ಕೀರ್ತನೆಗಳು 99 : 1 (ERVKN)
ಯೆಹೋವನೇ ರಾಜನು! [QBR2] ಜನಾಂಗಗಳು ಭಯದಿಂದ ನಡುಗಲಿ. [QBR] ಆತನು ಕೆರೂಬಿಗಳ ಮೇಲೆ ರಾಜನಂತೆ ಕುಳಿತುಕೊಂಡಿದ್ದಾನೆ. [QBR2] ಭೂಮಿಯು ಭಯದಿಂದ ನಡುಗಲಿ. [QBR]
ಕೀರ್ತನೆಗಳು 99 : 2 (ERVKN)
ಚೀಯೋನಿನ ಯೆಹೋವನು ದೊಡ್ಡವನು! [QBR2] ಆತನು ಜನಾಂಗಗಳಿಗೆಲ್ಲಾ ಮಹಾನಾಯಕನಾಗಿದ್ದಾನೆ. [QBR]
ಕೀರ್ತನೆಗಳು 99 : 3 (ERVKN)
ಅವರೆಲ್ಲರೂ ನಿನ್ನ ಭಯಂಕರವಾದ ಹೆಸರನ್ನು ಕೊಂಡಾಡಲಿ. [QBR2] ಆತನೇ ಪರಿಶುದ್ಧನು. [QBR]
ಕೀರ್ತನೆಗಳು 99 : 4 (ERVKN)
ಶಕ್ತಿಪೂರ್ಣನಾದ ರಾಜನು ನ್ಯಾಯವನ್ನು ಪ್ರೀತಿಸುವನು. [QBR2] ದೇವರೇ, ನೀತಿಯನ್ನು ಸೃಷ್ಟಿಸಿದಾತನು ನೀನೇ. [QBR2] ಯಾಕೋಬ್ಯರಲ್ಲಿ ನ್ಯಾಯನೀತಿಗಳನ್ನು ಸ್ಥಾಪಿಸಿದವನು ನೀನೇ. [QBR]
ಕೀರ್ತನೆಗಳು 99 : 5 (ERVKN)
ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ, [QBR2] ಆತನ ಪವಿತ್ರ ಪಾದಪೀಠಕ್ಕೆ [*ಪಾದಪೀಠ ಬಹುಶಃ, ಇದು ದೇವಾಲಯವನ್ನು ಸೂಚಿಸುತ್ತದೆ.] ಅಡ್ಡಬೀಳಿರಿ. [QBR]
ಕೀರ್ತನೆಗಳು 99 : 6 (ERVKN)
ಮೋಶೆಯೂ ಆರೋನನೂ ದೇವರ ಯಾಜಕರುಗಳಾಗಿದ್ದರು. [QBR2] ಸಮುವೇಲನೂ ಆತನ ಹೆಸರಿನಲ್ಲಿ ಪ್ರಾರ್ಥಿಸಿದನು. [QBR] ಆತನು ಅವರೆಲ್ಲರ ಪ್ರಾರ್ಥನೆಗಳಿಗೆ ಉತ್ತರಿಸಿದನು. [QBR]
ಕೀರ್ತನೆಗಳು 99 : 7 (ERVKN)
ಆತನು ಮೇಘಸ್ತಂಭದಿಂದ ಅವರೊಂದಿಗೆ ಮಾತಾಡಿದನು. [QBR2] ಅವರು ಆಜ್ಞೆಗಳಿಗೆ ವಿಧೇಯರಾದರು. [QBR2] ಆತನು ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು. [QBR]
ಕೀರ್ತನೆಗಳು 99 : 8 (ERVKN)
ನಮ್ಮ ದೇವರಾದ ಯೆಹೋವನೇ, ನೀನು ಅವರ ಪ್ರಾರ್ಥನೆಗಳಿಗೆ ಉತ್ತರಿಸಿದೆ. [QBR2] ನೀನು ಕ್ಷಮಿಸುವ ದೇವರೆಂದೂ [QBR2] ದುಷ್ಕೃತ್ಯಗಳಿಗೆ ದಂಡಿಸುವವನೆಂದೂ ಅವರಿಗೆ ತೋರ್ಪಡಿಸಿದೆ. [QBR]
ಕೀರ್ತನೆಗಳು 99 : 9 (ERVKN)
ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ. [QBR2] ಆತನ ಪವಿತ್ರ ಪರ್ವತದ ಕಡೆಗೆ ಅಡ್ಡಬಿದ್ದು ಆತನನ್ನು ಆರಾಧಿಸಿರಿ. [QBR2] ನಮ್ಮ ದೇವರಾದ ಯೆಹೋವನೇ ಪರಿಶುದ್ಧನು! [PE]

1 2 3 4 5 6 7 8 9

BG:

Opacity:

Color:


Size:


Font: