1 ಪೂರ್ವಕಾಲವೃತ್ತಾ 14 : 1 (IRVKN)
ದಾವೀದನು ಅರಮನೆಯನ್ನು ಕಟ್ಟಿಸಿಕೊಂಡದ್ದು ತೂರಿನ ಅರಸನಾದ ಹೀರಾಮನು ದಾವೀದನಿಗೆ ಅರಮನೆಯನ್ನು ಕಟ್ಟುವುದಕ್ಕೋಸ್ಕರ ದೂತರನ್ನೂ, ದೇವದಾರುಮರಗಳನ್ನೂ, ಶಿಲ್ಪಿಗಳನ್ನೂ ಮತ್ತು ಬಡಗಿಗಳನ್ನು ಅವನ ಬಳಿಗೆ ಕಳುಹಿಸಿದನು.
1 ಪೂರ್ವಕಾಲವೃತ್ತಾ 14 : 2 (IRVKN)
ಇದರಿಂದ ದಾವೀದನು ದೇವರ ಪ್ರಜೆಗಳಾದ ಇಸ್ರಾಯೇಲರ ನಿಮಿತ್ತವಾಗಿ ತನ್ನ ರಾಜ್ಯವು ಉನ್ನತ ಸ್ಥಾನಕ್ಕೆ ಮುಟ್ಟಿದ್ದನ್ನು ನೋಡಿ ಯೆಹೋವನು ತನ್ನನ್ನು ಇಸ್ರಾಯೇಲರಿಗೆ ರಾಜನನ್ನಾಗಿ ಸ್ಥಿರಪಡಿಸಿದನೆಂದು ತಿಳಿದುಕೊಂಡನು.
1 ಪೂರ್ವಕಾಲವೃತ್ತಾ 14 : 3 (IRVKN)
ದಾವೀದನು ಯೆರೂಸಲೇಮಿನಲ್ಲಿಯೂ ಸಹ ಕೆಲವು ಸ್ತ್ರೀಯರನ್ನು ಮದುವೆಮಾಡಿಕೊಂಡು ಇನ್ನೂ ಕೆಲವು ಗಂಡು ಹೆಣ್ಣು ಮಕ್ಕಳನ್ನು ಪಡೆದನು.
1 ಪೂರ್ವಕಾಲವೃತ್ತಾ 14 : 4 (IRVKN)
ಅಲ್ಲಿ ಅವನಿಗೆ ಹುಟ್ಟಿದ ಗಂಡು ಮಕ್ಕಳ ಹೆಸರುಗಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್,
1 ಪೂರ್ವಕಾಲವೃತ್ತಾ 14 : 5 (IRVKN)
ಇಬ್ಹಾರ್, ಎಲೀಷೂವ, ಎಲ್ಪೆಲೆಟ್,
1 ಪೂರ್ವಕಾಲವೃತ್ತಾ 14 : 6 (IRVKN)
1 ಪೂರ್ವಕಾಲವೃತ್ತಾ 14 : 7 (IRVKN)
ಎಲೀಷಾಮ್, ಬೇಲ್ಯಾದ ಮತ್ತು ಎಲೀಫೆಲೆಟ್.
1 ಪೂರ್ವಕಾಲವೃತ್ತಾ 14 : 8 (IRVKN)
ಫಿಲಿಷ್ಟಿಯರ ಮೇಲೆ ದಾವೀದನ ವಿಜಯ ಇಸ್ರಾಯೇಲ್ಯರೆಲ್ಲರೂ ದಾವೀದನನ್ನು ಅಭಿಷೇಕಿಸಿ ಅವನನ್ನು ತಮ್ಮ ಅರಸನನ್ನಾಗಿ ಮಾಡಿಕೊಂಡರೆಂಬ ವರ್ತಮಾನವು ಫಿಲಿಷ್ಟಿಯರಿಗೆ ಮುಟ್ಟಿದಾಗ ಅವರು ಅವನನ್ನು ಹಿಡಿಯುವುದಕ್ಕೆ ಹೊರಟರು. ದಾವೀದನು ಇದನ್ನು ಕೇಳಿ ತಾನೂ ಅವರನ್ನೆದುರಿಸಲು ಹೋದನು.
1 ಪೂರ್ವಕಾಲವೃತ್ತಾ 14 : 9 (IRVKN)
ಫಿಲಿಷ್ಟಿಯರು ದೇಶದೊಳಗೆ ನುಗ್ಗಿ, ರೆಫಾಯೀಮ್ ತಗ್ಗಿನಲ್ಲಿ ಸುಲಿಗೆಮಾಡುತ್ತಿದ್ದರು.
1 ಪೂರ್ವಕಾಲವೃತ್ತಾ 14 : 10 (IRVKN)
ದಾವೀದನು ದೇವರಾದ ಯೆಹೋವನನ್ನು, “ನಾನು ಫಿಲಿಷ್ಟಿಯರಿಗೆ ವಿರೋಧವಾಗಿ ಹೋಗಬಹುದೋ? ಅವರನ್ನು ನನ್ನ ಕೈಗೆ ಒಪ್ಪಿಸಿಕೊಡುವಿಯೋ” ಎಂದು ಕೇಳಿದನು. ಅದಕ್ಕೆ ಯೆಹೋವನು, “ಹೋಗು ನಾನು ಅವರನ್ನು ನಿನ್ನ ಕೈಗೆ ಒಪ್ಪಿಸುವೆನು” ಎಂದು ಉತ್ತರ ಕೊಟ್ಟನು.
1 ಪೂರ್ವಕಾಲವೃತ್ತಾ 14 : 11 (IRVKN)
ಅಷ್ಟರಲ್ಲಿ ಬಾಳ್ ಪೆರಾಚೀಮಿಗೆ ಬಂದ ಅವರನ್ನು ದಾವೀದನು ಸೋಲಿಸಿ, “ಯೆಹೋವನು ಕಟ್ಟೆಯೊಡೆದ ಪ್ರವಾಹದಂತೆ ನನ್ನ ಶತ್ರುಗಳ ಮೇಲೆ ಬಿದ್ದು ಅವರನ್ನು ನನ್ನ ಮುಖಾಂತರವಾಗಿ ನಾಶಮಾಡಿದ್ದಾನೆ” ಎಂದು ಹೇಳಿದ್ದರಿಂದ ಆ ಯುದ್ಧ ಸ್ಥಳಕ್ಕೆ ಬಾಳ್ ಪೆರಾಚೀಮ್ ಎಂದು ಹೆಸರಾಯಿತು.
1 ಪೂರ್ವಕಾಲವೃತ್ತಾ 14 : 12 (IRVKN)
ಫಿಲಿಷ್ಟಿಯರು ಅಲ್ಲಿ ಬಿಟ್ಟುಹೋಗಿದ್ದ ದೇವರುಗಳನ್ನು ಸುಟ್ಟುಬಿಡುವಂತೆ ದಾವೀದನು ಅಪ್ಪಣೆ ಕೊಟ್ಟನು.
1 ಪೂರ್ವಕಾಲವೃತ್ತಾ 14 : 13 (IRVKN)
ಫಿಲಿಷ್ಟಿಯರು ಮತ್ತೊಮ್ಮೆ ಬಂದು ಅದೇ ತಗ್ಗಿನಲ್ಲಿ ಸುಲಿಗೆಮಾಡುತ್ತಿದ್ದರು.
1 ಪೂರ್ವಕಾಲವೃತ್ತಾ 14 : 14 (IRVKN)
ದಾವೀದನು ಪುನಃ ದೇವರ ಸನ್ನಿಧಿಯಲ್ಲಿ ವಿಚಾರಿಸಿದಾಗ ಯೆಹೋವನು ಅವನಿಗೆ, “ನೀನು ಅವರನ್ನು ಬೆನ್ನಟ್ಟಬೇಡ, ಅವರ ಎದುರುಗಡೆಯಿಂದ ದಾಳಿಮಾಡದೆ ಹಿಂತಿರುಗಿ ಹೋಗಿ ಬಾಕಾಮರಗಳಿರುವ ಕಡೆಯಿಂದ ಅವರ ಮೇಲೆ ದಾಳಿಮಾಡು.
1 ಪೂರ್ವಕಾಲವೃತ್ತಾ 14 : 15 (IRVKN)
ಬಾಕಾಮರಗಳ ತುದಿಯಲ್ಲಿ ಹೆಜ್ಜೆಗಳ ಶಬ್ದವು ಕೇಳಿಸುವಾಗಲೇ ದೇವರು ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವುದಕ್ಕೋಸ್ಕರ ನಿನ್ನನ್ನು ಮುನ್ನಡೆಸುತ್ತಿದ್ದಾನೆ ಎಂದು ತಿಳಿದುಕೊಂಡು ಯುದ್ಧಕ್ಕೆ ಹೊರಡು” ಎಂದನು.
1 ಪೂರ್ವಕಾಲವೃತ್ತಾ 14 : 16 (IRVKN)
ದಾವೀದನು ದೇವರ ಆಜ್ಞಾನುಸಾರವಾಗಿ ಮಾಡಿದನು. ಇಸ್ರಾಯೇಲರು ಫಿಲಿಷ್ಟಿಯರ ಸೈನ್ಯವನ್ನು ಗಿಬ್ಯೋನಿನಿಂದ ಗೆಜೆರಿನ ವರೆಗೂ ಸಂಹರಿಸುತ್ತಾ ಹೋದರು.
1 ಪೂರ್ವಕಾಲವೃತ್ತಾ 14 : 17 (IRVKN)
ದಾವೀದನ ಕೀರ್ತಿಯು ಎಲ್ಲಾ ದೇಶಗಳಲ್ಲಿ ಹಬ್ಬಿತು. ಯೆಹೋವನು ಅವನಿಗೆ ಎಲ್ಲಾ ಜನಾಂಗಗಳೂ ಹೆದರಿ ನಡೆಯುವಂತೆ ಮಾಡಿದನು.
❮
❯
1
2
3
4
5
6
7
8
9
10
11
12
13
14
15
16
17