ಙ್ಞಾನೋಕ್ತಿಗಳು 4 : 1 (ERVKN)
ಜ್ಞಾನ ವಿವೇಕಗಳ ಪ್ರಾಮುಖ್ಯತೆ ಮಕ್ಕಳೇ, ನಿಮ್ಮ ತಂದೆಯ ಉಪದೇಶಗಳಿಗೆ ಕಿವಿಗೊಡಿ, ಗಮನವಿಟ್ಟು ಅರ್ಥಮಾಡಿಕೊಳ್ಳಿರಿ.
ಙ್ಞಾನೋಕ್ತಿಗಳು 4 : 2 (ERVKN)
ನನ್ನ ಉಪದೇಶಗಳು ಸದುಪದೇಶಗಳಾಗಿರುವುದರಿಂದ ಅವುಗಳನ್ನು ಎಂದಿಗೂ ಮರೆಯಬೇಡಿ.
ಙ್ಞಾನೋಕ್ತಿಗಳು 4 : 3 (ERVKN)
ನಾನು ನನ್ನ ತಂದೆಗೆ ಚಿಕ್ಕ ಮಗನಾಗಿದ್ದೆ. ನನ್ನ ತಾಯಿಗೆ ನಾನೊಬ್ಬನೇ ಮಗನು.
ಙ್ಞಾನೋಕ್ತಿಗಳು 4 : 4 (ERVKN)
ನನ್ನ ತಂದೆ ನನಗೆ ಉಪದೇಶ ಮಾಡಿದ್ದೇನೆಂದರೆ: “ನನ್ನ ಮಾತುಗಳನ್ನು ನೆನಪುಮಾಡಿಕೊ; ನನ್ನ ಆಜ್ಞೆಗಳಿಗೆ ವಿಧೇಯನಾಗು, ಆಗ ನೀನು ಬದುಕುವೆ.
ಙ್ಞಾನೋಕ್ತಿಗಳು 4 : 5 (ERVKN)
ಜ್ಞಾನವನ್ನು ಮತ್ತು ವಿವೇಕವನ್ನು ಪಡೆದುಕೋ! ನನ್ನ ಮಾತುಗಳನ್ನು ಮರೆಯಬೇಡ. ಯಾವಾಗಲೂ ನನ್ನ ಉಪದೇಶಗಳನ್ನು ಅನುಸರಿಸು.
ಙ್ಞಾನೋಕ್ತಿಗಳು 4 : 6 (ERVKN)
ಜ್ಞಾನವನ್ನು ಬಿಟ್ಟು ಬೇರೆ ಕಡೆಗೆ ತಿರುಗಿಕೊಳ್ಳಬೇಡ. ಆಗ ಅದು ನಿನ್ನನ್ನು ಕಾಪಾಡುವುದು. ಜ್ಞಾನವನ್ನು ಪ್ರೀತಿಸು, ಆಗ ಅದು ನಿನ್ನನ್ನು ಕಾಪಾಡುವುದು.”
ಙ್ಞಾನೋಕ್ತಿಗಳು 4 : 7 (ERVKN)
“ಜ್ಞಾನವನ್ನು ಪಡೆಯಲು ನೀನು ನಿರ್ಧರಿಸಿದಾಗಲೇ ಜ್ಞಾನವು ನಿನ್ನಲ್ಲಿ ಆರಂಭವಾಗುತ್ತದೆ. ಆದ್ದರಿಂದ ವಿವೇಕವನ್ನು ಪಡೆಯಲು ನಿನಗಿರುವದನ್ನೆಲ್ಲಾ ಉಪಯೋಗಿಸು. ಆಗ ನೀನು ವಿವೇಕಿಯಾಗುವೆ.
ಙ್ಞಾನೋಕ್ತಿಗಳು 4 : 8 (ERVKN)
ಜ್ಞಾನವನ್ನು ಪ್ರೀತಿಸು, ಆಗ ಅದು ನಿನ್ನನ್ನು ಉನ್ನತಸ್ಥಾನಕ್ಕೆ ತರುವುದು. ಜ್ಞಾನವನ್ನು ಅಪ್ಪಿಕೊ; ಆಗ ಅದು ನಿನಗೆ ಸನ್ಮಾನವನ್ನು ತರುವುದು.
