ಕೀರ್ತನೆಗಳು 118 : 1 (ERVKN)
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ. ಆತನು ಒಳ್ಳೆಯವನು. ಆತನ ಪ್ರೀತಿಯು ಶಾಶ್ವತವಾದದ್ದು!
ಕೀರ್ತನೆಗಳು 118 : 2 (ERVKN)
ಇಸ್ರೇಲರೇ, “ಆತನ ಪ್ರೀತಿ ಶಾಶ್ವತವಾದದ್ದು” ಎಂದು ಹೇಳಿರಿ.
ಕೀರ್ತನೆಗಳು 118 : 3 (ERVKN)
ಯಾಜಕರೇ, “ಆತನ ಪ್ರೀತಿ ಶಾಶ್ವತವಾದದ್ದು!” ಎಂದು ಹೇಳಿರಿ.
ಕೀರ್ತನೆಗಳು 118 : 4 (ERVKN)
ಯೆಹೋವನ ಭಕ್ತರೇ, “ಆತನ ಪ್ರೀತಿ ಶಾಶ್ವತವಾದದ್ದು” ಎಂದು ಹೇಳಿರಿ.
ಕೀರ್ತನೆಗಳು 118 : 5 (ERVKN)
ನಾನು ಆಪತ್ತಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು. ಆತನು ನನಗೆ ಸದುತ್ತರವನ್ನು ದಯಪಾಲಿಸಿ ನನ್ನನ್ನು ಬಿಡಿಸಿದನು.
ಕೀರ್ತನೆಗಳು 118 : 6 (ERVKN)
ಯೆಹೋವನು ನನ್ನೊಂದಿಗಿದ್ದಾನೆ, ಆದ್ದರಿಂದ ನಾನು ಭಯಪಡುವುದಿಲ್ಲ. ಮನುಷ್ಯರು ನನಗೇನು ಮಾಡಬಲ್ಲರು?
ಕೀರ್ತನೆಗಳು 118 : 7 (ERVKN)
ಯೆಹೋವನು ನನಗೆ ಸಹಾಯಕನಾಗಿದ್ದಾನೆ. ನನ್ನ ಶತ್ರುಗಳಿಗಾಗುವ ಸೋಲನ್ನು ಕಣ್ಣಾರೆ ಕಾಣುವೆನು.
ಕೀರ್ತನೆಗಳು 118 : 8 (ERVKN)
ಜನರಲ್ಲಿ ಭರವಸೆ ಇಡುವುದಕ್ಕಿಂತಲೂ ಯೆಹೋವನಲ್ಲಿ ಭರವಸೆ ಇಡುವುದೇ ಉತ್ತಮ.
ಕೀರ್ತನೆಗಳು 118 : 9 (ERVKN)
ನಿಮ್ಮ ನಾಯಕರುಗಳಲ್ಲಿ ಭರವಸೆ ಇಡುವುದಕ್ಕಿಂತಲೂ ಯೆಹೋವನಲ್ಲಿ ಭರವಸೆ ಇಡುವುದೇ ಉತ್ತಮ.
ಕೀರ್ತನೆಗಳು 118 : 10 (ERVKN)
ಅನೇಕ ಶತ್ರುಗಳು ನನ್ನನ್ನು ಸುತ್ತುಗಟ್ಟಿದರು. ನಾನು ಅವರನ್ನು ಯೆಹೋವನ ಶಕ್ತಿಯಿಂದ ಸೋಲಿಸಿದೆನು.
ಕೀರ್ತನೆಗಳು 118 : 11 (ERVKN)
ಶತ್ರುಗಳು ನನ್ನನ್ನು ಮತ್ತೆಮತ್ತೆ ಸುತ್ತುಗಟ್ಟಿದರು. ನಾನು ಅವರನ್ನು ಯೆಹೋವನ ಶಕ್ತಿಯಿಂದ ಸೋಲಿಸಿದೆನು.
ಕೀರ್ತನೆಗಳು 118 : 12 (ERVKN)
ಶತ್ರುಗಳು ಜೇನುನೊಣಗಳ ಹಿಂಡಿನಂತೆ ನನ್ನನ್ನು ಸುತ್ತುಗಟ್ಟಿದರು. ಆದರೆ, ಧಗಧಗನೆ ಉರಿಯುವ ಪೊದೆಯಂತೆ ಅವರು ಕೊನೆಗೊಂಡರು.
ನಾನು ಅವರನ್ನು ಯೆಹೋವನ ಶಕ್ತಿಯಿಂದ ಸೋಲಿಸಿದೆನು.
ಕೀರ್ತನೆಗಳು 118 : 13 (ERVKN)
ಶತ್ರುಗಳು ನನ್ನ ಮೇಲೆ ಆಕ್ರಮಣ ಮಾಡಿ ಸಂಪೂರ್ಣವಾಗಿ ನಾಶಮಾಡಲಿದ್ದರು. ಆದರೆ ಯೆಹೋವನು ನನಗೆ ಸಹಾಯ ಮಾಡಿದನು.
ಕೀರ್ತನೆಗಳು 118 : 14 (ERVKN)
ನನ್ನ ಬಲವೂ ಜಯಗೀತೆಯೂ ಯೆಹೋವನೇ. ಆತನೇ ನನ್ನನ್ನು ರಕ್ಷಿಸುವನು!
ಕೀರ್ತನೆಗಳು 118 : 15 (ERVKN)
ಜಯೋತ್ಸವವು ನೀತಿವಂತರ ಮನೆಗಳಲ್ಲಿ ಕೇಳಿಬರುತ್ತಿದೆ. ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿಸಿದ್ದಾನೆ.
ಕೀರ್ತನೆಗಳು 118 : 16 (ERVKN)
ಯೆಹೋವನ ಬಲಗೈ ಜಯಗಳಿಸಿದೆ. ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿದ್ದಾನೆ.
ಕೀರ್ತನೆಗಳು 118 : 17 (ERVKN)
ನಾನು ಸಾಯುವುದಿಲ್ಲ; ನಾನು ಜೀವದಿಂದಿದ್ದು ಯೆಹೋವನ ಕಾರ್ಯಗಳ ಕುರಿತು ಹೇಳುತ್ತೇನೆ.
ಕೀರ್ತನೆಗಳು 118 : 18 (ERVKN)
ಯೆಹೋವನು ನನ್ನನ್ನು ಶಿಕ್ಷಿಸಿದರೂ ಸಾವಿಗೀಡುಮಾಡಲಿಲ್ಲ.
ಕೀರ್ತನೆಗಳು 118 : 19 (ERVKN)
ನೀತಿಯ ಬಾಗಿಲುಗಳೇ, ನನಗೋಸ್ಕರ ತೆರೆಯಿರಿ, ನಾನು ಒಳಗೆ ಬಂದು ಯೆಹೋವನನ್ನು ಆರಾಧಿಸುತ್ತೇನೆ.
ಕೀರ್ತನೆಗಳು 118 : 20 (ERVKN)
ಅವು ಯೆಹೋವನ ಬಾಗಿಲುಗಳು. ನೀತಿವಂತರು ಮಾತ್ರ ಆ ಬಾಗಿಲುಗಳ ಮೂಲಕ ಹೋಗಬಲ್ಲರು.
ಕೀರ್ತನೆಗಳು 118 : 21 (ERVKN)
ಯೆಹೋವನೇ, ನನ್ನ ಪ್ರಾರ್ಥನೆಗೆ ನೀನು ಉತ್ತರಿಸಿ ನನ್ನನ್ನು ರಕ್ಷಿಸಿದ್ದಕ್ಕೋಸ್ಕರ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.
ಕೀರ್ತನೆಗಳು 118 : 22 (ERVKN)
ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.
ಕೀರ್ತನೆಗಳು 118 : 23 (ERVKN)
ಇದು ಯೆಹೋವನಿಂದಲೇ ಆಯಿತು. ನಮಗಂತೂ ಇದು ಆಶ್ಚರ್ಯಕರವಾಗಿದೆ!
ಕೀರ್ತನೆಗಳು 118 : 24 (ERVKN)
ಈ ದಿನವನ್ನು ಮಾಡಿದಾತನು ಯೆಹೋವನೇ. ಇಂದೇ ನಾವು ಉಲ್ಲಾಸದಿಂದ ಆನಂದಿಸೋಣ.
ಕೀರ್ತನೆಗಳು 118 : 25 (ERVKN)
“ಯೆಹೋವನಿಗೆ ಸ್ತೋತ್ರವಾಗಲಿ! ಆತನು ನಮ್ಮನ್ನು ರಕ್ಷಿಸಿದ್ದಾನೆ.
ಕೀರ್ತನೆಗಳು 118 : 26 (ERVKN)
ಯೆಹೋವನ ಹೆಸರಿನಲ್ಲಿ ಒಳಗೆ ಬರುವವನಿಗೆ ಸುಸ್ವಾಗತ!” “ಯೆಹೋವನ ಆಲಯದಿಂದ ನಾವು ನಿನ್ನನ್ನು ಆಶೀರ್ವದಿಸುತ್ತೇವೆ!
ಕೀರ್ತನೆಗಳು 118 : 27 (ERVKN)
ಯೆಹೋವನೇ ದೇವರು. ಆತನು ನಮ್ಮನ್ನು ಸ್ವೀಕರಿಸಿಕೊಳ್ಳುವನು. ಯಜ್ಞಕ್ಕೋಸ್ಕರ ಕುರಿಮರಿಯನ್ನು ಕಟ್ಟಿ ಯಜ್ಞವೇದಿಕೆಯ ಕೊಂಬುಗಳ ಸಮೀಪಕ್ಕೆ ಹೊತ್ತುಕೊಂಡು ಬನ್ನಿರಿ” ಎಂದು ಯಾಜಕರು ಉತ್ತರಿಸಿದರು.
ಕೀರ್ತನೆಗಳು 118 : 28 (ERVKN)
ಯೆಹೋವನೇ, ನೀನೇ ನನ್ನ ದೇವರು; ನಾನು ನಿನಗೆ ಕೃತಜ್ಞತೆ ಸಲ್ಲಿಸುವೆನು. ನಾನು ನಿನ್ನನ್ನು ಘನಪಡಿಸುವೆನು!
ಕೀರ್ತನೆಗಳು 118 : 29 (ERVKN)
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು. ಆತನ ಪ್ರೀತಿಯು ಶಾಶ್ವತವಾದದ್ದು.
❮
❯