ಕೀರ್ತನೆಗಳು 113 : 1 (ERVKN)
ಯೆಹೋವನಿಗೆ ಸ್ತೋತ್ರವಾಗಲಿ! [QBR] ಯೆಹೋವನ ಸೇವಕರೇ, ಆತನಿಗೆ ಸ್ತೋತ್ರಮಾಡಿರಿ! [QBR2] ಆತನ ಹೆಸರನ್ನು ಕೊಂಡಾಡಿರಿ. [QBR]
ಕೀರ್ತನೆಗಳು 113 : 2 (ERVKN)
ಯೆಹೋವನ ಹೆಸರು ಇಂದಿಗೂ ಎಂದೆಂದಿಗೂ ಸ್ತುತಿಸಲ್ಪಡಲಿ. [QBR]
ಕೀರ್ತನೆಗಳು 113 : 3 (ERVKN)
ಪೂರ್ವದಿಂದಿಡಿದು ಪಶ್ಚಿಮದವರೆಗೂ [QBR2] ಯೆಹೋವನ ಹೆಸರು ಸ್ತುತಿಸಲ್ಪಡಲಿ. [QBR]
ಕೀರ್ತನೆಗಳು 113 : 4 (ERVKN)
ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನಾಗಿದ್ದಾನೆ; [QBR2] ಆತನ ಮಹಿಮೆಯು ಮೇಲೋಕದಲ್ಲಿ ಮೆರೆಯುತ್ತಿದೆ. [QBR]
ಕೀರ್ತನೆಗಳು 113 : 5 (ERVKN)
ನಮ್ಮ ದೇವರಾದ ಯೆಹೋವನಿಗೆ ಸಮಾನರು ಇಲ್ಲವೇ ಇಲ್ಲ. [QBR2] ಆತನು ಉನ್ನತ ಲೋಕದಲ್ಲಿ ಸಿಂಹಾಸನಾರೂಢನಾಗಿದ್ದಾನೆ. [QBR]
ಕೀರ್ತನೆಗಳು 113 : 6 (ERVKN)
ಆತನು ಆಕಾಶವನ್ನೂ [QBR2] ಭೂಮಿಯನ್ನೂ ಬಾಗಿ ನೋಡುವನು. [QBR]
ಕೀರ್ತನೆಗಳು 113 : 7 (ERVKN)
ಆತನು ಬಡವರನ್ನು ಧೂಳಿನಿಂದ ಎಬ್ಬಿಸುವನು; [QBR2] ಭಿಕ್ಷುಕರನ್ನು ತಿಪ್ಪೆಯಿಂದ ಎತ್ತುವನು. [QBR]
ಕೀರ್ತನೆಗಳು 113 : 8 (ERVKN)
ಆತನು ಅವರನ್ನು ಪ್ರಮುಖರನ್ನಾಗಿಯೂ [QBR2] ನಾಯಕರುಗಳನ್ನಾಗಿಯೂ ಮಾಡುವನು. [QBR]
ಕೀರ್ತನೆಗಳು 113 : 9 (ERVKN)
ಆತನು ಬಂಜೆಗೆ ಮಕ್ಕಳನ್ನು ಅನುಗ್ರಹಿಸಿ [QBR2] ಸಂತೋಷಪಡಿಸುವನು. ಯೆಹೋವನಿಗೆ ಸ್ತೋತ್ರವಾಗಲಿ! [PE]

1 2 3 4 5 6 7 8 9

BG:

Opacity:

Color:


Size:


Font: