ಕೀರ್ತನೆಗಳು 60 : 1 (ERVKN)
ದೇವರೇ, ನೀನು ನಮ್ಮನ್ನು ಕೋಪದಿಂದ ಕೈಬಿಟ್ಟಿರುವೆ; [QBR2] ನಮ್ಮನ್ನು ನಾಶಗೊಳಿಸಿರುವೆ. [QBR2] ನಮ್ಮನ್ನು ಪುನರ್‌ಸ್ಥಾಪಿಸು. [QBR]
ಕೀರ್ತನೆಗಳು 60 : 2 (ERVKN)
ನೀನು ಭೂಮಿಯನ್ನು ನಡುಗಿಸಿ ಸೀಳಿಬಿಟ್ಟಿರುವೆ. [QBR2] ನಮ್ಮ ದೇಶವು ಕುಸಿದುಬೀಳುತ್ತಿದೆ; [QBR2] ಅದನ್ನು ಸರಿಪಡಿಸು. [QBR]
ಕೀರ್ತನೆಗಳು 60 : 3 (ERVKN)
ನೀನು ನಿನ್ನ ಜನರಿಗೆ ಅನೇಕ ಕಷ್ಟಗಳನ್ನು ಕೊಟ್ಟಿರುವೆ. [QBR2] ನಾವು ಕುಡಿದವರಂತೆ ತೂರಾಡುತ್ತಾ ಬೀಳುತ್ತಿದ್ದೇವೆ. [QBR]
ಕೀರ್ತನೆಗಳು 60 : 4 (ERVKN)
ನಿನ್ನ ಆರಾಧಕರನ್ನು ನೀನು ಎಚ್ಚರಿಸುವೆ. [QBR2] ಈಗ ಅವರು ಶತ್ರುಗಳಿಂದ ಪಾರಾಗಬಹುದು.
ಕೀರ್ತನೆಗಳು 60 : 5 (ERVKN)
ನಿನ್ನ ಮಹಾಶಕ್ತಿಯಿಂದ ನಮ್ಮನ್ನು ರಕ್ಷಿಸು! [QBR2] ನನ್ನ ಪ್ರಾರ್ಥನೆಗೆ ಉತ್ತರನೀಡಿ ನಿನ್ನ ಪ್ರಿಯರನ್ನು ರಕ್ಷಿಸು!
ಕೀರ್ತನೆಗಳು 60 : 6 (ERVKN)
ದೇವರು ತನ್ನ ಆಲಯದೊಳಗೆ ಹೀಗೆಂದನು: [QBR2] “ನಾನು ಅವರಿಗೆ ಶೆಕೆಮನ್ನು ಕೊಡುವೆನು; [QBR2] ಸುಕ್ಕೋತ್ ಕಣಿವೆಯನ್ನೂ ಅವರಿಗೆ ಕೊಡುವೆನು. [QBR2]
ಕೀರ್ತನೆಗಳು 60 : 7 (ERVKN)
ಗಿಲ್ಯಾದ್ ಮತ್ತು ಮನಸ್ಸೆ ನನ್ನವೇ. [QBR2] ಎಫ್ರಾಯೀಮ್ ನನ್ನ ಶಿರಸ್ತ್ರಾಣ. [QBR2] ಯೆಹೂದ ನನ್ನ ರಾಜದಂಡ. [QBR2]
ಕೀರ್ತನೆಗಳು 60 : 8 (ERVKN)
ಮೋವಾಬ್ ನನ್ನ ಸ್ನಾನಪಾತ್ರೆ. [QBR2] ಎದೋಮ್ ನನ್ನ ಪಾದರಕ್ಷೆಗಳ ಸ್ಥಳ. [QBR2] ನಾನು ಫಿಲಿಷ್ಟಿಯರನ್ನು ಸೋಲಿಸಿ ಜಯಘೋಷ ಮಾಡುವೆ.”
ಕೀರ್ತನೆಗಳು 60 : 9 (ERVKN)
(9-10) ದೇವರೇ, ನೀನು ನಮ್ಮನ್ನು ಕೈಬಿಟ್ಟಿರುವೆ. [QBR2] ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲ. [QBR] ಹೀಗಿರಲು, ಕೋಟೆಕೊತ್ತಲುಗಳುಳ್ಳ ಪಟ್ಟಣಕ್ಕೆ ನನ್ನನ್ನು ನಡೆಸುವವರು ಯಾರು? [QBR2] ಎದೋಮಿನ ವಿರುದ್ಧ ನನ್ನನ್ನು ನಡೆಸುವವರು ಯಾರು? [QBR]
ಕೀರ್ತನೆಗಳು 60 : 10 (ERVKN)
ಕೀರ್ತನೆಗಳು 60 : 11 (ERVKN)
ದೇವರೇ, ವೈರಿಗಳನ್ನು ಸೋಲಿಸಲು ನಮಗೆ ಸಹಾಯಮಾಡು! [QBR2] ಜನರು ನಮಗೆ ಸಹಾಯಮಾಡಲಾರರು! [QBR]
ಕೀರ್ತನೆಗಳು 60 : 12 (ERVKN)
ದೇವರೊಬ್ಬನೇ ನಮ್ಮನ್ನು ಬಲಗೊಳಿಸಬಲ್ಲನು. [QBR2] ಆತನೊಬ್ಬನೇ ನಮ್ಮ ಶತ್ರುಗಳನ್ನು ಸೋಲಿಸಬಲ್ಲನು! [PE]
❮
❯