ಙ್ಞಾನೋಕ್ತಿಗಳು 4 : 9 (ERVKN)
ಅದು ನಿನಗೆ ಅಂದವಾದ ಪುಷ್ಪಮಾಲೆಯಂತೆಯೂ ಸುಂದರವಾದ ಕಿರೀಟದಂತೆಯೂ ಇರುವುದು.”
ಙ್ಞಾನೋಕ್ತಿಗಳು 4 : 10 (ERVKN)
ಮಗನೇ, ನನ್ನ ಮಾತನ್ನು ಕೇಳು. ನಾನು ಹೇಳಿದಂತೆ ಮಾಡು, ಆಗ ನೀನು ಬಹುಕಾಲ ಬದುಕುವೆ.
ಙ್ಞಾನೋಕ್ತಿಗಳು 4 : 11 (ERVKN)
ನಾನು ನಿನಗೆ ಜ್ಞಾನದ ಕುರಿತು ಉಪದೇಶಿಸುತ್ತಿರುವೆನು. ನಾನು ನಿನ್ನನ್ನು ಧರ್ಮದ ಮಾರ್ಗದಲ್ಲಿ ನಡೆಸುತ್ತಿರುವೆನು.
ಙ್ಞಾನೋಕ್ತಿಗಳು 4 : 12 (ERVKN)
ಈ ದಾರಿಯಲ್ಲೇ ಹೋಗು, ಆಗ ನಿನ್ನ ಕಾಲುಗಳು ಇಕ್ಕಟ್ಟಿಗೆ ಸಿಕ್ಕಿಕೊಳ್ಳುವುದಿಲ್ಲ. ನೀನು ಓಡಿದರೂ ಮುಗ್ಗರಿಸುವುದಿಲ್ಲ.
ಙ್ಞಾನೋಕ್ತಿಗಳು 4 : 13 (ERVKN)
ಈ ಉಪದೇಶಗಳನ್ನು ಯಾವಾಗಲೂ ನೆನಪುಮಾಡಿಕೊ; ಮರೆತುಬಿಡಬೇಡ. ಅವು ನಿನಗೆ ಜೀವವಾಗಿವೆ!
ಙ್ಞಾನೋಕ್ತಿಗಳು 4 : 14 (ERVKN)
ಕೆಡುಕರ ಮಾರ್ಗದಲ್ಲಿ ನಡೆಯಬೇಡ. ಅವರಂತೆ ಜೀವಿಸಬೇಡ.
ಙ್ಞಾನೋಕ್ತಿಗಳು 4 : 15 (ERVKN)
ದುಷ್ಟತನಕ್ಕೆ ದೂರವಾಗಿರು. ಅದರ ಬಳಿಗೆ ಹೋಗಬೇಡ. ನೇರವಾಗಿ ನಡೆದು ಅದರಿಂದ ದೂರವಾಗು.
ಙ್ಞಾನೋಕ್ತಿಗಳು 4 : 16 (ERVKN)
ಏನಾದರೂ ಕೇಡುಮಾಡದಿದ್ದರೆ ಕೆಡುಕರಿಗೆ ನಿದ್ರೆಬಾರದು. ಯಾರಿಗಾದರೂ ನೋವು ಮಾಡದೆ ಅವರು ನಿದ್ರಿಸಲಾರರು.
ಙ್ಞಾನೋಕ್ತಿಗಳು 4 : 17 (ERVKN)
ಅವರು ಬೇರೆಯವರಿಗೆ ಕೇಡನ್ನಾಗಲಿ ನೋವನ್ನಾಗಲಿ ಮಾಡದೆ ಜೀವಿಸಲಾರರು. ಅದೇ ಅವರ ಆಹಾರ ಮತ್ತು ಪಾನೀಯ.
ಙ್ಞಾನೋಕ್ತಿಗಳು 4 : 18 (ERVKN)
ನೀತಿವಂತರ ಜೀವಿತವು ಮಧ್ಯಾಹ್ನದವರೆಗೂ ಹೆಚ್ಚುತ್ತಾ ಬರುವ ಮುಂಜಾನೆಯ ಬೆಳಕಿನಂತಿರುವುದು.
ಙ್ಞಾನೋಕ್ತಿಗಳು 4 : 19 (ERVKN)
ಆದರೆ ದುಷ್ಟರ ಜೀವಿತವು ರಾತ್ರಿಯ ಕತ್ತಲೆಯಂತಿದೆ. ಅವರು ಕತ್ತಲೆಯಲ್ಲಿ ತಪ್ಪಿಸಿಕೊಂಡಿದ್ದು ತಮಗೆ ಕಾಣದ ವಸ್ತುಗಳ ಮೇಲೆ ಎಡವಿ ಬೀಳುತ್ತಾರೆ.
ಙ್ಞಾನೋಕ್ತಿಗಳು 4 : 20 (ERVKN)
ನನ್ನ ಮಗನೇ, ನನ್ನ ಮಾತುಗಳಿಗೆ ಗಮನಕೊಡು. ನನ್ನ ನುಡಿಗಳಿಗೆ ಕಿವಿಗೊಡು.
ಙ್ಞಾನೋಕ್ತಿಗಳು 4 : 21 (ERVKN)
ನಿನ್ನ ದೃಷ್ಟಿಯು ಅವುಗಳ ಮೇಲಿರಲಿ, ಅವುಗಳನ್ನು ನಿನ್ನ ನೆನಪಿನಲ್ಲಿಟ್ಟುಕೊ.
ಙ್ಞಾನೋಕ್ತಿಗಳು 4 : 22 (ERVKN)
ನನ್ನ ಉಪದೇಶಕ್ಕೆ ಕಿವಿಗೊಡುವವರು ಜೀವವನ್ನು ಹೊಂದಿಕೊಳ್ಳುವರು. ನನ್ನ ಮಾತುಗಳು ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ನೀಡುತ್ತವೆ.
ಙ್ಞಾನೋಕ್ತಿಗಳು 4 : 23 (ERVKN)
ನಿನ್ನ ಆಲೋಚನೆಗಳ ವಿಷಯದಲ್ಲಿ ಎಚ್ಚರಿಕೆಯಿಂದಿರು. ನಿನ್ನ ನಡತೆಯು ನಿನ್ನ ಆಲೋಚನೆಗಳ ಮೇಲೆ ಆಧಾರಗೊಂಡಿದೆ.
ಙ್ಞಾನೋಕ್ತಿಗಳು 4 : 24 (ERVKN)
ಸತ್ಯವನ್ನು ಸೊಟ್ಟಗೆ ಮಾಡದಿರು; ಸುಳ್ಳನ್ನೂ ಹೇಳದಿರು.
ಙ್ಞಾನೋಕ್ತಿಗಳು 4 : 25 (ERVKN)
ಒಳ್ಳೆಯದನ್ನೇ ದೃಷ್ಟಿಸು; ನಿನ್ನ ನೋಟವನ್ನು ನಿನ್ನ ಗುರಿಯ ಮೇಲೆ ಕೇಂದ್ರೀಕರಿಸು.
ಙ್ಞಾನೋಕ್ತಿಗಳು 4 : 26 (ERVKN)
ನಿನ್ನ ಕಾರ್ಯಗಳನ್ನು ಎಚ್ಚರಿಕೆಯಿಂದ ಮಾಡು; ಆಗ ನಿನ್ನ ಜೀವನವು ದೃಢವಾಗಿರುವುದು.
ಙ್ಞಾನೋಕ್ತಿಗಳು 4 : 27 (ERVKN)
ಒಳ್ಳೆಯ ಮಾರ್ಗವನ್ನು ಬಿಟ್ಟು ಹೋಗಬೇಡ; ಆದರೆ ಕೆಡುಕಿಗೆ ಯಾವಾಗಲೂ ದೂರವಾಗಿರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27