ಕೀರ್ತನೆಗಳು 120 : 1 (ERVKN)
ನಾನು ಆಪತ್ತಿನಲ್ಲಿದ್ದಾಗ [QBR2] ಯೆಹೋವನಿಗೆ ಮೊರೆಯಿಟ್ಟೆನು. [QBR2] ಆತನು ನನಗೆ ಸದುತ್ತರವನ್ನು ದಯಪಾಲಿಸಿದನು. [QBR]
ಕೀರ್ತನೆಗಳು 120 : 2 (ERVKN)
ಯೆಹೋವನೇ, ಸುಳ್ಳಾಡುವವರಿಂದಲೂ [QBR2] ವಂಚಕರಿಂದಲೂ ನನ್ನನ್ನು ರಕ್ಷಿಸು.
ಕೀರ್ತನೆಗಳು 120 : 3 (ERVKN)
ಸುಳ್ಳುಗಾರರೇ, ನಿಮಗೆ ದೇವರಿಂದ ಬರುವ ದಂಡನೆಯನ್ನು ಬಲ್ಲಿರಾ? [QBR2] ನಿಮಗೆ ಯಾವ ಶಿಕ್ಷೆಯನ್ನು ಒದಗಿಸಬೇಕು? [QBR]
ಕೀರ್ತನೆಗಳು 120 : 4 (ERVKN)
ಯುದ್ಧವೀರನ ತೀಕ್ಷ್ಣವಾದ ಬಾಣದಿಂದಲೂ ಉರಿಯುವ ಕೆಂಡಗಳಿಂದಲೂ ದೇವರು ನಿಮ್ಮನ್ನು ದಂಡಿಸುವನು.
ಕೀರ್ತನೆಗಳು 120 : 5 (ERVKN)
ಸುಳ್ಳುಗಾರರಾದ ನಿಮ್ಮ ಸಮೀಪದಲ್ಲಿ ವಾಸಿಸುವುದು [QBR2] ಮೇಷೆಕಿನಲ್ಲಿಯೂ ಕೇದಾರಿನ ಗುಡಾರಗಳಲ್ಲಿಯೂ [*ಮೇಷೆಕಿನಲ್ಲಿಯೂ ಕೇದಾರಿನ ಗುಡಾರಗಳಲ್ಲಿಯೂ ಈ ಸ್ಥಳಗಳ ಜನರು ಪ್ರಖ್ಯಾತ ಹೋರಾಟಗಾರರು.] ವಾಸಿಸುವಂತಿರುವುದು. [QBR]
ಕೀರ್ತನೆಗಳು 120 : 6 (ERVKN)
ಶಾಂತಿದ್ವೇಷಕರೊಂದಿಗೆ ನಾನು ಬಹುಕಾಲ ವಾಸಿಸಿದ್ದೇನೆ. [QBR]
ಕೀರ್ತನೆಗಳು 120 : 7 (ERVKN)
ಶಾಂತಿ ನೆಲೆಸಿರಲಿ ಎಂದು ನಾನು ಹೇಳಿದರೂ ಅವರು ಯುದ್ಧವನ್ನೇ ಇಷ್ಟಪಡುತ್ತಾರೆ. [PE]

1 2 3 4 5 6 7

BG:

Opacity:

Color:


Size:


Font: