ಪರಮ ಗೀತ 2 : 1 (ERVKN)
ನಾನು ಶಾರೋನಿನಲ್ಲಿರುವ ಗುಲಾಬಿ; ತಗ್ಗುಗಳಲ್ಲಿರುವ ತಾವರೆ.
ಪರಮ ಗೀತ 2 : 2 (ERVKN)
ಪ್ರಿಯಕರ ನನ್ನ ಪ್ರಿಯೆ, ಮುಳ್ಳುಗಳ ನಡುವೆ ಇರುವ ತಾವರೆ ಹೂವಿನಂತೆ ನೀನು ಯುವತಿಯರಲ್ಲೆಲ್ಲಾ ಶ್ರೇಷ್ಠಳು.
ಪರಮ ಗೀತ 2 : 3 (ERVKN)
ಪ್ರಿಯತಮೆ ನನ್ನ ಪ್ರಿಯನೇ, ಕಾಡುಮರಗಳ ನಡುವೆ ಇರುವ ಒಂದು ಸೇಬಿನ ಮರದಂತೆ ನೀನು ಯುವಕರಲ್ಲೆಲ್ಲಾ ಶ್ರೇಷ್ಠನು. ನಾನು ಅವನ ನೆರಳಲ್ಲಿ ಕುಳಿತುಕೊಂಡು ಸಂತೋಷಿಸಿದೆ; ಅವನ ಫಲವು ನನ್ನ ನಾಲಿಗೆಗೆ ಸಿಹಿಯಾಗಿತ್ತು.
ಪರಮ ಗೀತ 2 : 4 (ERVKN)
ಪ್ರಿಯತಮೆ ಸ್ತ್ರೀಯರಿಗೆ ನನ್ನ ಪ್ರಿಯಕರನು ನನ್ನನ್ನು ದ್ರಾಕ್ಷಾರಸದ ಮನೆಗೆ ಕರೆದುಕೊಂಡು ಬಂದನು; ನನ್ನ ಕುರಿತು ಆತನಿಗಿದ್ದ ಉದ್ದೇಶ ಪ್ರೀತಿಯೇ.
ಪರಮ ಗೀತ 2 : 5 (ERVKN)
ದ್ರಾಕ್ಷಿಯಿಂದ ನನ್ನನ್ನು ಉಪಚರಿಸಿರಿ; ಸೇಬು ಹಣ್ಣುಗಳಿಂದ ನನ್ನನ್ನು ಆದರಿಸಿರಿ; ನಾನು ಅನುರಾಗದಿಂದ ಅಸ್ವಸ್ಥಳಾಗಿರುವೆ.
ಪರಮ ಗೀತ 2 : 6 (ERVKN)
ನನ್ನ ಪ್ರಿಯನ ಎಡಗೈ ತಲೆದಿಂಬಾಗಿ ಅವನ ಬಲಗೈ ನನ್ನನ್ನು ತಬ್ಬಿಕೊಳ್ಳುವುದು!
ಪರಮ ಗೀತ 2 : 7 (ERVKN)
ಜೆರುಸಲೇಮಿನ ಸ್ತ್ರೀಯರೇ, ತಕ್ಕಕಾಲಕ್ಕೆ ಮೊದಲೇ ಪ್ರೀತಿಯನ್ನು ಹುಟ್ಟಿಸಿ, ಬೆಳೆಯಿಸುವುದಿಲ್ಲವೆಂದು ಜಿಂಕೆಗಳ ಮೇಲೆಯೂ ಕಾಡುಹುಲ್ಲೆಗಳ ಮೇಲೆಯೂ ನನಗೆ ಪ್ರಮಾಣ ಮಾಡಿರಿ.
ಪರಮ ಗೀತ 2 : 8 (ERVKN)
ಪ್ರಿಯತಮೆ ಅಗೋ, ನನ್ನ ಪ್ರಿಯನ ಸ್ವರ! ಅವನು ಬೆಟ್ಟಗಳ ಮೇಲೆ ನೆಗೆಯುತ್ತಾ ಗುಡ್ಡಗಳ ಮೇಲೆ ಕುಪ್ಪಳಿಸುತ್ತಾ ಬರುತ್ತಿದ್ದಾನೆ.
ಪರಮ ಗೀತ 2 : 9 (ERVKN)
ನನ್ನ ಪ್ರಿಯನು ಸಾರಂಗದಂತೆಯೂ ಪ್ರಾಯದ ಜಿಂಕೆಯಂತೆಯೂ ಇದ್ದಾನೆ.
ಅಗೋ, ಅವನು ನಮ್ಮ ಗೋಡೆಯ ಆಚೆ ನಿಂತಿದ್ದಾನೆ; ತಡಕೆಗಳಿಂದ ಇಣಿಕಿಹಾಕುತ್ತಿದ್ದಾನೆ; ಕಿಟಕಿಗಳಿಂದ ನೋಡುತ್ತಿದ್ದಾನೆ.
ಪರಮ ಗೀತ 2 : 10 (ERVKN)
ನನ್ನ ಪ್ರಿಯನು ನನಗೆ ಹೀಗೆಂದನು:
“ನನ್ನ ಪ್ರಿಯಳೇ, ನನ್ನ ಸುಂದರಿಯೇ, ಎದ್ದೇಳು, ನಾವು ದೂರ ಹೋಗೋಣ!
ಪರಮ ಗೀತ 2 : 11 (ERVKN)
ಇಗೋ, ಚಳಿಗಾಲ ಕಳೆಯಿತು; ಮಳೆಗಾಲ ಮುಗಿದುಹೋಯಿತು.
ಪರಮ ಗೀತ 2 : 12 (ERVKN)
ಭೂಮಿಯ ಮೇಲೆ ಹೂವುಗಳು ಕಾಣುತ್ತವೆ; ಪಕ್ಷಿಗಳು ಹಾಡುವ ಸಮಯವು ಬಂದಿದೆ. ದೇಶದಲ್ಲಿ ಪಾರಿವಾಳದ ಸ್ವರವು ಕೇಳಿಸುತ್ತದೆ.
ಪರಮ ಗೀತ 2 : 13 (ERVKN)
ಅಂಜೂರದ ಮರ ಕಾಯಿಗಳನ್ನು ಬಿಡುತ್ತಿದೆ; ದ್ರಾಕ್ಷಿಬಳ್ಳಿಯ ಹೂವುಗಳಿಂದ ಸುವಾಸನೆಯು ಬರುತ್ತಿದೆ.
ನನ್ನ ಪ್ರಿಯಳೇ, ನನ್ನ ಸುಂದರಿಯೇ, ಎದ್ದೇಳು, ನಾವು ದೂರ ಹೋಗೋಣ!”
ಪರಮ ಗೀತ 2 : 14 (ERVKN)
ಪ್ರಿಯಕರ ಬಂಡೆಯ ಬಿರುಕುಗಳಲ್ಲಿಯೂ ಜರಿಯ ಮರೆಯಲ್ಲಿಯೂ ಇರುವ ನನ್ನ ಪಾರಿವಾಳವೇ,
ನಿನ್ನ ರೂಪವನ್ನು ತೋರಿಸು; ನಿನ್ನ ಸ್ವರವನ್ನು ಕೇಳಿಸು.
ನಿನ್ನ ಸ್ವರ ಎಷ್ಟೋ ಮಧುರ! ನಿನ್ನ ರೂಪ ಎಷ್ಟೋ ಅಂದ!
ಪರಮ ಗೀತ 2 : 15 (ERVKN)
ಪ್ರಿಯತಮೆ ಸ್ತ್ರೀಯರಿಗೆ ದ್ರಾಕ್ಷಿತೋಟಗಳನ್ನು ಹಾಳುಮಾಡುವ ನರಿಗಳನ್ನೂ
ನರಿಮರಿಗಳನ್ನೂ ಹಿಡಿಯಿರಿ! ನಮ್ಮ ದ್ರಾಕ್ಷಿತೋಟಗಳು ಈಗ ಹೂಬಿಡುತ್ತಿವೆ.
ಪರಮ ಗೀತ 2 : 16 (ERVKN)
ನನ್ನ ಪ್ರಿಯನು ನನ್ನವನೇ! ನಾನು ಅವನವಳೇ!
ಹಗಲು ತನ್ನ ಕೊನೆ ಉಸಿರೆಳೆಯುವತನಕ, ನೆರಳು ಓಡಿಹೋಗುವ ತನಕ
ಪರಮ ಗೀತ 2 : 17 (ERVKN)
ನನ್ನ ಪ್ರಿಯನು ನೆಲದಾವರೆಗಳ ಮಧ್ಯದಲ್ಲಿ ಮೇಯಿಸುವನು.
ನನ್ನ ಪ್ರಿಯನೇ, ಹೊರಡು, ಬೆತೇರ್ ಬೆಟ್ಟಗಳ ಮೇಲೆ ಸಾರಂಗದಂತೆಯೂ ಪ್ರಾಯದ ಜಿಂಕೆಯಂತೆಯೂ ಇರು!

1 2 3 4 5 6 7 8 9 10 11 12 13 14 15 16 17