ಕೀರ್ತನೆಗಳು 142 : 1 (ERVKN)
ರಚನೆಗಾರ : ದಾವೀದ. ನಾನು ಯೆಹೋವನಿಗೆ ಮೊರೆಯಿಡುವೆನು; ಯೆಹೋವನನ್ನು ಕೂಗಿಕೊಳ್ಳುವೆನು.
ಕೀರ್ತನೆಗಳು 142 : 2 (ERVKN)
ನನ್ನ ಕಷ್ಟಗಳನ್ನೂ ಚಿಂತೆಗಳನ್ನೂ ಆತನಿಗೆ ಅರಿಕೆಮಾಡಿಕೊಳ್ಳುವೆನು.
ಕೀರ್ತನೆಗಳು 142 : 3 (ERVKN)
ನನ್ನ ವೈರಿಗಳು ನನಗೆ ಉರುಲನ್ನು ಒಡ್ಡಿದ್ದಾರೆ. ನನ್ನ ಆತ್ಮವು ಕುಂದಿಹೋಗಿದೆ. ನನ್ನ ಮಾರ್ಗವನ್ನು ತಿಳಿದಿರುವಾತನು ನೀನೇ.
ಕೀರ್ತನೆಗಳು 142 : 4 (ERVKN)
ನಾನು ಸುತ್ತಮುತ್ತ ನೋಡಿದರೂ ನನ್ನ ಸ್ನೇಹಿತರಲ್ಲಿ ಯಾರೂ ಕಾಣುತ್ತಿಲ್ಲ. ಓಡಿಹೋಗಲು ನನಗೆ ಯಾವ ಸ್ಥಳವೂ ಇಲ್ಲ. ನನ್ನನ್ನು ರಕ್ಷಿಸಲು ಪ್ರಯತ್ನಿಸುತ್ತಿಲ್ಲ.
ಕೀರ್ತನೆಗಳು 142 : 5 (ERVKN)
ಆದ್ದರಿಂದ ಯೆಹೋವನನ್ನು ಕೂಗಿಕೊಳ್ಳುವೆನು. ನನ್ನ ಆಶ್ರಯಸ್ಥಾನವೂ ನೀನೇ, ನನ್ನನ್ನು ಬದುಕಿಸಬಲ್ಲಾತನೂ ನೀನೇ ಎಂದು ಆತನಿಗೆ ಮೊರೆಯಿಡುವೆನು.
ಕೀರ್ತನೆಗಳು 142 : 6 (ERVKN)
ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು. ನೀನು ನನಗೆ ಬೇಕೇಬೇಕು. ನನ್ನನ್ನು ಬೆನ್ನಟ್ಟುತ್ತಿರುವ ಜನರಿಂದ ನನ್ನನ್ನು ರಕ್ಷಿಸು. ಅವರು ನನಗಿಂತ ಬಹು ಬಲಿಷ್ಠರಾಗಿದ್ದಾರೆ.
ಕೀರ್ತನೆಗಳು 142 : 7 (ERVKN)
ಈ ಉರುಲಿನಿಂದ ಪಾರಾಗಲು ನನಗೆ ಸಹಾಯಮಾಡು. ಯೆಹೋವನೇ, ಆಗ ನಾನು ಹೆಸರನ್ನು ಕೊಂಡಾಡುವೆನು. ನೀನು ನನ್ನನ್ನು ಕಾಪಾಡಿದ್ದರಿಂದ ನೀತಿವಂತರು ನನ್ನೊಂದಿಗೆ ಕೊಂಡಾಡುವರು.

1 2 3 4 5 6 7

BG:

Opacity:

Color:


Size:


Font: