ಙ್ಞಾನೋಕ್ತಿಗಳು 20 : 1 (ERVKN)
ದ್ರಾಕ್ಷಾರಸವು ಪರಿಹಾಸ್ಯಕ್ಕೂ ಮದ್ಯವು ಕೂಗಾಟಕ್ಕೂ ನಡೆಸುತ್ತವೆ. ಅಮಲೇರಿಸಿಕೊಳ್ಳುವುದು ಮೂರ್ಖತನ.
ಙ್ಞಾನೋಕ್ತಿಗಳು 20 : 2 (ERVKN)
ರಾಜನ ಕೋಪವು ಸಿಂಹದ ಬರ್ಜನೆಯಂತಿದೆ. ರಾಜನನ್ನು ಕೋಪಗೊಳಿಸಿದರೆ ಪ್ರಾಣಕ್ಕೆ ಹಾನಿ.
ಙ್ಞಾನೋಕ್ತಿಗಳು 20 : 3 (ERVKN)
ವಾದದಿಂದ ದೂರವಿರುವವನು ಸನ್ಮಾನಕ್ಕೆ ಯೋಗ್ಯನು. ಮೂಢನಾದರೊ ಜಗಳಕ್ಕೇ ಆತುರ ಪಡುವನು.
ಙ್ಞಾನೋಕ್ತಿಗಳು 20 : 4 (ERVKN)
ಸೋಮಾರಿಯು ಬಿತ್ತನೆಕಾಲದಲ್ಲಿ ಬೀಜ ಬಿತ್ತುವುದಿಲ್ಲ; ಸುಗ್ಗಿಕಾಲದಲ್ಲಿ ಅವನಿಗೆ ಬೆಳೆಯೂ ಇರುವುದಿಲ್ಲ.
ಙ್ಞಾನೋಕ್ತಿಗಳು 20 : 5 (ERVKN)
ಬೇರೊಬ್ಬನ ಆಲೋಚನೆಗಳನ್ನು ನೋಡಲು ಸಾಧ್ಯವಿಲ್ಲ; ಅವು ಆಳವಾದ ನೀರಿನಂತಿವೆ; ಆದರೆ ಅವುಗಳನ್ನು ವಿವೇಕಿಯು ಅರ್ಥಮಾಡಿಕೊಳ್ಳಬಲ್ಲನು.
ಙ್ಞಾನೋಕ್ತಿಗಳು 20 : 6 (ERVKN)
ಅನೇಕರು ತಾವು ನಂಬಿಗಸ್ತರೆಂದು ಹೇಳಿಕೊಳ್ಳುತ್ತಾರೆ. ಆದರೆ ನಿಜವಾಗಿಯೂ ನಂಬಿಗಸ್ತನಾಗಿರುವ ಒಬ್ಬನನ್ನು ಕಂಡುಕೊಳ್ಳುವುದು ಬಹುಕಷ್ಟ.
ಙ್ಞಾನೋಕ್ತಿಗಳು 20 : 7 (ERVKN)
ಸದ್ದರ್ಮಿಯು ಒಳ್ಳೆಯ ರೀತಿಯಲ್ಲಿ ಜೀವಿಸುತ್ತಾನೆ; ಅವನ ಮಕ್ಕಳಿಗೆ ಆಶೀರ್ವಾದವಾಗುವುದು.
ಙ್ಞಾನೋಕ್ತಿಗಳು 20 : 8 (ERVKN)
ರಾಜನು ನ್ಯಾಯತೀರ್ಪು ಮಾಡುವಾಗ ತನ್ನ ಕಣ್ಣುಗಳಿಂದ ದುಷ್ಟತನವನ್ನು ಶೋಧಿಸುವನು.
ಙ್ಞಾನೋಕ್ತಿಗಳು 20 : 9 (ERVKN)
ಯಾವನಾದರೂ, “ನನ್ನ ಹೃದಯವನ್ನು ಶುದ್ಧೀಕರಿಸಿರುವೆ. ನಾನು ಪಾಪರಹಿತನಾಗಿರುವೆ” ಎಂದು ಹೇಳಲು ಸಾಧ್ಯವೇ?
ಙ್ಞಾನೋಕ್ತಿಗಳು 20 : 10 (ERVKN)
ಮೋಸದ ತಕ್ಕಡಿಗಳೂ ಮೋಸದ ಅಳತೆಮಾಪಕಗಳೂ ಯೆಹೋವನಿಗೆ ಅಸಹ್ಯ.
ಙ್ಞಾನೋಕ್ತಿಗಳು 20 : 11 (ERVKN)
ಬಾಲಕನೊಬ್ಬನು ಒಳ್ಳೆಯವನೋ ಕೆಟ್ಟವನೋ ಎಂಬುದು ಅವನ ನಡತೆಯಿಂದಲೇ ತೋರಿಬರುವುದು.
ಙ್ಞಾನೋಕ್ತಿಗಳು 20 : 12 (ERVKN)
ನಮಗೆ ನೋಡಲು ಕಣ್ಣುಗಳಿವೆ. ಕೇಳಲು ಕಿವಿಗಳಿವೆ. ಅವುಗಳನ್ನು ನಮಗೋಸ್ಕರ ಉಂಟುಮಾಡಿದವನು ಯೆಹೋವನೇ.
ಙ್ಞಾನೋಕ್ತಿಗಳು 20 : 13 (ERVKN)
ನಿದ್ರಾನಿರತನಾಗಿರಬೇಡ, ಬಡವನಾಗುವೆ. ನಿನ್ನ ಸಮಯವನ್ನು ದುಡಿಯಲು ಉಪಯೋಗಿಸಿಕೊಂಡರೆ ನಿನಗೆ ಊಟಕ್ಕೆ ಬೇಕಾದಷ್ಟಿರುವುದು.
ಙ್ಞಾನೋಕ್ತಿಗಳು 20 : 14 (ERVKN)
ನಿನ್ನ ವಸ್ತುವನ್ನು ಖರೀದಿಮಾಡುವವನು, “ಇದು ಚೆನ್ನಾಗಿಲ್ಲ! ಬೆಲೆಯೂ ಜಾಸ್ತಿ!” ಎಂದು ಹೇಳುವನು. ಬಳಿಕ ತನ್ನ ಚೌಕಾಸಿಯ ಬಗ್ಗೆ ಬೇರೆಯವರ ಮುಂದೆ ಹೊಗಳಿಕೊಳ್ಳುವನು.
ಙ್ಞಾನೋಕ್ತಿಗಳು 20 : 15 (ERVKN)
ಬಂಗಾರಕ್ಕಿಂತಲೂ ಮಾಣಿಕ್ಯದ ಸಮೃದ್ಧಿಗಿಂತಲೂ ಜ್ಞಾನದ ಮಾತುಗಳನ್ನಾಡುವ ತುಟಿಗಳು ಅಮೂಲ್ಯವಾಗಿವೆ.
ಙ್ಞಾನೋಕ್ತಿಗಳು 20 : 16 (ERVKN)
ಬೇರೊಬ್ಬನ ಸಾಲಕ್ಕೆ ನೀನು ಜಾಮೀನಾದರೆ, ನಿನ್ನ ಅಂಗಿಯನ್ನು ಕಳೆದುಕೊಳ್ಳುವೆ.
ಙ್ಞಾನೋಕ್ತಿಗಳು 20 : 17 (ERVKN)
ಅನ್ಯಾಯವಾಗಿ ಗಳಿಸಿದ ಆಹಾರವು ಆರಂಭದಲ್ಲಿ ರುಚಿಕರವಾಗಿದ್ದರೂ ಕೊನೆಯಲ್ಲಿ ಬಾಯಿತುಂಬ ಮರಳಿನಂತಿರುವುದು.
ಙ್ಞಾನೋಕ್ತಿಗಳು 20 : 18 (ERVKN)
ಒಳ್ಳೆಯ ಸಮಾಲೋಚನೆಗಳೊಡನೆ ಮಾಡಿದ ಯೋಜನೆಗಳು ಯಶಸ್ವಿಯಾಗುತ್ತವೆ. ನೀನು ಯುದ್ಧವನ್ನು ಆರಂಭಿಸುವುದಾಗಿದ್ದರೆ, ಮಾರ್ಗದರ್ಶನಕ್ಕಾಗಿ ಒಳ್ಳೆಯವರನ್ನು ಹುಡುಕು.
ಙ್ಞಾನೋಕ್ತಿಗಳು 20 : 19 (ERVKN)
ಬೇರೆಯವರ ಬಗ್ಗೆ ಸುಳ್ಳುಸುದ್ದಿ ಹಬ್ಬಿಸುವವನನ್ನು ನಂಬಬೇಡ; ಅತಿಯಾಗಿ ಮಾತಾಡುವವನ ಸ್ನೇಹಿತನೂ ಆಗಬೇಡ.
ಙ್ಞಾನೋಕ್ತಿಗಳು 20 : 20 (ERVKN)
ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನ ಜೀವಿತವು ಕತ್ತಲೆಯಲ್ಲಿ ಆರಿಹೋದ ದೀಪದಂತೆ ಕೊನೆಗೊಳ್ಳುವುದು.
ಙ್ಞಾನೋಕ್ತಿಗಳು 20 : 21 (ERVKN)
ಸುಲಭವಾಗಿ ಬಾಚಿಕೊಂಡ ಸ್ವಾಸ್ತ್ಯವು ಕೊನೆಯಲ್ಲಿ ಆರ್ಶೀವಾದದಾಯಕವಾಗಿರುವುದಿಲ್ಲ.
ಙ್ಞಾನೋಕ್ತಿಗಳು 20 : 22 (ERVKN)
“ಕೇಡಿಗೆ ಪ್ರತಿಯಾಗಿ ಕೇಡನ್ನು ಮಾಡುತ್ತೇನೆ” ಎಂದು ಹೇಳಬೇಡ. ಯೆಹೋವನಿಗಾಗಿ ಕಾದುಕೊಂಡಿರು! ಆತನು ನಿನ್ನನ್ನು ಜಯಶಾಲಿಯನ್ನಾಗಿ ಮಾಡುವನು.
ಙ್ಞಾನೋಕ್ತಿಗಳು 20 : 23 (ERVKN)
ಯೆಹೋವನಿಗೆ ಅನ್ಯಾಯದ ಅಳತೆಮಾಪಕವು ಅಸಹ್ಯ; ಮೋಸದ ತಕ್ಕಡಿಗಳು ಅಪರಾಧ.
ಙ್ಞಾನೋಕ್ತಿಗಳು 20 : 24 (ERVKN)
ಭವಿಷ್ಯತ್ತನ್ನು ನಿರ್ಣಯಿಸುವವನು ಯೆಹೋವನೇ ಆಗಿರುವಾಗ, ತನ್ನ ಭವಿಷ್ಯತ್ತನ್ನು ಅರ್ಥಮಾಡಿಕೊಳ್ಳಲು ಯಾರಿಗೆ ಸಾಧ್ಯ?
ಙ್ಞಾನೋಕ್ತಿಗಳು 20 : 25 (ERVKN)
ನೀನು ದೇವರಿಗೆ ಹರಕೆ ಮಾಡುವ ಮೊದಲೇ ಎಚ್ಚರಿಕೆಯಿಂದ ಯೋಚಿಸು. ಹರಕೆ ಮಾಡಿದ ಮೇಲೆ ಹರಕೆ ಮಾಡಬಾರದಾಗಿತ್ತು ಎಂದು ಹೇಳಬೇಡ.
ಙ್ಞಾನೋಕ್ತಿಗಳು 20 : 26 (ERVKN)
ಜ್ಞಾನಿಯಾದ ರಾಜನಿಗೆ ಕೆಡುಕರು ಯಾರೆಂಬುದು ಗೊತ್ತಾಗುವುದು; ಅವನು ಅವರನ್ನು ದಂಡಿಸುವನು.
ಙ್ಞಾನೋಕ್ತಿಗಳು 20 : 27 (ERVKN)
ಮನುಷ್ಯನ ಆತ್ಮ ಯೆಹೋವನ ದೀಪವಾಗಿದೆ; ಅದು ಅಂತರಂಗವನ್ನೆಲ್ಲಾ ಶೋಧಿಸುತ್ತದೆ.
ಙ್ಞಾನೋಕ್ತಿಗಳು 20 : 28 (ERVKN)
ರಾಜನು ನಂಬಿಗಸ್ತನಾಗಿಯೂ ಪ್ರೀತಿಯುಳ್ಳವನಾಗಿಯೂ ಇದ್ದರೆ, ಅವನ ಅಧಿಕಾರ ಉಳಿದುಕೊಳ್ಳುವುದು; ಅವನ ಆಡಳಿತ ಮುಂದುವರಿಯುವುದು.
ಙ್ಞಾನೋಕ್ತಿಗಳು 20 : 29 (ERVKN)
ಯುವಕನ ಶಕ್ತಿ ಪ್ರಶಂಸೆಗೆ ಯೋಗ್ಯ. ವೃದ್ಧನ ನರೆಕೂದಲು ಗೌರವಕ್ಕೆ ಪಾತ್ರ.
ಙ್ಞಾನೋಕ್ತಿಗಳು 20 : 30 (ERVKN)
ದಂಡನೆಯು ತಪ್ಪನ್ನು ನಿಲ್ಲಿಸುತ್ತದೆ; ನೋವು ವ್ಯಕ್ತಿಯನ್ನು ಬದಲಾಯಿಸುತ್ತದೆ.
❮
❯