ಕೀರ್ತನೆಗಳು 122 : 1 (ERVKN)
“ಯೆಹೋವನ ಆಲಯಕ್ಕೆ ಹೋಗೋಣ” [QBR2] ಎಂದು ಜನರು ಹೇಳಿದಾಗ ನನಗೆ ಬಹು ಸಂತೋಷವಾಯಿತು. [QBR]
ಕೀರ್ತನೆಗಳು 122 : 2 (ERVKN)
ನಾವು ಜೆರುಸಲೇಮಿನ ಬಾಗಿಲುಗಳ ಬಳಿಯಲ್ಲಿ ನಿಂತಿದ್ದೇವೆ. [QBR]
ಕೀರ್ತನೆಗಳು 122 : 3 (ERVKN)
ಇದು ಹೊಸ ಜೆರುಸಲೇಮ್! [QBR2] ಈ ಪಟ್ಟಣವು ಏಕೀಕರಣಗೊಂಡ ನಗರದಂತೆ ಮತ್ತೆ ಕಟ್ಟಲ್ಪಟ್ಟಿದೆ. [QBR]
ಕೀರ್ತನೆಗಳು 122 : 4 (ERVKN)
ಇಸ್ರೇಲಿನ ಕುಲಗಳವರು ಅಂದರೆ ಯೆಹೋವನ ಕುಲಗಳವರು [QBR2] ಯೆಹೋವನ ಹೆಸರನ್ನು ಕೊಂಡಾಡಲು ಅಲ್ಲಿಗೆ ಹೋಗುವರು. [QBR]
ಕೀರ್ತನೆಗಳು 122 : 5 (ERVKN)
ದಾವೀದನ ಕುಟುಂಬದ ರಾಜರುಗಳು ಜನರಿಗೆ [QBR2] ನ್ಯಾಯತೀರ್ಪು ನೀಡಲು ತಮ್ಮ ಸಿಂಹಾಸನಗಳನ್ನು ಅಲ್ಲಿ ಸ್ಥಾಪಿಸಿದರು.
ಕೀರ್ತನೆಗಳು 122 : 6 (ERVKN)
ಜೆರುಸಲೇಮಿನ ಶಾಂತಿಗೋಸ್ಕರ ಪ್ರಾರ್ಥಿಸಿರಿ: [QBR2] “ನಿನ್ನನ್ನು ಪ್ರೀತಿಸುವ ಜನರು ಅಲ್ಲಿ ಶಾಂತಿಯನ್ನು ಕಂಡುಕೊಳ್ಳಲಿ. [QBR2]
ಕೀರ್ತನೆಗಳು 122 : 7 (ERVKN)
ನಿನ್ನ ಕೋಟೆಗಳೊಳಗೆ ಶಾಂತಿ ನೆಲಸಿರಲಿ [QBR2] ನಿನ್ನ ಮಹಾ ಕಟ್ಟಡಗಳಲ್ಲಿ ಸುರಕ್ಷತೆಯಿರಲಿ.”
ಕೀರ್ತನೆಗಳು 122 : 8 (ERVKN)
ನನ್ನ ಸಹೋದರರ ಮತ್ತು ನೆರೆಯವರ ಒಳ್ಳೆಯದಕ್ಕಾಗಿ [QBR2] ಅಲ್ಲಿ ಶಾಂತಿ ನೆಲೆಸಿರಲೆಂದು ಪ್ರಾರ್ಥಿಸುವೆನು. [QBR]
ಕೀರ್ತನೆಗಳು 122 : 9 (ERVKN)
ನಮ್ಮ ದೇವರಾದ ಯೆಹೋವನ ಆಲಯಕ್ಕೋಸ್ಕರ [QBR2] ಈ ಪಟ್ಟಣಕ್ಕೆ ಒಳ್ಳೆಯದಾಗಲೆಂದು ಪ್ರಾರ್ಥಿಸುವೆನು. [PE]

1 2 3 4 5 6 7 8 9

BG:

Opacity:

Color:


Size:


Font: