ಕೀರ್ತನೆಗಳು 30 : 1 (ERVKN)
ಯೆಹೋವನೇ, ನನ್ನನ್ನು ಇಕ್ಕಟ್ಟುಗಳಿಂದ ಮೇಲೆತ್ತಿದವನು ನೀನೇ; ಶತ್ರುಗಳಿಗೆ ಸೋತುಹೋಗಿ ಅವರ ಹಾಸ್ಯಕ್ಕೆ ಗುರಿಯಾಗದಂತೆ ಮಾಡಿದವನು ನೀನೇ; ಆದ್ದರಿಂದ ನಿನ್ನನ್ನು ಕೊಂಡಾಡುವೆನು.
ಕೀರ್ತನೆಗಳು 30 : 2 (ERVKN)
ನನ್ನ ದೇವರಾದ ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದಾಗ ನೀನು ನನ್ನನ್ನು ಗುಣಪಡಿಸಿದೆ.
ಕೀರ್ತನೆಗಳು 30 : 3 (ERVKN)
ಯೆಹೋವನೇ, ನೀನು ನನ್ನನ್ನು ಸಾವಿನಿಂದ ಬದುಕಿಸಿದೆ; ಪಾತಾಳಕ್ಕೆ ಇಳಿದುಹೋಗದಂತೆ ನನ್ನನ್ನು ಕಾಪಾಡಿದೆ. *ನೀನು … ಕಾಪಾಡಿದೆ “ಯೆಹೋವನೇ, ನೀನು ನನ್ನನ್ನು ಪಾತಾಳದಿಂದ ಮೇಲೆತ್ತಿದೆ. ಪಾತಾಳದಲ್ಲಿರುವವರನ್ನು ಸೇರದಂತೆ ನನ್ನನ್ನು ಕಾಪಾಡಿ ನನ್ನ ಆತ್ಮವನ್ನು ಚೈತನ್ಯಗೊಳಿಸಿದೆ.”
ಕೀರ್ತನೆಗಳು 30 : 4 (ERVKN)
ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ! ಆತನ ಪರಿಶುದ್ಧ ಹೆಸರನ್ನು ಹೆಸರು ಅಕ್ಷರಶಃ “ನೆನಪು,” “ಜ್ಞಾಪಕಾರ್ಥ.” ಕೊಂಡಾಡಿರಿ.
ಕೀರ್ತನೆಗಳು 30 : 5 (ERVKN)
ಆತನ ಕೋಪವು ಕ್ಷಣಮಾತ್ರವಿರುವುದು. ಆತನ ಪ್ರೀತಿಯಾದರೋ ಶಾಶ್ವತವಾದದ್ದು.
ನಾನು ಸಂಜೆಯಲ್ಲಿ ದುಃಖದಿಂದ ಮಲಗಿಕೊಂಡರೂ ಮುಂಜಾನೆ ಹರ್ಷದಿಂದ ಎಚ್ಚರಗೊಳ್ಳುವೆನು.
ಕೀರ್ತನೆಗಳು 30 : 6 (ERVKN)
ನಾನು ಸುರಕ್ಷಿತವಾಗಿದ್ದಾಗ ನನಗೆ ಕೇಡೇ ಇಲ್ಲವೆಂದುಕೊಂಡೆನು.
ಕೀರ್ತನೆಗಳು 30 : 7 (ERVKN)
ಯೆಹೋವನೇ, ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದಾಗ ನನ್ನನ್ನು ಯಾವುದೂ ಸೋಲಿಸಲಾರದು ಎಂದುಕೊಂಡೆನು.
ಆದರೆ ನೀನು ನನಗೆ ವಿಮುಖನಾದಾಗ ಭಯದಿಂದ ನಡುಗತೊಡಗಿದೆ.
ಕೀರ್ತನೆಗಳು 30 : 8 (ERVKN)
ಯೆಹೋವನೇ, ನಾನು ನಿನಗೆ ಅಭಿಮುಖನಾಗಿ ಪ್ರಾರ್ಥಿಸಿದೆ; ಕರುಣೆತೋರು ಎಂದು ನಿನ್ನನ್ನು ಕೇಳಿಕೊಂಡೆ.
ಕೀರ್ತನೆಗಳು 30 : 9 (ERVKN)
“ದೇವರೇ, ನಾನು ಸತ್ತು ಸಮಾಧಿಯೊಳಗೆ ಹೋದರೆ, ಅದರಿಂದ ಒಳ್ಳೆಯದೇನಾದೀತು?
ಸತ್ತವರು ಕೇವಲ ಮಣ್ಣಿನಲ್ಲಿ ಬಿದ್ದಿರುವರು! ಅವರು ನಿನ್ನನ್ನು ಸ್ತುತಿಸುವುದಿಲ್ಲ! ಶಾಶ್ವತವಾದ ನಿನ್ನ ನಂಬಿಗಸ್ತಿಕೆಯ ಕುರಿತು ಅವರು ಹೇಳುವುದಿಲ್ಲ.
ಕೀರ್ತನೆಗಳು 30 : 10 (ERVKN)
ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆತೋರು! ಯೆಹೋವನೇ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡೆನು.
ಕೀರ್ತನೆಗಳು 30 : 11 (ERVKN)
ಆಗ ನೀನು ನನಗೆ ಸಹಾಯಮಾಡಿ ನನ್ನ ಗೋಳಾಟವನ್ನು ಸಂತೋಷದ ನರ್ತನವನ್ನಾಗಿ ಮಾರ್ಪಡಿಸಿದೆ. ನನ್ನ ಶೋಕವಸ್ತ್ರಗಳನ್ನು ತೆಗೆದುಹಾಕಿ ಹರ್ಷವಸ್ತ್ರಗಳನ್ನು ಹೊದಿಸಿದೆ.
ಕೀರ್ತನೆಗಳು 30 : 12 (ERVKN)
ನಾನು ಮೌನವಾಗಿರದೆ ಸದಾಕಾಲ ನಿನ್ನನ್ನು ಸ್ತುತಿಸುವೆನು. ನನ್ನ ದೇವರಾದ ಯೆಹೋವನೇ, ನಿನ್ನನ್ನು ಸದಾಕಾಲ ಸ್ತುತಿಸುವೆನು.

1 2 3 4 5 6 7 8 9 10 11 12