ಕೀರ್ತನೆಗಳು 66 : 1 (ERVKN)
ಸರ್ವಭೂನಿವಾಸಿಗಳೇ, ದೇವರಿಗೆ ಜಯಘೋಷ ಮಾಡಿರಿ! [QBR]
ಕೀರ್ತನೆಗಳು 66 : 2 (ERVKN)
ಆತನ ಹೆಸರಿನ ಮಹಿಮೆಯನ್ನು ಕೀರ್ತಿಸಿರಿ. [QBR2] ಸ್ತುತಿಗೀತೆಗಳಿಂದ ಆತನನ್ನು ಸನ್ಮಾನಿಸಿರಿ. [QBR]
ಕೀರ್ತನೆಗಳು 66 : 3 (ERVKN)
ದೇವರೇ, ನಿನ್ನ ಕಾರ್ಯಗಳು ಎಷ್ಟು ಅದ್ಭುತವಾಗಿವೆ! [QBR2] ನಿನ್ನ ಮಹಾಶಕ್ತಿಯಿಂದಾಗಿ ಶತ್ರುಗಳು ನಿನಗೆ ಭಯಪಟ್ಟು ಅಡ್ಡಬೀಳುವರು. [QBR]
ಕೀರ್ತನೆಗಳು 66 : 4 (ERVKN)
ಸರ್ವಭೂನಿವಾಸಿಗಳು ನಿನ್ನನ್ನು ಆರಾಧಿಸಲಿ. [QBR2] ಪ್ರತಿಯೊಬ್ಬರೂ ನಿನ್ನ ಹೆಸರನ್ನು ಕೀರ್ತಿಸಲಿ.
ಕೀರ್ತನೆಗಳು 66 : 5 (ERVKN)
ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ; [QBR2] ಆತನ ಕಾರ್ಯಗಳು ಅತ್ಯದ್ಭುತವಾಗಿವೆ! [QBR]
ಕೀರ್ತನೆಗಳು 66 : 6 (ERVKN)
ಆತನು ಸಮುದ್ರವನ್ನು ಒಣನೆಲವನ್ನಾಗಿ ಮಾಡಿದನು. [QBR2] ಆತನ ಜನರು ಕಾಲುನಡಿಗೆಯಿಂದ ನದಿಯನ್ನು ದಾಟಿದರು. [QBR2] ಅದಕ್ಕಾಗಿ ನಾವು ಆತನಲ್ಲಿ ಉಲ್ಲಾಸಪಡೋಣ. [QBR]
ಕೀರ್ತನೆಗಳು 66 : 7 (ERVKN)
ಆತನು ಪ್ರಪಂಚವನ್ನು ತನ್ನ ಮಹಾಶಕ್ತಿಯಿಂದ ಆಳುತ್ತಾನೆ. [QBR2] ಆತನು ಎಲ್ಲರನ್ನೂ ಗಮನಿಸುತ್ತಾನೆ. [QBR2] ಆತನ ವಿರುದ್ಧ ದಂಗೆಯೇಳಲು ಯಾರಿಗೂ ಆಗದು.
ಕೀರ್ತನೆಗಳು 66 : 8 (ERVKN)
ಜನಾಂಗಗಳೇ, ನಮ್ಮ ದೇವರನ್ನು ಕೊಂಡಾಡಿರಿ. [QBR2] ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ. [QBR]
ಕೀರ್ತನೆಗಳು 66 : 9 (ERVKN)
ನಮಗೆ ಜೀವಕೊಟ್ಟವನು ಆತನೇ. [QBR2] ನಮ್ಮನ್ನು ಕಾಪಾಡುವವನೂ ಆತನೇ. [QBR]
ಕೀರ್ತನೆಗಳು 66 : 10 (ERVKN)
ಜನರು ಬೆಳ್ಳಿಯನ್ನು ಬೆಂಕಿಯಿಂದ ಶೋಧಿಸುವಂತೆ ದೇವರು ನಮ್ಮನ್ನು ಪರೀಕ್ಷಿಸಿದನು. [QBR]
ಕೀರ್ತನೆಗಳು 66 : 11 (ERVKN)
ದೇವರೇ, ನೀನು ನಮ್ಮನ್ನು ಬಲೆಯಲ್ಲಿ ಸಿಕ್ಕಿಸಿದೆ. [QBR2] ನೀನು ನಮಗೆ ಭಾರವಾದ ಹೊರೆಗಳನ್ನು ಹೊರಿಸಿದೆ; [QBR]
ಕೀರ್ತನೆಗಳು 66 : 12 (ERVKN)
ಶತ್ರುಗಳು ನಮ್ಮ ಮೇಲೆ ನಡೆಯಮಾಡಿದೆ. [QBR2] ನೀನು ನಮ್ಮನ್ನು ಬೆಂಕಿಯಲ್ಲಿಯೂ ನೀರಿನಲ್ಲಿಯೂ ಹಾಯಿಸಿದೆ. [QBR2] ಆದರೂ ಸುರಕ್ಷಿತ ಸ್ಥಳಕ್ಕೆ ನಮ್ಮನ್ನು ತಂದು ಸೇರಿಸಿದೆ. [QBR]
ಕೀರ್ತನೆಗಳು 66 : 13 (ERVKN)
ಆದ್ದರಿಂದ ನಿನ್ನ ಆಲಯಕ್ಕೆ ಬಂದು ಯಜ್ಞಗಳನ್ನು ನಿನಗೆ ಸಮರ್ಪಿಸುವೆನು. [QBR]
ಕೀರ್ತನೆಗಳು 66 : 14 (ERVKN)
ನಾನು ಇಕ್ಕಟ್ಟಿನಲ್ಲಿದ್ದಾಗ ಸಹಾಯಕ್ಕಾಗಿ ನಿನ್ನನ್ನು ಕೂಗಿಕೊಂಡಾಗ [QBR2] ಮಾಡಿದ ಹರಕೆಗಳನ್ನು ಸಲ್ಲಿಸುವೆನು. [QBR2]
ಕೀರ್ತನೆಗಳು 66 : 15 (ERVKN)
ಪಾಪಪರಿಹಾರಕ ಯಜ್ಞಗಳನ್ನು ನಿನಗೆ ಅರ್ಪಿಸುವೆನು; [QBR2] ಟಗರುಗಳನ್ನೂ ಧೂಪವನ್ನೂ ಅರ್ಪಿಸುವೆನು; [QBR2] ಹೋರಿಗಳನ್ನೂ ಹೋತಗಳನ್ನೂ ಅರ್ಪಿಸುವೆನು.
ಕೀರ್ತನೆಗಳು 66 : 16 (ERVKN)
ದೇವಭಕ್ತರೆಲ್ಲರೂ ಬನ್ನಿರಿ, [QBR2] ದೇವರು ನನಗೋಸ್ಕರ ಮಾಡಿರುವುದನ್ನು ನಿಮಗೆ ತಿಳಿಸುವೆನು. [QBR]
ಕೀರ್ತನೆಗಳು 66 : 17 (ERVKN)
ನಾನು ಆತನಿಗೆ ಪ್ರಾರ್ಥಿಸಿದೆನು; [QBR2] ಆತನನ್ನು ಸ್ತುತಿಸಿದೆನು. [QBR]
ಕೀರ್ತನೆಗಳು 66 : 18 (ERVKN)
ನನ್ನ ಶುದ್ಧಹೃದಯವನ್ನು ಕಂಡು [QBR2] ಯೆಹೋವನು ಕಿವಿಗೊಟ್ಟನು. [QBR]
ಕೀರ್ತನೆಗಳು 66 : 19 (ERVKN)
ದೇವರು ನನ್ನ ಮೊರೆಯನ್ನು ಕೇಳಿದನು; [QBR2] ನನ್ನ ಪ್ರಾರ್ಥನೆಯನ್ನು ಆಲಿಸಿದನು. [QBR]
ಕೀರ್ತನೆಗಳು 66 : 20 (ERVKN)
ದೇವರಿಗೆ ಸ್ತೋತ್ರವಾಗಲಿ! [QBR2] ಆತನು ನನಗೆ ವಿಮುಖನಾಗದೆ, [QBR2] ನನ್ನ ಪ್ರಾರ್ಥನೆಯನ್ನು ಆಲಿಸಿ, ತನ್ನ ಪ್ರೀತಿ ತೋರಿದನು! [PE]

1 2 3 4 5 6 7 8 9 10 11 12 13 14 15 16 17 18 19 20

BG:

Opacity:

Color:


Size:


Font: