ಪ್ರಕಟನೆ 16 : 1 (ERVKN)
{ದೇವರ ಕೋಪದಿಂದ ತುಂಬಿದ್ದ ಪಾತ್ರೆಗಳು} [PS] ನಂತರ ಆಲಯದಿಂದ ಒಂದು ಮಹಾಶಬ್ದವು ನನಗೆ ಕೇಳಿಸಿತು. ಆ ಶಬ್ದವು ಏಳು ದೇವದೂತರಿಗೆ, “ನೀವು ಹೋಗಿ ಏಳು ಪಾತ್ರೆಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ ಸುರಿದುಬಿಡಿ” ಎಂದು ಹೇಳಿತು. [PE][PS]
ಪ್ರಕಟನೆ 16 : 2 (ERVKN)
ಮೊದಲನೆಯ ದೇವದೂತನು ಹೊರಟನು. ಅವನು ತನ್ನ ಪಾತ್ರೆಯಲ್ಲಿದ್ದುದನ್ನು ಭೂಮಿಯ ಮೇಲೆ ಸುರಿದನು. ಆಗ ಮೃಗದ ಗುರುತನ್ನು ಹೊಂದಿದ್ದ ಮತ್ತು ಅದರ ವಿಗ್ರಹವನ್ನು ಆರಾಧಿಸುತ್ತಿದ್ದ ಜನರೆಲ್ಲರಿಗೂ ಅಸಹ್ಯವಾದ ಹಾಗೂ ನೋವಿನಿಂದ ಕೂಡಿದ ಹುಣ್ಣುಗಳಾದವು. [PE][PS]
ಪ್ರಕಟನೆ 16 : 3 (ERVKN)
ಎರಡನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಸಮುದ್ರದ ಮೇಲೆ ಸುರಿದನು. ಆಗ ಸಮುದ್ರವು ಸತ್ತ ಮನುಷ್ಯನ ರಕ್ತದಂತಾಯಿತು. ಸಮುದ್ರದಲ್ಲಿದ್ದ ಜೀವಜಂತುಗಳೆಲ್ಲ ಸತ್ತುಹೋದವು. [PE][PS]
ಪ್ರಕಟನೆ 16 : 4 (ERVKN)
ಮೂರನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ನದಿಗಳ ಮತ್ತು ನೀರಿನ ಬುಗ್ಗೆಗಳ ಮೇಲೆ ಸುರಿದನು. ಆಗ ನದಿಗಳು ಮತ್ತು ನೀರಿನ ಬುಗ್ಗೆಗಳೆಲ್ಲ ರಕ್ತವಾಗಿ ಪರಿಣಮಿಸಿದವು.
ಪ್ರಕಟನೆ 16 : 5 (ERVKN)
ಆಗ ನೀರಿನ ಅಧಿಪತಿಯಾದ ದೂತನು ದೇವರಿಗೆ ಹೇಳಿದ್ದು ನನಗೆ ಕೇಳಿಸಿತು: “ನೀನೇ ವರ್ತಮಾನ ಕಾಲದಲ್ಲಿರುವಾತನು. [QBR] ನೀನೊಬ್ಬನೇ ಪರಿಶುದ್ಧನು. [QBR] ನೀನು ನೀಡಿದ ಈ ತೀರ್ಪುಗಳಲ್ಲೆಲ್ಲಾ ನೀನು ನ್ಯಾಯವಂತನಾಗಿರುವೆ. [QBR]
ಪ್ರಕಟನೆ 16 : 6 (ERVKN)
ಆ ಜನರು ನಿನ್ನ ಪರಿಶುದ್ಧ ಜನರ ಮತ್ತು ನಿನ್ನ ಪ್ರವಾದಿಗಳ ರಕ್ತವನ್ನು ಸುರಿಸಿದರು. [QBR] ಈಗ ನೀನು ಅವರಿಗೆ ಕುಡಿಯಲು ರಕ್ತವನ್ನೇ ನೀಡಿರುವೆ. [QBR2] ಅವರು ಇದಕ್ಕೆ ಪಾತ್ರರಾಗಿದ್ದಾರೆ.”
ಪ್ರಕಟನೆ 16 : 7 (ERVKN)
ಯಜ್ಞವೇದಿಕೆಯಿಂದ ಹೀಗೆ ಹೇಳುವುದನ್ನೂ ನಾನು ಕೇಳಿಸಿಕೊಂಡೆನು: “ಹೌದು, ದೇವರಾದ ಪ್ರಭುವೇ, ಸರ್ವಶಕ್ತನೇ, [QBR2] ನಿನ್ನ ತೀರ್ಪುಗಳೆಲ್ಲಾ ಸತ್ಯವಾಗಿವೆ ಮತ್ತು ನ್ಯಾಯವಾಗಿವೆ.” [PS]
ಪ್ರಕಟನೆ 16 : 8 (ERVKN)
ನಾಲ್ಕನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಸೂರ್ಯನ ಮೇಲೆ ಸುರಿದನು. ಜನರನ್ನು ಕಡುಬಿಸಿಲಿನಿಂದ ಕಂದಿಸುವ ಅಧಿಕಾರವನ್ನು ಸೂರ್ಯನಿಗೆ ಕೊಡಲಾಯಿತು.
ಪ್ರಕಟನೆ 16 : 9 (ERVKN)
ಜನರು ಕುಡುಬಿಸಿಲಿನಿಂದ ಕಂದಿಹೋಗಿ ದೇವರ ಹೆಸರನ್ನು ಶಪಿಸಿದರು. ಈ ಉಪದ್ರವಗಳನ್ನು ದೇವರೊಬ್ಬನೇ ನಿಯಂತ್ರಿಸ ಬಲ್ಲವನಾಗಿದ್ದಾನೆ. ಆದರೆ ಜನರು ತಮ್ಮ ಹೃದಯಗಳನ್ನೂ ಜೀವಿತಗಳನ್ನೂ ಪರಿವರ್ತಿಸಿಕೊಳ್ಳಲಿಲ್ಲ. ದೇವರನ್ನು ಮಹಿಮೆಪಡಿಸಲು ಒಪ್ಪಿಕೊಳ್ಳಲಿಲ್ಲ. [PE][PS]
ಪ್ರಕಟನೆ 16 : 10 (ERVKN)
ಐದನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಆ ಮೃಗದ ಸಿಂಹಾಸನದ ಮೇಲೆ ಸುರಿದನು. ಮೃಗದ ರಾಜ್ಯದಲ್ಲಿ ಅಂಧಕಾರವು ಕವಿಯಿತು. ಜನರು ನೋವಿನಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡರು.
ಪ್ರಕಟನೆ 16 : 11 (ERVKN)
ಜನರು ತಮಗಾದ ಹುಣ್ಣುಗಳಿಂದ ಮತ್ತು ನೋವಿನಿಂದ ಪರಲೋಕದ ದೇವರನ್ನು ದೂಷಿಸಿದರು. ಆದರೆ ಜನರು ತಾವು ಮಾಡುವ ಕೆಟ್ಟಕಾರ್ಯಗಳನ್ನು ತೊರೆದುಬಿಟ್ಟು ತಮ್ಮ ಹೃದಯಗಳನ್ನು ಮಾರ್ಪಡಿಸಿಕೊಳ್ಳಲು ಒಪ್ಪಲಿಲ್ಲ. [PE][PS]
ಪ್ರಕಟನೆ 16 : 12 (ERVKN)
ಆರನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಯೂಫ್ರಟಿಸ್ ಮಹಾನದಿಯ ಮೇಲೆ ಸುರಿಸಿದನು. ನದಿಯಲ್ಲಿದ್ದ ನೀರು ಬತ್ತಿಹೋಯಿತು. ಇದರಿಂದ ಪೂರ್ವದಲ್ಲಿದ್ದ ರಾಜರುಗಳು ಬರಲು ಮಾರ್ಗವು ಸಿದ್ಧವಾಯಿತು.
ಪ್ರಕಟನೆ 16 : 13 (ERVKN)
ಆಗ ಕಪ್ಪೆಗಳಂತಿದ್ದ ಮೂರು ಅಶುದ್ಧಾತ್ಮಗಳನ್ನು ನಾನು ನೋಡಿದೆನು. ಅವು ಘಟಸರ್ಪದ ಬಾಯಿಂದ, ಮೃಗದ ಬಾಯಿಂದ ಮತ್ತು ಸುಳ್ಳುಪ್ರವಾದಿಯ ಬಾಯಿಂದ ಹೊರಗೆ ಬಂದವು.
ಪ್ರಕಟನೆ 16 : 14 (ERVKN)
ಈ ಅಶುದ್ಧಾತ್ಮಗಳು ಸೈತಾನನ ಆತ್ಮಗಳಾಗಿವೆ. ಅವುಗಳಿಗೆ ಮಹಾ ಅದ್ಭುತಗಳನ್ನು ಮಾಡಲು ಶಕ್ತಿಯಿದೆ. ಈ ಅಶುದ್ಧಾತ್ಮಗಳು ಸರ್ವಶಕ್ತನಾದ ದೇವರ ಮಹಾದಿನದಂದು ನಡೆಯುವ ಯುದ್ಧಕ್ಕೆ, ಲೋಕದಲ್ಲೆಲ್ಲಾ ಇರುವ ರಾಜರನ್ನು ಒಟ್ಟುಗೂಡಿಸಲು ಹೊರಗೆ ಹೋಗುತ್ತವೆ. [PE][PS]
ಪ್ರಕಟನೆ 16 : 15 (ERVKN)
“ಕೇಳಿರಿ! ನಾನು ಕಳ್ಳನಂತೆ ಬರುತ್ತೇನೆ. ಎಚ್ಚರವಾಗಿದ್ದು ತನ್ನ ಬಟ್ಟೆಗಳನ್ನು ಕಾಪಾಡಿಕೊಳ್ಳುವವನು ಭಾಗ್ಯವಂತನಾಗಿದ್ದಾನೆ. ಆಗ ಅವನು ಬಟ್ಟೆಯಿಲ್ಲದೆ ಹೊರಗೆ ಹೋಗಿ ತನ್ನನ್ನು ನಾಚಿಕೆಗೆ ಗುರಿಪಡಿಸಿಕೊಳ್ಳುವ ಅಗತ್ಯತೆವಿರುವುದಿಲ್ಲ.” [PE][PS]
ಪ್ರಕಟನೆ 16 : 16 (ERVKN)
ಬಳಿಕ ಅಶುದ್ಧಾತ್ಮಗಳು ರಾಜರುಗಳನ್ನು ಹೀಬ್ರೂ ಭಾಷೆಯಲ್ಲಿ ಹರ್ಮೆಗದೋನ್ ಎಂಬ ಹೆಸರುಳ್ಳ ಸ್ಥಳದಲ್ಲಿ ಒಟ್ಟಾಗಿ ಸೇರಿಸಿದವು. [PE][PS]
ಪ್ರಕಟನೆ 16 : 17 (ERVKN)
ಏಳನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಗಾಳಿಯಲ್ಲಿ ಸುರಿದನು. ಆಗ ಒಂದು ಮಹಾಧ್ವನಿಯು ಸಿಂಹಾಸನದಿಂದ ಆಲಯದ ಹೊರಕ್ಕೆ ಬಂದಿತು. ಆ ಧ್ವನಿಯು, “ಮುಗಿದುಹೋಯಿತು!” ಎಂದು ಹೇಳಿತು.
ಪ್ರಕಟನೆ 16 : 18 (ERVKN)
ಆಗ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಉಂಟಾದವು ಮತ್ತು ಭೂಕಂಪವೂ ಆಯಿತು. ಜನರು ಭೂಮಿಯ ಮೇಲೆ ಇರಲು ಆರಂಭಿಸಿದಂದಿನಿಂದ ಅಂತಹ ಭೀಕರ ಭೂಕಂಪವು ಎಂದೂ ಸಂಭವಿಸಿರಲಿಲ್ಲ.
ಪ್ರಕಟನೆ 16 : 19 (ERVKN)
ಆ ಮಹಾನಗರವು ಒಡೆದು ಮೂರು ಭಾಗವಾಯಿತು. ಜನಾಂಗಗಳ ನಗರಗಳು ನಾಶವಾದವು. ಮಹಾನಗರವಾದ ಬಾಬಿಲೋನನ್ನು ದೇವರು ದಂಡಿಸದೆ ಬಿಡಲಿಲ್ಲ. ಆತನು ತನ್ನ ಉಗ್ರಕೋಪವೆಂಬ ದ್ರಾಕ್ಷಾರಸದಿಂದ ತುಂಬಿದ ಪಾತ್ರೆಯನ್ನು ಆ ನಗರಕ್ಕೆ ಕುಡಿಯಲು ಕೊಟ್ಟನು.
ಪ್ರಕಟನೆ 16 : 20 (ERVKN)
ಸಕಲ ದ್ವೀಪಗಳೂ ಅದೃಶ್ಯವಾದವು ಮತ್ತು ಬೆಟ್ಟಗಳೇ ಇಲ್ಲವಾದವು.
ಪ್ರಕಟನೆ 16 : 21 (ERVKN)
ಆಕಾಶದಿಂದ ಮನುಷ್ಯರ ಮೇಲೆ ದೊಡ್ಡ ಆಲಿಕಲ್ಲುಗಳು ಬಿದ್ದವು. ಆ ಆಲಿಕಲ್ಲುಗಳು ನೂರು ಪೌಂಡುಗಳಷ್ಟು ಭಾರವಾಗಿದ್ದವು. ಈ ಉಪದ್ರವದ ಕಾಟದಿಂದ ಜನರು ದೇವರನ್ನು ದೂಷಿಸಿದರು. ಈ ಉಪದ್ರವವು ಬಹಳ ಭೀಕರವಾಗಿತ್ತು. [PE]

1 2 3 4 5 6 7 8 9 10 11 12 13 14 15 16 17 18 19 20 21

BG:

Opacity:

Color:


Size:


Font: