1 ಪೂರ್ವಕಾಲವೃತ್ತಾ 6 : 1 (IRVKN)
{ಲೇವಿಯರ ಕುಟುಂಬಗಳು} [PS] ಲೇವಿಯ ಮಕ್ಕಳು: ಗೇರ್ಷೋನ್, ಕೆಹಾತ್ ಮತ್ತು ಮೆರಾರೀ.
1 ಪೂರ್ವಕಾಲವೃತ್ತಾ 6 : 2 (IRVKN)
ಕೆಹಾತನ ಮಕ್ಕಳು ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.
1 ಪೂರ್ವಕಾಲವೃತ್ತಾ 6 : 3 (IRVKN)
ಅಮ್ರಾಮನ ಮಕ್ಕಳು ಆರೋನ್, ಮೋಶೆ ಮತ್ತು ಮಿರ್ಯಾಮ್. ಆರೋನನ ಮಕ್ಕಳು ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್.
1 ಪೂರ್ವಕಾಲವೃತ್ತಾ 6 : 4 (IRVKN)
ಎಲ್ಲಾಜಾರನು ಫೀನೆಹಾಸನನ್ನು ಪಡೆದನು; ಫೀನೆಹಾಸನು ಅಬೀಷೂವನನ್ನು ಪಡೆದನು;
1 ಪೂರ್ವಕಾಲವೃತ್ತಾ 6 : 5 (IRVKN)
ಅಬೀಷೂವನು ಬುಕ್ಕೀಯನನ್ನು ಪಡೆದನು; ಬುಕ್ಕೀಯನು ಉಜ್ಜೀಯನನ್ನು ಪಡೆದನು.
1 ಪೂರ್ವಕಾಲವೃತ್ತಾ 6 : 6 (IRVKN)
ಉಜ್ಜೀಯನು ಜೆರಹ್ಯನನ್ನು ಪಡೆದನು; ಜೆರಹ್ಯನು ಮೆರಾಯೋತನನ್ನು ಪಡೆದನು.
1 ಪೂರ್ವಕಾಲವೃತ್ತಾ 6 : 7 (IRVKN)
ಮೆರಾಯೋತನು ಅಮರ್ಯನನ್ನು ಪಡೆದನು; ಅಮರ್ಯನು ಅಹೀಟೂಬನನ್ನು ಪಡೆದನು.
1 ಪೂರ್ವಕಾಲವೃತ್ತಾ 6 : 8 (IRVKN)
ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಅಹೀಮಾಚನನ್ನು ಪಡೆದನು.
1 ಪೂರ್ವಕಾಲವೃತ್ತಾ 6 : 9 (IRVKN)
ಅಹೀಮಾಚನು ಅಜರ್ಯನನ್ನು ಪಡೆದನು; ಅಜರ್ಯನು ಯೋಹಾನಾನನನ್ನು ಪಡೆದನು.
1 ಪೂರ್ವಕಾಲವೃತ್ತಾ 6 : 10 (IRVKN)
ಯೋಹಾನಾನನು ಅಜರ್ಯನನ್ನು ಪಡೆದನು. ಸೊಲೊಮೋನನು ಕಟ್ಟಿಸಿದ ಯೆರೂಸಲೇಮಿನ ದೇವಾಲಯದಲ್ಲಿ ಯಾಜಕ ಸೇವೆ ಮಾಡುತ್ತಿದ್ದವನು ಇವನೇ.
1 ಪೂರ್ವಕಾಲವೃತ್ತಾ 6 : 11 (IRVKN)
ಅಜರ್ಯನು ಅಮರ್ಯನನ್ನು ಪಡೆದನು; ಅಮರ್ಯನು ಅಹೀಟೂಬನನ್ನು ಪಡೆದನು.
1 ಪೂರ್ವಕಾಲವೃತ್ತಾ 6 : 12 (IRVKN)
ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಶಲ್ಲೂಮನನ್ನು ಪಡೆದನು.
1 ಪೂರ್ವಕಾಲವೃತ್ತಾ 6 : 13 (IRVKN)
ಶಲ್ಲೂಮನು ಹಿಲ್ಕೀಯನನ್ನು ಪಡೆದನು; ಹಿಲ್ಕೀಯನು ಅಜರ್ಯನನ್ನು ಪಡೆದನು.
1 ಪೂರ್ವಕಾಲವೃತ್ತಾ 6 : 14 (IRVKN)
ಅಜರ್ಯನು ಸೆರಾಯನನ್ನು ಪಡೆದನು; ಸೆರಾಯನು ಯೆಹೋಚಾದಾಕನನ್ನು ಪಡೆದನು.
1 ಪೂರ್ವಕಾಲವೃತ್ತಾ 6 : 15 (IRVKN)
ನೆಬೂಕದ್ನೆಚ್ಚರನು ಯೆಹೋವನ ಪ್ರೇರಣೆಯಿಂದ ಯೆಹೂದ್ಯರನ್ನೂ ಯೆರೂಸಲೇಮಿನವರನ್ನೂ ಸೆರೆಯೊಯ್ದಾಗ ಯೆಹೋಚಾದಾಕನು ಅವರೊಡನೆ ಇದ್ದನು. [PS]
1 ಪೂರ್ವಕಾಲವೃತ್ತಾ 6 : 16 (IRVKN)
{ಲೇವಿಯರ ಇತರ ವಂಶಾವಳಿ} [PS] ಲೇವಿಯ ಮಕ್ಕಳು ಗೇರ್ಷೋಮ್, ಕೆಹಾತ್, ಮೆರಾರೀ.
1 ಪೂರ್ವಕಾಲವೃತ್ತಾ 6 : 17 (IRVKN)
ಗೇರ್ಷೋಮನ ಮಕ್ಕಳು ಲಿಬ್ನೀ ಮತ್ತು ಶಿಮ್ಮೀ.
1 ಪೂರ್ವಕಾಲವೃತ್ತಾ 6 : 18 (IRVKN)
ಕೆಹಾತನ ಮಕ್ಕಳು ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್ ಇವರೇ.
1 ಪೂರ್ವಕಾಲವೃತ್ತಾ 6 : 19 (IRVKN)
ಮೆರಾರಿಯ ಮಕ್ಕಳು ಮಹ್ಲೀ ಮತ್ತು ಮುಷೀ. ಇವರೆಲ್ಲರೂ ಲೇವಿ ಗೋತ್ರಗಳ ಮೂಲಪುರುಷರು.
1 ಪೂರ್ವಕಾಲವೃತ್ತಾ 6 : 20 (IRVKN)
ಗೇರ್ಷೋಮನ ಗೋತ್ರ: ಗೇರ್ಷೋಮನ ಮಗ ಲಿಬ್ನೀ. ಇವನ ಮಗ ಯಹತ್, ಇವನ ಮಗ ಜಿಮ್ಮ. ಜಿಮ್ಮನ ಮಗ ಯೋವಾಹ,
1 ಪೂರ್ವಕಾಲವೃತ್ತಾ 6 : 21 (IRVKN)
ಯೋವಾಹನ ಮಗ ಇದ್ದೋ, ಇವನ ಮಗ ಜೆರಹ. ಜೆರಹನ ಮಗ ಯೆವತ್ರೈ. [PE][PS]
1 ಪೂರ್ವಕಾಲವೃತ್ತಾ 6 : 22 (IRVKN)
ಕೆಹಾತನ ಸಂತಾನದವರು: ಇವನ ಮಗ ಅಮ್ಮೀನಾದಾಬ್, ಇವನ ಮಗ ಕೋರಹ. ಕೋರಹನ ಮಗ ಅಸ್ಸೀರ್,
1 ಪೂರ್ವಕಾಲವೃತ್ತಾ 6 : 23 (IRVKN)
ಇವನ ಮಗ ಎಲ್ಕಾನ. ಎಲ್ಕಾನನ ಮಗ ಎಬ್ಯಾಸಾಫ್. ಇವನ ಮಗ ಅಸ್ಸೀರ್.
1 ಪೂರ್ವಕಾಲವೃತ್ತಾ 6 : 24 (IRVKN)
ಅಸ್ಸೀರನ ಮಗ ತಹತ್, ಇವನ ಮಗ ಊರೀಯೇಲ್. ಊರೀಯೇಲನ ಮಗ ಉಜ್ಜೀಯ, ಇವನ ಮಗ ಸೌಲ್.
1 ಪೂರ್ವಕಾಲವೃತ್ತಾ 6 : 25 (IRVKN)
ಎಲ್ಕಾನನ ಮಕ್ಕಳು; ಅಮಾಸೈ, ಅಹೀಮೋತ್ ಮತ್ತು ಎಲ್ಕಾನ್ ಎಂಬವರು.
1 ಪೂರ್ವಕಾಲವೃತ್ತಾ 6 : 26 (IRVKN)
ಎಲ್ಕಾನನ ಸಂತಾನದವರು. ಇವನ ಮಗನು, ಚೋಫೈ, ಇವನ ಮಗ ನಹತ್.
1 ಪೂರ್ವಕಾಲವೃತ್ತಾ 6 : 27 (IRVKN)
ನಹತನ ಮಗ ಎಲೀಯಾಬ್, ಇವನ ಮಗ ಯೆರೋಹಾಮ್, ಇವನ ಮಗ ಎಲ್ಕಾನ್.
1 ಪೂರ್ವಕಾಲವೃತ್ತಾ 6 : 28 (IRVKN)
ಸಮುವೇಲನ ಮಕ್ಕಳು ಯೋವೇಲ್ [* ಯೋವೇಲ್ ಅಥವಾ ವಷ್ಣಿ.] ಚೊಚ್ಚಲ ಮಗನು ಮತ್ತು ಅಬೀಯನು ಎರಡನೆಯವನು. [PE][PS]
1 ಪೂರ್ವಕಾಲವೃತ್ತಾ 6 : 29 (IRVKN)
ಮೆರಾರೀಯ ಸಂತಾನದವರು. ಇವನ ಮಗ ಮಹ್ಲೀ. ಇವನ ಮಗ ಲಿಬ್ನೀ, ಇವನ ಮಗ ಶಿಮ್ಮೀ. ಶಿಮ್ಮೀಯ ಮಗನು ಉಜ್ಜ.
1 ಪೂರ್ವಕಾಲವೃತ್ತಾ 6 : 30 (IRVKN)
ಇವನ ಮಗನು ಶಿಮ್ಮಾ, ಇವನ ಮಗನು ಹಗ್ಗೀಯ, ಇವನ ಮಗನು ಅಸಾಯ. [PS]
1 ಪೂರ್ವಕಾಲವೃತ್ತಾ 6 : 31 (IRVKN)
{ಗಾಯಕರಾದ ಲೇವಿಯರ ವಂಶಾವಳಿ} [PS] ಮಂಜೂಷವು ವಿಶ್ರಾಂತಿಹೊಂದಿದ ಮೇಲೆ ದಾವೀದನಿಂದ ಯೆಹೋವನ ಆಲಯದಲ್ಲಿ ವಾದ್ಯ ಸೇವೆಗೆ ನೇಮಿಸಲ್ಪಟ್ಟವರ ಪಟ್ಟಿ.
1 ಪೂರ್ವಕಾಲವೃತ್ತಾ 6 : 32 (IRVKN)
ಸೊಲೊಮೋನನು ಯೆರೂಸಲೇಮಿನಲ್ಲಿ ಯೆಹೋವನ ಆಲಯವನ್ನು ಕಟ್ಟುವ ತನಕ ಅವರು ದೇವದರ್ಶನದ ಗುಡಾರವೆಂಬ ಆಲಯದ ಮುಂದೆ ತಮ್ಮ ಕ್ರಮಾನುಸಾರವಾಗಿ ವಾದ್ಯ ಸೇವೆಯನ್ನು ನಡೆಸುತ್ತಿದ್ದರು. [PE][PS]
1 ಪೂರ್ವಕಾಲವೃತ್ತಾ 6 : 33 (IRVKN)
ದೇವಾಲಯದ ಸೇವಕರೂ ಅವರ ವಂಶಾವಳಿಯೂ: ಕೆಹಾತ್ಯನಾದ ಹೇಮಾನನು ಮೊದಲನೆಯವನು. ಪ್ರಥಮ ಸಂಗೀತ ಮಂಡಳಿಯ ಗಾಯಕನಾದ ಇವನು ಯೋವೇಲನ ಮಗ, ಇವನು ಸಮುವೇಲನ ಮಗ.
1 ಪೂರ್ವಕಾಲವೃತ್ತಾ 6 : 34 (IRVKN)
ಸಮುವೇಲನು ಎಲ್ಕಾನನ ಮಗ. ಇವನು ಯೆರೋಹಾಮನ ಮಗ, ಯೆರೋಹಾಮನು ಎಲೀಯೇಲನ ಮಗ, ಇವನು ತೋಹನ ಮಗ.
1 ಪೂರ್ವಕಾಲವೃತ್ತಾ 6 : 35 (IRVKN)
ತೋಹನು ಚೂಫನ ಮಗ, ಇವನು ಎಲ್ಕಾನನ ಮಗ, ಎಲ್ಕಾನನು ಮಹತನ ಮಗ, ಮಹತನನು ಅಮಾಸೈಯ ಮಗ, ಅಮಾಸೈಯನು ಎಲ್ಕಾನನ ಮಗ.
1 ಪೂರ್ವಕಾಲವೃತ್ತಾ 6 : 36 (IRVKN)
ಎಲ್ಕಾನನು ಯೋವೇಲನ ಮಗ, ಇವನು ಅಜರ್ಯನ ಮಗ. ಅಜರ್ಯನು ಚೆಫನ್ಯನ ಮಗ,
1 ಪೂರ್ವಕಾಲವೃತ್ತಾ 6 : 37 (IRVKN)
ಇವನು ತಹತನ ಮಗ. ತಹತನು ಅಸೀರನ ಮಗ, ಅಸ್ಸೀರನು ಎಬ್ಯಾಸಾಫನ ಮಗ, ಇವನು ಕೋರಹನ ಮಗ, ಕೋರಹನು ಇಚ್ಹಾರನ ಮಗ.
1 ಪೂರ್ವಕಾಲವೃತ್ತಾ 6 : 38 (IRVKN)
ಇಚ್ಹಾರನು ಕೆಹಾತನ ಮಗ, ಇವನು ಲೇವಿಯನ ಮಗ, ಲೇವಿಯು ಇಸ್ರಾಯೇಲನ ಮಗ. [PE][PS]
1 ಪೂರ್ವಕಾಲವೃತ್ತಾ 6 : 39 (IRVKN)
ಇವನ ಬಲಗಡೆಯಲ್ಲಿ ನಿಲ್ಲುತ್ತಿದ್ದ ಇವನ ಸಹೋದರನಾದ ಆಸಾಫನು ಎರಡನೆಯವನು. ಇವನು ಬೆರೆಕ್ಯನ ಮಗ, ಇವನು ಶಿಮ್ಮನ ಮಗ.
1 ಪೂರ್ವಕಾಲವೃತ್ತಾ 6 : 40 (IRVKN)
ಶಿಮ್ಮನು ಮೀಕಾಯೇಲನ ಮಗ, ಇವನು ಬಾಸೇಯನ ಮಗ, ಬಾಸೇಯನು ಮಲ್ಕೀಯನ ಮಗ.
1 ಪೂರ್ವಕಾಲವೃತ್ತಾ 6 : 41 (IRVKN)
ಮಲ್ಕೀಯನು ಎತ್ನಿಯ ಮಗ, ಇವನು ಜೆರಹನ ಮಗ, ಜೆರಹನು ಅದಾಯನ ಮಗನು.
1 ಪೂರ್ವಕಾಲವೃತ್ತಾ 6 : 42 (IRVKN)
ಅದಾಯನು ಏತಾನನ ಮಗ, ಇವನು ಜಿಮ್ಮನ ಮಗ, ಜಿಮ್ಮನು ಶಿಮ್ಮೀಯ ಮಗ.
1 ಪೂರ್ವಕಾಲವೃತ್ತಾ 6 : 43 (IRVKN)
ಶಿಮ್ಮೀಯು ಯಹತನ ಮಗ, ಇವನು ಗೇರ್ಷೋಮನ ಮಗ, ಗೇರ್ಷೋಮನು ಲೇವಿಯ ಮಗ. [PE][PS]
1 ಪೂರ್ವಕಾಲವೃತ್ತಾ 6 : 44 (IRVKN)
ಇವನ ಎಡಗಡೆಯಲ್ಲಿ ನಿಲ್ಲುತ್ತಿದ್ದ ಇವನ ಸಹೋದರನೂ, ಮೆರಾರಿಯನೂ ಆದ ಏತಾನನು ಮೂರನೆಯವನು. ಇವನು ಕೀಷೀಯ ಮಗ, ಇವನು ಅಬ್ದೀಯನ ಮಗ, ಇವನು ಮಲ್ಲೂಕನ ಮಗ.
1 ಪೂರ್ವಕಾಲವೃತ್ತಾ 6 : 45 (IRVKN)
ಮಲ್ಲೂಕನು ಹಷಬ್ಯನ ಮಗ, ಇವನು ಅಮಚ್ಯನ ಮಗ, ಇವನು ಹಿಲ್ಕೀಯನ ಮಗ.
1 ಪೂರ್ವಕಾಲವೃತ್ತಾ 6 : 46 (IRVKN)
ಹಿಲ್ಕೀಯನು ಅಮ್ಚೀಯನ ಮಗ, ಇವನು ಬಾನೀಯನ ಮಗ, ಬಾನೀಯು ಶೆಮೆರನ ಮಗ.
1 ಪೂರ್ವಕಾಲವೃತ್ತಾ 6 : 47 (IRVKN)
ಶೆಮೆರನು ಮಹ್ಲೀಯ ಮಗ, ಇವನು ಮೂಷೀಯ ಮಗ. ಮೂಷೀಯು ಮೆರಾರಿಯ ಮಗ, ಮೆರಾರಿಯು ಲೇವಿಯ ಮಗನು. [PS]
1 ಪೂರ್ವಕಾಲವೃತ್ತಾ 6 : 48 (IRVKN)
{ಮಹಾಯಾಜಕನಾದ ಆರೋನನ ವಂಶಾವಳಿ} [PS] ಅವರ ಸಹೋದರರಾದ ಇತರ ಲೇವಿಯರು ದೇವಾಲಯದ ಗುಡಾರದ ಸೇವೆಗಾಗಿ ನೇಮಿಸಲ್ಪಟ್ಟರು.
1 ಪೂರ್ವಕಾಲವೃತ್ತಾ 6 : 49 (IRVKN)
ದೇವರ ಸೇವಕನಾದ ಮೋಶೆಯ ಎಲ್ಲಾ ಆಜ್ಞೆಗಳಿಗೆ ಅನುಸಾರವಾಗಿ ಆರೋನನೂ, ಅವನ ಮಕ್ಕಳೂ ಇಸ್ರಾಯೇಲರಿಗೋಸ್ಕರ ಯಜ್ಞವೇದಿ, ಧೂಪವೇದಿ ಇವುಗಳ ಮೇಲೆ ಹೋಮ ಮಾಡುತ್ತಾ, ಧೂಪ ಹಾಕುತ್ತಾ, ದೇವಾಲಯದ ಅತಿಪರಿಶುದ್ಧ ಸ್ಥಳದ ಎಲ್ಲಾ ಸೇವೆಯನ್ನು ಮಾಡುತ್ತಾ, ದೋಷಪರಿಹಾರ ಮಾಡುತ್ತಾ ಇದ್ದರು.
1 ಪೂರ್ವಕಾಲವೃತ್ತಾ 6 : 50 (IRVKN)
ಆರೋನನ ಸಂತಾನದವರು: ಆರೋನನ ಮಗ ಎಲ್ಲಾಜಾರ್, ಇವನ ಮಗ ಫೀನೆಹಾಸ್, ಫೀನೆಹಾಸನ ಮಗ ಅಬೀಷೂವ.
1 ಪೂರ್ವಕಾಲವೃತ್ತಾ 6 : 51 (IRVKN)
ಅಬೀಷೂವನ ಮಗ ಬುಕ್ಕೀ, ಬುಕ್ಕೀಯ ಮಗ ಉಜ್ಜೀ, ಇವನ ಮಗ ಜೆರಹ್ಯಾಹ, ಇವನ ಮಗ ಮೆರಾಯೋತ್.
1 ಪೂರ್ವಕಾಲವೃತ್ತಾ 6 : 52 (IRVKN)
ಮೆರಾಯೋತನ ಮಗ ಅಮರ್ಯ, ಅಮರ್ಯನ ಮಗ ಅಹೀಟೂಬ್.
1 ಪೂರ್ವಕಾಲವೃತ್ತಾ 6 : 53 (IRVKN)
ಅಹೀಟೂಬನ ಮಗ ಚಾದೋಕ್, ಇವನ ಮಗ ಅಹಿಮಾಚ್. [PS]
1 ಪೂರ್ವಕಾಲವೃತ್ತಾ 6 : 54 (IRVKN)
{ಲೇವಿಯರಿಗೆ ಸ್ವತ್ತಾಗಿ ದೊರಕಿದ ಪಟ್ಟಣಗಳು} [PS] ಲೇವಿಯರಿಗೆ ಸ್ವತ್ತಾಗಿ ದೊರಕಿದ ಪಟ್ಟಣಗಳು: ಆರೋನನ ಸಂತಾನದವರಾದ ಕೇಹಾತನ ಗೋತ್ರದವರಿಗೆ ಚೀಟು ಮೊದಲು ಬಿದ್ದಿತು.
1 ಪೂರ್ವಕಾಲವೃತ್ತಾ 6 : 55 (IRVKN)
ಆದುದರಿಂದ ಇಸ್ರಾಯೇಲರು ಅವರಿಗೆ ಯೆಹೂದ ಸೀಮೆಯ ಹೆಬ್ರೋನ್ ಪಟ್ಟಣವನ್ನೂ ಮತ್ತು ಅದರ ಸುತ್ತಲಿನ ಗೋಮಾಳಗಳನ್ನು ಕೊಟ್ಟರು.
1 ಪೂರ್ವಕಾಲವೃತ್ತಾ 6 : 56 (IRVKN)
ಆದರೆ ಅದರ ಹೊಲಗಳನ್ನೂ ಅದಕ್ಕೆ ಸೇರಿದ ಗ್ರಾಮಗಳನ್ನೂ, ಯೆಫುನ್ನೆಯನ ಮಗನಾದ ಕಾಲೇಬನಿಗೆ ಕೊಟ್ಟರು.
1 ಪೂರ್ವಕಾಲವೃತ್ತಾ 6 : 57 (IRVKN)
ಆರೋನನ ವಂಶದವರಿಗೆ ಹೆಬ್ರೋನ್ ಎಂಬ ಆಶ್ರಯ ನಗರವನ್ನು, ಲಿಬ್ನ ಮತ್ತು ಅದರ ಗೋಮಾಳಗಳು, ಯತ್ತೀರ್, ಎಷ್ಟೆಮೋವ, ಅವುಗಳ ಉಪನಗರಗಳೂ,
1 ಪೂರ್ವಕಾಲವೃತ್ತಾ 6 : 58 (IRVKN)
ಹೀಲೇನ್, ದೆಬೀರ್
1 ಪೂರ್ವಕಾಲವೃತ್ತಾ 6 : 59 (IRVKN)
ಆಷಾನ್, ಬೇತ್‌ಷೆಮೆಷ್‌ ಎಂಬ ಗೋಮಾಳ ಸಹಿತವಾದ ಪಟ್ಟಣಗಳನ್ನೂ,
1 ಪೂರ್ವಕಾಲವೃತ್ತಾ 6 : 60 (IRVKN)
ಬೆನ್ಯಾಮೀನನ ಕುಲದಿಂದ ಗೆಬ, ಅಲೆಮೆತ್, ಅನಾತೋತ್ ಎಂಬ ಗೋಮಾಳಸಹಿತವಾದ ಪಟ್ಟಣಗಳನ್ನೂ ಕೊಟ್ಟರು. ಅವರ ಕುಟುಂಬಗಳಿಗೆ ದೊರಕಿದ ಒಟ್ಟು ಪಟ್ಟಣಗಳು ಹದಿಮೂರು. [PE][PS]
1 ಪೂರ್ವಕಾಲವೃತ್ತಾ 6 : 61 (IRVKN)
ಕೆಹಾತ್ಯರ ಉಳಿದ ಕುಟುಂಬಗಳಿಗೆ ಚೀಟು ಹಾಕುವುದರ ಮೂಲಕ ಮನಸ್ಸೆ ಕುಲದ ಸ್ವತ್ತಿನಿಂದ ಹತ್ತು ಪಟ್ಟಣಗಳು ದೊರಕಿದವು.
1 ಪೂರ್ವಕಾಲವೃತ್ತಾ 6 : 62 (IRVKN)
ಗೇರ್ಷೋಮ್ಯರ ಕುಟುಂಬಗಳಿಗೆ ಇಸ್ಸಾಕಾರ್, ಆಶೇರ್, ನಫ್ತಾಲಿ, ಬಾಷಾನಿನಲ್ಲಿರುವ ಮನಸ್ಸೆ ಕುಲಗಳ ಸ್ವತ್ತಿನಿಂದ ಹದಿಮೂರು ಪಟ್ಟಣಗಳು ದೊರಕಿದವು.
1 ಪೂರ್ವಕಾಲವೃತ್ತಾ 6 : 63 (IRVKN)
ಮೆರಾರೀ ಕುಟುಂಬಗಳಿಗೆ ರೂಬೇನ್, ಗಾದ್, ಜೆಬುಲೂನ್ ಕುಲಗಳ ಸ್ವತ್ತಿನಿಂದ ಹನ್ನೆರಡು ಪಟ್ಟಣಗಳು ಚೀಟು ಹಾಕುವುದರಿಂದ ದೊರಕಿದವು.
1 ಪೂರ್ವಕಾಲವೃತ್ತಾ 6 : 64 (IRVKN)
ಇಸ್ರಾಯೇಲರು ಲೇವಿಯರಿಗೆ ಆ ಪಟ್ಟಣಗಳನ್ನಲ್ಲದೆ ಅವುಗಳಿಗೆ ಸೇರಿದ ಗೋಮಾಳುಗಳನ್ನೂ ಕೊಟ್ಟರು.
1 ಪೂರ್ವಕಾಲವೃತ್ತಾ 6 : 65 (IRVKN)
ಅವರು ಚೀಟು ಹಾಕಿ ಯೆಹೂದ, ಸಿಮೆಯೋನ್ ಮತ್ತು ಬೆನ್ಯಾಮೀನನ ಕುಲಗಳಿಂದ ಮೇಲೆ ಹೇಳಿದ ಪಟ್ಟಣಗಳನ್ನೂ ಕೊಟ್ಟರು. [PE][PS]
1 ಪೂರ್ವಕಾಲವೃತ್ತಾ 6 : 66 (IRVKN)
ಕೆಹಾತ್ಯರ ಕುಟುಂಬಗಳಿಗೆ ಎಫ್ರಾಯೀಮ್ಯರ ಸ್ವತ್ತಿನಿಂದ
1 ಪೂರ್ವಕಾಲವೃತ್ತಾ 6 : 67 (IRVKN)
ಎಫ್ರಾಯೀಮ್ ಬೆಟ್ಟದಲ್ಲಿರುವ ಶೆಕೆಮ್ ಎಂಬ ಆಶ್ರಯ ನಗರ, ಗೆಜೆರ್ ಮತ್ತು ಅದರ ಉಪನಗರಗಳನ್ನೂ,
1 ಪೂರ್ವಕಾಲವೃತ್ತಾ 6 : 68 (IRVKN)
ಯೊಕ್ಮೆಯಾಮ್ ಮತ್ತು ಅದರ ಗೋಮಾಳಗಳು, ಬೇತ್ ಹೋರೋನ್ ಮತ್ತು ಅದರ ಉಪನಗರಗಳು,
1 ಪೂರ್ವಕಾಲವೃತ್ತಾ 6 : 69 (IRVKN)
ಅಯ್ಯಾಲೋನ್, ಗತ್ರಿಮ್ಮೋನ್, ಎಂಬ ಗೋಮಾಳ ಸಹಿತವಾದ ಪಟ್ಟಣಗಳು ಚೀಟಿಹಾಕುವುದರ ಮೂಲಕ ದೊರಕಿದವು.
1 ಪೂರ್ವಕಾಲವೃತ್ತಾ 6 : 70 (IRVKN)
ಮನಸ್ಸೆ ಕುಲದ ಸ್ವತ್ತಿನ ಆನೇರ್, ಬಿಳ್ಳಾಮ್ ಎಂಬ ಹುಲ್ಲುಗಾವಲು ಸಹಿತವಾದ ಪಟ್ಟಣಗಳು ಕೆಹಾತ್ಯರ ಉಳಿದ ಕುಟುಂಬಗಳ ಪಾಲಿಗೆ ಬಂದವು. [PE][PS]
1 ಪೂರ್ವಕಾಲವೃತ್ತಾ 6 : 71 (IRVKN)
ಗೇರ್ಷೊಮ್ಯರಿಗೆ ಮನಸ್ಸೆ ಕುಲದ ಸ್ವತ್ತಿನಿಂದ ಬಾಷಾನಿನ ಗೋಲಾನ್, ಅಷ್ಟಾರೋಟ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.
1 ಪೂರ್ವಕಾಲವೃತ್ತಾ 6 : 72 (IRVKN)
ಇಸ್ಸಾಕಾರ್ಯರ ಸ್ವತ್ತಿನಿಂದ ಕೆದೆಷ್, ದಾಬೆರತ್,
1 ಪೂರ್ವಕಾಲವೃತ್ತಾ 6 : 73 (IRVKN)
ರಾಮೋತ್, ಅನೇಮ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.
1 ಪೂರ್ವಕಾಲವೃತ್ತಾ 6 : 74 (IRVKN)
ಅಶೇರನ ಕುಲದ ಸ್ವತ್ತಿನಿಂದ ಮಾಷಾಲ್, ಅಬ್ದೋನ್.
1 ಪೂರ್ವಕಾಲವೃತ್ತಾ 6 : 75 (IRVKN)
ಹೂಕೋಕ್, ರೆಹೋಬ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.
1 ಪೂರ್ವಕಾಲವೃತ್ತಾ 6 : 76 (IRVKN)
ನಫ್ತಾಲಿ ಕುಲದ ಸ್ವತ್ತಿನಿಂದ ಗಲಿಲಾಯದ ಕೆದೆಷ್, ಹಮ್ಮೋನ್, ಕಿರ್ಯಾತಯಿಮ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.
1 ಪೂರ್ವಕಾಲವೃತ್ತಾ 6 : 77 (IRVKN)
ಮಿಕ್ಕ ಲೇವಿಯರಾದ ಮೆರಾರಿಯರಿಗೆ ಜೆಬುಲೋನ್ ಕುಲದ ಸ್ವತ್ತಿನಿಂದ ರಿಮ್ಮೋನೋ, ತಾಬೋರ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳೂ,
1 ಪೂರ್ವಕಾಲವೃತ್ತಾ 6 : 78 (IRVKN)
ಯೆರಿಕೋವಿನ ಬಳಿಯಲ್ಲಿ ಹರಿಯುವ ಯೊರ್ದನ್ ನದಿಯ ಪೂರ್ವದಿಕ್ಕಿನಲ್ಲಿರುವ ಅರಣ್ಯದ ಬೆಚೆರ್ ಮತ್ತು ಅದರ ಗೋಮಾಳಗಳು, ಯಹಚ್ ಮತ್ತು ಅದರ ಗೋಮಾಳಗಳು ರೂಬೇನ್ ಕುಲದಿಂದ ದೊರಕಿದವು.
1 ಪೂರ್ವಕಾಲವೃತ್ತಾ 6 : 79 (IRVKN)
ಕೆದೇಮೋತ್ ಮತ್ತು ಅದರ ಗೋಮಾಳಗಳು, ಮೇಫಾತ್ ಮತ್ತು ಅದರ ಗೋಮಾಳಗಳು ರೂಬೇನ್ ಕುಲದಿಂದ ದೊರಕಿದವು. [PE][PS]
1 ಪೂರ್ವಕಾಲವೃತ್ತಾ 6 : 80 (IRVKN)
ಗಾದ್ ಕುಲದ ಸ್ವತ್ತಿನಿಂದ ಗಿಲ್ಯಾದಿನ ರಾಮೋತ್ ಮತ್ತು ಅದರ ಗೋಮಾಳಗಳು ಮಹನಯಿಮ್,
1 ಪೂರ್ವಕಾಲವೃತ್ತಾ 6 : 81 (IRVKN)
ಹೆಷ್ಬೋನ್ ಮತ್ತು ಅದರ ಗೋಮಾಳಗಳು, ಯಗ್ಜೇರ್ ಮತ್ತು ಅದರ ಗೋಮಾಳಗಳು ಸಹಿತವಾದ ಪಟ್ಟಣಗಳು ದೊರಕಿದವು. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70 71 72 73 74 75 76 77 78 79 80 81

BG:

Opacity:

Color:


Size:


Font: