ಕೀರ್ತನೆಗಳು 24 : 1 (ERVKN)
ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನವೇ. [QBR2] ಲೋಕವೂ ಅದರ ನಿವಾಸಿಗಳೂ ಆತನವೇ. [QBR]
ಕೀರ್ತನೆಗಳು 24 : 2 (ERVKN)
ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು ಆತನೇ. [QBR2] ಅದನ್ನು ಜಲರಾಶಿಗಳ ಮೇಲೆ ಕಟ್ಟಿದವನೂ ಆತನೇ.
ಕೀರ್ತನೆಗಳು 24 : 3 (ERVKN)
ಯೆಹೋವನ ಪರ್ವತವನ್ನು ಹತ್ತುವವರು ಎಂಥವರಾಗಿರಬೇಕು? [QBR2] ಆತನ ಪವಿತ್ರ ಆಲಯದಲ್ಲಿ ನಿಂತುಕೊಳ್ಳುವವರು ಎಂಥವರಾಗಿರಬೇಕು? [QBR]
ಕೀರ್ತನೆಗಳು 24 : 4 (ERVKN)
ಅವರು ದುಷ್ಕೃತ್ಯಗಳನ್ನು ಮಾಡಿಲ್ಲದವರೂ [QBR2] ಶುದ್ಧ ಹೃದಯವುಳ್ಳವರೂ [QBR] ನನ್ನ ಹೆಸರಿನಲ್ಲಿ [*ನನ್ನ ಹೆಸರು ಅಕ್ಷರಶಃ, “ನನ್ನ ಪ್ರಾಣ.”] ಮೋಸ ಪ್ರಮಾಣ ಮಾಡದವರೂ [QBR2] ವಿಗ್ರಹಗಳನ್ನು ಆರಾಧಿಸದವರೂ ಆಗಿರಬೇಕು.
ಕೀರ್ತನೆಗಳು 24 : 5 (ERVKN)
ಅವರನ್ನು ಯೆಹೋವನು ಆಶೀರ್ವದಿಸಿ ಕಾಪಾಡುವನು; [QBR2] ದೇವರು ಅವರನ್ನು ನಿರಪರಾಧಿಗಳೆಂದು ಪ್ರಕಟಿಸುವನು. [QBR]
ಕೀರ್ತನೆಗಳು 24 : 6 (ERVKN)
ಆತನನ್ನು ಅನುಸರಿಸುವವರು ಇಂಥವರೇ. [QBR2] ಸಹಾಯಕ್ಕಾಗಿ ಯಾಕೋಬನ ದೇವರ ಬಳಿಗೆ ಹೋಗುವವರು ಇಂಥವರೇ.
ಕೀರ್ತನೆಗಳು 24 : 7 (ERVKN)
ಹೆಬ್ಬಾಗಿಲುಗಳೇ, ಉನ್ನತವಾಗಿರಿ! [QBR2] ಪುರಾತನ ದ್ವಾರಗಳೇ, ತೆರದುಕೊಂಡಿರಿ. [QBR2] ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ. [QBR]
ಕೀರ್ತನೆಗಳು 24 : 8 (ERVKN)
ಮಹಿಮಾಸ್ವರೂಪನಾದ ಈ ರಾಜನು ಯಾರು? [QBR2] ಬಲಿಷ್ಠನೂ ಮಹಾಪರಾಕ್ರಮಿಯೂ ಆಗಿರುವ [QBR2] ಯೆಹೋವನೇ ಆತನು.
ಕೀರ್ತನೆಗಳು 24 : 9 (ERVKN)
ಹೆಬ್ಬಾಗಿಲುಗಳೇ, ಉನ್ನತವಾಗಿರಿ! [QBR2] ಪುರಾತನ ದ್ವಾರಗಳೇ, ತೆರೆದುಕೊಂಡಿರಿ. [QBR2] ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ. [QBR]
ಕೀರ್ತನೆಗಳು 24 : 10 (ERVKN)
ಮಹಿಮಾಸ್ವರೂಪನಾದ ಈ ರಾಜನು ಯಾರು? [QBR2] ಸೇನಾಧೀಶ್ವರನಾದ ಯೆಹೋವನೇ ಆ ರಾಜನು. ಮಹಿಮಾಸ್ವರೂಪನಾದ ರಾಜನು ಆತನೇ. [PE]

1 2 3 4 5 6 7 8 9 10

BG:

Opacity:

Color:


Size:


Font: