ಕೀರ್ತನೆಗಳು 1 : 1 (ERVKN)
ಯಾವನು ದುಷ್ಟರ ಸಲಹೆಯನ್ನು ಅನುಸರಿಸದೆ, ಪಾಪಿಗಳಂತೆ ಜೀವಿಸದೆ, ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ ಅವನೇ ಭಾಗ್ಯವಂತನು.
ಕೀರ್ತನೆಗಳು 1 : 2 (ERVKN)
ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ ಅದನ್ನೇ ಹಗಲಿರುಳು ಧ್ಯಾನಿಸುವನು.
ಕೀರ್ತನೆಗಳು 1 : 3 (ERVKN)
ಅವನು ನೀರಿನ ಕಾಲುವೆಗಳ ಬಳಿಯಲ್ಲಿ ಹುಲುಸಾಗಿ ಬೆಳೆದಿರುವ ಮರದಂತಿರುವನು. ಆ ಮರವು ತಕ್ಕಕಾಲದಲ್ಲಿ ಫಲಿಸುವುದು; ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು; ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.
ಕೀರ್ತನೆಗಳು 1 : 4 (ERVKN)
ದುಷ್ಟರಾದರೊ ಹಾಗಲ್ಲ! ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
ಕೀರ್ತನೆಗಳು 1 : 5 (ERVKN)
ನೀತಿವಂತರು ನ್ಯಾಯನಿರ್ಣಯಿಸುವಾಗ ಪಾಪಿಗಳಿಗೂ ದುಷ್ಟರಿಗೂ ಅಪರಾಧಿಗಳೆಂದು ತೀರ್ಪಾಗುವುದು.
ಕೀರ್ತನೆಗಳು 1 : 6 (ERVKN)
ಯೆಹೋವನು ನೀತಿವಂತರನ್ನು ಸಂರಕ್ಷಿಸುವನು; ದುಷ್ಟರನ್ನಾದರೊ ನಾಶಪಡಿಸುವನು.

1 2 3 4 5 6

BG:

Opacity:

Color:


Size:


Font: