ಙ್ಞಾನೋಕ್ತಿಗಳು 21 : 1 (ERVKN)
ಯೆಹೋವನು ರಾಜನ ಮನಸ್ಸನ್ನು ನೀರಿನ ಕಾಲುವೆಯಂತೆ ಹತೋಟಿಯಲ್ಲಿಡುವನು. ಆತನು ತನ್ನ ಇಷ್ಟಾನುಸಾರ ಅದಕ್ಕೆ ಮಾರ್ಗದರ್ಶನ ನೀಡುವನು.
ಙ್ಞಾನೋಕ್ತಿಗಳು 21 : 2 (ERVKN)
ತನ್ನ ನಡತೆ ಸರಿಯೆಂದು ಒಬ್ಬನು ಭಾವಿಸಿಕೊಳ್ಳಬಹುದು; ಆದರೆ ಉದ್ದೇಶಗಳಿಗನುಸಾರವಾಗಿ ತೀರ್ಪು ನೀಡುವವನು ಯೆಹೋವನೇ.
ಙ್ಞಾನೋಕ್ತಿಗಳು 21 : 3 (ERVKN)
ಸರಿಯಾದ ಮತ್ತು ನ್ಯಾಯವಾದ ಕಾರ್ಯಗಳನ್ನು ಮಾಡು. ಯೆಹೋವನು ಅವುಗಳನ್ನು ಯಜ್ಞಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವನು.
ಙ್ಞಾನೋಕ್ತಿಗಳು 21 : 4 (ERVKN)
ಗರ್ವದ ಕಣ್ಣುಗಳು ಮತ್ತು ದುರಾಭಿಮಾನದ ಹೃದಯ ಪಾಪಮಯವಾಗಿದ್ದು ದುಷ್ಟನಿಗೆ ಮಾರ್ಗದರ್ಶನ ನೀಡುತ್ತವೆ.
ಙ್ಞಾನೋಕ್ತಿಗಳು 21 : 5 (ERVKN)
ಕಷ್ಟಪಟ್ಟು ದುಡಿಯುವವನ ಆಲೋಚನೆಗಳು ಲಾಭಕ್ಕೆ ನಡೆಸುತ್ತವೆ. ಆದರೆ ಆತುರತೆಯಲ್ಲೇ ಇರುವವನು ಬಡವನಾಗುವನು.
ಙ್ಞಾನೋಕ್ತಿಗಳು 21 : 6 (ERVKN)
ನೀನು ಮೋಸದಿಂದ ಐಶ್ವರ್ಯವಂತನಾದರೆ, ಆ ಐಶ್ವರ್ಯವು ಬಹುಬೇಗನೆ ಇಲ್ಲವಾಗುತ್ತದೆ. ನಿನ್ನ ಐಶ್ವರ್ಯವು ನಿನ್ನನ್ನು ಮರಣಕ್ಕೆ ನಡೆಸುತ್ತದೆ.
ಙ್ಞಾನೋಕ್ತಿಗಳು 21 : 7 (ERVKN)
ಕೆಡುಕರು ಕೊಡುವ ಹಿಂಸೆಯು ಅವರನ್ನೇ ನಾಶಮಾಡುತ್ತದೆ; ಯಾಕೆಂದರೆ ಒಳ್ಳೆಯದನ್ನು ಮಾಡಲು ಅವರು ಒಪ್ಪುವುದೇ ಇಲ್ಲ.
ಙ್ಞಾನೋಕ್ತಿಗಳು 21 : 8 (ERVKN)
ಕೆಟ್ಟವರು ಬೇರೆಯವರನ್ನು ಮೋಸಗೊಳಿಸುವುದಕ್ಕೇ ಪ್ರಯತ್ನಿಸುವರು. ಒಳ್ಳೆಯವರಾದರೋ ಯಥಾರ್ಥವಂತರೂ ನ್ಯಾಯವಂತರೂ ಆಗಿದ್ದಾರೆ.
ಙ್ಞಾನೋಕ್ತಿಗಳು 21 : 9 (ERVKN)
ಮನೆಯೊಳಗೆ ವಾದಿಸುವ ಹೆಂಡತಿಯ ಜೊತೆಯಲ್ಲಿ ವಾಸಿಸುವುದಕ್ಕಿಂತ ಮನೆಯ ಮೇಲ್ಛಾವಣಿಗೆಯ ಮೂಲೆಯಲ್ಲಿ ವಾಸಿಸುವುದೇ ಮೇಲು.
ಙ್ಞಾನೋಕ್ತಿಗಳು 21 : 10 (ERVKN)
ಕೆಡುಕರು ಕೇಡುಮಾಡುವುದಕ್ಕೇ ಇಷ್ಟಪಡುವರು; ಅವರು ತಮ್ಮ ಸುತ್ತಮುತ್ತಲಿರುವ ಜನರಿಗೆ ಕರುಣೆ ತೋರುವುದಿಲ್ಲ.
ಙ್ಞಾನೋಕ್ತಿಗಳು 21 : 11 (ERVKN)
ದುರಾಭಿಮಾನಿಯು ದಂಡಿಸಲ್ಪಟ್ಟರೆ ದಡ್ಡನು ಜ್ಞಾನಿಯಾಗುವನು. ಜ್ಞಾನಿಗೆ ಉಪದೇಶಿಸಿದರೆ ತಾನೇ ತಿಳುವಳಿಕೆಯನ್ನು ಹೊಂದವನು.
ಙ್ಞಾನೋಕ್ತಿಗಳು 21 : 12 (ERVKN)
ದೇವರು ನೀತಿಸ್ವರೂಪನು. ಆತನು ದುಷ್ಟರ ದುಷ್ಕೃತ್ಯಗಳನ್ನು ಬಲ್ಲವನಾಗಿದ್ದು ಅವರನ್ನು ದಂಡಿಸುವನು.
ಙ್ಞಾನೋಕ್ತಿಗಳು 21 : 13 (ERVKN)
ಬಡವರಿಗೆ ಸಹಾಯಮಾಡದವನು ತಾನೇ ಕೊರತೆಯಲ್ಲಿರುವಾಗ ಯಾರೂ ಅವನಿಗೆ ಸಹಾಯ ಮಾಡುವುದಿಲ್ಲ.
ಙ್ಞಾನೋಕ್ತಿಗಳು 21 : 14 (ERVKN)
ನಿನ್ನ ಮೇಲೆ ಕೋಪಗೊಂಡಿರುವವನಿಗೆ ಒಂದು ಉಡುಗೊರೆಯನ್ನು ಗುಟ್ಟಾಗಿ ಕೊಡು. ಗುಟ್ಟಾಗಿ ಕೊಟ್ಟ ಉಡುಗೊರೆಯು ಮಹಾ ಕೋಪವನ್ನೂ ಅಡಗಿಸಬಲ್ಲದು.
ಙ್ಞಾನೋಕ್ತಿಗಳು 21 : 15 (ERVKN)
ನ್ಯಾಯವಾದ ತೀರ್ಪು ಒಳ್ಳೆಯವರಿಗೆ ಸಂತೋಷ; ಕೆಡುಕರಿಗೆ ಬಹುಭಯ.
ಙ್ಞಾನೋಕ್ತಿಗಳು 21 : 16 (ERVKN)
ಜ್ಞಾನದ ಮಾರ್ಗವನ್ನು ತೊರೆದವನು ನಾಶನದ ಕಡೆಗೆ ಹೋಗುತ್ತಿರುವನು.
ಙ್ಞಾನೋಕ್ತಿಗಳು 21 : 17 (ERVKN)
ಸುಖವನ್ನು ಪ್ರೀತಿಸುವವನು ಬಡವನಾಗುವನು. ದ್ರಾಕ್ಷಾರಸವನ್ನೂ ತೈಲವನ್ನೂ ಪ್ರೀತಿಸುವವನು ಐಶ್ವರ್ಯವಂತನಾಗಲಾರನು.
ಙ್ಞಾನೋಕ್ತಿಗಳು 21 : 18 (ERVKN)
ಒಳ್ಳೆಯವರ ಬದಲಾಗಿ ಕೆಡುಕರು ಸಂಕಟಪಡುವರು. ನೀತಿವಂತರ ಬದಲಾಗಿ ದ್ರೋಹಿಗಳು ಸಂಕಟಪಡುವರು.
ಙ್ಞಾನೋಕ್ತಿಗಳು 21 : 19 (ERVKN)
ಮುಂಗೋಪಿಯೂ ವಾದಿಸುವವಳೂ ಆಗಿರುವ ಹೆಂಡತಿಯೊಡನೆ ಜೀವಿಸುವುದಕ್ಕಿಂತ ಮರಳುಗಾಡಿನಲ್ಲಿ ಜೀವಿಸುವುದೇ ಮೇಲು.
ಙ್ಞಾನೋಕ್ತಿಗಳು 21 : 20 (ERVKN)
ಜ್ಞಾನಿಯ ಮನೆಯಲ್ಲಿ ಬೆಲೆಬಾಳುವ ಭಂಡಾರಗಳೂ ಪರಿಮಳದ್ರವ್ಯಗಳೂ ಇರುತ್ತವೆ. ಮೂಢನಾದರೋ ತನ್ನಲ್ಲಿರುವ ಪ್ರತಿಯೊಂದನ್ನೂ ಬೇಗನೆ ಹಾಳುಮಾಡಿಕೊಳ್ಳುವನು.
ಙ್ಞಾನೋಕ್ತಿಗಳು 21 : 21 (ERVKN)
ನ್ಯಾಯವನ್ನು ಮತ್ತು ಕರುಣೆಯನ್ನು ಹುಡುಕುವವನಿಗೆ ಒಳ್ಳೆಯ ಜೀವಿತವೂ ನ್ಯಾಯವೂ ಸನ್ಮಾನವೂ ದೊರೆಯುವುದು.
ಙ್ಞಾನೋಕ್ತಿಗಳು 21 : 22 (ERVKN)
ಜ್ಞಾನಿಯು ಯುದ್ಧವೀರರಿಂದ ತುಂಬಿರುವ ಪಟ್ಟಣದ ಮೇಲೆ ಆಕ್ರಮಣಮಾಡಿ ಅವರ ಆಶ್ರಯಕೋಟೆಯನ್ನು ನಾಶಮಾಡಬಲ್ಲನು.
ಙ್ಞಾನೋಕ್ತಿಗಳು 21 : 23 (ERVKN)
ಎಚ್ಚರಿಕೆಯಿಂದ ಮಾತಾಡುವವನು ತೊಂದರೆಯಿಂದ ಪಾರಾಗುವನು.
ಙ್ಞಾನೋಕ್ತಿಗಳು 21 : 24 (ERVKN)
ಗರ್ವಿಷ್ಠನೂ ದುರಾಭಿಮಾನಿಯೂ ಆಗಿರುವವನಿಗೆ ಗೇಲಿಗಾರನೆಂದು ಹೆಸರು. ಅವನ ನಡತೆಯು ಗರ್ವದ ಮದದಿಂದ ಕೂಡಿರುತ್ತದೆ.
ಙ್ಞಾನೋಕ್ತಿಗಳು 21 : 25 (ERVKN)
ಸೋಮಾರಿಯ ಆಸೆ ಅವನನ್ನು ಉಪವಾಸದಿಂದ ಸಾಯಿಸುವುದು, ಯಾಕೆಂದರೆ ಅವನು ದುಡಿಯುವುದಿಲ್ಲ.
ಙ್ಞಾನೋಕ್ತಿಗಳು 21 : 26 (ERVKN)
ದುರಾಶೆಯುಳ್ಳವನು ಹೆಚ್ಚುಹೆಚ್ಚು ಅಪೇಕ್ಷಿಸುತ್ತಲೇ ಇರುವನು, ಆದರೆ ನೀತಿವಂತನು ಉದಾರವಾಗಿ ಕೊಡುವನು.
ಙ್ಞಾನೋಕ್ತಿಗಳು 21 : 27 (ERVKN)
ಕೆಡುಕನ ಯಜ್ಞಗಳು ಯೆಹೋವನಿಗೆ ಅಸಹ್ಯ. ಯಾಕೆಂದರೆ ಅವು ದುರುದ್ದೇಶದಿಂದ ಕೂಡಿವೆ.
ಙ್ಞಾನೋಕ್ತಿಗಳು 21 : 28 (ERVKN)
ಸುಳ್ಳುಸಾಕ್ಷಿಯು ನಾಶವಾಗುವನು. ಆದರೆ ಎಚ್ಚರಿಕೆಯಿಂದ ಕೇಳುವವನು ಮತಾಡುತ್ತಲೇ ಇರುವನು.
ಙ್ಞಾನೋಕ್ತಿಗಳು 21 : 29 (ERVKN)
ದುಷ್ಟರು ನಾಚಿಕೆಯಿಲ್ಲದೆ ವರ್ತಿಸುವರು; ಆದರೆ ಒಳ್ಳೆಯವನು ತನ್ನ ಮಾರ್ಗಗಳ ಬಗ್ಗೆ ಎಚ್ಚರಿಕೆಯಿಂದ ಯೋಚಿಸುವನು.
ಙ್ಞಾನೋಕ್ತಿಗಳು 21 : 30 (ERVKN)
ಯೆಹೋವನೇ ವಿರೋಧವಾಗಿದ್ದರೆ, ಜಯಪ್ರಧವಾಗಬಲ್ಲ ಯೋಜನೆಯನ್ನು ಮಾಡುವಂಥ ಜ್ಞಾನ ಯಾರಿಗೂ ಇಲ್ಲ.
ಙ್ಞಾನೋಕ್ತಿಗಳು 21 : 31 (ERVKN)
ಯುದ್ಧಕ್ಕಾಗಿ ಕುದುರೆಗಳನ್ನು ಸಿದ್ಧಪಡಿಸುತ್ತಾರೆ; ಆದರೆ ಜಯದ ನಿರ್ಧಾರ ಯೆಹೋವನಿಂದಲೇ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31