ಙ್ಞಾನೋಕ್ತಿಗಳು 8 : 1 (ERVKN)
ಕೇಳಿ! ಜ್ಞಾನವೆಂಬಾಕೆಯೂ ವಿವೇಕವೆಂಬಾಕೆಯೂ [QBR2] “ಕಿವಿಗೊಡಿರಿ” ಎಂದು ನಿಮ್ಮನ್ನು ಕೂಗಿ ಕರೆಯುತ್ತಿದ್ದಾಳೆ. [QBR]
ಙ್ಞಾನೋಕ್ತಿಗಳು 8 : 2 (ERVKN)
ರಸ್ತೆಗಳ ಚೌಕಗಳ ಬಳಿಯಿರುವ [QBR2] ಗುಡ್ಡದ ಮೇಲ್ಭಾಗದಲ್ಲಿ ಆಕೆಯು ನಿಂತುಕೊಂಡಿದ್ದಾಳೆ. [QBR]
ಙ್ಞಾನೋಕ್ತಿಗಳು 8 : 3 (ERVKN)
ಪಟ್ಟಣದ ಹೆಬ್ಬಾಗಿಲುಗಳ ಬಳಿಯಿಂದಲೂ [QBR2] ತೆರೆದ ಬಾಗಿಲುಗಳ ಬಳಿಯಿಂದಲೂ ಕರೆಯುತ್ತಿದ್ದಾಳೆ.
ಙ್ಞಾನೋಕ್ತಿಗಳು 8 : 4 (ERVKN)
“ಮನುಷ್ಯರೇ, ನಿಮ್ಮನ್ನೇ ಕರೆಯುತ್ತೇನೆ; [QBR2] ಎಲ್ಲಾ ಜನರನ್ನು ಕರೆಯುತ್ತೇನೆ. [QBR]
ಙ್ಞಾನೋಕ್ತಿಗಳು 8 : 5 (ERVKN)
ಮೂಢರೇ, ಜಾಣತನವನ್ನು ಕಲಿತುಕೊಳ್ಳಿರಿ; [QBR2] ಜ್ಞಾನಹೀನರೇ ಬುದ್ಧಿಯನ್ನು ಗ್ರಹಿಸಿಕೊಳ್ಳಿರಿ. [QBR]
ಙ್ಞಾನೋಕ್ತಿಗಳು 8 : 6 (ERVKN)
ಕೇಳಿರಿ! ಶ್ರೇಷ್ಠವಾದವುಗಳನ್ನೂ [QBR2] ಯಥಾರ್ಥವಾದುವುಗಳನ್ನೂ ನಿಮಗೆ ತಿಳಿಸುವೆನು. [QBR]
ಙ್ಞಾನೋಕ್ತಿಗಳು 8 : 7 (ERVKN)
ನನ್ನ ಮಾತುಗಳು ಸತ್ಯ. [QBR2] ನನ್ನ ತುಟಿಗಳಿಗೆ ದುಷ್ಟತನ ಅಸಹ್ಯ. [QBR]
ಙ್ಞಾನೋಕ್ತಿಗಳು 8 : 8 (ERVKN)
ನನ್ನ ಮಾತುಗಳು ನೀತಿಯ ಮಾತುಗಳಾಗಿವೆ. [QBR2] ನನ್ನ ಮಾತುಗಳಲ್ಲಿ ತಪ್ಪಾಗಲಿ ಕಪಟವಾಗಲಿ ಇಲ್ಲವೇ ಇಲ್ಲ. [QBR]
ಙ್ಞಾನೋಕ್ತಿಗಳು 8 : 9 (ERVKN)
ತಿಳುವಳಿಕೆಯುಳ್ಳವನಿಗೆ ನನ್ನ ಮಾತುಗಳು ಸ್ಪಷ್ಟವಾಗಿವೆ; [QBR2] ವಿವೇಕಿಗೆ ಯಥಾರ್ಥವಾಗಿವೆ. [QBR]
ಙ್ಞಾನೋಕ್ತಿಗಳು 8 : 10 (ERVKN)
ನನ್ನ ಉಪದೇಶವನ್ನು ಬೆಳ್ಳಿಗಿಂತಲೂ [QBR2] ನನ್ನ ಜ್ಞಾನೋಪದೇಶವನ್ನು ಶುದ್ಧ ಬಂಗಾರಕ್ಕಿಂತಲೂ ಉತ್ತಮವೆಂದು ಸ್ವೀಕರಿಸಿಕೊಳ್ಳಿ. [QBR]
ಙ್ಞಾನೋಕ್ತಿಗಳು 8 : 11 (ERVKN)
ಜ್ಞಾನವು ಹವಳಕ್ಕಿಂತಲೂ ಶ್ರೇಷ್ಠ, [QBR2] ಮನುಷ್ಯನ ಇಷ್ಟ ವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ.”
