ಕೀರ್ತನೆಗಳು 3 : 1 (ERVKN)
ಯೆಹೋವನೇ, ನನಗೆ ವೈರಿಗಳು ಎಷ್ಟೋ ಹೆಚ್ಚಾಗಿದ್ದಾರೆ. [QBR2] ಎಷ್ಟೋ ಜನರು ನನಗೆ ಶತ್ರುಗಳಾಗಿ ನಿಂತಿದ್ದಾರೆ. [QBR]
ಕೀರ್ತನೆಗಳು 3 : 2 (ERVKN)
ಅನೇಕರು ನನ್ನ ಬಗ್ಗೆ ಮಾತಾಡುತ್ತಾ, “ದೇವರು ಅವನನ್ನು ರಕ್ಷಿಸುವುದಿಲ್ಲ!” ಎಂದು ಹೇಳುತ್ತಿದ್ದಾರೆ.
ಕೀರ್ತನೆಗಳು 3 : 3 (ERVKN)
ಆದರೆ ಯೆಹೋವನೇ, ನೀನೇ ನನ್ನ ಗುರಾಣಿ. [QBR2] ನೀನೇ ನನ್ನ ಗೌರವಕ್ಕೆ ಆಧಾರ. [QBR2] ನನ್ನನ್ನು ಜಯವೀರನನ್ನಾಗಿ ಮಾಡು.
ಕೀರ್ತನೆಗಳು 3 : 4 (ERVKN)
ನಾನು ಯೆಹೋವನಿಗೆ ಪ್ರಾರ್ಥಿಸಲು, [QBR2] ಆತನು ತನ್ನ ಪವಿತ್ರ ಪರ್ವತದಿಂದ ಉತ್ತರಿಸುವನು.
ಕೀರ್ತನೆಗಳು 3 : 5 (ERVKN)
ಯೆಹೋವನು ನನ್ನನ್ನು ಕಾಪಾಡುವುದರಿಂದ [QBR2] ನಾನು ಸುಖವಾಗಿ ನಿದ್ರಿಸಿ ಎಚ್ಚರಗೊಳ್ಳುವೆನು. [QBR]
ಕೀರ್ತನೆಗಳು 3 : 6 (ERVKN)
ಸಾವಿರಾರು ಶತ್ರು ಸೈನಿಕರು ನನ್ನನ್ನು ಮುತ್ತಿಕೊಂಡರೂ [QBR2] ನನಗೆ ಭಯವಿಲ್ಲ.
ಕೀರ್ತನೆಗಳು 3 : 7 (ERVKN)
ಯೆಹೋವನೇ, ಎದ್ದೇಳು! [QBR2] ನನ್ನ ದೇವರೇ, ಬಂದು ನನ್ನನ್ನು ರಕ್ಷಿಸು! [QBR] ನೀನು ನನ್ನ ಶತ್ರುಗಳ ದವಡೆಗೆ ಬಡಿದರೆ [QBR2] ಅವರ ಹಲ್ಲುಗಳು ಉದುರಿಹೋಗುತ್ತವೆ.
ಕೀರ್ತನೆಗಳು 3 : 8 (ERVKN)
ಯೆಹೋವನು ತನ್ನ ಜನರನ್ನು ರಕ್ಷಿಸಬಲ್ಲನು. [QBR2] ಯೆಹೋವನೇ, ದಯವಿಟ್ಟು ನಿನ್ನ ಜನರಿಗೆ ಒಳ್ಳೆಯದನ್ನು ಮಾಡು. [PE]

1 2 3 4 5 6 7 8

BG:

Opacity:

Color:


Size:


Font: