1 ಪೂರ್ವಕಾಲವೃತ್ತಾ 17 : 1 (IRVKN)
{ದೇವರು ದಾವೀದನಿಗೆ ವಾಗ್ದಾನಮಾಡಿದ್ದು} [PS] ದಾವೀದನು ತನ್ನ ಅರಮನೆಯಲ್ಲಿ ವಾಸಿಸುತ್ತಿದ್ದಾಗ ಒಂದು ದಿನ ಅವನು ಪ್ರವಾದಿಯಾದ ನಾತಾನನನ್ನು ಬರಲು ಹೇಳಿ, “ನೋಡು, ನಾನು ದೇವದಾರುಮರದ ಅರಮನೆಯಲ್ಲಿ ವಾಸವಾಗಿದ್ದೇನೆ. ಯೆಹೋವನ ಒಡಂಬಡಿಕೆ ಮಂಜೂಷವಾದರೋ ಬಟ್ಟೆಯ ಮನೆಯಲ್ಲಿ ಇರುತ್ತದೆ” ಎಂದು ಹೇಳಿದನು.
1 ಪೂರ್ವಕಾಲವೃತ್ತಾ 17 : 2 (IRVKN)
ನಾತಾನನು ದಾವೀದನಿಗೆ, “ನಿನಗೆ ಮನಸ್ಸಿದ್ದಂತೆ ಮಾಡು, ದೇವರು ನಿನ್ನ ಸಂಗಡ ಇರುತ್ತಾನೆ” ಎಂದನು. [PE][PS]
1 ಪೂರ್ವಕಾಲವೃತ್ತಾ 17 : 3 (IRVKN)
ಅದೇ ರಾತ್ರಿಯಲ್ಲಿ ದೇವರು ನಾತಾನನಿಗೆ ಆಜ್ಞಾಪಿಸಿದ್ದೇನೆಂದರೆ,
1 ಪೂರ್ವಕಾಲವೃತ್ತಾ 17 : 4 (IRVKN)
“ಹೋಗಿ ನನ್ನ ಸೇವಕನಾದ ದಾವೀದನಿಗೆ, ‘ನೀನು ನನಗೆ ಆಲಯವನ್ನು ಕಟ್ಟಬಾರದು.
1 ಪೂರ್ವಕಾಲವೃತ್ತಾ 17 : 5 (IRVKN)
ನಾನು ಇಸ್ರಾಯೇಲರನ್ನು ಐಗುಪ್ತದೇಶದಿಂದ ಬರಮಾಡಿದಂದಿನಿಂದ ಇಂದಿನ ವರೆಗೂ ಮನೆಯಲ್ಲಿ ವಾಸಮಾಡಲಿಲ್ಲ. ಗುಡಾರಗಳಲ್ಲಿ ವಾಸಿಸುತ್ತಾ ಇದ್ದೆನು.
1 ಪೂರ್ವಕಾಲವೃತ್ತಾ 17 : 6 (IRVKN)
ನಾನು ಇಸ್ರಾಯೇಲರ ಮಧ್ಯದಲ್ಲಿ ಸಂಚರಿಸುತ್ತಿದ್ದಾಗೆಲ್ಲಾ ನನ್ನ ಜನರಾದ ಇಸ್ರಾಯೇಲರನ್ನು ಪಾಲಿಸುವುದಕ್ಕೋಸ್ಕರ ನನ್ನಿಂದ ನೇಮಿಸಲ್ಪಟ್ಟ ಯಾವ ನ್ಯಾಯಸ್ಥಾಪಕನ್ನಾದರೂ ನೀವು ನನಗೋಸ್ಕರ ದೇವದಾರುಮರದ ಮನೆಯನ್ನು ಏಕೆ ಕಟ್ಟಲಿಲ್ಲ ಎಂದು ಕೇಳಿದೆನೋ ಎಂಬುದಾಗಿ ಯೆಹೋವನು ಅನ್ನುತ್ತಾನೆ’ ” ಎಂದು ಹೇಳು ಎಂದನು. [PE][PS]
1 ಪೂರ್ವಕಾಲವೃತ್ತಾ 17 : 7 (IRVKN)
ಇದಲ್ಲದೆ ನೀನು ನನ್ನ ಸೇವಕನಾದ ದಾವೀದನಿಗೆ ಹೇಳಬೇಕಾದದ್ದೇನೆಂದರೆ, “ಸೇನಾಧೀಶ್ವರನಾದ ಯೆಹೋವನು ಹೀಗೆನ್ನುತ್ತಾನೆ, ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ಅಡವಿಯಿಂದ ಕರೆದುಕೊಂಡು ಬಂದು ನನ್ನ ಪ್ರಜೆಗಳಾದ ಇಸ್ರಾಯೇಲರಿಗೆ ನಾಯಕನನ್ನಾಗಿ ನೇಮಿಸಿದೆನು.
1 ಪೂರ್ವಕಾಲವೃತ್ತಾ 17 : 8 (IRVKN)
ನೀನು ಹೋದಲ್ಲೆಲ್ಲಾ ನಾನು ನಿನ್ನ ಸಂಗಡ ಇದ್ದೆನು. ನಿನ್ನ ಶತ್ರುಗಳನ್ನೆಲ್ಲಾ ನಿನ್ನೆದುರಿನಲ್ಲಿಯೇ ಸಂಹರಿಸಿಬಿಟ್ಟೆನು. ಲೋಕದ ಮಹಾಪುರುಷರ ಹೆಸರಿನಂತೆ ನಿನ್ನ ಹೆಸರನ್ನೂ ಪ್ರಸಿದ್ಧಪಡಿಸುವೆನು.
1 ಪೂರ್ವಕಾಲವೃತ್ತಾ 17 : 9 (IRVKN)
ನನ್ನ ಪ್ರಜೆಗಳಾದ ಇಸ್ರಾಯೇಲರಿಗೆ ಒಂದು ಸ್ಥಳವನ್ನು ಕೊಟ್ಟು ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಅವರು ಇನ್ನು ಮೇಲೆ ಯಾವ ಭಯವೂ ಇಲ್ಲದೆ ಅಲ್ಲಿ ವಾಸಮಾಡುವರು.
1 ಪೂರ್ವಕಾಲವೃತ್ತಾ 17 : 10 (IRVKN)
ಪೂರ್ವಕಾಲದಲ್ಲೂ, ನಾನು ನನ್ನ ಜನರಾದ ಇಸ್ರಾಯೇಲರಿಗಾಗಿ ನೇಮಿಸಿದ ನ್ಯಾಯಸ್ಥಾಪಕರ ಕಾಲದಿಂದೀಚೆಗೆ ದುಷ್ಟರು ಅವರನ್ನು ಕುಗ್ಗಿಸಿದಂತೆ ಇನ್ನು ಕುಗ್ಗಿಸುವುದಿಲ್ಲ. ನಿನ್ನ ಶತ್ರುಗಳನ್ನು ನಿನಗೆ ಅಧೀನಮಾಡುವೆನು. ಇದಲ್ಲದೆ ಯೆಹೋವನಾದ ನಾನು ನಿನಗೋಸ್ಕರ ಒಂದು ಮನೆಯನ್ನು ಕಟ್ಟುವೆನು ಎಂದು ಮಾತುಕೊಡುತ್ತೇನೆ.
1 ಪೂರ್ವಕಾಲವೃತ್ತಾ 17 : 11 (IRVKN)
ನಿನ್ನ ಆಯುಷ್ಕಾಲವು ಮುಗಿದು ನೀನು ಪೂರ್ವಿಕರ ಬಳಿಗೆ ಸೇರಿದ ಮೇಲೆ, ನಿನ್ನ ಮಕ್ಕಳಲ್ಲಿ ಒಬ್ಬನನ್ನು ಅಭಿವೃದ್ಧಿಪಡಿಸಿ, ಅವನ ರಾಜ್ಯವನ್ನು ಸ್ಥಿರಪಡಿಸುವೆನು.
1 ಪೂರ್ವಕಾಲವೃತ್ತಾ 17 : 12 (IRVKN)
ಅವನು ನನಗಾಗಿ ಒಂದು ಮನೆಯನ್ನು ಕಟ್ಟುವನು. ನಾನು ಅವನ ಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು.
1 ಪೂರ್ವಕಾಲವೃತ್ತಾ 17 : 13 (IRVKN)
ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ನನ್ನ ಕೃಪೆಯನ್ನು ನಿನಗಿಂತ ಮುಂಚೆ ಇದ್ದವನಿಂದ ತೆಗೆದು ಹಾಕಿದ ಹಾಗೆ ಅವನಿಂದ ತೆಗೆಯುವುದಿಲ್ಲ.
1 ಪೂರ್ವಕಾಲವೃತ್ತಾ 17 : 14 (IRVKN)
ಅವನನ್ನು ನನ್ನ ಮನೆಯಲ್ಲಿಯೂ, ನನ್ನ ರಾಜ್ಯದಲ್ಲಿಯೂ ಸದಾ ಸ್ಥಿರಗೊಳಿಸುವೆನು. ಅವನ ಸಿಂಹಾಸನವು ಶಾಶ್ವತವಾಗಿರುವುದು” ಎಂಬುದೇ.
1 ಪೂರ್ವಕಾಲವೃತ್ತಾ 17 : 15 (IRVKN)
ನಾತಾನನು ತನಗುಂಟಾದ ದರ್ಶನದ ಈ ಎಲ್ಲಾ ಮಾತುಗಳನ್ನು ದಾವೀದನಿಗೆ ಹೇಳಿದನು. [PS]
1 ಪೂರ್ವಕಾಲವೃತ್ತಾ 17 : 16 (IRVKN)
{ದಾವೀದನ ಪ್ರಾರ್ಥನೆ} [PS] ಆಗ ಅರಸನಾದ ದಾವೀದನು ಹೋಗಿ ಯೆಹೋವನ ಸನ್ನಿಧಿಯಲ್ಲಿ ಕುಳಿತುಕೊಂಡು ಹೇಳಿದ್ದೇನೆಂದರೆ, “ದೇವರೇ, ಯೆಹೋವನೇ, ನನ್ನಂಥವನಿಗೆ ಈ ಪದವಿಯನ್ನು ಅನುಗ್ರಹಿಸಿದ್ದಿ, ನಾನೆಷ್ಟರವನು? ನನ್ನ ಮನೆ ಎಷ್ಟರದು?
1 ಪೂರ್ವಕಾಲವೃತ್ತಾ 17 : 17 (IRVKN)
ದೇವರೇ, ಇದು ಸಾಲದೆಂದೆಣಿಸಿ, ನಿನ್ನ ಸೇವಕನ ಮುಂಬರುವ ಸಂತಾನದ ವಿಷಯವಾಗಿಯೂ ನನಗೆ ವಾಗ್ದಾನಮಾಡಿರುವೆ. ದೇವರೇ, ಯೆಹೋವನೇ, ನಾನು ನಿನ್ನ ದೃಷ್ಟಿಯಲ್ಲಿ ಅಲ್ಪನಾಗಿದ್ದರೂ ನೀನು ನನ್ನನ್ನು ಕಟಾಕ್ಷಿಸಿದ್ದೀ.
1 ಪೂರ್ವಕಾಲವೃತ್ತಾ 17 : 18 (IRVKN)
ನೀನು ನಿನ್ನ ಸೇವಕನಾದ ದಾವೀದನನ್ನು ಬಲ್ಲೆ. ಅವನು ತನಗುಂಟಾದ ಘನತೆಯನ್ನು ಕುರಿತು ಇನ್ನೇನು ಹೇಳಾನು.
1 ಪೂರ್ವಕಾಲವೃತ್ತಾ 17 : 19 (IRVKN)
ಯೆಹೋವನೇ, ನಿನ್ನ ಸೇವಕನ ಮೇಲಿಗಾಗಿಯೂ, ನಿನ್ನ ಚಿತ್ತಾನುಸಾರವಾಗಿಯೂ ಈ ಎಲ್ಲಾ ಮಹತ್ಕಾರ್ಯಗಳನ್ನು ನಡೆಸಿ, ನಿನ್ನ ಸತ್ಯ ಮಹತ್ವವನ್ನು ತೋರ್ಪಡಿಸಿರುವೆ.
1 ಪೂರ್ವಕಾಲವೃತ್ತಾ 17 : 20 (IRVKN)
ಯೆಹೋವನೇ, ನಿನಗೆ ಸಮಾನರು ಯಾರೂ ಇಲ್ಲ. ನಾವು ಕೇಳಿದವುಗಳನ್ನೆಲ್ಲಾ ಆಲೋಚಿಸಿ ನೋಡಿದರೆ ನಿನ್ನ ಹೊರತು ಬೇರೆ ದೇವರೇ ಇಲ್ಲವೆಂಬುದು ನಿಶ್ಚಯ.
1 ಪೂರ್ವಕಾಲವೃತ್ತಾ 17 : 21 (IRVKN)
ನಿನ್ನ ಇಸ್ರಾಯೇಲ್ ಪ್ರಜೆಗೆ ಸಮಾನವಾದ ಜನಾಂಗವು ಭೂಲೋಕದಲ್ಲಿ ಯಾವುದಿರುತ್ತದೆ? ದೇವರಾದ ನೀನೇ ಚಿತ್ತೈಯಿಸಿ, ಅದನ್ನು ವಿಮೋಚಿಸಿ, ಸ್ವಪ್ರಜೆಯಾಗಿ ಮಾಡಿಕೊಂಡಿ. ಭಯಂಕರವಾದ ಮಹತ್ಕಾರ್ಯಗಳಿಂದ ನಿನ್ನ ಹೆಸರನ್ನು ಪ್ರಸಿದ್ಧಿಪಡಿಸಿದಿ. ನೀನು ಐಗುಪ್ತರ ಕೈಯೊಳಗಿಂದ ತಪ್ಪಿಸಿ ರಕ್ಷಿಸಿದ ನಿನ್ನ ಪ್ರಜೆಯ ಎದುರಿನಿಂದ ಅನ್ಯಜನಾಂಗಗಳನ್ನು ಹೊರಡಿಸಿಬಿಟ್ಟಿ.
1 ಪೂರ್ವಕಾಲವೃತ್ತಾ 17 : 22 (IRVKN)
ಇಸ್ರಾಯೇಲರು ಸದಾಕಾಲವು ನಿನ್ನ ಪ್ರಜೆಗಳಾಗಿರಬೇಕೆಂದು ನಿರ್ಣಯಿಸಿದ್ದೀ. ಯೆಹೋವನೇ, ನೀನು ಅವರಿಗೆ ದೇವರಾಗಿದ್ದಿ.
1 ಪೂರ್ವಕಾಲವೃತ್ತಾ 17 : 23 (IRVKN)
ಯೆಹೋವನೇ, ನೀನು ನಿನ್ನ ಸೇವಕನನ್ನೂ ಅವನ ಮನೆಯನ್ನೂ ಕುರಿತು ಮಾಡಿದ ವಾಗ್ದಾನವನ್ನು ಶಾಶ್ವತಪಡಿಸಿ ನೆರವೇರಿಸು. ಅದು ಸದಾ ಸ್ಥಿರವಾಗಿರಲಿ.
1 ಪೂರ್ವಕಾಲವೃತ್ತಾ 17 : 24 (IRVKN)
ಜನರು ‘ಸೇನಾಧೀಶ್ವರನಾದ ಯೆಹೋವನು ಇಸ್ರಾಯೇಲ್ ದೇವರೂ, ಶರಣನೂ ಆಗಿದ್ದಾನೆ. ತನ್ನ ಸೇವಕನಾದ ದಾವೀದನ ಮನೆಯನ್ನು ತನ್ನ ಸನ್ನಿಧಿಯಲ್ಲಿ ಸ್ಥಿರವಾಗಿ ಇಟ್ಟುಕೊಳ್ಳುತ್ತಾನೆ’ ಎಂದು ನಿನ್ನ ನಾಮವನ್ನು ಕೊಂಡಾಡಲಿ.
1 ಪೂರ್ವಕಾಲವೃತ್ತಾ 17 : 25 (IRVKN)
ನನ್ನ ದೇವರೇ, ನೀನು ನಿನ್ನ ಸೇವಕನಿಗೆ, ‘ನಾನು ನಿನಗೊಂದು ಮನೆಯನ್ನು ಕಟ್ಟುವೆನು’ ಎಂದು ವಾಗ್ದಾನ ಮಾಡಿದ್ದರಿಂದ ಅವನು ನಿನ್ನನ್ನು ಪ್ರಾರ್ಥಿಸುವುದಕ್ಕೆ ಧೈರ್ಯಗೊಂಡನು.
1 ಪೂರ್ವಕಾಲವೃತ್ತಾ 17 : 26 (IRVKN)
ಯೆಹೋವನೇ, ನಿನ್ನ ಸೇವಕನಿಗೆ ಈ ಶ್ರೇಷ್ಠ ವಾಗ್ದಾನಗಳನ್ನು ಮಾಡಿದ ನೀನು ನನ್ನ ದೇವರಾಗಿರುತ್ತೀ.
1 ಪೂರ್ವಕಾಲವೃತ್ತಾ 17 : 27 (IRVKN)
ಈಗ ನೀನು ನಿನ್ನ ಸೇವಕನ ಮನೆಯನ್ನು ಆಶೀರ್ವದಿಸಿ, ಅದನ್ನು ಸದಾಕಾಲವೂ ನಿನ್ನ ಆಶ್ರಯದಲ್ಲಿಟ್ಟುಕೊಳ್ಳಬೇಕೆಂದು ಮನಸ್ಸು ಮಾಡಿದ್ದೀ. ಯೆಹೋವನೇ, ನೀನು ಅದನ್ನು ಆಶೀರ್ವದಿಸಿದ್ದೀ. ಅದು ನಿತ್ಯವೂ ಸೌಭಾಗ್ಯದಿಂದಿರುವುದು” ಎಂದು ಪ್ರಾರ್ಥಿಸಿದನು. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27

BG:

Opacity:

Color:


Size:


Font: