ಕೀರ್ತನೆಗಳು 60 : 1 (ERVKN)
ರಚನೆಗಾರ : ದಾವೀದ. ದೇವರೇ, ನೀನು ನಮ್ಮನ್ನು ಕೋಪದಿಂದ ಕೈಬಿಟ್ಟಿರುವೆ; ನಮ್ಮನ್ನು ನಾಶಗೊಳಿಸಿರುವೆ. ನಮ್ಮನ್ನು ಮತ್ತೆ ಪುನರ್‌ಸ್ಥಾಪಿಸು.
ಕೀರ್ತನೆಗಳು 60 : 2 (ERVKN)
ನೀನು ಭೂಮಿಯನ್ನು ನಡುಗಿಸಿ ಸೀಳಿಬಿಟ್ಟಿರುವೆ. ನಮ್ಮ ದೇಶವು ಕುಸಿದುಬೀಳುತ್ತಿದೆ; ಅದನ್ನು ಸರಿಪಡಿಸು.
ಕೀರ್ತನೆಗಳು 60 : 3 (ERVKN)
ನೀನು ನಿನ್ನ ಜನರಿಗೆ ಅನೇಕ ಕಷ್ಟಗಳನ್ನು ಕೊಟ್ಟಿರುವೆ. ನಾವು ಕುಡಿದವರಂತೆ ತೂರಾಡುತ್ತಾ ಬೀಳುತ್ತಿದ್ದೇವೆ.
ಕೀರ್ತನೆಗಳು 60 : 4 (ERVKN)
ನಿನ್ನ ಆರಾಧಕರನ್ನು ನೀನು ಎಚ್ಚರಿಸುವೆ. ಈಗ ಅವರು ಶತ್ರುಗಳಿಂದ ಪಾರಾಗಬಹುದು.
ಕೀರ್ತನೆಗಳು 60 : 5 (ERVKN)
ನಿನ್ನ ಮಹಾಶಕ್ತಿಯಿಂದ ನಮ್ಮನ್ನು ರಕ್ಷಿಸು! ನನ್ನ ಪ್ರಾರ್ಥನೆಗೆ ಉತ್ತರನೀಡಿ ನಿನ್ನ ಪ್ರಿಯರನ್ನು ರಕ್ಷಿಸು!
ಕೀರ್ತನೆಗಳು 60 : 6 (ERVKN)
ದೇವರು ತನ್ನ ಆಲಯದೊಳಗೆ ಇಂತೆಂದನು: “ನಾನು ಅವರಿಗೆ ಶೆಖೆಮನ್ನು ಕೊಡುವೆನು; ಸುಕ್ಕೋತ್ ಕಣಿವೆಯನ್ನೂ ಅವರಿಗೆ ಕೊಡುವೆನು.
ಕೀರ್ತನೆಗಳು 60 : 7 (ERVKN)
ಗಿಲ್ಯಾದ್ ಮತ್ತು ಮನಸ್ಸೆ ನನ್ನವೇ. ಎಫ್ರಾಯೀಮ್ ನನ್ನ ಶಿರಸ್ತ್ರಾಣ. ಯೆಹೂದ ನನ್ನ ರಾಜದಂಡ.
ಕೀರ್ತನೆಗಳು 60 : 8 (ERVKN)
ಮೋವಾಬ್ ನನ್ನ ಸ್ನಾನಪಾತ್ರೆ. ಎದೋಮ್ ನನ್ನ ಪಾದರಕ್ಷೆಗಳ ಸ್ಥಳ. ನಾನು ಫಿಲಿಷ್ಟಿಯರನ್ನು ಸೋಲಿಸಿ ಜಯಘೋಷ ಮಾಡುವೆ.”
ಕೀರ್ತನೆಗಳು 60 : 9 (ERVKN)
[This verse may not be a part of this translation]
ಕೀರ್ತನೆಗಳು 60 : 10 (ERVKN)
[This verse may not be a part of this translation]
ಕೀರ್ತನೆಗಳು 60 : 11 (ERVKN)
ದೇವರೇ, ವೈರಿಗಳನ್ನು ಸೋಲಿಸಲು ನಮಗೆ ಸಹಾಯಮಾಡು! ಜನರು ನಮಗೆ ಸಹಾಯಮಾಡಲಾರರು!
ಕೀರ್ತನೆಗಳು 60 : 12 (ERVKN)
ದೇವರೊಬ್ಬನೇ ನಮ್ಮನ್ನು ಬಲಗೊಳಿಸಬಲ್ಲನು. ಆತನೊಬ್ಬನೇ ನಮ್ಮ ಶತ್ರುಗಳನ್ನು ಸೋಲಿಸಬಲ್ಲನು!

1 2 3 4 5 6 7 8 9 10 11 12

BG:

Opacity:

Color:


Size:


Font: