1 ಪೂರ್ವಕಾಲವೃತ್ತಾ 25 : 1 (IRVKN)
ದೇವಾಲಯದ ಸಂಗೀತ ಮಂಡಳಿ ಆಮೇಲೆ ದಾವೀದನು ಮತ್ತು ಗುಡಾರದ ಸೇವೆ ಸಲ್ಲಿಸುತ್ತಿದ್ದ ಪ್ರಧಾನರು ಆಸಾಫ್ಯ, ಹೇಮಾನ್ಯ ಮತ್ತು ಯೆದುತೂನ್ಯರ ಮಕ್ಕಳನ್ನು ಸೇವೆ ಮಾಡುವುದಕ್ಕೋಸ್ಕರ ಆಯ್ಕೆಮಾಡಿದರು. ಇವರು ಕಿನ್ನರಿ, ಸ್ವರಮಂಡಲ, ತಾಳ, ಇವುಗಳನ್ನು ನುಡಿಸುತ್ತಾ, ಪ್ರವಾದಿಸುತ್ತ, ಗಾಯನಮಾಡುತ್ತಿದ್ದರು. ಆ ಸೇವೆಯನ್ನು ಮಾಡತಕ್ಕ ಪುರುಷರ ಪಟ್ಟಿ,
1 ಪೂರ್ವಕಾಲವೃತ್ತಾ 25 : 2 (IRVKN)
ಆಸಾಫ್ಯರಲ್ಲಿ ಜಕ್ಕೂರ್, ಯೋಸೇಫ್, ನೆತನ್ಯ, ಅಶರೇಲ ಎಂಬವರು. ಇವರು ಅರಮನೆಯ ಗಾಯಕನಾದ ಆಸಾಫನ ಸಹಾಯಕರು.
1 ಪೂರ್ವಕಾಲವೃತ್ತಾ 25 : 3 (IRVKN)
ಯೆದುತೂನ್ಯರಲ್ಲಿ ಗೆದಲ್ಯ, ಚೆರೀ, ಯೆಶಾಯ, ಶಿಮ್ಮೀ, ಹಷಬ್ಯ, ಮತ್ತಿತ್ಯ ಇವರೇ. ಕಿನ್ನರಿಯನ್ನು ನುಡಿಸುತ್ತಾ ಪರವಶರಾಗಿ ಯೆಹೋವನ ಕೀರ್ತನೆ ಮಾಡುವ ತಮ್ಮ ತಂದೆಯಾದ ಯೆದುತೂನ್ಯನಿಗೆ ಈ ಆರು ಜನರೂ ಸಹಾಯಕರಾಗಿದ್ದರು.
1 ಪೂರ್ವಕಾಲವೃತ್ತಾ 25 : 4 (IRVKN)
ಹೇಮಾನ್ಯರಲ್ಲಿ ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೆಬೂವೇಲ್, ಯೆರೀಮೋತ್, ಹನನ್ಯ, ಹನಾನೀ, ಎಲೀಯಾತ, ಗಿದ್ದಲ್ತಿ, ರೋಮಮ್ತಿಯೆಜೆರ್, ಯೊಷ್ಬೆಕಾಷ, ಮಲ್ಲೋತಿ, ಹೋತೀರ್ ಮತ್ತು ಮಹಜೀಯೋತ್.
1 ಪೂರ್ವಕಾಲವೃತ್ತಾ 25 : 5 (IRVKN)
ಇವರೆಲ್ಲರು ಅರಸನ ದರ್ಶಿಯಾದ ಹೇಮಾನನ ಮಕ್ಕಳು. ದೇವರು ಹೇಮಾನನಿಗೆ, “ನೀನು ಅಭಿವೃದ್ಧಿ ಹೊಂದುವಹಾಗೆ ಮಾಡುವೆನು” ಎಂಬುದಾಗಿ ವಾಗ್ದಾನ ಮಾಡಿದ್ದನು. ಅದರಂತೆಯೇ ಆತನು ಅವನಿಗೆ ಹದಿನಾಲ್ಕು ಗಂಡುಮಕ್ಕಳನ್ನೂ, ಮೂರು ಹೆಣ್ಣುಮಕ್ಕಳನ್ನೂ ದಯಪಾಲಿಸಿದನು.
1 ಪೂರ್ವಕಾಲವೃತ್ತಾ 25 : 6 (IRVKN)
ದೇವರಾದ ಯೆಹೋವನ ಆಲಯದಲ್ಲಿ ಆರಾಧನೆ ನಡೆಯುತ್ತಿರುವಾಗ ಇವರೆಲ್ಲರೂ ತಮ್ಮ ತಂದೆಯ ಕೈಕೆಳಗಿದ್ದುಕೊಂಡು ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಗಾಯನ ಮಾಡುತ್ತಿದ್ದರು. ಆಸಾಫ ಯೆದುತೂನ್ ಹೇಮಾನರು ಅರಸನ ಸೇವೆಯಲ್ಲಿದ್ದರು.
1 ಪೂರ್ವಕಾಲವೃತ್ತಾ 25 : 7 (IRVKN)
ಇವರು ಯೆಹೋವನ ಕೀರ್ತನೆಗಳನ್ನು ಕಲಿತ ಇವರ ಸಹೋದರರು ಒಟ್ಟು ಇನ್ನೂರ ಎಂಭತ್ತೆಂಟು ಜನರು. ಇವರೆಲ್ಲರೂ ಗಾಯಕ ಪ್ರವೀಣರಾಗಿದ್ದರು.
1 ಪೂರ್ವಕಾಲವೃತ್ತಾ 25 : 8 (IRVKN)
ಇವರಲ್ಲಿ ಹಿರಿಯರು, ಕಿರಿಯರು, ಗುರುಶಿಷ್ಯರೂ ಕೂಡಿಕೊಂಡು ಚೀಟಿನಿಂದ ತಮ್ಮ ಸೇವಾ ಕ್ರಮವನ್ನು ಗೊತ್ತುಮಾಡಿಕೊಂಡರು.
1 ಪೂರ್ವಕಾಲವೃತ್ತಾ 25 : 9 (IRVKN)
ಚೀಟಿನ ಪ್ರಕಾರವಾಗಿ, ಮೊದಲನೆಯದಾಗಿ ಆಸಾಫ್ಯನಾದ ಯೋಸೇಫನು. ಎರಡನೆಯವನು ಗೆದಲ್ಯ. ಇವನೂ ಇವನ ಸಹೋದರರೂ, ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 10 (IRVKN)
ಮೂರನೆಯವನು ಜಕ್ಕೂರ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 11 (IRVKN)
ನಾಲ್ಕನೆಯವನು ಇಚ್ರೀ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 12 (IRVKN)
ಐದನೆಯವನು ನೆತನ್ಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 13 (IRVKN)
ಆರನೆಯವನು ಬುಕ್ಕೀಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 14 (IRVKN)
ಏಳನೇಯವನು ಯೆಸರೇಲ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 15 (IRVKN)
ಎಂಟನೆಯವನು ಯೆಶಾಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 16 (IRVKN)
ಒಂಬತ್ತನೆಯದು ಮತ್ತನ್ಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 17 (IRVKN)
ಹತ್ತನೆಯವನು ಶಿಮ್ಮೀ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 18 (IRVKN)
ಹನ್ನೊಂದನೆಯವನು ಅಜರೇಲ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 19 (IRVKN)
ಹನ್ನೆರಡನೆಯವನು ಹಷಬ್ಯ. ಇವನೂ ಇವನ ಸಹೋದರರೂ ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 20 (IRVKN)
ಹದಿಮೂರನೆಯದು ಶೂಬಾಯೇಲ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 21 (IRVKN)
ಹದಿನಾಲ್ಕನೆಯವನು ಮತ್ತಿತ್ಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳೂ ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 22 (IRVKN)
ಹದಿನೈದನೆಯವನು ಯೆರೆಮೋತ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 23 (IRVKN)
ಹದಿನಾರನೆಯವನು ಹನನ್ಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 24 (IRVKN)
ಹದಿನೇಳನೆಯವನು ಯೊಷ್ಬೆಕಾಷ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 25 (IRVKN)
ಹದಿನೆಂಟನೆಯವನು ಹನಾನೀ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 26 (IRVKN)
ಹತ್ತೊಂಬತ್ತನೆಯವನು ಮಲ್ಲೋತಿ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 27 (IRVKN)
ಇಪ್ಪತ್ತನೆಯವನು ಎಲೀಯಾತ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 28 (IRVKN)
ಇಪ್ಪತ್ತೊಂದನೆಯವನು ಹೋತೀರ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 29 (IRVKN)
ಇಪ್ಪತ್ತೆರಡನೆಯವನು ಗಿದ್ದಲ್ತಿ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 30 (IRVKN)
ಇಪ್ಪತ್ತಮೂರನೆಯವನು ಮಹಜೀಯೋತ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
1 ಪೂರ್ವಕಾಲವೃತ್ತಾ 25 : 31 (IRVKN)
ಇಪ್ಪತ್ತನಾಲ್ಕನೆಯವನು ರೋಮಮ್ತಿಯೆಜೆರ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
❮
❯