ಕೀರ್ತನೆಗಳು 116 : 1 (ERVKN)
ಯೆಹೋವನು ನನ್ನ ಮೊರೆಯನ್ನು ಕೇಳಿದ್ದರಿಂದ ನಾನು ಆತನನ್ನು ಪ್ರೀತಿಸುತ್ತೇನೆ.
ಕೀರ್ತನೆಗಳು 116 : 2 (ERVKN)
ನಾನು ಆತನಿಗೆ ಮೊರೆಯಿಡುವಾಗಲೆಲ್ಲಾ ಆತನು ನನಗೆ ಕಿವಿಗೊಡುತ್ತಾನೆ.
ಕೀರ್ತನೆಗಳು 116 : 3 (ERVKN)
ಮರಣಕರವಾದ ಹಗ್ಗಗಳು ನನ್ನನ್ನು ಸುತ್ತಿಕೊಂಡಿದ್ದವು. ಸಮಾಧಿಯು ನನ್ನನ್ನು ಮುಚ್ಚಿಕೊಳ್ಳುತ್ತಿತ್ತು. ನಾನು ಭಯಗೊಂಡಿದ್ದೆನು; ಚಿಂತೆಗೊಳಗಾಗಿದ್ದೆನು.
ಕೀರ್ತನೆಗಳು 116 : 4 (ERVKN)
ಆಗ ನಾನು ಯೆಹೋವನ ಹೆಸರು ಹೇಳಿ, “ಯೆಹೋವನೇ, ನನ್ನನ್ನು ರಕ್ಷಿಸು!” ಎಂದು ಮೊರೆಯಿಟ್ಟೆನು.
ಕೀರ್ತನೆಗಳು 116 : 5 (ERVKN)
ಯೆಹೋವನು ಒಳ್ಳೆಯವನೂ ಕೃಪಾಪೂರ್ಣನೂ ಆಗಿದ್ದಾನೆ. ನಮ್ಮ ದೇವರು ಕರುಣಾಮಯನಾಗಿದ್ದಾನೆ.
ಕೀರ್ತನೆಗಳು 116 : 6 (ERVKN)
ಯೆಹೋವನು ಅಸಹಾಯಕರನ್ನು ಕಾಪಾಡುವನು. ನಾನು ಅಸಹಾಯಕನಾಗಿದ್ದಾಗ ಯೆಹೋವನು ನನ್ನನ್ನು ರಕ್ಷಿಸಿದನು.
ಕೀರ್ತನೆಗಳು 116 : 7 (ERVKN)
ನನ್ನ ಆತ್ಮವೇ, ವಿಶ್ರಮಿಸಿಕೋ! ಯೆಹೋವನು ನಿನ್ನನ್ನು ಕಾಪಾಡುವನು.
ಕೀರ್ತನೆಗಳು 116 : 8 (ERVKN)
ಯೆಹೋವನೇ, ನೀನು ನನ್ನ ಆತ್ಮವನ್ನು ಮರಣದಿಂದ ರಕ್ಷಿಸಿದೆ. ನೀನು ನನ್ನ ಕಣ್ಣೀರನ್ನು ನಿಲ್ಲಿಸಿದೆ; ಬೀಳದಂತೆ ನನ್ನನ್ನು ಕಾಪಾಡಿದೆ.
ಕೀರ್ತನೆಗಳು 116 : 9 (ERVKN)
ಜೀವಿಸುವವರ ನಾಡಿನಲ್ಲಿ ನಾನು ಯೆಹೋವನ ಸೇವೆಯನ್ನು ಮುಂದುವರಿಸುವೆನು.
ಕೀರ್ತನೆಗಳು 116 : 10 (ERVKN)
“ನಾಶವಾದೆನು!” ಎಂದು ನಾನು ಹೇಳಿದಾಗಲೂ ನಂಬಿಕೊಂಡೇ ಇದ್ದೆನು.
ಕೀರ್ತನೆಗಳು 116 : 11 (ERVKN)
ನಾನು ಭಯಗೊಂಡು, “ಎಲ್ಲಾ ಮನುಷ್ಯರು ಸುಳ್ಳುಗಾರರಾಗಿದ್ದಾರೆ!” ಎಂದು ಹೇಳಿದಾಗಲೂ ನಂಬಿಕೊಂಡೇ ಇದ್ದೆನು.
ಕೀರ್ತನೆಗಳು 116 : 12 (ERVKN)
ಯೆಹೋವನ ಮಹೋಪಕಾರಗಳಿಗೆ ಬದಲೇನು ಕೊಡಲಿ? ನನ್ನಲ್ಲಿರುವುದೆಲ್ಲ ಯೆಹೋವನದೇ.
ಕೀರ್ತನೆಗಳು 116 : 13 (ERVKN)
ನನ್ನನ್ನು ರಕ್ಷಿಸಿದ್ದರಿಂದ ಆತನಿಗೆ ಪಾನದ್ರವ್ಯವನ್ನು ಅರ್ಪಿಸುವೆನು. ಆತನ ಹೆಸರಿನಲ್ಲಿ ಪ್ರಾರ್ಥಿಸುವೆನು.
ಕೀರ್ತನೆಗಳು 116 : 14 (ERVKN)
ನಾನು ಯೆಹೋವನಿಗೆ ಮಾಡಿದ ಹರಕೆಗಳನ್ನು ಜನರ ಮುಂದೆ ಆತನಿಗೆ ಸಲ್ಲಿಸುವೆನು.
ಕೀರ್ತನೆಗಳು 116 : 15 (ERVKN)
ಯೆಹೋವನು ತನ್ನ ಭಕ್ತರ ಮರಣವನ್ನು ಅಲ್ಪವೆಂದು ಎಣಿಸುವುದಿಲ್ಲ.
ಕೀರ್ತನೆಗಳು 116 : 16 (ERVKN)
ಯೆಹೋವನೇ, ನಾನು ನಿನ್ನ ಸೇವಕ. ನಿನ್ನ ದಾಸಿಯರಲ್ಲೊಬ್ಬಳ ಮಗ. ನೀನೇ ನನ್ನ ಪ್ರಥಮ ಉಪಾಧ್ಯಾಯ!
ಕೀರ್ತನೆಗಳು 116 : 17 (ERVKN)
ನಾನು ನಿನಗೆ ಕೃತಜ್ಞತಾ ಕಾಣಿಕೆಯನ್ನು ಅರ್ಪಿಸುವೆನು. ಆತನ ಹೆಸರಿನಲ್ಲಿ ಪ್ರಾರ್ಥಿಸುವೆನು.
ಕೀರ್ತನೆಗಳು 116 : 18 (ERVKN)
ನನ್ನ ಹರಕೆಗಳನ್ನು ಯೆಹೋವನಿಗೆ ಜನರ ಮುಂದೆ ಸಲ್ಲಿಸುವೆನು.
ಕೀರ್ತನೆಗಳು 116 : 19 (ERVKN)
ಜೆರುಸಲೇಮಿನ ದೇವಾಲಯದ ಅಂಗಳಗಳಲ್ಲಿ ಈ ಯಜ್ಞಗಳನ್ನು ಅರ್ಪಿಸುವೆನು. ಯೆಹೋವನಿಗೆ ಸ್ತೋತ್ರವಾಗಲಿ!

1 2 3 4 5 6 7 8 9 10 11 12 13 14 15 16 17 18 19

BG:

Opacity:

Color:


Size:


Font: