ಕೀರ್ತನೆಗಳು 82 : 1 (ERVKN)
ದೇವಾದಿದೇವನು ತನ್ನ ಸಭೆಯಲ್ಲಿ *ದೇವಾದಿದೇವನು ತನ್ನ ಸಭೆಯಲ್ಲಿ ಇಲ್ಲಿ ಇದರರ್ಥ, ಇಸ್ರೇಲ್ ನಾಯಕರುಗಳ ಸಭೆಯಲ್ಲಿ ಎಂದಿರಬಹುದು. ಅನೇಕಸಲ, ನಾಯಕರನ್ನು ಮತ್ತು ರಾಜರುಗಳನ್ನು ದೇವರುಗಳೆಂದು ಕರೆಯಲಾಗಿದೆ. ನಿಂತುಕೊಂಡು ದೇವರುಗಳಿಗೆ ನ್ಯಾಯತೀರ್ಪು ನೀಡುವನು.
ಕೀರ್ತನೆಗಳು 82 : 2 (ERVKN)
ದೇವರು ಹೀಗೆನ್ನುತ್ತಾನೆ: “ಇನ್ನೆಷ್ಟರವರೆಗೆ ಅನ್ಯಾಯವಾಗಿ ತೀರ್ಪು ಕೊಡುತ್ತೀರಿ? ಇನ್ನೆಷ್ಟರವರೆಗೆ ದುಷ್ಟರನ್ನು ದಂಡಿಸದೆ ಬಿಡುಗಡೆ ಮಾಡುತ್ತೀರಿ?”
ಕೀರ್ತನೆಗಳು 82 : 3 (ERVKN)
“ಅನಾಥರ ಮತ್ತು ಬಡಜನರ ಪರವಾಗಿ ವಾದಿಸಿರಿ. ಅನ್ಯಾಯಕ್ಕೆ ಒಳಗಾಗಿರುವ ಬಡವರ ಹಕ್ಕುಗಳನ್ನು ಸಂರಕ್ಷಿಸಿರಿ.
ಕೀರ್ತನೆಗಳು 82 : 4 (ERVKN)
ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡಿರಿ. ಅವರನ್ನು ದುಷ್ಟರಿಂದ ರಕ್ಷಿಸಿರಿ.
ಕೀರ್ತನೆಗಳು 82 : 5 (ERVKN)
“ಅವರಿಗೆ ಏನೂ ಗೊತ್ತಿಲ್ಲ. ಅವರಿಗೆ ಏನೂ ಅರ್ಥವಾಗುವುದಿಲ್ಲ!
ತಾವು ಮಾಡುತ್ತಿರುವುದೂ ಅವರಿಗೆ ತಿಳಿಯದು. ಅವರ ಪ್ರಪಂಚವು ಅವರ ಸುತ್ತಲೂ ಕುಸಿದುಬೀಳುತ್ತಿದೆ!”
ಕೀರ್ತನೆಗಳು 82 : 6 (ERVKN)
ನಾಯಕರಾದ ನಿಮಗೆ ನಾನು ಹೇಳುವುದೇನೆಂದರೆ: “ನೀವು ದೇವರುಗಳು. ನೀವು ಮಹೋನ್ನತನಾದ ದೇವರ ಪುತ್ರರು.
ಕೀರ್ತನೆಗಳು 82 : 7 (ERVKN)
ಆದರೆ ಎಲ್ಲಾ ಜನರಂತೆ ನೀವೂ ಸಾಯುವಿರಿ. ಬೇರೆಲ್ಲಾ ನಾಯಕರುಗಳಂತೆಯೇ ನೀವು ಸಾಯುವಿರಿ.”
ಕೀರ್ತನೆಗಳು 82 : 8 (ERVKN)
ದೇವರೇ ಎದ್ದೇಳು! ನೀನೇ ನ್ಯಾಯಾಧೀಶನಾಗಿರು! ಎಲ್ಲಾ ಜನಾಂಗಗಳಿಗೆ ನೀನೇ ನಾಯಕನಾಗಿರು!
❮
❯