ಙ್ಞಾನೋಕ್ತಿಗಳು 30 : 1 (ERVKN)
ಯಾಕೆಯ ಮಾಗನಾದ ಅಗೂರನ ಜ್ಞಾನೋಕ್ತಿಗಳು ಮಾಸ್ಸಾದ ಯಾಕೆ ಎಂಬವನ ಮಗನಾದ ಅಗೂರನ ನುಡಿಗಳಿವು. ಇಥಿಯೇಲನಿಗೂ ಉಕ್ಕಾಲನಿಗೂ ಇವನು ನೀಡಿದ ಸಂದೇಶವಿದು:
ಙ್ಞಾನೋಕ್ತಿಗಳು 30 : 2 (ERVKN)
ನಾನು ಬೇರೆಯವರಿಗಿಂತ ದಡ್ಡನಾಗಿರುವೆ. ಸರ್ವಸಾಮಾನ್ಯವಾದ ಬುದ್ಧಿಯೂ ನನಗಿಲ್ಲ.
ಙ್ಞಾನೋಕ್ತಿಗಳು 30 : 3 (ERVKN)
ನಾನು ಜ್ಞಾನವನ್ನು ಕಲಿತವನಲ್ಲ; ಪರಿಶುದ್ಧನಾದ ದೇವರ ಬಗ್ಗೆಯೂ ಗೊತ್ತಿಲ್ಲ.
ಙ್ಞಾನೋಕ್ತಿಗಳು 30 : 4 (ERVKN)
ಎಂದಾದರೂ ಪರಲೋಕಕ್ಕೆ ಏರಿಹೋಗಿ ಇಳಿದುಬಂದವನು ಯಾರು? ಗಾಳಿಯನ್ನು ತನ್ನ ಕೈಯಲ್ಲಿ ಹಿಡಿದವನು ಯಾರು? ತನ್ನ ಉಡುಪಿನಲ್ಲಿ ಸಮುದ್ರವನ್ನು ಮೂಟೆಕಟ್ಟಿದವನು ಯಾರು? ಭೂಮಿಗೆ ಮೇರೆಗಳನ್ನು ಹಾಕಿದವನು ಯಾರು? ಈ ಕಾರ್ಯಗಳನ್ನು ಯಾವನಾದರೂ ಮಾಡಿದ್ದರೆ, ಅವನು ಯಾರು? ಅವನು ಕುಟುಂಬ ಎಲ್ಲಿದೆ?
ಙ್ಞಾನೋಕ್ತಿಗಳು 30 : 5 (ERVKN)
ದೇವರು ಹೇಳುವ ಪ್ರತಿಯೊಂದು ಮಾತೂ ನಂಬಿಕೆಗೆ ಯೋಗ್ಯವಾಗಿದೆ. ತನ್ನ ಬಳಿಗೆ ಬರುವ ಜನರಿಗೆ ದೇವರು ಆಶ್ರಯದುರ್ಗವಾಗಿದ್ದಾನೆ.
ಙ್ಞಾನೋಕ್ತಿಗಳು 30 : 6 (ERVKN)
ಆದ್ದರಿಂದ ದೇವರು ಹೇಳುವ ಸಂಗತಿಗಳಿಗೆ ಏನನ್ನೂ ಸೇರಿಸಬೇಡ. ನೀನು ಬದಲಾಯಿಸಿದರೆ, ಆತನು ನಿನ್ನನ್ನು ಶಿಕ್ಷಿಸುವನು ಮತ್ತು ನಿನ್ನನ್ನು ಸುಳ್ಳುಗಾರನೆಂದು ರುಜುವಾತು ಮಾಡುವನು.
ಙ್ಞಾನೋಕ್ತಿಗಳು 30 : 7 (ERVKN)
ಯೆಹೋವನೇ, ನಾನು ಸಾಯುವ ಮೊದಲು ನೀನು ನನಗೋಸ್ಕರ ಎರಡು ಕಾರ್ಯಗಳನ್ನು ಮಾಡಬೇಕೆಂದು ನಿನ್ನನ್ನು ಕೇಳಿಕೊಳ್ಳುವೆ.
ಙ್ಞಾನೋಕ್ತಿಗಳು 30 : 8 (ERVKN)
ಸುಳ್ಳುಹೇಳದಂತೆ ನನಗೆ ಸಹಾಯಮಾಡು. ನನ್ನನ್ನು ತುಂಬ ಐಶ್ವರ್ಯವಂತನನ್ನಾಗಿಯೂ ಮಾಡಬೇಡ; ತುಂಬ ಬಡವನನ್ನಾಗಿಯೂ ಮಾಡಬೇಡ; ಅನುದಿನಕ್ಕೆ ಬೇಕಾದವುಗಳನ್ನು ಮಾತ್ರ ಕೊಡು.
ಙ್ಞಾನೋಕ್ತಿಗಳು 30 : 9 (ERVKN)
ನನಗೆ ಹೆಚ್ಚಾಗಿದ್ದರೆ, ನಿನ್ನನ್ನೇ ತಿರಸ್ಕರಿಸಿ, “ನನಗೆ ಯೆಹೋವನ ಅಗತ್ಯವಿಲ್ಲ” ಎಂದು ಹೇಳುವೆನು. ನಾನು ಬಡವನಾಗಿದ್ದರೆ, ಕಳವುಮಾಡಿ ನಿನ್ನ ಹೆಸರಿಗೆ ಅವಮಾನ ಮಾಡುವೆನು.
ಙ್ಞಾನೋಕ್ತಿಗಳು 30 : 10 (ERVKN)
ಸೇವಕನ ಬಗ್ಗೆ ಯಜಮಾನನಿಗೆ ಚಾಡಿ ಹೇಳಬೇಡ. ನೀನು ಹೇಳಿದರೆ, ಅವನು ನಿನ್ನನ್ನು ಶಪಿಸುವನು; ಆ ಶಾಪದಿಂದ ನೀನು ಸಂಕಟಪಡುವೆ.
ಙ್ಞಾನೋಕ್ತಿಗಳು 30 : 11 (ERVKN)
ಕೆಲವರು ತಮ್ಮ ತಂದೆಗಳನ್ನು ಶಪಿಸುವರು. ತಮ್ಮ ತಾಯಂದಿರನ್ನು ಆಶೀರ್ವದಿಸುವುದಿಲ್ಲ.
ಙ್ಞಾನೋಕ್ತಿಗಳು 30 : 12 (ERVKN)
ಕೆಲವರು ತಮ್ಮನ್ನು ಶುದ್ಧರೆಂದು ಯೋಚಿಸುವರು. ಆದರೆ ಅವರು ತಮ್ಮ ಹೊಲಸಿನಿಂದ ಶುದ್ಧೀಕರಿಸಲ್ಪಟ್ಟಿಲ್ಲ.
ಙ್ಞಾನೋಕ್ತಿಗಳು 30 : 13 (ERVKN)
ಕೆಲವರು ಬಹಳ ದುರಾಭಿಮಾನಿಗಳಾಗಿದ್ದಾರೆ. ತಾವು ಬೇರೆಯವರಿಗಿಂತ ಎಷ್ಟೋ ಉತ್ತಮರೆಂಬುದು ಅವರ ಭಾವನೆ.
ಙ್ಞಾನೋಕ್ತಿಗಳು 30 : 14 (ERVKN)
ಖಡ್ಗಗಳಂತಿರುವ ಹಲ್ಲುಗಳನ್ನು ಹೊಂದಿರುವ ಜನರಿದ್ದಾರೆ. ಅವರ ಕೋರೆಗಳು ಕತ್ತಿಗಳಂತಿವೆ. ಅವರು ಬಡಜನರಲ್ಲಿ ಇರುವುದನ್ನೆಲ್ಲಾ ತಮ್ಮಿಂದಾದಷ್ಟು ದೋಚಿಕೊಳ್ಳಲು ತಮ್ಮ ಸಮಯವನ್ನು ಉಪಯೋಗಿಸುವರು.
ಙ್ಞಾನೋಕ್ತಿಗಳು 30 : 15 (ERVKN)
ಕೆಲವರು ರಕ್ತ ಕುಡಿಯುವ ಜಿಗಣೆಗಳಂತಿದ್ದಾರೆ. ಅವರು, “ನನಗೆ ಕೊಡು, ನನಗೆ ಕೊಡು, ನನಗೆ ಕೊಡು” ಎಂದು ಹೇಳುತ್ತಾರೆ. ಎಂದಿಗೂ ತೃಪ್ತಿಯಾಗದ ಮೂರು ಸಂಗತಿಗಳಿವೆ. ನಿಜವಾಗಿಯೂ ನಾಲ್ಕು ಸಂಗತಿಗಳು ಎಂದಿಗೂ ಸಾಕು ಎನ್ನವು:
ಙ್ಞಾನೋಕ್ತಿಗಳು 30 : 16 (ERVKN)
ಮರಣದ ಸ್ಥಳ, ಮಕ್ಕಳಿಲ್ಲದ ಹೆಂಗಸು, ಸತತವಾಗಿ ನೀರಿನ ಅಗತ್ಯವಿರುವ ಭೂಮಿ ಮತ್ತು ಆರದ ಬೆಂಕಿ!
ಙ್ಞಾನೋಕ್ತಿಗಳು 30 : 17 (ERVKN)
ತನ್ನ ತಂದೆಯನ್ನು ಗೇಲಿಮಾಡುವವನಾಗಲಿ ವೃದ್ಧ ತಾಯಿಯನ್ನು ಕಡೆಗಣಿಸುವವನಾಗಲಿ ದಂಡನೆ ಹೊಂದುವನು. ಕಾಗೆಗಳೂ ಕ್ರೂರಪಕ್ಷಿಗಳೂ ಅವನ ಕಣ್ಣುಗಳನ್ನು ತಿನ್ನುವಂತಿರುವುದು ಆ ದಂಡನೆ.
ಙ್ಞಾನೋಕ್ತಿಗಳು 30 : 18 (ERVKN)
ನನಗೆ ಅರ್ಥಮಾಡಿಕೊಳ್ಳಲು ಕಷ್ಟವಾದ ಮೂರು ಸಂಗತಿಗಳಿವೆ; ನಿಜವಾಗಿಯೂ ನಾಲ್ಕು ಸಂಗತಿಗಳನ್ನು ನಾನು ಅರ್ಥಮಾಡಿಕೊಳ್ಳಲಾರೆ:
ಙ್ಞಾನೋಕ್ತಿಗಳು 30 : 19 (ERVKN)
ಆಕಾಶದಲ್ಲಿ ಹಾರುವ ಹದ್ದಿನ ರೀತಿ, ಬಂಡೆಯ ಮೇಲೆ ಹರಿದಾಡುವ ಹಾವು, ಸಮುದ್ರದ ಮೇಲೆ ಸಂಚರಿಸುವ ಹಡಗು ಮತ್ತು ಹೆಂಗಸನ್ನು ಪ್ರೇಮಿಸುತ್ತಿರುವ ಗಂಡಸು.
ಙ್ಞಾನೋಕ್ತಿಗಳು 30 : 20 (ERVKN)
ವ್ಯಭಿಚಾರಿಣಿಯ ನಡತೆಯು ಇದೇ. ಆಕೆ ಊಟ ಮಾಡುವಳು, ಬಾಯಿ ಒರಸಿಕೊಳ್ಳುವಳು ಮತ್ತು ತಾನು ಯಾವ ತಪ್ಪನ್ನೂ ಮಾಡಿಲ್ಲವೆಂದು ಹೇಳುವಳು.
ಙ್ಞಾನೋಕ್ತಿಗಳು 30 : 21 (ERVKN)
ಭೂಮಿಯ ಮೇಲೆ ಕೇಡುಮಾಡುವ ಮೂರು ಸಂಗತಿಗಳಿವೆ; ನಿಜವಾಗಿಯೂ ನಾಲ್ಕು ಸಂಗತಿಗಳನ್ನು ಭೂಮಿಯು ತಾಳಲಾಗದು:
ಙ್ಞಾನೋಕ್ತಿಗಳು 30 : 22 (ERVKN)
ರಾಜನಾದ ಸೇವಕ, ತನಗೆ ಅಗತ್ಯವಿರುವ ಪ್ರತಿಯೊಂದನ್ನು ಪಡೆದಿರುವ ಮೂಢ,
ಙ್ಞಾನೋಕ್ತಿಗಳು 30 : 23 (ERVKN)
ಪ್ರೀತಿಯನ್ನು ಕಂಡಿಲ್ಲದಿದ್ದರೂ ಮದುವೆಯಾಗುವ ಸ್ತ್ರೀ ಮತ್ತು ತನ್ನ ಯಜಮಾನಿಯ ಸ್ಥಾನವನ್ನು ಕಸಿದುಕೊಳ್ಳುವ ಸೇವಕಿ.
ಙ್ಞಾನೋಕ್ತಿಗಳು 30 : 24 (ERVKN)
ಭೂಮಿಯ ಮೇಲೆ ನಾಲ್ಕು ಪ್ರಾಣಿಗಳಿವೆ. ಆದರೆ ಈ ಪ್ರಾಣಿಗಳು ತುಂಬ ವಿವೇಕವುಳ್ಳವುಗಳಾಗಿವೆ.
ಙ್ಞಾನೋಕ್ತಿಗಳು 30 : 25 (ERVKN)
ಇರುವೆಗಳು ಸಣ್ಣಗಿವೆ ಮತ್ತು ಬಲಹೀನವಾಗಿವೆ. ಆದರೆ ಅವು ಸುಗ್ಗೀಕಾಲದಲ್ಲಿ ತಮ್ಮ ಆಹಾರವನ್ನು ಕೂಡಿಸಿಟ್ಟುಕೊಳ್ಳುತ್ತವೆ.
ಙ್ಞಾನೋಕ್ತಿಗಳು 30 : 26 (ERVKN)
ಬೆಟ್ಟದ ಮೊಲ ಬಲಿಷ್ಠವಾದ ಪ್ರಾಣಿಯಾಗಿಲ್ಲದಿದ್ದರೂ ಅವು ಬಂಡೆಗಳಲ್ಲಿ ತಮಗೆ ಮನೆಗಳನ್ನು ಮಾಡಿಕೊಳ್ಳಬಲ್ಲವು.
ಙ್ಞಾನೋಕ್ತಿಗಳು 30 : 27 (ERVKN)
ಮಿಡತೆಗಳಿಗೆ ರಾಜನಿಲ್ಲದಿದ್ದರೂ ಅವು ಗುಂಪುಗುಂಪಾಗಿ ಹೋಗುತ್ತವೆ.
ಙ್ಞಾನೋಕ್ತಿಗಳು 30 : 28 (ERVKN)
ಹಲ್ಲಿಗಳನ್ನು ನಿಮ್ಮ ಕೈಗಳಲ್ಲಿ ಹಿಡಿದುಕೊಳ್ಳಬಹುದು. ಅವು ಅಷ್ಟು ಸಣ್ಣವು. ಆದರೆ ಅವು ರಾಜನ ಮನೆಗಳಲ್ಲಿಯೂ ವಾಸಿಸುತ್ತವೆ.
ಙ್ಞಾನೋಕ್ತಿಗಳು 30 : 29 (ERVKN)
ಮೂರು ಪ್ರಾಣಿಗಳಿವೆ: ಅವು ನಡೆಯುವಾಗ ಗಂಭೀರತೆಯು ಎದ್ದುಕಾಣುತ್ತದೆ. ನಿಜವಾಗಿಯೂ ನಾಲ್ಕು ಇವೆ:
ಙ್ಞಾನೋಕ್ತಿಗಳು 30 : 30 (ERVKN)
ಸಿಂಹವು ಎಲ್ಲಾ ಪ್ರಾಣಿಗಳಲ್ಲಿ ಅತಿ ಬಲಿಷ್ಠವಾದದ್ದು; ಅದು ಯಾವುದಕ್ಕೂ ಭಯಪಡುವುದಿಲ್ಲ.
ಙ್ಞಾನೋಕ್ತಿಗಳು 30 : 31 (ERVKN)
ಬಹು ಹೆಮ್ಮೆಯಿಂದ ನಡೆಯುವ ಬೇಟೆನಾಯಿ; ಹೋತ ಮತ್ತು ತನ್ನ ಜನರ ನಡುವೆ ಇರುವ ರಾಜ.
ಙ್ಞಾನೋಕ್ತಿಗಳು 30 : 32 (ERVKN)
ನೀನು ನಿನ್ನನ್ನು ಹೆಚ್ಚಿಸಿಕೊಂಡು ಮೂಢನಾಗಿದ್ದರೆ, ಕೆಡುಕನ್ನು ಆಲೋಚಿಸುತ್ತಿದ್ದರೆ, ಸ್ವಲ್ಪ ಯೋಚಿಸು.
ಙ್ಞಾನೋಕ್ತಿಗಳು 30 : 33 (ERVKN)
ಹಾಲನ್ನು ಕರೆಯುವವನು ಬೆಣ್ಣೆಮಾಡುವನು. ಮತ್ತೊಬ್ಬನ ಮೂಗನ್ನು ಹೊಡೆದರೆ ರಕ್ತ ಬರುವುದು. ಅಂತೆಯೇ, ನೀನು ಜನರನ್ನು ಕೋಪಗೊಳಿಸಿದರೆ, ಜಗಳವನ್ನು ಎಬ್ಬಿಸುವೆ.
❮
❯