ಕೀರ್ತನೆಗಳು 136 : 1 (ERVKN)
ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನು ಒಳ್ಳೆಯವನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 2 (ERVKN)
ದೇವಾಧಿದೇವನಿಗೆ ಕೃತಜ್ಞತಾಸ್ತುತಿಮಾಡಿರಿ! [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 3 (ERVKN)
ಪ್ರಭುಗಳ ಪ್ರಭುವಿಗೆ ಕೃತಜ್ಞತಾಸ್ತುತಿಮಾಡಿರಿ. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 4 (ERVKN)
ಮಹತ್ಕಾರ್ಯಗಳನ್ನು ಮಾಡಬಲ್ಲ ಆತನಿಗೆ ಸ್ತೋತ್ರಮಾಡಿರಿ. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 5 (ERVKN)
ಜ್ಞಾನದಿಂದ ಆಕಾಶವನ್ನು ನಿರ್ಮಿಸಿದ ಆತನೊಬ್ಬನನ್ನೇ ಸ್ತುತಿಸಿರಿ! [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 6 (ERVKN)
ಆತನು ಭೂಮಿಯನ್ನು ಜಲರಾಶಿಗಳ ಮೇಲೆ ಹಾಸಿದ್ದಾನೆ. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 7 (ERVKN)
ಆತನು ಮಹಾಬೆಳಕುಗಳನ್ನು ಸೃಷ್ಟಿಮಾಡಿದನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 8 (ERVKN)
ಹಗಲನ್ನು ಆಳುವುದಕ್ಕಾಗಿ ಆತನು ಸೂರ್ಯನನ್ನು ಸೃಷ್ಟಿಮಾಡಿದನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 9 (ERVKN)
ರಾತ್ರಿಯನ್ನು ಆಳುವುದಕ್ಕಾಗಿ ಆತನು ಚಂದ್ರನನ್ನೂ ನಕ್ಷತ್ರಗಳನ್ನೂ ಸೃಷ್ಟಿಮಾಡಿದನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 10 (ERVKN)
ಆತನು ಈಜಿಪ್ಟಿನಲ್ಲಿ ಚೊಚ್ಚಲು ಪುರುಷರನ್ನೂ ಪ್ರಾಣಿಗಳನ್ನೂ ಸಂಹರಿಸಿದನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 11 (ERVKN)
ಆತನು ಇಸ್ರೇಲರನ್ನು ಈಜಿಪ್ಟಿನಿಂದ ಹೊರತಂದನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 12 (ERVKN)
ಆತನು ತನ್ನ ಮಹಾಶಕ್ತಿಯನ್ನೂ ಬಲವನ್ನೂ ತೋರಿದನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 13 (ERVKN)
ಆತನು ಕೆಂಪು ಸಮುದ್ರವನ್ನು ಎರಡು ಭಾಗವನ್ನಾಗಿ ಮಾಡಿದನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 14 (ERVKN)
ಆತನು ಇಸ್ರೇಲರನ್ನು ಸಮುದ್ರದ ಮಧ್ಯದಲ್ಲಿ ನಡೆಸಿದನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 15 (ERVKN)
ಆತನು ಫರೋಹನನ್ನೂ ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಮುಳುಗಿಸಿದನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 16 (ERVKN)
ಆತನು ತನ್ನ ಜನರನ್ನು ಅರಣ್ಯದೊಳಗೆ ನಡೆಸಿದನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 17 (ERVKN)
ಆತನು ಶಕ್ತಿಯುತರಾದ ರಾಜರುಗಳನ್ನು ಸೋಲಿಸಿದನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 18 (ERVKN)
ಆತನು ಬಲಿಷ್ಠರಾದ ರಾಜರುಗಳನ್ನು ಸೋಲಿಸಿದನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 19 (ERVKN)
ಆತನು ಅಮೋರಿಯರ ರಾಜನಾದ ಸೀಹೋನನನ್ನು ಸೋಲಿಸಿದನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 20 (ERVKN)
ಆತನು ಬಾಷಾನಿನ ರಾಜನಾದ ಓಗನನ್ನು ಸೋಲಿಸಿದನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 21 (ERVKN)
ಆತನು ಅವರ ದೇಶಗಳನ್ನು ಇಸ್ರೇಲರಿಗೆ ಕೊಟ್ಟನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 22 (ERVKN)
ಆತನು ಆ ದೇಶಗಳನ್ನು ಇಸ್ರೇಲರಿಗೆ ಉಡುಗೊರೆಯಾಗಿ ಕೊಟ್ಟನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 23 (ERVKN)
ನಾವು ಸೋತುಹೋಗಿದ್ದಾಗ ಆತನು ನಮ್ಮನ್ನು ಜ್ಞಾಪಿಸಿಕೊಂಡನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 24 (ERVKN)
ಆತನು ನಮ್ಮನ್ನು ನಮ್ಮ ಶತ್ರುಗಳಿಂದ ರಕ್ಷಿಸಿದನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 25 (ERVKN)
ಆತನು ಪ್ರತಿಯೊಬ್ಬರಿಗೂ ಆಹಾರವನ್ನು ಕೊಡುವನು. [QBR2] ಆತನ ಪ್ರೀತಿ ಶಾಶ್ವತವಾದದ್ದು. [QBR]
ಕೀರ್ತನೆಗಳು 136 : 26 (ERVKN)
ಪರಲೋಕದ ದೇವರನ್ನು ಸ್ತುತಿಸಿರಿ! [QBR2] ಆತನ ಪ್ರೀತಿ ಶಾಶ್ವತವಾದದ್ದು. [PE]
❮
❯