ಕೀರ್ತನೆಗಳು 125 : 1 (ERVKN)
ಯೆಹೋವನಲ್ಲಿ ಭರವಸವಿಟ್ಟಿರುವವರು ಚೀಯೋನ್ ಪರ್ವತದಂತಿರುವರು. ಅವರೆಂದಿಗೂ ಕದಲದೆ ಶಾಶ್ವತವಾಗಿರುವರು.
ಕೀರ್ತನೆಗಳು 125 : 2 (ERVKN)
ಪರ್ವತಗಳು ಜೆರುಸಲೇಮಿನ ಸುತ್ತಲೂ ಇವೆ. ಯೆಹೋವನು ತನ್ನ ಜನರ ಸುತ್ತಲೂ ಇರುವನು. ಆತನು ತನ್ನ ಜನರನ್ನು ಸದಾಕಾಲ ಸಂರಕ್ಷಿಸುವನು.
ಕೀರ್ತನೆಗಳು 125 : 3 (ERVKN)
ದುಷ್ಟರು ನೀತಿವಂತರನ್ನು ಶಾಶ್ವತವಾಗಿ ಆಳುವುದಿಲ್ಲ. ಅವರು ಶಾಶ್ವತವಾಗಿ ಆಳಿದರೆ ನೀತಿವಂತರೂ ದುಷ್ಕೃತ್ಯಗಳನ್ನು ಮಾಡತೊಡಗಬಹುದು.
ಕೀರ್ತನೆಗಳು 125 : 4 (ERVKN)
ಯೆಹೋವನೇ, ನೀತಿವಂತರಿಗೂ ಯಥಾರ್ಥವಂತರಿಗೂ ಉಪಕಾರಮಾಡು.
ಕೀರ್ತನೆಗಳು 125 : 5 (ERVKN)
ದುಷ್ಟರು ಕುತಂತ್ರಗಳನ್ನು ಮಾಡುವರು. ಯೆಹೋವನು ಅವರನ್ನು ದಂಡಿಸುವನು. ಇಸ್ರೇಲಿನಲ್ಲಿ ಶಾಂತಿ ನೆಲೆಸಿರಲಿ.

1 2 3 4 5

BG:

Opacity:

Color:


Size:


Font: