ಕೀರ್ತನೆಗಳು 63 : 1 (ERVKN)
ದೇವರೇ, ನೀನೇ ನನ್ನ ದೇವರು. [QBR2] ನಿನಗಾಗಿ ಕುತೂಹಲದಿಂದ ಎದುರು ನೋಡುತ್ತೇನೆ. [QBR] ನೀರಿಲ್ಲದೆ ಒಣಗಿದ ಭೂಮಿಯಂತೆ ನನ್ನ ಆತ್ಮವು ನಿನಗಾಗಿ ಬಾಯಾರಿದೆ; [QBR2] ನನ್ನ ದೇಹವು ನಿನಗಾಗಿ ಬಯಸಿದೆ. [QBR]
ಕೀರ್ತನೆಗಳು 63 : 2 (ERVKN)
ಹೌದು, ನಿನ್ನನ್ನು ನಿನ್ನ ಆಲಯದಲ್ಲಿ ನೋಡಿದ್ದೇನೆ, [QBR2] ನಿನ್ನ ಶಕ್ತಿಯನ್ನೂ ಮಹಿಮೆಯನ್ನೂ ಕಂಡಿದ್ದೇನೆ. [QBR]
ಕೀರ್ತನೆಗಳು 63 : 3 (ERVKN)
ನಿನ್ನ ಪ್ರೀತಿಯು ಜೀವಕ್ಕಿಂತಲೂ ಶ್ರೇಷ್ಠ. [QBR2] ನನ್ನ ತುಟಿಗಳು ನಿನ್ನನ್ನು ಕೊಂಡಾಡುತ್ತವೆ. [QBR]
ಕೀರ್ತನೆಗಳು 63 : 4 (ERVKN)
ಹೌದು, ನನ್ನ ಜೀವಮಾನವೆಲ್ಲಾ ನಿನ್ನನ್ನು ಕೊಂಡಾಡುವೆನು. [QBR2] ನಿನ್ನ ಹೆಸರಿನಲ್ಲಿ ಕೈಮುಗಿದು ಪ್ರಾರ್ಥಿಸುವೆನು. [QBR]
ಕೀರ್ತನೆಗಳು 63 : 5 (ERVKN)
ಮೃಷ್ಟಾನ್ನವನ್ನು ತಿಂದಿರುವವನಂತೆ ತೃಪ್ತನಾಗಿರುವೆನು. [QBR2] ನನ್ನ ಬಾಯಿ ನಿನ್ನನ್ನು ಕೊಂಡಾಡುವುದು. [QBR]
ಕೀರ್ತನೆಗಳು 63 : 6 (ERVKN)
ಹಾಸಿಗೆಯು ಮೇಲೆ ಮಲಗಿರುವಾಗಲೂ ನಿನ್ನನ್ನು ಜ್ಞಾಪಿಸಿಕೊಳ್ಳುವೆನು. [QBR2] ಮಧ್ಯರಾತ್ರಿಯಲ್ಲಿಯೂ ನಿನ್ನನ್ನು ನೆನಸಿಕೊಳ್ಳುವೆನು. [QBR]
ಕೀರ್ತನೆಗಳು 63 : 7 (ERVKN)
ನಿಜವಾಗಿಯೂ ನೀನೇ ನನಗೆ ಸಹಾಯಕ. [QBR2] ನಿನ್ನ ರೆಕ್ಕೆಗಳ ಮರೆಯಲ್ಲಿ ಆನಂದಘೋಷ ಮಾಡುವೆನು. [QBR]
ಕೀರ್ತನೆಗಳು 63 : 8 (ERVKN)
ನನ್ನ ಆತ್ಮವು ನಿನ್ನನ್ನು ಅಂಟಿಕೊಂಡಿರುವುದು. [QBR2] ನಿನ್ನ ಬಲಗೈ ನನ್ನ ಕೈಹಿಡಿದು ನಡೆಸುವುದು.
ಕೀರ್ತನೆಗಳು 63 : 9 (ERVKN)
ನನ್ನನ್ನು ಕೊಲ್ಲಬೇಕೆಂದಿರುವವರು [QBR2] ಪಾತಾಳಕ್ಕೆ ಇಳಿದುಹೋಗುವರು. [QBR]
ಕೀರ್ತನೆಗಳು 63 : 10 (ERVKN)
ಅವರು ಖಡ್ಗಗಳಿಂದ ಕೊಲ್ಲಲ್ಪಡುವರು. [QBR2] ಅವರ ಶವಗಳು ನರಿಗಳ ಪಾಲಾಗುವವು. [QBR]
ಕೀರ್ತನೆಗಳು 63 : 11 (ERVKN)
ರಾಜನಾದರೋ ತನ್ನ ದೇವರಲ್ಲಿಯೇ ಸಂತೋಷಿಸುವನು. [QBR2] ಹರಕೆಹೊತ್ತು ಅವನಿಗೆ ವಿಧೇಯರಾಗಿರುವವರು ದೇವರನ್ನು ಕೊಂಡಾಡುವರು, [QBR2] ಯಾಕೆಂದರೆ ಆ ಸುಳ್ಳುಗರರನ್ನೆಲ್ಲಾ ಆತನು ಸೋಲಿಸಿದ್ದಾನೆ. [PE]
❮
❯