ಕೀರ್ತನೆಗಳು 30 : 1 (ERVKN)
ಯೆಹೋವನೇ, ನನ್ನನ್ನು ಇಕ್ಕಟ್ಟುಗಳಿಂದ ಮೇಲೆತ್ತಿದವನು ನೀನೇ; [QBR2] ಶತ್ರುಗಳಿಗೆ ಸೋತುಹೋಗಿ ಅವರ ಹಾಸ್ಯಕ್ಕೆ ಗುರಿಯಾಗದಂತೆ ಮಾಡಿದವನು ನೀನೇ; [QBR2] ಆದ್ದರಿಂದ ನಿನ್ನನ್ನು ಕೊಂಡಾಡುವೆನು. [QBR]
ಕೀರ್ತನೆಗಳು 30 : 2 (ERVKN)
ನನ್ನ ದೇವರಾದ ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದಾಗ [QBR2] ನೀನು ನನ್ನನ್ನು ಗುಣಪಡಿಸಿದೆ. [QBR]
ಕೀರ್ತನೆಗಳು 30 : 3 (ERVKN)
ಯೆಹೋವನೇ, ನೀನು ನನ್ನನ್ನು ಸಾವಿನಿಂದ ಬದುಕಿಸಿದೆ; [QBR2] ಪಾತಾಳಕ್ಕೆ ಇಳಿದುಹೋಗದಂತೆ ನನ್ನನ್ನು ಕಾಪಾಡಿದೆ. [*ನೀನು … ಕಾಪಾಡಿದೆ “ಯೆಹೋವನೇ, ನೀನು ನನ್ನನ್ನು ಪಾತಾಳದಿಂದ ಮೇಲೆತ್ತಿದೆ. ಪಾತಾಳದಲ್ಲಿರುವವರನ್ನು ಸೇರದಂತೆ ನನ್ನನ್ನು ಕಾಪಾಡಿ ನನ್ನ ಆತ್ಮವನ್ನು ಚೈತನ್ಯಗೊಳಿಸಿದೆ.”]
ಕೀರ್ತನೆಗಳು 30 : 4 (ERVKN)
ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ! [QBR2] ಆತನ ಪರಿಶುದ್ಧ ಹೆಸರನ್ನು [†ಹೆಸರು ಅಕ್ಷರಶಃ “ನೆನಪು,” “ಜ್ಞಾಪಕಾರ್ಥ.”] ಕೊಂಡಾಡಿರಿ. [QBR]
ಕೀರ್ತನೆಗಳು 30 : 5 (ERVKN)
ಆತನ ಕೋಪವು ಕ್ಷಣಮಾತ್ರವಿರುವುದು. [QBR2] ಆತನ ಪ್ರೀತಿಯಾದರೋ ಶಾಶ್ವತವಾದದ್ದು. [QBR] ನಾನು ಸಂಜೆಯಲ್ಲಿ ದುಃಖದಿಂದ ಮಲಗಿಕೊಂಡರೂ [QBR2] ಮುಂಜಾನೆ ಹರ್ಷದಿಂದ ಎಚ್ಚರಗೊಳ್ಳುವೆನು.
ಕೀರ್ತನೆಗಳು 30 : 6 (ERVKN)
ನಾನು ಸುರಕ್ಷಿತವಾಗಿದ್ದಾಗ [QBR2] ನನಗೆ ಕೇಡೇ ಇಲ್ಲವೆಂದುಕೊಂಡೆನು. [QBR]
ಕೀರ್ತನೆಗಳು 30 : 7 (ERVKN)
ಯೆಹೋವನೇ, ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದಾಗ [QBR2] ನನ್ನನ್ನು ಯಾವುದೂ ಸೋಲಿಸಲಾರದು ಎಂದುಕೊಂಡೆನು. [QBR] ಆದರೆ ನೀನು ನನಗೆ ವಿಮುಖನಾದಾಗ [QBR2] ಭಯದಿಂದ ನಡುಗತೊಡಗಿದೆ. [QBR]
ಕೀರ್ತನೆಗಳು 30 : 8 (ERVKN)
ಯೆಹೋವನೇ, ನಾನು ನಿನಗೆ ಅಭಿಮುಖನಾಗಿ ಪ್ರಾರ್ಥಿಸಿದೆ; [QBR2] ಕರುಣೆತೋರು ಎಂದು ನಿನ್ನನ್ನು ಕೇಳಿಕೊಂಡೆ. [QBR]
ಕೀರ್ತನೆಗಳು 30 : 9 (ERVKN)
“ದೇವರೇ, ನಾನು ಸತ್ತು ಸಮಾಧಿಯೊಳಗೆ ಹೋದರೆ, [QBR2] ಅದರಿಂದ ಒಳ್ಳೆಯದೇನಾದೀತು? [QBR] ಸತ್ತವರು ಕೇವಲ ಮಣ್ಣಿನಲ್ಲಿ ಬಿದ್ದಿರುವರು! [QBR2] ಅವರು ನಿನ್ನನ್ನು ಸ್ತುತಿಸುವುದಿಲ್ಲ! [QBR2] ಶಾಶ್ವತವಾದ ನಿನ್ನ ನಂಬಿಗಸ್ತಿಕೆಯ ಕುರಿತು ಅವರು ಹೇಳುವುದಿಲ್ಲ. [QBR]
ಕೀರ್ತನೆಗಳು 30 : 10 (ERVKN)
ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆತೋರು! [QBR2] ಯೆಹೋವನೇ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡೆನು.
ಕೀರ್ತನೆಗಳು 30 : 11 (ERVKN)
ಆಗ ನೀನು ನನಗೆ ಸಹಾಯಮಾಡಿ ನನ್ನ ಗೋಳಾಟವನ್ನು ಸಂತೋಷದ ನರ್ತನವನ್ನಾಗಿ ಮಾರ್ಪಡಿಸಿದೆ. [QBR2] ನನ್ನ ಶೋಕವಸ್ತ್ರಗಳನ್ನು ತೆಗೆದುಹಾಕಿ [QBR2] ಹರ್ಷವಸ್ತ್ರಗಳನ್ನು ಹೊದಿಸಿದೆ. [QBR]
ಕೀರ್ತನೆಗಳು 30 : 12 (ERVKN)
ನಾನು ಮೌನವಾಗಿರದೆ ಸದಾಕಾಲ ನಿನ್ನನ್ನು ಸ್ತುತಿಸುವೆನು. [QBR2] ನನ್ನ ದೇವರಾದ ಯೆಹೋವನೇ, ನಿನ್ನನ್ನು ಸದಾಕಾಲ ಸ್ತುತಿಸುವೆನು. [PE]

1 2 3 4 5 6 7 8 9 10 11 12

BG:

Opacity:

Color:


Size:


Font: