸುವುದನ್ನು ಕೇಳಿರಿ. [§ 1 ಯೋಹಾ 4:2-3] ದೇವರಾತ್ಮನ ಪ್ರೇರಣೆಯಿಂದ ಮಾತನಾಡುವ ಯಾವ ಮನುಷ್ಯನಾದರೂ “ಯೇಸುವನ್ನು ಶಾಪಗ್ರಸ್ತನೆಂದು” ಹೇಳುವುದಿಲ್ಲ. ಮತ್ತು [* ಯೋಹಾ 15:26, ಮತ್ತಾ 16:17] ಪವಿತ್ರಾತ್ಮನ ಪ್ರೇರಣೆಯಿಂದಲೇ ಹೊರತು ಯಾವ ಮನುಷ್ಯನಾದರೂ “ಯೇಸುವನ್ನು ಕರ್ತನೆಂದು” ಹೇಳಲಾರನು. [PE][PS]
1 ಕೊರಿಂಥದವರಿಗೆ 12 : 4 (IRVKN)
[† ರೋಮಾ. 12:6:] ವರಗಳಲ್ಲಿ ಬೇರೆ ಬೇರೆ ವಿಧಗಳುಂಟು. ಆದರೆ [‡ ಎಫೆ 4:4-6] ದೇವರಾತ್ಮನು ಒಬ್ಬನೇ.
1 ಕೊರಿಂಥದವರಿಗೆ 12 : 5 (IRVKN)
ಸೇವೆಗಳಲ್ಲಿ ಬೇರೆ ಬೇರೆ ವಿಧಗಳುಂಟು ಆದರೆ ಕರ್ತನು ಒಬ್ಬನೇ.
1 ಕೊರಿಂಥದವರಿಗೆ 12 : 6 (IRVKN)
[§ ರೋಮಾ. 12:7; ಎಫೆ 4:11:] ಕಾರ್ಯಗಳಲ್ಲಿ ಬೇರೆ ಬೇರೆ ವಿಧಗಳುಂಟು ಆದರೆ ಸರ್ವರಲ್ಲಿಯೂ ಸರ್ವ ಕಾರ್ಯಗಳನ್ನು ಸಾಧಿಸುವ ದೇವರು ಒಬ್ಬನೇ.
1 ಕೊರಿಂಥದವರಿಗೆ 12 : 7 (IRVKN)
ಆದರೆ [* ಎಫೆ 4:7, ರೋಮಾ. 12:3] ಪ್ರತಿಯೊಬ್ಬನಲ್ಲಿ ತೋರಿಬರುವ ದೇವರಾತ್ಮನ ವರಗಳು ಸರ್ವರ ಪ್ರಯೋಜನಕ್ಕಾಗಿ ಕೊಡಲ್ಪಟ್ಟಿವೆ.
1 ಕೊರಿಂಥದವರಿಗೆ 12 : 8 (IRVKN)
ಒಬ್ಬನಿಗೆ ದೇವರಾತ್ಮನ ಮೂಲಕ [† 1 ಕೊರಿ 2:6-7] ಜ್ಞಾನವಾಕ್ಯವು ಮತ್ತೊಬ್ಬನಿಗೆ ಆ ಆತ್ಮನಿಂದಲೇ ತಿಳಿವಳಿಕೆಯ ವಾಕ್ಯವು
1 ಕೊರಿಂಥದವರಿಗೆ 12 : 9 (IRVKN)
ಒಬ್ಬನಿಗೆ ಆ ಆತ್ಮನಿಂದಲೇ [‡ 1 ಕೊರಿ 13:2, 2 ಕೊರಿ 4:13] ನಂಬಿಕೆಯು ಮತ್ತೊಬ್ಬನಿಗೆ ಆ ಒಬ್ಬ ಆತ್ಮನಿಂದಲೇ [§ 1 ಕೊರಿ 12:28-30] ನಾನಾ ರೋಗಗಳನ್ನು ವಾಸಿಮಾಡುವ ವರವು,
1 ಕೊರಿಂಥದವರಿಗೆ 12 : 10 (IRVKN)
ಮತ್ತೊಬ್ಬನಿಗೆ [* 1 ಕೊರಿ 12:28-29] ಮಹತ್ಕಾರ್ಯಗಳನ್ನು ಮಾಡುವ ವರವು, ಇನ್ನೊಬ್ಬನಿಗೆ [† 1 ಕೊರಿ 13:2,8; 14:1] ಪ್ರವಾದನೆಯ ವರವು, ಒಬ್ಬನಿಗೆ [‡ 1 ಕೊರಿ 14:29, 1 ಯೋಹಾ 4:1] ಆತ್ಮವನ್ನು ವಿವೇಚಿಸುವ ವರವು, ಮತ್ತೊಬ್ಬನಿಗೆ [§ 1 ಕೊರಿ 12:30, 14:26] ವಿವಿಧ ಭಾಷೆಗಳನ್ನಾಡುವ ವರವು, ಒಬ್ಬನಿಗೆ ಭಾಷೆಗಳ ಅರ್ಥವನ್ನು ಬಿಡಿಸಿ ಹೇಳುವ ವರವು ಕೊಡಲ್ಪಡುತ್ತದೆ.
1 ಕೊರಿಂಥದವರಿಗೆ 12 : 11 (IRVKN)
ಆದರೆ ಈ ಎಲ್ಲವುಗಳಲ್ಲಿ ಕಾರ್ಯ ಮಾಡುವ ಆ ಒಬ್ಬ ಆತ್ಮನೇ ವರಗಳನ್ನೆಲ್ಲಾ ತನ್ನ ಚಿತ್ತಾನುಸಾರವಾಗಿ ಒಬ್ಬೊಬ್ಬನಿಗೆ ಹಂಚಿಕೊಡುವವನಾಗಿದ್ದಾನೆ. [PE][PS]
1 ಕೊರಿಂಥದವರಿಗೆ 12 : 12 (IRVKN)
ಹೇಗೆ ದೇಹವು [* 1 ಕೊರಿ 10:17] ಒಂದಾಗಿದ್ದರೂ ಅದಕ್ಕಿರುವ ಅಂಗಗಳು ಅನೇಕವಾಗಿವೆಯೋ, ಹೇಗೆ ದೇಹದ ಅಂಗಗಳೆಲ್ಲವೂ ಅನೇಕವಾಗಿದ್ದು ಒಂದೇ ದೇಹವಾಗಿದೆಯೋ, [† 1 ಕೊರಿ 12:27.] ಹಾಗೆಯೇ ಕ್ರಿಸ್ತನು ಇದ್ದಾನೆ.
1 ಕೊರಿಂಥದವರಿಗೆ 12 : 13 (IRVKN)
[‡ ಗಲಾ. 3:28; ಕೊಲೊ 3:11; ಎಫೆ 2:13-17.] ಯೆಹೂದ್ಯರಾಗಲಿ, ಗ್ರೀಕರಾಗಲಿ, ದಾಸರಾಗಲಿ, ಸ್ವತಂತ್ರರಾಗಲಿ ನಾವೆಲ್ಲರೂ ಒಂದೇ ದೇಹವಾಗುವುದಕ್ಕಾಗಿ ಒಂದೇ ಆತ್ಮನಲ್ಲಿ ದೀಕ್ಷಾಸ್ನಾನಮಾಡಿಸಿಕೊಂಡೆವು. [§ ಯೋಹಾ 7:37-39] ಒಂದೇ ಆತ್ಮವು ನಮ್ಮೆಲ್ಲರಿಗೆ ಪಾನವಾಗಿ ಕೊಡಲ್ಪಟ್ಟಿತು.
1 ಕೊರಿಂಥದವರಿಗೆ 12 : 14 (IRVKN)
ದೇಹವು ಒಂದೇ ಅಂಗವಲ್ಲ. ಅನೇಕ ಅಂಗಗಳುಳ್ಳದ್ದಾಗಿದೆ.
1 ಕೊರಿಂಥದವರಿಗೆ 12 : 15 (IRVKN)
ಕಾಲು “ನಾನು ಕೈಯಲ್ಲದ ಕಾರಣ ದೇಹಕ್ಕೆ ಸೇರಿಲ್ಲವೆಂದು” ಹೇಳಿದರೂ ಅದು ದೇಹಕ್ಕೆ ಸೇರದೆ ಇರುವುದೋ?
1 ಕೊರಿಂಥದವರಿಗೆ 12 : 16 (IRVKN)
ಕಿವಿ “ನಾನು ಕಣ್ಣಲ್ಲದ ಕಾರಣ ನಾನು ದೇಹಕ್ಕೆ ಸೇರಿಲ್ಲವೆಂದು” ಹೇಳಿದರೂ ಅದು ದೇಹಕ್ಕೆ ಸೇರದೆ ಇರುವುದೋ?
1 ಕೊರಿಂಥದವರಿಗೆ 12 : 17 (IRVKN)
ದೇಹವೆಲ್ಲಾ ಕಣ್ಣಾದರೆ ನೀವು ಏನೂ ಕೇಳಲಾಗುತ್ತಿರಲಿಲ್ಲ. ದೇಹವೆಲ್ಲಾ ಕಿವಿಯಾದರೆ ನೀವು ಯಾವ ವಾಸನೆಯನ್ನು ಮೂಸಲಾಗುತ್ತಿರಲಿಲ್ಲ.
1 ಕೊರಿಂಥದವರಿಗೆ 12 : 18 (IRVKN)
ಆದರೆ ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು [* 1 ಕೊರಿ 12:11] ತನಗೆ ಸರಿಯಾಗಿ ತೋಚಿದ ಪ್ರಕಾರ ದೇಹದೊಳಗೆ ಇಟ್ಟಿದ್ದಾನೆ.
1 ಕೊರಿಂಥದವರಿಗೆ 12 : 19 (IRVKN)
ಅವೆಲ್ಲವೂ ಒಂದೇ ಅಂಗವಾಗಿದ್ದರೆ ದೇಹವೆಲ್ಲಿರುವುದು?
1 ಕೊರಿಂಥದವರಿಗೆ 12 : 20 (IRVKN)
ಆದರೆ ಅಂಗಗಳು ಅನೇಕವಾಗಿದೆ ಆದರೆ ದೇಹವು ಒಂದೇ.
1 ಕೊರಿಂಥದವರಿಗೆ 12 : 21 (IRVKN)
ಕಣ್ಣು ಕೈಗೆ, “ನೀನು ನನಗೆ ಅವಶ್ಯವಿಲ್ಲವೆಂದೂ,” ತಲೆಯು “ಪಾದಗಳಿಗೆ ನೀವು ನನಗೆ ಅವಶ್ಯವಿಲ್ಲವೆಂದೂ” ಹೇಳುವುದಕ್ಕಾಗುವುದಿಲ್ಲ.
1 ಕೊರಿಂಥದವರಿಗೆ 12 : 22 (IRVKN)
ದೇಹದಲ್ಲಿ ಅಲ್ಪಮಾನವುಳ್ಳವುಗಳು ಎಂದೆಣಿಸಿ ಕಾಣುವ ಅಂಗಗಳನ್ನು ಅತ್ಯವಶ್ಯವೆಂದು ತಿಳಿಯಬೇಕಲ್ಲವೋ?
1 ಕೊರಿಂಥದವರಿಗೆ 12 : 23 (IRVKN)
ಮತ್ತು ನಾವು ದೇಹದಲ್ಲಿ ಅಲ್ಪಮಾನವುಳ್ಳವುಗಳು ಎಂದೆಣಿಸುವ ಭಾಗಗಳಿಗೆ ಉಡಿಗೆಯಿಂದ ಹೆಚ್ಚಾದ ಮಾನವನ್ನು ಕೊಡುವುದುಂಟಲ್ಲಾ. ಹೀಗೆ ಮಾನವಿಲ್ಲದ ಅಂಗಗಳಿಗೆ ಹೆಚ್ಚಾದ ಮಾನವುಂಟಾಗುತ್ತದೆ.
1 ಕೊರಿಂಥದವರಿಗೆ 12 : 24 (IRVKN)
[24-25] ಮಾನವುಳ್ಳ ಅಂಗಗಳಿಗೆ ಏನೂ ಅವಶ್ಯವಿಲ್ಲ. ದೇಹದಲ್ಲಿ [† 1 ಕೊರಿ 1:10, 11:18] ಭೇದವೇನೂ ಇರದೇ ಅಂಗಗಳು ಒಂದಕ್ಕೊಂದರ ಹಿತವನ್ನು ಚಿಂತಿಸುವ ಹಾಗೆ ದೇವರು ಕೊರತೆಯುಳ್ಳದ್ದಕ್ಕೆ ಹೆಚ್ಚಾದ ಮಾನವನ್ನು ಕೊಟ್ಟು ದೇಹವನ್ನು ಹದವಾಗಿ ಜೋಡಿಸಿದ್ದಾನೆ.
1 ಕೊರಿಂಥದವರಿಗೆ 12 : 25 (IRVKN)
[NIL]
1 ಕೊರಿಂಥದವರಿಗೆ 12 : 26 (IRVKN)
ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ. ಒಂದು ಅಂಗ ಗೌರವಿಸಲ್ಪಟ್ಟರೆ [‡ ರೋಮಾ. 12:15] ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ. [PE][PS]
1 ಕೊರಿಂಥದವರಿಗೆ 12 : 27 (IRVKN)
[§ ಎಫೆ 1:23; 4:12, ಕೊಲೊ 1:24] ನೀವು ಕ್ರಿಸ್ತನ ದೇಹವು ಮತ್ತು [* ರೋಮಾ. 12:5] ಒಬ್ಬೊಬ್ಬರಾಗಿ ಅದಕ್ಕೆ ಅಂಗಗಳಾಗಿದ್ದೀರಿ.
1 ಕೊರಿಂಥದವರಿಗೆ 12 : 28 (IRVKN)
ದೇವರು ತನ್ನ ಸಭೆಯಲ್ಲಿ [† ಎಫೆ 4:11] ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ [‡ ಎಫೆ 2:20, 3:5] ಪ್ರವಾದಿಗಳನ್ನು, ಮೂರನೆಯದಾಗಿ [§ ಅ. ಕೃ. 13:1, ರೋಮಾ. 12:7] ಬೋಧಕರನ್ನು ಇಟ್ಟಿದ್ದಾನೆ. ಆ ಮೇಲೆ [* 1 ಕೊರಿ 12:10] ಮಹತ್ಕಾರ್ಯ ಮಾಡುವ ಶಕ್ತಿಯನ್ನು, [† 1 ಕೊರಿ 12:9] ನಾನಾ ರೋಗಗಳನ್ನು ವಾಸಿಮಾಡುವ ವರವನ್ನೂ, ಪರಸಹಾಯ ಮಾಡುವ ಗುಣವನ್ನೂ, [‡ ರೋಮಾ. 12:8, 1 ತಿಮೊ. 5:17; ಇಬ್ರಿ. 13:7,17,24] ಕಾರ್ಯಗಳನ್ನು ನಿರ್ವಹಿಸುವ ಜ್ಞಾನವನ್ನು ಮತ್ತು ವಿವಿಧ ಭಾಷೆಗಳನ್ನಾಡುವ ವರವನ್ನೂ ಅವರವರಿಗೆ ಬೇರೆ ಬೇರೆಯಾಗಿ ಕೊಟ್ಟಿದ್ದಾನೆ.
1 ಕೊರಿಂಥದವರಿಗೆ 12 : 29 (IRVKN)
ಎಲ್ಲರು ಅಪೊಸ್ತಲರೋ? ಎಲ್ಲರು ಪ್ರವಾದಿಗಳೋ? ಎಲ್ಲರೂ ಬೋಧಕರೋ? ಎಲ್ಲರೂ ಮಹತ್ಕಾರ್ಯಗಳನ್ನು ಮಾಡುವವರೋ?
1 ಕೊರಿಂಥದವರಿಗೆ 12 : 30 (IRVKN)
ರೋಗ ವಾಸಿಮಾಡುವ ವರಗಳು ಎಲ್ಲರಿಗೂ ಉಂಟೋ? ಎಲ್ಲರೂ ಅನ್ಯಭಾಷೆಗಳನ್ನಾಡುವರೋ? ಅನ್ಯಭಾಷೆಗಳ ಅರ್ಥವನ್ನು ಹೇಳುವುದಕ್ಕೆ ಎಲ್ಲರಿಗೂ ಶಕ್ತಿಯುಂಟೋ?
1 ಕೊರಿಂಥದವರಿಗೆ 12 : 31 (IRVKN)
[§ 1 ಕೊರಿ 14:1,39] ಇವುಗಳಲ್ಲಿ ಶ್ರೇಷ್ಠ ವರಗಳನ್ನು ಆಸಕ್ತಿಯಿಂದ ಅಪೇಕ್ಷಿಸಿರಿ. ಇನ್ನೂ ಸರ್ವೋತ್ತಮವಾದ ಮಾರ್ಗವೊಂದನ್ನು ನಿಮಗೆ ತೋರಿಸುತ್ತೇನೆ. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31

BG:

Opacity:

Color:


Size:


Font: