ಕೀರ್ತನೆಗಳು 65 : 1 (ERVKN)
ದೇವರೇ, ಚೀಯೋನಿನಲ್ಲಿ ನಾವು ನಿನ್ನನ್ನು ಸ್ತುತಿಸುವೆವು. [QBR2] ನಾವು ಮಾಡಿದ ಹರಕೆಗಳನ್ನು ನಿನಗೆ ಸಲ್ಲಿಸುವೆವು. [QBR]
ಕೀರ್ತನೆಗಳು 65 : 2 (ERVKN)
ಪ್ರಾರ್ಥನೆಯನ್ನು ಕೇಳುವಾತನೇ, [QBR2] ಜನರೆಲ್ಲರೂ ನಿನ್ನ ಬಳಿಗೆ ಬರುವರು. [QBR]
ಕೀರ್ತನೆಗಳು 65 : 3 (ERVKN)
ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ; [QBR2] ನಮ್ಮನ್ನು ಆ ಪಾಪಗಳಿಂದ ಬಿಡಿಸು. [QBR]
ಕೀರ್ತನೆಗಳು 65 : 4 (ERVKN)
ನಿನ್ನ ಸೇವಕರನ್ನು ಆರಿಸಿಕೊಂಡಾತನು ನೀನೇ. [QBR] ನಿನ್ನ ಆಲಯಕ್ಕೆ ಬಂದು ನಿನ್ನನ್ನು ಆರಾಧಿಸಲು [QBR2] ನಮ್ಮನ್ನು ಆರಿಸಿಕೊಂಡಾತನು ನೀನೇ. [QBR] ನಿನ್ನ ಮಹಾಪವಿತ್ರ ಆಲಯದ ಸೌಭಾಗ್ಯದಿಂದ [QBR2] ನಾವು ಉಲ್ಲಾಸಗೊಂಡಿದ್ದೇವೆ. [QBR]
ಕೀರ್ತನೆಗಳು 65 : 5 (ERVKN)
ನಮ್ಮ ರಕ್ಷಕನಾದ ದೇವರೇ, [QBR2] ನೀತಿವಂತರ ಪ್ರಾರ್ಥನೆಗೆ ಸದುತ್ತರವನ್ನು ದಯಪಾಲಿಸು; [QBR] ಅವರಿಗೋಸ್ಕರ ಮಹತ್ಕಾರ್ಯಗಳನ್ನು ನಡೆಸು. [QBR2] ಸರ್ವಭೂನಿವಾಸಿಗಳ ನಂಬಿಕೆಗೆ ನೀನೇ ಆಧಾರ. [QBR]
ಕೀರ್ತನೆಗಳು 65 : 6 (ERVKN)
ಸ್ವಬಲದಿಂದ ಪರ್ವತಗಳನ್ನು ನಿರ್ಮಿಸಿದಾತನು ದೇವರೇ. [QBR2] ಆತನು “ಶೌರ್ಯ” ಎಂಬ ನಡುಕಟ್ಟನ್ನು ಬಿಗಿದುಕೊಂಡಿದ್ದಾನೆ. [QBR]
ಕೀರ್ತನೆಗಳು 65 : 7 (ERVKN)
ಭೋರ್ಗರೆಯುವ ಸಮುದ್ರಗಳನ್ನೂ [QBR2] ಅನ್ಯಜನಾಂಗಗಳ ದಂಗೆಯನ್ನೂ ಶಾಂತಗೊಳಿಸುವಾತನು ದೇವರೇ. [QBR]
ಕೀರ್ತನೆಗಳು 65 : 8 (ERVKN)
ಭೂಲೋಕದಾದ್ಯಂತದಲ್ಲಿರುವ ಜನರು ನಿನ್ನ ಮಹತ್ಕಾರ್ಯಗಳಿಂದ ಆಶ್ಚರ್ಯಚಕಿತರಾಗಿದ್ದಾರೆ. [QBR2] ಸೂರ್ಯೋದಯವೂ ಸೂರ್ಯಸ್ತಮಾನವೂ ನಮ್ಮನ್ನು ಹರ್ಷಗೊಳಿಸುತ್ತವೆ. [QBR]
ಕೀರ್ತನೆಗಳು 65 : 9 (ERVKN)
ದೇವರೇ, ಭೂಪಾಲಕನು ನೀನೇ. [QBR2] ಭೂಮಿಗೆ ನೀರೆರೆದು ಹದಗೊಳಿಸುವಾತನು ನೀನೇ. [QBR] ತೊರೆಗಳನ್ನು ತುಂಬಿಸಿ [QBR2] ಸುಗ್ಗಿಯನ್ನು ಬರಮಾಡುವಾತನು ನೀನೇ. [QBR]
ಕೀರ್ತನೆಗಳು 65 : 10 (ERVKN)
ಉತ್ತಿರುವ ಹೊಲಗಳ ಮೇಲೆ ಮಳೆ ಸುರಿಸಿ, [QBR2] ಹೆಂಟೆಗಳನ್ನು ಕರಗಿಸಿ, [QBR] ಭೂಮಿಯನ್ನು ಮೃದುಗೊಳಿಸಿ, [QBR2] ಎಳೆ ಸಸಿಗಳನ್ನು ಬೆಳೆಸುವಾತನು ನೀನೇ. [QBR]
ಕೀರ್ತನೆಗಳು 65 : 11 (ERVKN)
ಹೊಸ ವರ್ಷವನ್ನು ಸಮೃದ್ಧಿಕರವಾದ ಸುಗ್ಗಿಯೊಂದಿಗೆ ಆರಂಭಿಸುವಾತನು ನೀನೇ. [QBR2] ಅನೇಕ ಬೆಳೆಗಳಿಂದ ಬಂಡಿಗಳನ್ನು ತುಂಬಿಸುವಾತನು ನೀನೇ. [QBR]
ಕೀರ್ತನೆಗಳು 65 : 12 (ERVKN)
ಅರಣ್ಯವು ಹುಲ್ಲಿನಿಂದ ಆವೃತವಾಗಿದೆ. [QBR2] ಬೆಟ್ಟಗುಡ್ಡಗಳು ಸಮೃದ್ಧಿಕರ ಫಸಲಿನಿಂದ ಕಂಗೊಳಿಸುತ್ತವೆ. [QBR]
ಕೀರ್ತನೆಗಳು 65 : 13 (ERVKN)
ಹುಲ್ಲುಗಾವಲುಗಳು ಕುರಿಗಳಿಂದ ತುಂಬಿಹೋಗಿವೆ. [QBR2] ಕಣಿವೆಗಳು ಧಾನ್ಯದಿಂದ ತುಂಬಿತುಳುಕುತ್ತಿವೆ. [QBR] ಎಲ್ಲರೂ ಹಾಡುತ್ತಾ ಆನಂದಘೋಷ ಮಾಡುತ್ತಿದ್ದಾರೆ. [PE]

1 2 3 4 5 6 7 8 9 10 11 12 13

BG:

Opacity:

Color:


Size:


Font: