ಪರಮ ಗೀತ 7 : 1 (ERVKN)
{ಪ್ರಿಯಕರನ ಪ್ರಶಂಸೆ} [PS] ರಾಜಕುಮಾರಿಯೇ, ಪಾದರಕ್ಷೆಗಳಲ್ಲಿರುವ ನಿನ್ನ ಪಾದಗಳು ಎಷ್ಟೋ ಸುಂದರವಾಗಿವೆ. [QBR2] ನಿನ್ನ ದುಂಡಾದ ತೊಡೆಗಳು ಶಿಲ್ಪಿಯು ಮಾಡಿದ ಆಭರಣಗಳಂತಿವೆ. [QBR]
ಪರಮ ಗೀತ 7 : 2 (ERVKN)
ನಿನ್ನ ಹೊಕ್ಕಳು ದ್ರಾಕ್ಷಾರಸದಿಂದ ತುಂಬಿರುವ [QBR2] ಗುಂಡು ಬಟ್ಟಲಿನಂತಿದೆ. [*ಬಟ್ಟಲು ಅಥವಾ “ಕೆತ್ತಿದ ಪಾತ್ರೆ” ಉಳಿಯಿಂದ ಕೆತ್ತಿ ಮಾಡಿದ ಪಾತ್ರೆ. ದ್ರಾಕ್ಷಾರಸವನ್ನು ಇದರಲ್ಲಿ ಮಿಶ್ರಣ ಮಾಡಿದ ನಂತರ ಬಟ್ಟಲುಗಳಿಗೆ ಹಾಕುತ್ತಿದ್ದರು. ಚಂದ್ರಬಿಂಬದಂತೆ ಪಾತ್ರೆ ಅಥವಾ “ಅರ್ಧ ಚಂದ್ರಾಕಾರದ ಪಾತ್ರೆ” ಎಂಬರ್ಥವನ್ನೂ ಇದು ಕೊಡಬಲ್ಲದು. ] [QBR] ನಿನ್ನ ಉದರವು ನೆಲದಾವರೆಗಳಿಂದ ಅಲಂಕರಿಸಲ್ಪಟ್ಟಿರುವ [QBR2] ಗೋಧಿಯ ರಾಶಿಯಂತಿದೆ. [QBR]
ಪರಮ ಗೀತ 7 : 3 (ERVKN)
ನಿನ್ನ ಸ್ತನಗಳು ಪ್ರಾಯದ ಸಾರಂಗದ [QBR2] ಎರಡು ಅವಳಿ ಮರಿಗಳಂತಿವೆ. [QBR]
ಪರಮ ಗೀತ 7 : 4 (ERVKN)
ನಿನ್ನ ಕೊರಳು ದಂತಗೋಪುರದಂತಿದೆ. [QBR] ನಿನ್ನ ಕಣ್ಣುಗಳು ಬತ್ರಬ್ಬೀಮ್ನ ಬಾಗಿಲ ಬಳಿಯಲ್ಲಿರುವ [QBR2] ಹೆಷ್ಬೋನಿನ ಸರೋವರಗಳಂತಿವೆ. [QBR] ನಿನ್ನ ಮೂಗು ದಮಸ್ಕದ ಕಡೆಗಿರುವ [QBR2] ಲೆಬನೋನಿನ ಗೋಪುರದಂತಿದೆ. [QBR]
ಪರಮ ಗೀತ 7 : 5 (ERVKN)
ನಿನ್ನ ತಲೆಯು ಕರ್ಮೆಲ್ ಬೆಟ್ಟದಂತಿದೆ. [QBR2] ನಿನ್ನ ತಲೆಕೂದಲು ರೇಷ್ಮೆಯಂತಿದೆ. [QBR] ನಿನ್ನ ಉದ್ದವಾದ, ಸುಂದರವಾದ ಕೂದಲು [QBR2] ರಾಜನನ್ನು ಸಹ ಆಕರ್ಷಿಸುತ್ತದೆ! [QBR]
ಪರಮ ಗೀತ 7 : 6 (ERVKN)
ಪ್ರಿಯಳೇ, ನೀನೆಷ್ಟೋ ಸೌಂದರ್ಯವತಿ. [QBR2] ನಿನ್ನ ರೂಪ ಮನೋಹರ; ನಿನ್ನ ಪ್ರೇಮವು ಆನಂದ ಪೂರ್ಣವಾಗಿದೆ. [QBR]
ಪರಮ ಗೀತ 7 : 7 (ERVKN)
ನೀನು ಖರ್ಜೂರದ ಮರದಂತೆ ಎತ್ತರವಾಗಿರುವೆ. [QBR2] ನಿನ್ನ ಸ್ತನಗಳು ಖರ್ಜೂರ ಮರದ ಹಣ್ಣಿನ ಗೊಂಚಲುಗಳಂತಿವೆ. [QBR]
ಪರಮ ಗೀತ 7 : 8 (ERVKN)
ನಾನು ಖರ್ಜೂರದ ಮರವನ್ನು ಹತ್ತುವೆನು. [QBR2] ನಾನು ಅದರ ಕೊಂಬೆಗಳನ್ನು ಹಿಡಿದುಕೊಳ್ಳುವೆನು. ನಿನ್ನ ಸ್ತನಗಳು ದ್ರಾಕ್ಷಿಯ ಗೊಂಚಲುಗಳಂತಿರಲಿ. [QBR2] ನಿನ್ನ ಉಸಿರಿನ ವಾಸನೆಯು ಸೇಬು ಹಣ್ಣುಗಳಂತಿರಲಿ. [QBR]
ಪರಮ ಗೀತ 7 : 9 (ERVKN)
ನಿನ್ನ ಬಾಯಿ ಉತ್ತಮವಾದ ದ್ರಾಕ್ಷಾರಸದಂತಿರಲಿ. [QBR2] ನನ್ನ ಪ್ರಿಯೆಗಾಗಿ ಈ ದ್ರಾಕ್ಷಾರಸವು ಮೆಲ್ಲನೆ ಇಳಿದುಹೋಗುವುದು. [QBR2] ನಿದ್ರಿಸುವವರ ತುಟಿಗಳಲ್ಲಿ ಅದು ಸರಾಗವಾಗಿ ಹರಿದುಹೋಗುವುದು.
ಪರಮ ಗೀತ 7 : 10 (ERVKN)
{ಪ್ರಿಯತಮೆ ಪ್ರಿಯಕರನಿಗೆ} [PS] ನಾನು ನನ್ನ ಪ್ರಿಯನವಳೇ. [QBR2] ಅವನಿಗೆ ನನ್ನ ಮೇಲೇ ಆಸೆ. [QBR]
ಪರಮ ಗೀತ 7 : 11 (ERVKN)
ನನ್ನ ಪ್ರಿಯನೇ, ಬಾ! [QBR2] ನಾವು ತೋಟಕ್ಕೆ ಹೋಗೋಣ, [QBR2] ನಾವು ಹಳ್ಳಿಗಳಲ್ಲಿ ಇರೋಣ. [QBR]
ಪರಮ ಗೀತ 7 : 12 (ERVKN)
ನಾವು ಹೊತ್ತಾರೆಯಲ್ಲಿ ಎದ್ದು ದ್ರಾಕ್ಷಾತೋಟಗಳಿಗೆ ಹೋಗೋಣ. [QBR2] ದ್ರಾಕ್ಷೆಯು ಚಿಗುರಿದೆಯೋ [QBR] ಅದರ ಹೂವು ಅರಳಿದೆಯೋ [QBR2] ದಾಳಿಂಬೆ ಹಣ್ಣುಗಳು ಮಾಗಿವಿಯೋ ನೋಡೋಣ. [QBR2] ನನ್ನ ಪ್ರೀತಿಯನ್ನು ನಿನಗೆ ಅಲ್ಲಿ ಸಲ್ಲಿಸುವೆನು.
ಪರಮ ಗೀತ 7 : 13 (ERVKN)
ಕಾಮಜನಕ ಸಸಿಗಳು ಸುವಾಸನೆ ಬೀರುತ್ತವೆ. [QBR2] ನನ್ನ ಪ್ರಿಯನೇ, ನಾನು ನಿನಗೋಸ್ಕರ ಉಳಿಸಿದ [QBR] ರುಚಿಕರವಾದ ಬಗೆಬಗೆಯ ಹೊಸ ಮತ್ತು ಹಳೆ ಹಣ್ಣುಗಳು [QBR2] ನಮ್ಮ ಬಾಗಿಲ ಬಳಿಯಲ್ಲಿವೆ. [PE]
❮
❯
1
2
3
4
5
6
7
8
9
10
11
12
13