ಙ್ಞಾನೋಕ್ತಿಗಳು 8 : 12 (ERVKN)
{ಜ್ಞಾನವು ಮಾಡುವುದೇನು} [PS] “ನಾನೇ ಜ್ಞಾನ. [QBR2] ನಾನು ಒಳ್ಳೆಯ ನ್ಯಾಯತೀರ್ಪಿನೊಡನೆ ವಾಸಿಸುವೆ. [QBR2] ನಾನು ವಿವೇಕದೊಡನೆಯೂ ಒಳ್ಳೆಯ ಆಲೋಚನೆಯೊಡನೆಯೂ ಇರುವೆನು. [QBR]
ಙ್ಞಾನೋಕ್ತಿಗಳು 8 : 13 (ERVKN)
ಯೆಹೋವನಲ್ಲಿ ಭಯಭಕ್ತಿಯಿರುವವನು ಪಾಪವನ್ನು ದ್ವೇಷಿಸುತ್ತಾನೆ. [QBR2] ಜ್ಞಾನವೆಂಬ ನಾನು ಗರ್ವವನ್ನೂ ಅಹಂಭಾವವನ್ನೂ [QBR2] ದುರ್ಮಾರ್ಗತನವನ್ನೂ ಸುಳ್ಳಾಡುವ ಬಾಯನ್ನೂ ದ್ವೇಷಿಸುತ್ತೇನೆ. [QBR]
ಙ್ಞಾನೋಕ್ತಿಗಳು 8 : 14 (ERVKN)
ಒಳ್ಳೆಯ ಆಲೋಚನೆಗಳೂ ಒಳ್ಳೆಯ ತೀರ್ಪುಗಳೂ ನನ್ನವೇ. [QBR2] ವಿವೇಕವೂ ಸಾಮರ್ಥ್ಯವೂ ನನ್ನಲ್ಲಿವೆ. [QBR]
ಙ್ಞಾನೋಕ್ತಿಗಳು 8 : 15 (ERVKN)
ನನ್ನ ಸಹಾಯದಿಂದ ರಾಜರುಗಳು ರಾಜ್ಯವಾಳುವರು; [QBR2] ಅಧಿಪತಿಗಳು ನ್ಯಾಯವಾದ ಕಾನೂನುಗಳನ್ನು ಮಾಡುವರು. [QBR]
ಙ್ಞಾನೋಕ್ತಿಗಳು 8 : 16 (ERVKN)
ನನ್ನ ಸಹಾಯದಿಂದ ಅಧಿಪತಿಗಳು ಆಡಳಿತ ಮಾಡುವರು; [QBR2] ನಾಯಕರು ದೊರೆತನ ಮಾಡುವರು. [QBR]
ಙ್ಞಾನೋಕ್ತಿಗಳು 8 : 17 (ERVKN)
ನನ್ನನ್ನು ಪ್ರೀತಿಸುವವರನ್ನು ನಾನೂ ಪ್ರೀತಿಸುವೆನು; [QBR2] ಬಹಳವಾಗಿ ನನ್ನನ್ನು ಹುಡುಕುವವರು ನನ್ನನ್ನು ಕಂಡುಕೊಳ್ಳುವರು. [QBR]
ಙ್ಞಾನೋಕ್ತಿಗಳು 8 : 18 (ERVKN)
ನನ್ನಲ್ಲಿಯೂ ಸಹ ಕೊಡಲು ಐಶ್ವರ್ಯವಿದೆ ಮತ್ತು ಘನತೆಯಿದೆ. [QBR2] ನಾನು ಶಾಶ್ವತವಾದ ಐಶ್ವರ್ಯವನ್ನೂ ಯಶಸ್ಸನ್ನೂ ಕೊಡುವೆನು. [QBR]
ಙ್ಞಾನೋಕ್ತಿಗಳು 8 : 19 (ERVKN)
ನಾನು ಕೊಡುವಂಥವುಗಳು ಬಂಗಾರಕ್ಕಿಂತಲೂ ಶ್ರೇಷ್ಠ. [QBR2] ನನ್ನ ಉಡುಗೊರೆಗಳು ಅಪ್ಪಟ ಬೆಳ್ಳಿಗಿಂತಲೂ ಉತ್ತಮ. [QBR]
ಙ್ಞಾನೋಕ್ತಿಗಳು 8 : 20 (ERVKN)
ನಾನು ನೀತಿಮಾರ್ಗದಲ್ಲಿಯೂ [QBR2] ನ್ಯಾಯಮಾರ್ಗದಲ್ಲಿಯೂ ನಡೆಯುತ್ತೇನೆ. [QBR]
ಙ್ಞಾನೋಕ್ತಿಗಳು 8 : 21 (ERVKN)
ನನ್ನನ್ನು ಪ್ರೀತಿಸುವವರಿಗೆ ನಾನು ಐಶ್ವರ್ಯವನ್ನು ಕೊಡುವೆನು. [QBR2] ಹೌದು, ಅವರ ಉಗ್ರಾಣಗಳನ್ನು ತುಂಬಿಸುವೆನು.
ಙ್ಞಾನೋಕ್ತಿಗಳು 8 : 22 (ERVKN)
“ಯೆಹೋವನು ‘ಜ್ಞಾನ’ವೆಂಬ ನನ್ನನ್ನು [QBR2] ತನ್ನ ಸೃಷ್ಟಿ ಕ್ರಮದಲ್ಲಿ ಮೊದಲು ನಿರ್ಮಿಸಿದನು. [QBR]
ಙ್ಞಾನೋಕ್ತಿಗಳು 8 : 23 (ERVKN)
ನಾನು ಆದಿಯಲ್ಲಿ ನಿರ್ಮಾಣಗೊಂಡೆನು. [QBR2] ಪ್ರಪಂಚವು ಆರಂಭವಾಗುವುದಕ್ಕಿಂತ ಮೊದಲೇ ನಾನು ನಿರ್ಮಿತನಾದೆನು. [QBR]
ಙ್ಞಾನೋಕ್ತಿಗಳು 8 : 24 (ERVKN)
ನಾನು ಸಾಗರಗಳಿಗಿಂತ ಮೊದಲೇ ಜನಿಸಿದೆನು; [QBR2] ಬುಗ್ಗೆಗಳ ನೀರು ಉಂಟಾಗುವುದಕ್ಕಿಂತ ಮೊದಲೇ ಜನಿಸಿದೆನು. [QBR]
ಙ್ಞಾನೋಕ್ತಿಗಳು 8 : 25 (ERVKN)
ನಾನು ಪರ್ವತಗಳಿಗಿಂತ ಮೊದಲೇ ಜನಿಸಿದೆನು; ಬೆಟ್ಟಗಳಿಗಿಂತ ಮೊದಲೇ ಹುಟ್ಟಿದೆನು. [QBR2]
ಙ್ಞಾನೋಕ್ತಿಗಳು 8 : 26 (ERVKN)
ಯೆಹೋವನು ಭೂಮಿಯನ್ನು ಸೃಷ್ಟಿಸುವುದಕ್ಕಿಂತ ಮೊದಲೇ ಜ್ಞಾನವೆಂಬ ನಾನು ಹುಟ್ಟಿದೆನು. [QBR2] ನಾನು ಬಯಲುಗಳಿಗಿಂತ ಮೊದಲೇ ಹುಟ್ಟಿದೆನು. ಆತನು ಭೂಮಿಯ ಮೊದಲನೆ ಧೂಳಿನ ಕಣವನ್ನು ಉಂಟುಮಾಡುವುದಕ್ಕಿಂತ ಮೊದಲೇ ನಾನು ಹುಟ್ಟಿದೆನು. [QBR]
ಙ್ಞಾನೋಕ್ತಿಗಳು 8 : 27 (ERVKN)
ಯೆಹೋವನು ಆಕಾಶವನ್ನು ಸೃಷ್ಟಿಸಿದ ಸಮಯದಲ್ಲಿ [QBR2] ಜ್ಞಾನವೆಂಬ ನಾನು ಅಲ್ಲಿದ್ದೆನು. [QBR2] ಆತನು ಸಾಗರದ ಎಲ್ಲೆಗಳನ್ನು ಗೊತ್ತುಪಡಿಸಿದಾಗ ಜ್ಞಾನವೆಂಬ ನಾನು ಅಲ್ಲಿದ್ದೆನು. [QBR]
ಙ್ಞಾನೋಕ್ತಿಗಳು 8 : 28 (ERVKN)
ಆತನು ಆಕಾಶದಲ್ಲಿ ಮೋಡಗಳನ್ನೂ [QBR2] ಸಾಗರಗಳಲ್ಲಿ ನೀರನ್ನೂ ನೆಲೆಗೊಳಿಸಿದಾಗ ನಾನು ಅಲ್ಲಿದ್ದೆನು. [QBR]
ಙ್ಞಾನೋಕ್ತಿಗಳು 8 : 29 (ERVKN)
ಆತನು ಸಮುದ್ರಗಳ ನೀರಿಗೆ ಎಲ್ಲೆಕಟ್ಟನ್ನು ಹಾಕಿದಾಗಲೂ [QBR2] ಭೂಮಿಗೆ ಅಸ್ತಿವಾರಗಳನ್ನು ಹಾಕಿದಾಗಲೂ ನಾನು ಅಲ್ಲಿದ್ದೆನು. [QBR]
ಙ್ಞಾನೋಕ್ತಿಗಳು 8 : 30 (ERVKN)
ನಾನು ಆತನ ಪಕ್ಕದಲ್ಲಿ ನಿಪುಣ ಕೆಲಸಗಾರನಂತಿದ್ದೆನು. [QBR2] ನಾನು ಪ್ರತಿದಿನವೂ ಸಂತೋಷಪಡುತ್ತಾ ಆತನ ಸನ್ನಿಧಿಯಲ್ಲಿ ಯಾವಾಗಲೂ ಉಲ್ಲಾಸಿಸುತ್ತಿದ್ದೆನು. [QBR]
ಙ್ಞಾನೋಕ್ತಿಗಳು 8 : 31 (ERVKN)
ಆತನು ಸೃಷ್ಟಿಸಿದ ಭೂಲೋಕದ ವಿಷಯದಲ್ಲಿ ಉಲ್ಲಾಸಿಸುತ್ತಾ [QBR2] ಮಾನವ ಸಂತಾನದ ವಿಷಯದಲ್ಲಿ ಹರ್ಷಿಸುತ್ತಾ ಇದ್ದೆನು.
ಙ್ಞಾನೋಕ್ತಿಗಳು 8 : 32 (ERVKN)
“ಆದ್ದರಿಂದ ಮಕ್ಕಳೇ, ನನಗೆ ಕಿವಿಗೊಡಿರಿ! [QBR2] ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರಾಗಿದ್ದಾರೆ. [QBR]
ಙ್ಞಾನೋಕ್ತಿಗಳು 8 : 33 (ERVKN)
ನನ್ನ ಉಪದೇಶಗಳನ್ನು ಕೇಳಿ ಜ್ಞಾನವಂತರಾಗಿರಿ. [QBR2] ಕಿವಿಗೊಡದಿರಬೇಡಿ! [QBR]
ಙ್ಞಾನೋಕ್ತಿಗಳು 8 : 34 (ERVKN)
ನನಗೆ ಕಿವಿಗೊಡುವವನು ಧನ್ಯನಾಗಿದ್ದಾನೆ. [QBR2] ಅವನು ಪ್ರತಿದಿನ ನನ್ನ ಮನೆಬಾಗಿಲುಗಳ ಬಳಿಯಲ್ಲೂ ನನ್ನ ಬಾಗಿಲಿನ ನಿಲುವುಗಳ ಬಳಿಯಲ್ಲೂ ಕಾದುಕೊಂಡಿರುತ್ತಾನೆ. [QBR]
ಙ್ಞಾನೋಕ್ತಿಗಳು 8 : 35 (ERVKN)
ನನ್ನನ್ನು ಕಂಡುಕೊಂಡಂಥವನು ಜೀವವನ್ನು ಕಂಡುಕೊಳ್ಳುತ್ತಾನೆ. [QBR2] ಅವನಿಗೆ ಯೆಹೋವನ ಕೃಪೆಯು ದೊರೆಯುತ್ತದೆ. [QBR]
ಙ್ಞಾನೋಕ್ತಿಗಳು 8 : 36 (ERVKN)
ಆದರೆ ನನ್ನನ್ನು ಕಂಡುಕೊಳ್ಳಲಾರದವನು [QBR2] ತನಗೇ ಕೇಡುಮಾಡಿಕೊಳ್ಳುವನು. [QBR] ನನ್ನನ್ನು ದ್ವೇಷಿಸುವ ಜನರೆಲ್ಲರೂ ಮರಣವನ್ನು ಪ್ರೀತಿಸುವರು.” [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36

BG:

Opacity:

Color:


Size:


Font: