1 ಪೂರ್ವಕಾಲವೃತ್ತಾ 23 : 1 (IRVKN)
ಲೇವಿಯರ ಕರ್ತವ್ಯಗಳು ದಾವೀದನು ವಯೋವೃದ್ಧನಾಗಿ ತನ್ನ ಜೀವಮಾನದ ಕೊನೆಯ ದಿನಗಳಲ್ಲಿ ತನ್ನ ಮಗನಾದ ಸೊಲೊಮೋನನನ್ನು ಇಸ್ರಾಯೇಲರ ಅರಸನನ್ನಾಗಿ ನೇಮಿಸಿದನು.
1 ಪೂರ್ವಕಾಲವೃತ್ತಾ 23 : 2 (IRVKN)
ಅವನು ಇಸ್ರಾಯೇಲರ ಎಲ್ಲಾ ಅಧಿಪತಿಗಳನ್ನೂ, ಯಾಜಕರನ್ನೂ ಮತ್ತು ಲೇವಿಯರನ್ನೂ ತನ್ನ ಬಳಿಯಲ್ಲಿ ಒಟ್ಟುಗೂಡಿಸಿದನು.
1 ಪೂರ್ವಕಾಲವೃತ್ತಾ 23 : 3 (IRVKN)
ಮೂವತ್ತು ವರ್ಷಕ್ಕಿಂತ ಹೆಚ್ಚಾದ ವಯಸ್ಸುಳ್ಳ ಲೇವಿಯರನ್ನು ಲೆಕ್ಕಿಸಿದಾಗ ಗಂಡಸರ ಸಂಖ್ಯೆಯು ಮೂವತ್ತೆಂಟು ಸಾವಿರವಾಗಿತ್ತು.
1 ಪೂರ್ವಕಾಲವೃತ್ತಾ 23 : 4 (IRVKN)
ದಾವೀದನು ಯೆಹೋವನ ಆಲಯವನ್ನು ಕಟ್ಟುವವರ ಮೇಲ್ವಿಚಾರಣೆಗಾಗಿ ಇಪ್ಪತ್ತ ನಾಲ್ಕು ಸಾವಿರ ಜನರನ್ನು ನ್ಯಾಯಾಧಿಪತಿಗಳನ್ನಾಗಿ ಮತ್ತು ಅಧಿಕಾರಿಗಳನ್ನಾಗಿ ಆರು ಸಾವಿರ ಜನರನ್ನು,
1 ಪೂರ್ವಕಾಲವೃತ್ತಾ 23 : 5 (IRVKN)
ದ್ವಾರಪಾಲಕರನ್ನಾಗಿ, ನಾಲ್ಕು ಸಾವಿರ ಜನರನ್ನು ಮತ್ತು ತಾನು ಸಿದ್ಧಪಡಿಸಿದ ವಾದ್ಯಗಳಿಂದ ಯೆಹೋವನನ್ನು ಭಜಿಸುವುದಕ್ಕಾಗಿ ನಾಲ್ಕು ಸಾವಿರ ಜನರನ್ನೂ ನೇಮಿಸಿದನು.
1 ಪೂರ್ವಕಾಲವೃತ್ತಾ 23 : 6 (IRVKN)
1 ಪೂರ್ವಕಾಲವೃತ್ತಾ 23 : 7 (IRVKN)
ಇದಲ್ಲದೆ ದಾವೀದನು ಲೇವಿಯ ಸಂತಾನದವರಾದ ಗೇರ್ಷೋನ್ಯರು, ಕೆಹಾತ್ಯರು ಮತ್ತು ಮೆರಾರೀಯರು ಇವರನ್ನು ವಿವಿಧ ವರ್ಗಗಳನ್ನಾಗಿ ವಿಭಾಗಿಸಿದನು. ಗೇರ್ಷೋನ್ಯರು ಗೇರ್ಷೋನ್ಯರ ಮೂಲಪುರುಷರು ಲದ್ದಾನ್ ಮತ್ತು ಶಿಮ್ಮೀ ಎಂಬುವರು.
1 ಪೂರ್ವಕಾಲವೃತ್ತಾ 23 : 8 (IRVKN)
ಲದ್ದಾನನಿಗೆ ಪ್ರಧಾನನಾದ ಯೆಹೀಯೇಲ್, ಜೇತಾಮ್ ಮತ್ತು ಯೋವೇಲ್ ಎಂಬ ಮೂರು ಮಕ್ಕಳಿದ್ದರು.
1 ಪೂರ್ವಕಾಲವೃತ್ತಾ 23 : 9 (IRVKN)
ಶಿಮ್ಮೀಗೆ ಶೆಲೋಮೋತ್, ಹಜೀಯೇಲ್, ಹಾರಾನ್ ಎಂಬ ಮೂರು ಮಕ್ಕಳಿದ್ದರು. ಇವರು ಲದ್ದಾನ್ಯರ ಗೋತ್ರ ಪ್ರಧಾನರು.
1 ಪೂರ್ವಕಾಲವೃತ್ತಾ 23 : 10 (IRVKN)
ಶಿಮ್ಮೀಗೆ ಯಹತ್, ಜೀನ, ಯೆಯೂಷ್ ಮತ್ತು ಬೆರೀಯ ಎಂಬ ನಾಲ್ಕು ಮಕ್ಕಳಿದ್ದರು.
1 ಪೂರ್ವಕಾಲವೃತ್ತಾ 23 : 11 (IRVKN)
ಯಹತನು ಪ್ರಧಾನನು, ಜೀಜನು ಎರಡನೆಯವನಾಗಿದ್ದನು, ಯೆಯೂಷ್, ಬೆರೀಯರಿಗೆ ಹೆಚ್ಚು ಮಕ್ಕಳಿರಲಿಲ್ಲವಾದುದರಿಂದ ಅವರಿಬ್ಬರೂ ಒಂದೇ ಕುಟುಂಬವಾಗಿ ವರ್ಗವಾಗಿಯೂ ಎಣಿಸಲ್ಪಟ್ಟಿದ್ದರು.
1 ಪೂರ್ವಕಾಲವೃತ್ತಾ 23 : 12 (IRVKN)
ಕೆಹಾತ್ಯರು ಕೆಹಾತನಿಗೆ ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್ ಎಂಬ ನಾಲ್ಕು ಮಕ್ಕಳಿದ್ದರು.
1 ಪೂರ್ವಕಾಲವೃತ್ತಾ 23 : 13 (IRVKN)
ಅಮ್ರಾಮನ ಮಕ್ಕಳು ಆರೋನ್ ಮತ್ತು ಮೋಶೆ ಎಂಬುವವರು. ಆರೋನನು ಅವನ ಸಂತಾನದವರು ಮಹಾ ಪರಿಶುದ್ಧವಾದ ವಸ್ತುಗಳನ್ನು ಪ್ರತಿಷ್ಠಿಸುವುದಕ್ಕೆ ಪ್ರತ್ಯೇಕಿಸಲ್ಪಟ್ಟರು. ಇವರು ಯೆಹೋವನ ಸನ್ನಿಧಿಯಲ್ಲಿ ಸದಾಕಾಲ ಧೂಪಹಾಕುವವರೂ, ಆತನ ಸೇವೆ ಮಾಡುವವರೂ, ಆತನ ಹೆಸರಿನಿಂದ ಜನರನ್ನು ಆಶೀರ್ವದಿಸುವವರೂ ಆಗಿದ್ದರು.
1 ಪೂರ್ವಕಾಲವೃತ್ತಾ 23 : 14 (IRVKN)
ದೇವರ ಮನುಷ್ಯನಾದ ಮೋಶೆಯ ಸಂತಾನದವರು ಸಾಧಾರಣ ಲೇವಿಯರೊಳಗೆ ಎಣಿಸಲ್ಪಟ್ಟರು.
1 ಪೂರ್ವಕಾಲವೃತ್ತಾ 23 : 15 (IRVKN)
ಮೋಶೆಯ ಮಕ್ಕಳು ಗೇರ್ಷೋಮ್ ಮತ್ತು ಎಲೀಯೆಜೆರ್ ಎಂಬುವವರು.
1 ಪೂರ್ವಕಾಲವೃತ್ತಾ 23 : 16 (IRVKN)
ಪ್ರಧಾನನಾದ ಶೆಬೂವೇಲನು ಗೇರ್ಷೋಮನ ಮಗನು.
1 ಪೂರ್ವಕಾಲವೃತ್ತಾ 23 : 17 (IRVKN)
ಪ್ರಧಾನನಾದ ರೆಹಬ್ಯ ಎಲೀಯೆಜೆರನ ಮಗನು. ಎಲೀಯೆಜೆರನಿಗೆ ಬೇರೆ ಮಕ್ಕಳಿರಲಿಲ್ಲ. ಆದರೆ ರೆಹಬ್ಯನಿಗೆ ಅನೇಕ ಮಕ್ಕಳಿದ್ದರು.
1 ಪೂರ್ವಕಾಲವೃತ್ತಾ 23 : 18 (IRVKN)
ಪ್ರಧಾನನಾದ ಶೆಲೋಮೋತನು ಇಚ್ಹಾರನ ಮಗ.
1 ಪೂರ್ವಕಾಲವೃತ್ತಾ 23 : 19 (IRVKN)
ಹೆಬ್ರೋನನ ಮಕ್ಕಳಲ್ಲಿ ಯೆರೀಯನು ಪ್ರಧಾನನು, ಅಮರ್ಯನು ಎರಡನೆಯವನು, ಯಹಜೀಯೇಲನು ಮೂರನೆಯವನು, ಯೆಕಮ್ಮಾಮ್ ನಾಲ್ಕನೆಯವನು.
1 ಪೂರ್ವಕಾಲವೃತ್ತಾ 23 : 20 (IRVKN)
ಉಜ್ಜೀಯೇಲನ ಮಕ್ಕಳಲ್ಲಿ ಮೀಕನು ಪ್ರಧಾನನು, ಇಷ್ಷೀಯನು ಎರಡನೆಯವನು.
1 ಪೂರ್ವಕಾಲವೃತ್ತಾ 23 : 21 (IRVKN)
ಮೆರಾರೀಯರು ಮೆರಾರೀಯ ಮಕ್ಕಳು ಮಹ್ಲೀ ಮತ್ತು ಮೂಷೀ ಎಂಬುವವರು. ಮಹ್ಲೀಯ ಮಕ್ಕಳು ಎಲ್ಲಾಜಾರ್ ಮತ್ತು ಕೀಷ್.
1 ಪೂರ್ವಕಾಲವೃತ್ತಾ 23 : 22 (IRVKN)
ಎಲ್ಲಾಜಾರನು ಗಂಡು ಮಕ್ಕಳಿಲ್ಲದೆ ಸತ್ತನು. ಅವನಿಗೆ ಹೆಣ್ಣು ಮಕ್ಕಳು ಮಾತ್ರ ಇದ್ದರು. ಇವರು ತಮ್ಮ ಬಂಧುಗಳಾದ ಕೀಷನ ಮಕ್ಕಳನ್ನು ಮದುವೆಯಾದರು.
1 ಪೂರ್ವಕಾಲವೃತ್ತಾ 23 : 23 (IRVKN)
ಮೂಷೀಗೆ ಮಹ್ಲೀ, ಏದೆರ್ ಮತ್ತು ಯೆರೇಮೋತ್ ಎಂಬ ಮೂವರು ಮಕ್ಕಳಿದ್ದರು.
1 ಪೂರ್ವಕಾಲವೃತ್ತಾ 23 : 24 (IRVKN)
ಲೇವಿಯರ ಪಟ್ಟಿಯಲ್ಲಿ ಬರೆಯಲ್ಪಟ್ಟ ಹೆಸರುಗಳ ಪ್ರಕಾರ ಇವರೇ ಆಯಾ ಲೇವಿ ವರ್ಗಗಳ ಕುಟುಂಬದ ಪ್ರಧಾನರು. ಇವರಲ್ಲಿ ಇಪ್ಪತ್ತು ವರ್ಷಕ್ಕಿಂತ ಹೆಚ್ಚಿನ ವಯಸ್ಸುಳ್ಳವರು ಯೆಹೋವನ ಆಲಯದಲ್ಲಿ ಸೇವೆಮಾಡತಕ್ಕವರಾಗಿದ್ದರು.
1 ಪೂರ್ವಕಾಲವೃತ್ತಾ 23 : 25 (IRVKN)
ಇಸ್ರಾಯೇಲಿನ ದೇವರಾದ ಯೆಹೋವನು, ತನ್ನ ಪ್ರಜೆಗಳಿಗೆ ವಿಶ್ರಾಂತಿಯನ್ನು ಅನುಗ್ರಹಿಸಿ, * ಅಥವಾ ಇಸ್ರಾಯೇಲ ಜನರು. ಆತನು ಸದಾಕಾಲವೂ ಯೆರೂಸಲೇಮಿನಲ್ಲಿ ವಾಸಿಸುವವನಾದುದರಿಂದ,
1 ಪೂರ್ವಕಾಲವೃತ್ತಾ 23 : 26 (IRVKN)
ಲೇವಿಯರು ಇನ್ನು ಮುಂದೆ ಆತನ ಗುಡಾರವನ್ನೂ, ಆರಾಧನಾ ಸಾಮಗ್ರಿಗಳನ್ನೂ ಹೊರುವುದು ಅವಶ್ಯವಿಲ್ಲ ಎಂದು ದಾವೀದನು ಈ ಪ್ರಕಾರ ಆಜ್ಞೆ ವಿಧಿಸಿದನು.
1 ಪೂರ್ವಕಾಲವೃತ್ತಾ 23 : 27 (IRVKN)
ದಾವೀದನ ಈ ಕಡೇ ಆಜ್ಞೆಯ ಮೇರೆಗೆ ಲೇವಿಯರಲ್ಲಿ ಇಪ್ಪತ್ತು ವರ್ಷಕ್ಕಿಂತ ಹೆಚ್ಚಿನ ವಯಸ್ಸುಳ್ಳವರೆಲ್ಲರೂ ಪರಿಗಣಿಸಲ್ಪಟ್ಟರು.
1 ಪೂರ್ವಕಾಲವೃತ್ತಾ 23 : 28 (IRVKN)
ಅವರು ಆರೋನ್ಯರ ಕೈಕೆಳಗಿದ್ದುಕೊಂಡು ಯೆಹೋವನ ಆಲಯದ ಪರಿಚಾರಿಕೆಯನ್ನು ನಡೆಸುತ್ತಿದ್ದರು. ಅವರ ಕೆಲಸಗಳು ಯಾವುದೆಂದರೆ, ಅಂಗಳಗಳ ಕೋಣೆಗಳನ್ನು ಸ್ವಚ್ಛಮಾಡಿ ನೋಡಿಕೊಳ್ಳುವುದೂ, ದೇವಾಲಯಕ್ಕೆ ಸಂಬಂಧಪಟ್ಟವುಗಳನ್ನೆಲ್ಲಾ ಶುದ್ಧಮಾಡುವುದೂ,
1 ಪೂರ್ವಕಾಲವೃತ್ತಾ 23 : 29 (IRVKN)
ದೇವಾಲಯದಲ್ಲಿ ಸೇವೆಮಾಡುವುದೂ, ನೈವೇದ್ಯದ ಮೀಸಲು ರೊಟ್ಟಿ, ನೈವೇದ್ಯಕ್ಕೆ ಬೇಕಾದ ಗೋದಿಹಿಟ್ಟು, ಹುಳಿಯಿಲ್ಲದ ರೊಟ್ಟಿ, ಕಬ್ಬಿಣದ ಹಂಚಿನಲ್ಲಿ ಸುಟ್ಟ ರೊಟ್ಟಿ, ಎಣ್ಣೆಯಿಂದ ನೆನೆದ ಭಕ್ಷ್ಯಗಳು ಇವುಗಳನ್ನು ಒದಗಿಸುವುದೂ, ಸೇರು, ಅಳತೆಗೋಲುಗಳನ್ನು ಪರೀಕ್ಷಿಸುವುದೂ,
1 ಪೂರ್ವಕಾಲವೃತ್ತಾ 23 : 30 (IRVKN)
ಪ್ರತಿದಿನ ಪ್ರಾತಃಕಾಲ ಸಾಯಂಕಾಲಗಳಲ್ಲಿ ನಿಯಮಿತ ಸಂಖ್ಯೆಗೆ ಸರಿಯಾಗಿ
1 ಪೂರ್ವಕಾಲವೃತ್ತಾ 23 : 31 (IRVKN)
ಸಬ್ಬತ್ ದಿನ, ಅಮಾವಾಸ್ಯೆ, ಜಾತ್ರೆ ಇವುಗಳಲ್ಲಿ ಯೆಹೋವನ ಮುಂದೆ ತಪ್ಪದೆ ನಡೆಯುವ ಸರ್ವಾಂಗಹೋಮ, ಸಮರ್ಪಣೆಯ ಹೊತ್ತಿನಲ್ಲಿ ಯೆಹೋವನಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸುವುದೂ ಇವೇ.
1 ಪೂರ್ವಕಾಲವೃತ್ತಾ 23 : 32 (IRVKN)
ಹೀಗೆ ಅವರು ತಮ್ಮ ಸಹೋದರನಾದ ಆರೋನನ ಸಹಾಯಕರಾಗಿದ್ದು ದೇವದರ್ಶನದ ಗುಡಾರವನ್ನೂ, ಪರಿಶುದ್ಧವಾದ ಎಲ್ಲಾ ವಸ್ತುಗಳನ್ನು ನೋಡಿಕೊಳ್ಳುವುದೇ ಯೆಹೋವನ ಆಲಯದಲ್ಲಿ ಮಾಡತಕ್ಕ ಕರ್ತವ್ಯಗಳು.
❮
❯