ಕೀರ್ತನೆಗಳು 25 : 1 (ERVKN)
ಯೆಹೋವನೇ, ನಿನ್ನಲ್ಲೇ ಮನಸ್ಸಿಟ್ಟಿದ್ದೇನೆ. [QBR]
ಕೀರ್ತನೆಗಳು 25 : 2 (ERVKN)
ನನ್ನ ದೇವರೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ. [QBR2] ನನ್ನನ್ನು ನಿರಾಶೆಗೊಳಿಸಬೇಡ. [QBR2] ವೈರಿಗಳು ನನ್ನನ್ನು ನೋಡಿ ಗೇಲಿ ಮಾಡದಂತಾಗಲಿ! [QBR]
ಕೀರ್ತನೆಗಳು 25 : 3 (ERVKN)
ನಿನ್ನಲ್ಲಿ ಭರವಸವಿಟ್ಟಿರುವವರು ನಿರಾಶರಾಗುವುದಿಲ್ಲ [QBR2] ದ್ರೋಹಿಗಳಾದರೋ ನಿರಾಶರಾಗುವರು. [QBR2] ಅವರಿಗೆ ಏನೂ ದೊರೆಯುವುದಿಲ್ಲ.
ಕೀರ್ತನೆಗಳು 25 : 4 (ERVKN)
ಯೆಹೋವನೇ ನಿನ್ನ ಮಾರ್ಗಗಳನ್ನು ನನಗೆ ತಿಳಿಸು. [QBR2] ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು. [QBR]
ಕೀರ್ತನೆಗಳು 25 : 5 (ERVKN)
ನನಗೆ ಮಾರ್ಗದರ್ಶನ ನೀಡು; ನಿನ್ನ ಸತ್ಯಗಳನ್ನು ನನಗೆ ಉಪದೇಶಿಸು. [QBR2] ನೀನೇ ನನ್ನ ದೇವರು, ನೀನೇ ನನ್ನ ರಕ್ಷಕ. [QBR2] ಹಗಲೆಲ್ಲಾ ನಿನ್ನಲ್ಲಿ ಭರವಸವಿಟ್ಟಿರುವೆ. [QBR]
ಕೀರ್ತನೆಗಳು 25 : 6 (ERVKN)
ಯೆಹೋವನೇ, ನನಗೆ ಕರುಣೆ ತೋರಬೇಕೆಂಬುದನ್ನು ಜ್ಞಾಪಿಸಿಕೊ. [QBR2] ನಿನ್ನ ಶಾಶ್ವತವಾದ ಪ್ರೀತಿಯನ್ನು ನನಗೆ ತೋರಿಸು. [QBR]
ಕೀರ್ತನೆಗಳು 25 : 7 (ERVKN)
ನಾನು ಯೌವನಸ್ಥನಾಗಿದ್ದಾಗ ಮಾಡಿದ ಪಾಪಗಳನ್ನಾಗಲಿ ಕೆಟ್ಟಕಾರ್ಯಗಳನ್ನಾಗಲಿ ಜ್ಞಾಪಿಸಿಕೊಳ್ಳಬೇಡ. [QBR2] ಯೆಹೋವನೇ, ನಿನ್ನ ಒಳ್ಳೆಯ ಹೆಸರಿನ ನಿಮಿತ್ತ ನನ್ನನ್ನು ಪ್ರೀತಿಯಿಂದ ಜ್ಞಾಪಿಸಿಕೊ.
ಕೀರ್ತನೆಗಳು 25 : 8 (ERVKN)
ಯೆಹೋವನು ಒಳ್ಳೆಯವನೂ ಸತ್ಯಸ್ವರೂಪನೂ ಆಗಿದ್ದಾನೆ. [QBR2] ಆತನು ಪಾಪಿಗಳಿಗೆ ಜೀವಮಾರ್ಗವನ್ನು ಬೋಧಿಸುವನು. [QBR]
ಕೀರ್ತನೆಗಳು 25 : 9 (ERVKN)
ಆತನು ದೀನರಿಗೆ ತನ್ನ ಮಾರ್ಗಗಳನ್ನು ಉಪದೇಶಿಸುವನು. [QBR2] ಆತನು ಅವರನ್ನು ತನ್ನ ನ್ಯಾಯಾನುಸಾರವಾಗಿ ನಡೆಸುವನು. [QBR]
ಕೀರ್ತನೆಗಳು 25 : 10 (ERVKN)
ಯೆಹೋವನ ಒಡಂಬಡಿಕೆಯನ್ನೂ ವಾಗ್ದಾನಗಳನ್ನೂ ಅನುಸರಿಸುವ ಜನರಿಗೆ [QBR2] ಆತನ ಮಾರ್ಗಗಳೆಲ್ಲ ಕರುಣೆಯುಳ್ಳವೂ ಸತ್ಯವೂ ಆಗಿವೆ.
ಕೀರ್ತನೆಗಳು 25 : 11 (ERVKN)
ಯೆಹೋವನೇ, ನಾನು ಅನೇಕ ಪಾಪಗಳನ್ನು ಮಾಡಿದ್ದೇನೆ. [QBR2] ಆದರೆ ನೀನು ನಿನ್ನ ಹೆಸರಿನ ನಿಮಿತ್ತ ಅವುಗಳನ್ನೆಲ್ಲಾ ಕ್ಷಮಿಸಿಬಿಟ್ಟೆ.
ಕೀರ್ತನೆಗಳು 25 : 12 (ERVKN)
ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರಿಗೆ [QBR2] ಅತ್ಯುತ್ತಮವಾದ ಜೀವಮಾರ್ಗವನ್ನು ತೋರಿಸುವನು. [QBR]
ಕೀರ್ತನೆಗಳು 25 : 13 (ERVKN)
ಅವನು ಸುಖದಿಂದಿರುವನು. [QBR2] ಆತನು ವಾಗ್ದಾನ ಮಾಡಿದ ದೇಶವನ್ನು ಅವನ ಮಕ್ಕಳು ಅನುಭವಿಸುವರು. [QBR]
ಕೀರ್ತನೆಗಳು 25 : 14 (ERVKN)
ಯೆಹೋವನು ತನಗೆ ವಿಧೇಯರಾಗಿರುವವರಿಗೆ ಆಪ್ತಮಿತ್ರನಂತಿರುವನು. [QBR2] ಆತನು ಅವರಿಗೆ ತನ್ನ ಒಡಂಬಡಿಕೆಯನ್ನು ಉಪದೇಶಿಸುವನು. [QBR]
ಕೀರ್ತನೆಗಳು 25 : 15 (ERVKN)
ನನ್ನ ಕಣ್ಣುಗಳು ಸಹಾಯಕ್ಕಾಗಿ ಯೆಹೋವನನ್ನೇ ದೃಷ್ಟಿಸುತ್ತಿವೆ. [QBR2] ಆತನು ನನ್ನನ್ನು ತೊಂದರೆಗಳಿಂದ ಖಂಡಿತವಾಗಿ ಬಿಡುಸುವನು. [*ಆತನು … ಬಿಡಿಸುವನು ಅಕ್ಷರಶಃ, “ಆತನು ನನ್ನ ಕಾಲುಗಳನ್ನು ಬಲೆಯಿಂದ ಬಿಡಿಸುವನು.”]
ಕೀರ್ತನೆಗಳು 25 : 16 (ERVKN)
ಯೆಹೋವನೇ, ನಾನು ಬಾಧೆಪಡುವವನೂ ಒಬ್ಬಂಟಿಗನೂ ಆಗಿದ್ದೇನೆ. [QBR2] ನನಗೆ ಅಭಿಮುಖನಾಗಿ ಕರುಣೆತೋರು. [QBR]
ಕೀರ್ತನೆಗಳು 25 : 17 (ERVKN)
ಇಕ್ಕಟ್ಟುಗಳಿಂದ ನನ್ನನ್ನು ಬಿಡಿಸು. [QBR2] ನನ್ನ ಸಮಸ್ಯೆಗಳನ್ನು ಪರಿಹರಿಸು. [QBR]
ಕೀರ್ತನೆಗಳು 25 : 18 (ERVKN)
ಯೆಹೋವನೇ, ನನ್ನ ಸಂಕಟವನ್ನೂ ತೊಂದರೆಗಳನ್ನೂ ನೋಡು. [QBR2] ನನ್ನ ಪಾಪಗಳನ್ನೆಲ್ಲ ಕ್ಷಮಿಸು. [QBR]
ಕೀರ್ತನೆಗಳು 25 : 19 (ERVKN)
ನನ್ನ ವೈರಿಗಳನ್ನೆಲ್ಲ ದೃಷ್ಟಿಸಿನೋಡು. [QBR2] ಅವರು ನನ್ನನ್ನು ದ್ವೇಷಿಸುತ್ತಾ ಕೇಡುಮಾಡಬೇಕೆಂದಿದ್ದಾರೆ. [QBR]
ಕೀರ್ತನೆಗಳು 25 : 20 (ERVKN)
ದೇವರೇ, ನನ್ನನ್ನು ಕಾಪಾಡು, ನನ್ನನ್ನು ರಕ್ಷಿಸು. [QBR2] ನಾನು ನಿನ್ನಲ್ಲಿ ಭರವಸವಿಟ್ಟಿರುವುದರಿಂದ ನನ್ನನ್ನು ನಿರಾಶೆಗೊಳಿಸಬೇಡ. [QBR]
ಕೀರ್ತನೆಗಳು 25 : 21 (ERVKN)
ದೇವರೇ, ನೀನು ನಿಜವಾಗಿಯೂ ಒಳ್ಳೆಯವನು. [QBR2] ನಾನು ನಿನ್ನಲ್ಲಿ ಭರವಸವಿಟ್ಟಿರುವೆ, ಆದ್ದರಿಂದ ನನ್ನನ್ನು ಕಾಪಾಡು. [QBR]
ಕೀರ್ತನೆಗಳು 25 : 22 (ERVKN)
ದೇವರೇ, ಇಸ್ರೇಲರನ್ನು [QBR2] ವೈರಿಗಳಿಂದ ತಪ್ಪಿಸಿ ಕಾಪಾಡು. [PE]

1 2 3 4 5 6 7 8 9 10 11 12 13 14 15 16 17 18 19 20 21 22

BG:

Opacity:

Color:


Size:


Font: